ಕೆರೆಯಲ್ಲಿನ ಬಾವಿಯಾಯ್ತು ಸಂಜೀವಿನಿ
ಗುಡಪಳ್ಳಿ ಗ್ರಾಪಂ ಆಡಳಿತದ ಕಾರ್ಯ ಯಶಸ್ವಿ•ಗ್ರಾಮಸ್ಥರ ಕುಡಿವ ನೀರಿನ ಸಮಸ್ಯೆಗೆ ಸಿಕ್ಕಿದೆ ಮುಕ್ತಿ
Team Udayavani, May 12, 2019, 10:26 AM IST
ಔರಾದ: ಕೆರೆಯಲ್ಲಿ ಅಗೆದ ಬಾವಿಯಲ್ಲಿ ಹೊಸ ಮೋಟಾರ್ ಅಳವಡಿಸುತ್ತಿರುವುದು.
ಔರಾದ: ಗುಡಪಳ್ಳಿ ಗ್ರಾಪಂ ಆಡಳಿತ ಮಂಡಳಿ ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಗ್ರಾಮದ ಮುಖಂಡರ ಸಲಹೆ ಮೇರೆಗೆ ಕೆರೆಯಲ್ಲಿ ತೆರೆದ ಬಾವಿ ಅಗೆದು, ಅದರಿಂದ ಗ್ರಾಮಕ್ಕೆ ನಿತ್ಯ ನೀರು ಪೂರೈಸುವ ಮೂಲಕ ಗ್ರಾಮಸ್ಥರ ನೀರಿನ ಸಮಸ್ಯೆಗೆ ಮುಕ್ತಿ ನೀಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಜಲಮೂಲಗಳು ಬತ್ತಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗುತ್ತಿದೆ. ಅದರಂತೆ ಮೂರು ಸಾವಿರ ಜನಸಂಖ್ಯೆ ಇರುವ ಗುಡಪಳ್ಳಿ ಗ್ರಾಪಂ ಕೇಂದ್ರಸ್ಥಾನದಲ್ಲೇ ನೀರಿನ ಸಮಸ್ಯೆಯಿಂದ ಜನರು ನರಳುವ ಸ್ಥಿತಿ ಉದ್ಭವಿಸಿತ್ತು. ಈ ಹಿನ್ನೆಲೆಯಲ್ಲಿ ಗ್ರಾಪಂ ಆಡಳಿತ ಮಂಡಳಿ ಸದಸ್ಯರು, ಅಧ್ಯಕ್ಷರು ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಪಂಚಾಯಿತಿಯಲ್ಲಿ ಸಭೆ ನಡೆಸಿ ಗ್ರಾಮದ ಮುಖಂಡರ ಸಲಹೆ ಪಡೆದಿದ್ದಾರೆ. ಮುಖಂಡರ ಸಲಹೆಯಂತೆ ಗ್ರಾಮದ ಕೆರೆಯಲ್ಲಿ ತೆರೆದ ಬಾವಿ ಅಗೆಸಿದ್ದಾರೆ. ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಅವರ ಅನುದಾನದಡಿ 2.5 ಲಕ್ಷ ಮತ್ತು ಸಿಆರ್‌ಎಫ್ ಯೋಜನೆಯಲ್ಲಿ 1.5 ಲಕ್ಷ ರೂ. ಸೇರಿದಂತೆ ಒಟ್ಟು ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ತೆರೆದ ಬಾವಿ ತೋಡಿ ನೀರಿನ ಸಮಸ್ಯೆ ನಿವಾರಿಸಿದ್ದಾರೆ.
ಗ್ರಾಮದಲ್ಲಿನ ನಾಲ್ಕು ಕೊಳವೆ ಬಾವಿಗಳು ವರ್ಷಪೂರ್ತಿ ಸಾರ್ವಜನಿಕರಿಗೆ ನೀರು ಪೂರೈಸುತ್ತಿದ್ದವು. ಈಗ ಅವು ಬತ್ತಿರುವುದರಿಂದ ಕೆರೆಯಲ್ಲಿ ತೆರೆದ ಬಾವಿ ಅಗೆದು, ನಿತ್ಯ ಗ್ರಾಮಸ್ಥರಿಗೆ ನೀರು ಪೂರೈಕೆ ಮಾಡುತ್ತಿದ್ದ ಬೇರೆ ತೆರೆದ ಬಾವಿಗೆ ನೀರು ತುಂಬಿಸಿ, ಅಲ್ಲಿಂದ ಟ್ಯಾಂಕ್ ಮೂಲಕ ಗ್ರಾಮದಲ್ಲಿ ಸರಬರಾಜು ಮಾಡಲಾಗುತ್ತಿದೆ. ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದ್ದರೆ ನಾಲ್ಕು ಲಕ್ಷಕ್ಕಿಂತ ಹೆಚ್ಚು ಹಣ ಖರ್ಚಾಗುತ್ತಿತ್ತು. ಇಷ್ಟೊಂದು ಪ್ರಮಾಣದಲ್ಲಿ ನೀರು ಸಿಗುತ್ತಿರಲ್ಲಿಲ್ಲ. ಸದ್ಯ ಗ್ರಾಪಂ ಸದಸ್ಯರು ಮತ್ತು ಅಧ್ಯಕ್ಷರ ಉತ್ತಮ ಆಲೋಚನೆಯಿಂದ ಕೆರೆಯಲ್ಲಿ ಅಗೆದ ತೆರೆದ ಬಾವಿಯಲ್ಲಿ ಏಳು ಗಂಟೆ ನಿರಂತರವಾಗಿ ನೀರು ಬರುತ್ತಿದೆ. ಬೇಸಿಗೆ ಮುಗಿಯುವ ತನಕ ಗುಡಪಳ್ಳಿ ಗ್ರಾಮಸ್ಥರಿಗೆ ಬೇಕಾಗುವಷ್ಟು ನೀರು ಸಿಗುತ್ತದೆ.
ಜನರ ಸಮಸ್ಯೆ ಬಗೆಹರಿಸಬೇಕು ಎನ್ನುವ ಉದ್ದೇಶದಿಂದ ಜನರು ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ನೀರಿಲ್ಲ ಎಂದು ಕೈ ಕಟ್ಟಿ ಕುಳಿತುಕೊಳ್ಳದೆ ಎಲ್ಲರೂ ಸೇರಿ ಕೆರೆಯಲ್ಲಿ ಬಾವಿ ತೆಗೆಸಿದ್ದೇವೆ. ಖಾಸಗಿ ಟ್ಯಾಂಕರ್‌ನಿಂದ ನೀರು ಪೂರೈಸಿದ್ದರೂ ಇಷ್ಟೊಂದು ಜನರಿಗೆ ನೀರು ಸಿಗುತ್ತಿರಲಿಲ್ಲ. ನಮ್ಮ ಶ್ರಮಕ್ಕೆ ತಕ್ಕಂತೆ ನೀರು ಬಂದು ಜನರಿಗೆ ಖುಷಿಯಾಗಿದೆ.
•ರವೀಂದ್ರ ರೆಡ್ಡಿ,
ಗ್ರಾಪಂ ಉಪಾಧ್ಯಕ್ಷರು
ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ಶ್ರಮಿಸುವ ಮೂಲಕ ಬೇರು ಮಟ್ಟದಿಂದ ಅಳಿಸಿ ಹಾಕಲು ಶ್ರಮಿಸಿದ್ದೇವೆ. ಆಡಳಿತ ಮಂಡಳಿ ಸದಸ್ಯರು ಮತ್ತು ಗ್ರಾಮಸ್ಥರ ಸಹಕಾರದಿಂದ ಗುಡಪಳ್ಳಿ ಗ್ರಾಪಂನಿಂದ ಮಹತ್ವದ ಕೆಲಸ ನಡೆದಿದೆ.
•ಶಿವಾನಂದ ಔರಾದೆ,
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ ಎಂದು ಸರ್ಕಾರಿ ಕಚೇರಿಗೆ ಅಲೆಯದಂತೆ, ಪಂಚಾಯಿತಿ ಸಿಬ್ಬಂದಿ, ಅಧಿಕಾರಿಗಳು ಸಭೆ ನಡೆಸಿ ಮಹತ್ವ ನಿರ್ಧಾರ ತೆಗೆದುಕೊಂಡು, ತೆರೆದ ಬಾವಿ ಅಗೆದಿದ್ದೇವೆ. ಇದರಿಂದ ದೊರೆತ ನೀರಿನಿಂದ ಸಮಸ್ಯೆಗೆ ಮುಕ್ತಿ ಸಿಕ್ಕಿದೆ.
• ಇಟಬಾಯಿ, ಗ್ರಾಪಂ ಅಧ್ಯಕ್ಷೆ
ರವೀಂದ್ರ ಮುಕ್ತೇದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.