ಕೆ.ಸಿ.ವ್ಯಾಲಿ ನೀರು ನೇರ ಬಳಸಿದೆರೆ ಕ್ರಮ
ನೀರು ಹರಿಸಿರುವ ಕೆರೆಗೆ ಪಂಪ್‌ಸೆಟ್ ಇಟ್ಟು ಬಳಕೆ, ಕ್ರಮಕ್ಕೆ ಡೀಸಿ ಸೂಚನೆ ಮುಲಾಜಿಲ್ಲದೆ ತೆರಿಗೆ ವಸೂಲಿ ಮಾಡಿ
Team Udayavani, May 12, 2019, 11:16 AM IST
ಕೋಲಾರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗಳ ಕುರಿತಂತೆ ಚರ್ಚಿಸಿದರು
ಕೋಲಾರ: ಕೆ.ಸಿ.ವ್ಯಾಲಿ ಯೋಜನೆ ನೀರನ್ನು ನೇರವಾಗಿ ಉಪಯೋಗಿಸುವವರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆ.ಸಿ. ವ್ಯಾಲಿ ಯೋಜನೆಗೆ ಸಂಬಂಧ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಈಗಾಗಲೇ ನರಸಾಪುರ ಭಾಗದಲ್ಲಿ ಕೆಲ ಕೆರೆಗಳಿಗೆ ನೀರು ಹರಿದಿದೆ. ಅಕ್ಕಪಕ್ಕದ ರೈತರು ನೇರವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಣ್ಣ ನೀರಾವರಿ ಅಥವಾ ಗುತ್ತಿಗೆದಾರರು ಪರಿಶೀಲನೆ ನಡೆಸಿ ಕ್ರಮಕೈಗೊಂಡಿದೀರಾ ಎಂದು ಪ್ರಶ್ನಿಸಿದರು.
ಇಲ್ಲಿ ಸಾರ್ವಜನಿಕ ಹಿತಾಸಕ್ತಿಗಿಂತ ಸ್ವಹಿತಾಸಕ್ತಿಯೇ ಮುಖ್ಯ, ಜನಕ್ಕೆ ಮಾತಿನಲ್ಲಿ ಹೇಳಿದರೆ ಕೇಳ್ಳೋದಿಲ್ಲ. ರಾಜಕಾಲುವೆಯಲ್ಲೂ ಪಂಪು ಮೋಟಾರು ಇಟ್ಟು ನೀರು ಎತ್ತುವ ಕೆಲಸ ಮಾಡುತ್ತಿರುತ್ತಾರೆ. ಕೂಡಲೇ ಅದನ್ನು ಜಪ್ತಿ ಮಾಡಿಕೊಂಡು ದೂರು ದಾಖಲಿಸಿ ಎಂದು ಸೂಚಿಸಿದರು.
ನೋಟಿಸ್ ಕೊಟ್ಟು ಕ್ರಮಕೈಗೊಳ್ಳಿ: ಕೆ.ಸಿ. ವ್ಯಾಲಿ ನೀರು ಹರಿಯುವ ಕಾಲುವೆಗಳ ಪಕ್ಕದಲ್ಲಿ ರೈತರು ಸಣ್ಣ ಪ್ರಮಾಣದ ಕಾಲುವೆಗಳನ್ನು ತೆಗೆದುಕೊಂಡು ನೀರು ಹರಿಸಿಕೊಳ್ಳುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮಕೈಗೊಳ್ಳಲು ಮುಂದಾಗಬೇಕು. ತಾವು ಯಾವುದೇ ಸಂಧಾನಕ್ಕೆ ಹೋಗದೇ ನೇರವಾಗಿ ನೋಟಿಸ್ ಕೊಟ್ಟು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸುರಕ್ಷತಾ ಕ್ರಮವಹಿಸಿಲ್ಲ: ಕೆ.ಸಿ. ವ್ಯಾಲಿ ಯೋಜನೆ ಅನುಷ್ಠಾನಕ್ಕೆ 1300 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕೆರೆಗಳಿಗೆ ನೀರು ಹರಿಸಿದರೆ ಮಾತ್ರಕ್ಕೆ ಕೆಲಸ ಮೂಗಿತು ಅಂತ ಭಾವಿಸಬಾರದು. ಹಳ್ಳಿಗಳಲ್ಲಿ ರಸ್ತೆ ಪಕ್ಕದಲ್ಲೇ ರಾಜಕಾಲುವೆ ಹರಿದು ಹೋಗಿದ್ದು, ಮುಂಜಾಗ್ರತಾ ಕ್ರಮವಾಗಿ ಸುರಕ್ಷತಾ ಕ್ರಮವಹಿಸಿಲ್ಲ. ಇದು ಗುತ್ತಿಗೆದಾರರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಎಂಜಿನಿಯರ್‌ಗಳ ತರಾಟೆ: ಯಾವುದೇ ಒಂದು ಯೋಜನೆಯನ್ನು ಅನುಷ್ಠಾನಗೊಳಿಸಬೇಕಾದರೆ ಮುಂದಾಲೋಚನೆ ಇರಬೇಕು. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಮಳೆ ನೀರು ಹರಿಯುವಷ್ಟು ಸಾಮರ್ಥ್ಯ ಇರುವ ರಾಜಕಾಲುವೆ ಎಲ್ಲೂ ಇಲ್ಲ. ನಿಸರ್ಗದಲ್ಲಿ ಮಳೆಯೇನು ಹೇಳಿ ಬರುತ್ತದೇನು ಎಂದು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು.
ಮಾಹಿತಿ ನೀಡದ್ದಕ್ಕೆ ಆಕ್ರೋಶ: ಉದ್ದಪ್ಪನಹಳ್ಳಿ ಕೆರೆಯಿಂದ ನರಸಾಪುರ ಕೆರೆಗೆ ನೀರು ಹರಿಸುವ ರಾಜಕಾಲುವೆಯ ಅಡ್ಡಲಾಗಿ ಬೃಹತ್ ಕಟ್ಟಡ ನಿರ್ಮಿಸಲಾಗಿದೆ. ಅದು ಹಿಂದಿನಿಂದಲೂ ರಾಜಕಾಲುವೆ ಎಷ್ಟು ಇತ್ತು ಎಂಬುದರ ಬಗ್ಗೆ ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಿ ಕಟ್ಟಡವನ್ನು ಹೊಡೆದು ಹಾಕಲು ಸೂಚಿಸಿದ್ದೇ ಆದರೆ, ಅಧಿಕಾರಿಗಳು ಇದುವರೆಗೂ ಮಾಹಿತಿ ನೀಡಿಲ್ಲ ಯಾಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾಹದಂತಹ ಮಳೆಗಳು ಬಂದಾಗ ಕೆ.ಸಿ.ವ್ಯಾಲಿ ಯೋಜನೆಯಿಂದ ಯಾವುದೇ ಪ್ರಾಣಹಾನಿಗಳು ಆಗದಂತೆ ಎಚ್ಚರಿಕೆಯಿಂದ ಈ ಯೋಚನೆ ರೂಪಿಸಬೇಕು. ನರಸಾಪುರ ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೆರೆಯ ಪಕ್ಕದಲ್ಲಿ ತಡೆಗೋಡೆ ನಿರ್ಮಿಸಬೇಕು. ಇದಕ್ಕೆ ಸಣ್ಣ ನೀರಾವರಿ ಇಲಾಖೆ ಎಂಜನಿಯರ್‌ಗಳು ಗುತ್ತಿಗೆದಾರರಿಂದ ಮಾಡಿಸಬೇಕು ಎಂದು ಹೇಳಿದರು.
252 ಎಂಎಲ್ಡಿ ನೀರು: ಯೋಜನೆಯಿಂದ ದಿನಕ್ಕೆ 252 ಎಂಎಲ್ಡಿ ನೀರು ಹರಿಯುತ್ತಿದೆ. ಅದರಲ್ಲಿ ಯಾವುದೇ ಅನುಮಾನಬೇಡ. ಮುಂದೆ ಆಗುವ ಅನಾಹುತಗಳು ಸಂಭವಿಸದಂತೆ ಎಚ್ಚರವಹಿಸಬೇಕು. ನೀರು ತುಂಬಿರುವ ಕೆರೆಗಳಲ್ಲಿ ಮೀನುಗಾರಿಕೆ ಉದ್ಯಮವಾಗಿ ನಡೆಯುತ್ತಿದೆ. ಇದಕ್ಕೆಲ್ಲ ಅನುಮತಿ ನೀಡಿದವರು ಯಾರು?. ಆಯಾ ವ್ಯಾಪ್ತಿಯ ಪಂಚಾಯ್ತಿ ಅಧಿಕಾರಿಗಳು ಮೀನುಗಾರಿಕೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ಒತ್ತುವರಿ: ತಾಲೂಕಿನಲ್ಲಿ ರಾಜ ಕಾಲುವೆಗಳು ಹಿಂದೆ ಎಷ್ಟು ಅಗಲ ಇತ್ತು, ಈಗ ಎಷ್ಟಿವೆ ಎಂಬುದರ ಬಗ್ಗೆ ಕಂದಾಯ, ಪಂಚಾಯಿತಿ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಎರಡು ದಿನದಲ್ಲಿ ಮಾಹತಿ ನೀಡಬೇಕು.
ಬೆಟ್ಟಗಳಿಂದ ಕೆರೆಗಳಿಗೆ ಸಂಪರ್ಕವಿರುವ ಕಾಲುವೆಗಳು ಸಂಪೂರ್ಣವಾಗಿ ಒತ್ತುವರಿಯಾಗಿದ್ದು, ಮುಂದೆ ಮಳೆಗಾಲದಲ್ಲಿ ಅಹಾನುತ ಸಂಭವಿಸಿದರೆ ಪರಿಹಾರಕ್ಕೆ ಅಂಗಲಾಚುತ್ತಾರೆ. ಇಲ್ಲಿ ಒತ್ತುವರಿದಾರರಿಗೆ ಮುಂದಾಲೋಚನೆಯೇ ಇಲ್ಲದಂತಾಗಿದೆ ಎಂದು ವಿಷಾದಿಸಿದರು.
ಭೇಟಿ ಮಾಡಲು ಹೇಳಿ: ಸಣ್ಣ ನೀರಾವರಿ ಇಲಾಖೆಯ ಎಇಇ ಕೇಂದ್ರ ಸ್ಥಾನದಲ್ಲಿ ಲಭ್ಯ ಇರುವುದಿಲ್ಲ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಮಿನಿಷ್ಟರ್ ಸಭೆಗಳಿಗೂ ಬರುವುದಿಲ್ಲ. ದೂರವಾಣಿ ಸಂಪರ್ಕಕ್ಕೂ ಸಿಗುವುದಿಲ್ಲ.
ಇಲಾಖೆ ಪ್ರಗತಿ ನೋಡಿದರೆ ಏನು ಇರುವುದಿಲ್ಲ. ಮಳೆಗಾಲದಲ್ಲೂ ಅವರು ಬೆಂಗಳೂರಿನಲ್ಲಿ ಯಾವ ಕೆರೆ ಅಭಿವೃದ್ಧಿಪಡಿಸಲು ಹೋಗುತ್ತಾರೆ. ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕಾರ್ಯಕ್ರಮಗಳು ಇಲ್ಲವೇನು. ಎಇಇ ಕೋಲಾರಿಗೆ ಬಂದಾಗ ನನ್ನನ್ನು ಭೇಟಿ ಮಾಡಕ್ಕೇಳಿ ಎಂದು ಸಣ್ಣ ನೀರಾವರಿ ಇಲಾಖೆ ಕಿರಿಯ ಎಂಜನಿಯರ್‌ಗೆ ಮಂಜುನಾಥ್ ಸೂಚಿಸಿದರು.
ಸ್ಥಳೀಯ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಮಂಜುನಾಥ್ ತಾಕೀತು:
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.