ಕೇಟರಿಂಗ್ ಸರ್ವಿಸ್, ಹೂವಿನ ಕಟ್ಟೆಯಲ್ಲಿ ದುಡಿಮೆ ಎಸೆಸೆಲ್ಸಿಯಲ್ಲಿ ಶೇ.90 ಅಂಕ
Team Udayavani, May 12, 2019, 11:17 AM IST
ಬೆಳ್ಮಣ್: ಶಾಲೆ ರಜೆ ಇದ್ದಾಗ ಹೂ ಮಾರಾಟ ಜತೆಗೆ ಕೇಟರಿಂಗ್‌ನಲ್ಲೂ ದುಡಿಯು ತ್ತಿದ್ದ ಸಾಂತೂರು ಕೊಪ್ಲದ ಸೃಜನ್ ಎಸೆಸೆಲ್ಸಿ ಪರೀಕ್ಷೆಯಲ್ಲಿ 565 ಅಂಕ ಪಡೆದಿದ್ದಾನೆ.
ಈತ ಕಾರ್ಕಳ ತಾಲೂಕಿನ ಇನ್ನಾ ಗ್ರಾ.ಪಂ. ವ್ಯಾಪ್ತಿಯ ಸಾಂತೂರು ಕೊಪ್ಪಳ ನಿವಾಸಿ ಬಾಬು ಪಾಂಗಾಳ ಮತ್ತು ಶರ್ಮಿಳಾ ದಂಪತಿಯ ಪುತ್ರ, ಬೆಳ್ಮಣ್‌ನ ಸಂತ ಜೋಸೆಫರ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ.
ಸೃಜನ್ ಸಾಧನೆ ಹಿಂದೆ ಕೋಚಿಂಗ್ ನೆರವಿಲ್ಲ. ಶಾಲೆಯಲ್ಲಿ ಶಿಕ್ಷಕರು ಮಾಡುತ್ತಿದ್ದ ಪಾಠವನ್ನು ಗಮನವಿಟ್ಟು ಕೇಳುತ್ತಿದ್ದುದು, ಅಂದಂದಿನ ಪಾಠವನ್ನು ಅಂದೇ ಮನನ ಮಾಡುತ್ತಿದ್ದುದು ಗರಿಷ್ಠ ಅಂಕಗಳ ಮೂಲ. ಸೃಜನ್ ಕನ್ನಡದಲ್ಲಿ 118, ಇಂಗ್ಲಿಷ್ 98, ಹಿಂದಿ 93, ಗಣಿತ 92, ವಿಜ್ಞಾನ -79,
ಸಮಾಜ ವಿಜ್ಞಾನದಲ್ಲಿ 85 ಅಂಕ ಗಳಿಸಿದ್ದಾನೆ.
ಹೆತ್ತವರು ಕೂಲಿ ಕಾರ್ಮಿಕರು
ಕೂಲಿ ಕಾರ್ಮಿಕರಾಗಿರುವ ಹೆತ್ತವರಿಗೆ ಮಗನ ಉತ್ತಮ ಅಂಕಗಳು ಖುಷಿ ತಂದಿವೆ. ಸೃಜನ್ ಶಾಲೆಗೆ ರಜೆಯಿದ್ದಾಗ ಹೂವಿನ ಕಟ್ಟೆಯಲ್ಲಿ ದುಡಿಯುತ್ತಾನೆ. ಜತೆಗೆ ಶಿರ್ವದ ಒಂದು ಕೇಟರಿಂಗ್‌ನಲ್ಲಿಯೂ ಕೆಲಸ ಮಾಡುತ್ತಾನೆ.
ಪೋಷಕರ ಸಹಕಾರ, ಶಿಕ್ಷಕರ ಪ್ರೋತ್ಸಾಹದಿಂದ ಸಾಧನೆ ಮಾಡಲು ಸಾಧ್ಯವಾಯಿತು ಎನ್ನುತ್ತಾನೆ ಆತ. ವಿಜ್ಞಾನ ವಿಷಯವನ್ನು ಮರು ಮೌಲ್ಯ ಮಾಪನಕ್ಕೆ ಅರ್ಜಿ ಹಾಕುವ ಆಲೋಚನೆಯಲ್ಲಿದ್ದಾನೆ. ಪಿಯುಸಿ ವಿದ್ಯಾಭ್ಯಾಸದ ಬಳಿಕ ಡಿಗ್ರಿ ಪೂರೈಸಿ ಸಿಎ ಆಗುವ ಕನಸು ಈತನದು.
ಶರತ್ ಶೆಟ್ಟಿ ಬೆಳ್ಮಣ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.