ಮನುಷ್ಯರಿಗೆ ಬಸವ ತತ್ವ ಅನಿವಾರ್ಯ: ಕೂಡಲಸಂಗಮ ಶ್ರೀ
ಮನೆಗಳನ್ನು ಮಹಾಮನೆಗಳನ್ನಾಗಿ ಮಾಡಿದ್ದು ಶರಣರು
Team Udayavani, May 12, 2019, 12:43 PM IST
ಕಲಬುರಗಿ: ಬಸವೇಶ್ವರ ವೃತ್ತದ ಬಳಿ ಹಮ್ಮಿಕೊಂಡಿರುವ ಬಸವ ಜಯಂತಿ ಉತ್ಸವದಲ್ಲಿ ಎಸ್.ಕೆ.ಕಾಂತಾ, ಮಲ್ಲಿಕಾರ್ಜುನ ಜನವಾಡ, ಎಲ್.ಬಿ.ಕೆ.ಆಲ್ದಾಳ, ಸಂಬಣ್ಣ ಹೊಳಕುಂದಿ ಅವರಿಗೆ ಕಾಯಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಲಬುರಗಿ: ವಿಶ್ವಜ್ಯೋತಿ ಬಸವಣ್ಣನವರ ತತ್ವ ಜಾಗತಿಕ ತತ್ವವಾಗಿದ್ದು, ಮನುಷ್ಯರಿಗೆ ಬಸವ ತತ್ವ ಅನಿವಾರ್ಯ ಎಂದು ಕೂಡಲಸಂಗಮದ ಪಂಚಮಶಾಲಿ ಪೀಠದ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬಸವೇಶ್ವರ ವೃತ್ತದ ಬಳಿಯಿರುವ ಬಸವ ಸಾಂಸ್ಕೃತಿಕ ವೇದಿಕೆಯಲ್ಲಿ ಶನಿವಾರ ಬಸವ ಜಯಂತಿ ಉತ್ಸವದ ಐದನೇ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಬಸವಣ್ಣ ಎಂದರೆ ಕ್ರಾಂತಿ, ಕ್ರಾಂತಿ ಎಂದರೆ ಬಸವಣ್ಣ. ಕಲ್ಯಾಣ ನಾಡಾದ ಕಲಬುರಗಿ ನೆಲದಲ್ಲಿ ಬಸವಣ್ಣನವರ ಜಯಂತಿ ಉತ್ಸವ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಕಾರವಾರದ ಬಸವಧಾಮದ ಬಸವ ರಾಜೇಶ್ವರಿ ಮಾತಾಜಿ ಮಾತನಾಡಿ, ನಮ್ಮಪ್ಪ ಬಸವಣ್ಣ, ನಮ್ಮವ್ವ ವಚನ ಸಾಹಿತ್ಯ. ಲಿಂಗಾಯತ ಧರ್ಮದ ಡಿಎನ್‌ಎ ಪರೀಕ್ಷೆ ಮಾಡಿದರೆ ನಮ್ಮಪ್ಪ ಬಸವಣ್ಣ ಎಂದು ಫಲಿತಾಂಶ ಬರುತ್ತದೆ ಎಂದರು.
ಮಹಿಳೆಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ ಎಂಬ ಕಾಲದಲ್ಲೇ ಮಹಿಳೆಯರಿಗೆ ಅವಕಾಶ ಕೊಟ್ಟರೆ, ಪುರುಷನಿಗಿಂತ ಮುಂದೆ ಬರುವಳು ಎಂದು ತೋರಿಸಿಕೊಟ್ಟಿದ್ದು ಬಸವಣ್ಣನವರು ಎಂದು ಹೇಳಿದರು.
ಶರಣರು ಮತ್ತು ಮಹಿಳಾ ಸಂವೇದನೆ ಬಗ್ಗೆ ಹಾರೂಗೇರಿಯ ಶರಣ ವಿಚಾರ ವಾಹಿನಿ ಅಧ್ಯಕ್ಷ ಐ.ಆರ್. ಮಠಪತಿ ಮಾತನಾಡಿ, 12ನೇ ಶತಮಾನದಲ್ಲಿ ಮಹಿಳೆಯರನ್ನು ಹೀನ ಸ್ಥಿತಿಯಲ್ಲಿ ಕಾಣಲಾಗುತ್ತಿತ್ತು. ಮಹಿಳೆಯರು ದೇವತಾ ಸಮಾನರು ಎನ್ನುತ್ತಿದ್ದರೂ ಅವರಿಗೆ ಸ್ವಾತಂತ್ರ್ಯ ನಿರಾಕರಿಸಲಾಗಿತ್ತು. ಮಹಿಳೆಯರನ್ನು ಗೌರವಿಸುವ, ಆರಾಧಿಸುವ ಹಕ್ಕು ಇರಲಿಲ್ಲ. ಇಂತಹ ಸಂದರ್ಭದಲ್ಲಿ ಮಹಿಳೆಯರಿಗೆ ಧ್ವನಿ ಕೊಟ್ಟಿದ್ದು ಬಸವಣ್ಣನವರು. ಅನುಭವ ಮಂಟಪದಲ್ಲಿ 33 ಮಹಿಳೆಯರು ವಚನಗಳನ್ನು ಬರೆಯ ತೊಡಗಿದರು. ಮನೆಗಳನ್ನು ಮಹಾಮನೆಗಳನ್ನಾಗಿ ಮಾಡುವ ಶಕ್ತಿಯನ್ನು ಶರಣರು ತುಂಬಿದರು ಎಂದರು.
ಇದೇ ವೇಳೆ ಮಾಜಿ ಸಚಿವ ಎಸ್.ಕೆ. ಕಾಂತಾ, ಎಂ.ಕೆ.ಆರ್ಟ್‌ನ ಮಲ್ಲಿಕಾರ್ಜುನ ಜನವಾಡ, ಎಲ್.ಬಿ.ಕೆ. ಆಲ್ದಾಳ, ಸಂಬಣ್ಣ ಹೊಳಕುಂದಿ ಅವರಿಗೆ ಕಾಯಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಗುಂಡಣ್ಣ ಡಿಗ್ಗಿ, ಸಾಯಬಣ್ಣ ಹೋಳ್ಕರ್, ಬಿ.ಎಚ್.ಭಜಂತ್ರಿ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಶಶೀಲ ನಮೋಶಿ, ಬಸವ ಉತ್ಸವ ಸಮಿತಿ ಗೌರವಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ, ಕಾರ್ಯಾಧ್ಯಕ್ಷ ಬಿ.ಎಂ.ರಾಂಪುರೆ, ಮಾಜಿ ಮೇಯರ್, ಶರಣಕುಮಾರ ಮೋದಿ, ಆರ್.ಜಿ. ಶೆಟಗಾರ, ರವೀಂದ್ರ ಶಾಬಾದಿ, ಬಸವರಾಜ ಮೊರಬದ, ಗುರುಬಸಪ್ಪ ಪಾಟೀಲ, ಅರ್ಜುನ ಭದ್ರೆ, ಸಚಿನ್ ಫರಹತಾಬಾದ್, ಧನರಾಜ ಜೀಗರೆ, ಶಂಕರ ಹೂಗಾರ, ಮಸ್ತಾನ ಬಿರಾದಾರ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.