ಪೆದಮಲೆ-ಸರಳೀಕಟ್ಟೆ ಶಿಥಿಲ ರಸ್ತೆಗೆ ಬೇಕಿದೆ ಕಾಯಕಲ್ಪ
ಉಭಯ ತಾಲೂಕಿನ ಸಂಪರ್ಕ ಕೊಂಡಿ
Team Udayavani, May 13, 2019, 6:06 AM IST
ಹೊಂಡಗಳಿಂದ ತುಂಬಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿರುವ ಪೆದಮಲೆ-ಸರಳೀಕಟ್ಟೆ ರಸ್ತೆ.
ಬಂಟ್ವಾಳ : ಗ್ರಾಮೀಣ ಭಾಗದ ಸಂಪರ್ಕ ಕೊಂಡಿ, ಬಂಟ್ವಾಳ ಹಾಗೂ ಬೆಳ್ತಂಗಡಿ ಉಭಯ ತಾಲೂಕುಗಳ ಜನರಿಗೆ ಅತಿ ಅವಶ್ಯಕವೆನಿಸಿರುವ ಪೆದಮಲೆ- ಸರಳೀಕಟ್ಟೆ ರಸ್ತೆ ಹೊಂಡಗಳಿಂದ ತುಂಬಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಜನತೆ ಎದ್ದುಬಿದ್ದು ಸಾಗಬೇಕಾಗಿದೆ.
ಈ ರಸ್ತೆ ಬೆಳ್ತಂಗಡಿ-ಬಂಟ್ವಾಳ ತಾಲೂಕನ್ನು ಸಂಪರ್ಕಿಸುವ ಜತೆಗೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಭಾಗದ ಜನತೆಗೂ ಅನುಕೂಲ ರಸ್ತೆಯಾಗಿದೆ. ಬೆಳ್ತಂಗಡಿಯ ಪೆದಮಲೆಯಿಂದ ಸರಳೀಕಟ್ಟೆ – ಬಜಾರದ ಮೂಲಕ ಸಾಗಿದರೆ ರಸ್ತೆಯು ಬಂಟ್ವಾಳದ ಅಜಿಲಮೊಗರನ್ನು ಸಂಪರ್ಕಿಸುತ್ತದೆ. ಹೀಗಾಗಿ ಇದು ಗ್ರಾಮೀಣ ಭಾಗದ ಸಂಪರ್ಕ ಕೊಂಡಿ ಎನಿಸಿಕೊಂಡಿದೆ. ರಸ್ತೆಗೆ ಹಲವು ವರ್ಷಗಳ ಇತಿಹಾಸ ವಿದ್ದರೂ ತೇಪೆ ಕಾರ್ಯ ನಡೆಯದೆ ರಸ್ತೆ ಶಿಥಿಲಾವಸ್ಥೆಗೆ ತಲುಪಿದೆ.
ಅಧಿಕಾರಿಗಳಲ್ಲಿ ಕೇಳಿದರೆ ಕಳೆದ ವರ್ಷ ಮುಂಗಡ ಅನುದಾನದ ಮೂಲಕ ಕಾಮಗಾರಿ ನಡೆಸಲಾಗಿದೆ. ಹೀಗಾಗಿ ಈ ಬಾರಿ ಉಳಿದ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕಾದ ಹಿನ್ನೆಲೆಯಲ್ಲಿ ಈ ರಸ್ತೆಗೆ ಅನುದಾನ ತರಿಸುವುದು ಅಸಾಧ್ಯವಾಗಿತ್ತು ಎನ್ನುತ್ತಾರೆ.
ಆದರೂ ಅಜಿಲಮೊಗರು ಭಾಗ ದಿಂದ ಸರಳೀಕಟ್ಟೆಯವರೆಗೆ ಈ ಬಾರಿಯೇ ಕಾಮಗಾರಿ ನಡೆದಿದೆ. ಆದರೆ ಸರಳೀಕಟ್ಟೆ- ಪೆದಮಲೆ ಭಾಗದ ರಸ್ತೆಯಲ್ಲಿ ಬೃಹತ್ ಹೊಂಡಗಳಿದ್ದು, ಸಂಚಾರ ದುಸ್ತರವೆನಿಸಿದೆ. ಕನಿಷ್ಠ ತೇಪೆ ಕಾರ್ಯವಾದರೂ ನಡೆಯಲಿ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಕಂಡೇವಾ ಸೇತುವೆ…
ಈ ರಸ್ತೆಯು ಪೆದಮಲೆಯಿಂದ ಸಾಗಿ ಬೆಳ್ತಂಗಡಿಯ ಗಡಿಯ ಭಾಗಕ್ಕೆ ಅಂತ್ಯಗೊಳ್ಳುತ್ತಿತ್ತು. ಅಂದರೆ ರಸ್ತೆಗೆ ಅಡ್ಡಲಾಗಿ ಅಜಿಲಮೊಗರಿನ ಸಮೀಪ ನೇತ್ರಾವತಿಯ ಉಪನದಿ ಹಾದು ಹೋಗುವುದರಿಂದ ಬಂಟ್ವಾಳ ತಾಲೂಕಿನ ಸಂಪರ್ಕ ಅಸಾಧ್ಯವಾಗಿತ್ತು. ಕೆಲವು ವರ್ಷಗಳ ಹಿಂದೆ ಉದಯವಾಣಿ ನಡೆಸಿದ ಕಂಡೇವಾ ಸೇತುವೆ ಅಭಿಯಾನದಲ್ಲೂ ಇದು ಪ್ರಸ್ತಾವವಾಗಿತ್ತು. ಗ್ರಾಮಸ್ಥರಿಂದ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಳ್ತಂಗಡಿಯ ಅಂದಿನ ಶಾಸಕ ಕೆ. ವಸಂತ ಬಂಗೇರ ಅವರ ಪ್ರಸ್ತಾವನೆ ಮೇರೆಗೆ ಸೇತುವೆಗೆ ಅನುದಾನ ಮಂಜೂರಾಗಿ ಸೇತುವೆ ನಿರ್ಮಾಣಗೊಂಡಿದೆ.
ಸೇತುವೆಗಳೂ ಶಿಥಿಲ
ಈ ರಸ್ತೆಯಲ್ಲಿ ಮೂರ್ನಾಲ್ಕು ಸೇತುವೆಗಳಿದ್ದು, ಹೆಚ್ಚಿನವು ಶಿಥಿಲಾವಸ್ಥೆಗೆ ತಲುಪಿವೆ. ಅದರಲ್ಲೂ ಬನ್ನೆಂಗಳ ಸೇತುವೆ ಅಪಾಯಕಾರಿಯಾಗಿದ್ದು, ಈಗಾಗಲೇ ಸಾಕಷ್ಟು ವಾಹನಗಳು ಸೇತುವೆಯ ಕೆಳಗೆ ಬಿದ್ದ ಘಟನೆಗಳು ನಡೆದಿವೆ. ಹೀಗಾಗಿ ಸೇತುವೆಗೂ ಕಾಯಕಲ್ಪ ನಡೆಯಬೇಕಿದೆ.
ಕಳೆದ ವರ್ಷ
ತೇಪೆ ಕಾರ್ಯ
ಪೆದಮಲೆ-ಸರಳೀಕಟ್ಟೆ ರಸ್ತೆಯು ತೀರಾ ಹದಗೆಟ್ಟ ಪರಿಣಾಮ ಅನುದಾನ ಇಲ್ಲದಿದ್ದರೂ ಜನರಿಗೆ ತೊಂದರೆಯಾಗದಂತೆ ರಸ್ತೆಗೆ ತೇಪೆ ಕಾರ್ಯ ನಡೆದಿತ್ತು. ಹೀಗಾಗಿ ಈಗ ಮತ್ತೆ ತೇಪೆ ಕಾರ್ಯ ಅಸಾಧ್ಯ. ಮುಂದೆ ಶಾಸಕರ ಜತೆ ಚರ್ಚಿಸಿ ಅನುದಾನಕ್ಕೆ ಪ್ರಯತ್ನಿಸಲಾಗುವುದು.
- ಚೆನ್ನಪ್ಪ ಮೊಲಿ
ಎಇಇ, ಪಂಚಾಯತ್ ರಾಜ್ ಇಲಾಖೆ, ಬೆಳ್ತಂಗಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.