ಇರುವ ಕೆರೆ,ಬಾವಿ ಸುಸ್ಥಿತಿಗೆ ತಂದರೆ ಯಥೇತ್ಛ ನೀರು!
Team Udayavani, May 13, 2019, 6:15 AM IST
ಉಡುಪಿ: ಅಂಬಲಪಾಡಿಯ ಅರ್ಧದಷ್ಟು ಭಾಗ ಗ್ರಾ.ಪಂ ವ್ಯಾಪ್ತಿಯಲ್ಲಿದ್ದರೆ ಇನ್ನುಳಿದ ಭಾಗ ನಗರಸಭೆ ವ್ಯಾಪ್ತಿಯಲ್ಲಿದೆ. ನೀರು ಪೂರೈಕೆ ಕೂಡ ನಗರಸಭೆ ಮತ್ತು ಗ್ರಾ.ಪಂ.ನಿಂದ ನಡೆಯುತ್ತದೆ. ಆದರೆ ಎಪ್ರಿಲ್ ಬಂತೆಂದರೆ ನೀರಿಗೆ ಪರದಾಡಬೇಕು ಎಂಬ ಸ್ಥಿತಿ! ಈ ಬಾರಿಯಂತೂ ಸಮಸ್ಯೆ ಹೆಚ್ಚು. ಕೆಲವು ಬಾವಿಗಳಲ್ಲಿ ನೀರಿದೆ. ಸಾರ್ವಜನಿಕ ಬಾವಿಗಳು ಇಲ್ಲಿ ಕಡಿಮೆ. ಇರುವ ಬಾವಿಗಳು ದುಸ್ಥಿತಿಯಲ್ಲಿವೆ. ಹಾಗಾಗಿ ಟ್ಯಾಂಕರ್ ನೀರಿಗೆ ಕಾಯಬೇಕು. ಎತ್ತರದ ಕೆಲವು ಪ್ರದೇಶಗಳಿಗೆ ನಗರಸಭೆಯ ನೀರು ಬರದೆ 10-12 ದಿನಗಳು ಕೂಡ ಆಗಿವೆ.
ಫ್ಲ್ಯಾಟ್‌ಗಳಿಗೆ ಹೆಚ್ಚುವರಿ ಕನೆಕ್ಷನ್?
ಅಂಬಲಪಾಡಿಯಲ್ಲಿ ಹಲವು ವಸತಿ ಸಂಕೀರ್ಣಗಳಿವೆ. ಕೆಲವು ಸಂಕೀರ್ಣಗಳಿಗೆ ನಿಗದಿತ ಸಂಖ್ಯೆಗಿಂತ ಹೆಚ್ಚು ಸಂಪರ್ಕ ನೀಡಲಾಗಿದೆ ಎಂಬ ದೂರು ಸ್ಥಳೀಯರದ್ದು. ಫ್ಲ್ಯಾಟ್‌ಗಳಿಗೆ ನಗರಸಭೆಯಿಂದ ಬೇಕಾಬಿಟ್ಟಿ ನೀರಿನ ಸಂಪರ್ಕ ನೀಡಿರುವುದರಿಂದ ಇದರ ಸುತ್ತಮುತ್ತಲಿನ ಮನೆಗಳಿಗೆ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎಂಬ ದೂರು ಅವರದ್ದು.
ಅಂಬಲಪಾಡಿ ಜಂಕ್ಷನ್, ಪರಿಶಿಷ್ಟ ಜಾತಿಯವರ ಕಾಲನಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರತಿ ವರ್ಷವೂ ಇದೆ. ಇಲ್ಲಿನ ಕೆಲವು ಮನೆಯವರು ಸಮಸ್ಯೆಗೆ ಹೊಂದಿ ಕೊಂಡಿದ್ದಾರೆ! “ಟ್ಯಾಂಕರ್ ನೀರುಬಂದರೆ ತುಂಬಿಸಿಡುತ್ತೇವೆ. ಡ್ಯಾಂನಲ್ಲಿ ನೀರೇ ಇಲ್ಲದಿದ್ದರೆ ಕೊಡುವುದು ಎಲ್ಲಿಂದ? ವರ್ಷದಿಂದ ವರ್ಷಕ್ಕೆ ಸಮಸ್ಯೆ ಉಲ್ಬಣಿಸುತ್ತಿರುವುದು ಆತಂಕಕ್ಕೆ ಕಾರಣವಾಗಿಯೆಂದು ಸ್ಥಳೀಯರು ಹೇಳುತ್ತಾರೆ.
ಕೆರೆಗಳನ್ನು ಸುಸ್ಥಿತಿಗೆ ತನ್ನಿ
ಅಂಬಲಪಾಡಿ ವಾರ್ಡ್‌ನಲ್ಲಿ ನಾಯರ್‌ಕೆರೆ ಮತ್ತು ಬೀಡುರಸ್ತೆಯಲ್ಲಿ ಕೆರೆಗಳಿವೆ. ಈ ಕೆರೆಗಳ ಹೂಳು ತೆಗೆದು ಸ್ವತ್ಛಗೊಳಿಸಿದರೆ ನೀರು ದೊರೆಯಬಹುದು. ಪಕ್ಕದ ಮನೆಗಳ ಬಾವಿಗಳ ಅಂತರ್ಜಲ ಹೆಚ್ಚಾಗಬಹುದು. ಈ ಬಗ್ಗೆ ನಗರಸಭೆ ತುರ್ತಾಗಿ ಗಮನ ಹರಿಸಬೇಕು ಎಂಬ ಬೇಡಿಕೆ ಇದೆ.
ಕುಡಿಯಲಾಗದು
ಗ್ರಾ.ಪಂ.ನವರು ಪಂಪ್ ಮೂಲಕ ಟ್ಯಾಂಕರ್‌ಗೆ ನೀರು ಹರಿಸಿ ಅದನ್ನು ಮರುದಿನ ಪೂರೈಸುತ್ತಾರೆ. ಇಲ್ಲವಾದರೆ ಅದರಲ್ಲಿ ಕೆಸರು ಮಡ್ಡಿ ಇರುತ್ತದೆ. ಈ ನೀರು ಕುಡಿಯುವುದಕ್ಕೆ ಯೋಗ್ಯವಿಲ್ಲ. ಕುಡಿಯಲು ನಗರಸಭೆಯ ನೀರೇ ಬೇಕು. ಗ್ರಾ.ಪಂ.ನವರು ಗದ್ದೆ ಸಾಲಿನಲ್ಲಿರುವ ಬಾವಿಯನ್ನು ದುರಸ್ತಿಗೊಳಿಸಿದರೆಬೇಕಾದಷ್ಟು ನೀರು ಸಿಗಬಹುದು ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.
ಮಳೆ ಬಂದರೆ ಉಸಿರು!
ಕಳೆದ ಒಂದು ತಿಂಗಳಿನಿಂದ ದಿನಕ್ಕೆ ಎರಡು ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡುತ್ತಿದ್ದೇನೆ. ನಗರಸಭೆಯಿಂದ ಬರುವ ಲೈನ್‌ನಿಂದ ಎತ್ತರದ ಪ್ರದೇಶಗಳಿಗೆ ನೀರು ಹೋಗುತ್ತಿಲ್ಲ. ಜನರಿಗೆ ನೀರು ಒದಗಿಸುವುದು ನಮ್ಮ ಮೊದಲ ಕರ್ತವ್ಯ. ಸದ್ಯಕ್ಕೆ ಮಳೆಯೊಂದೇ ಪರಿಹಾರ. ವಾರಾಹಿಯಿಂದ ನೀರು ತಂದರೆ ಮಾತ್ರ ಶಾಶ್ವತ ಪರಿಹಾರ ದೊರೆಯಬಹುದು.
-ಹರೀಶ್ ಶೆಟ್ಟಿ, ನಗರಸಭಾ ಸದಸ್ಯರು, ಅಂಬಲಪಾಡಿ ವಾರ್ಡ್
ಕೆರೆಯಲ್ಲಿ ಯಥೇತ್ಛ ನೀರು
ಅಂಬಲಪಾಡಿ ಬೀಡು ರಸ್ತೆಯಲ್ಲಿರುವ ದೊಡ್ಡ ಪುರಾತನ ಕೆರೆಯಲ್ಲಿ ಹೂಳು ತುಂಬಿದೆ. ಕೆಲವು ವರ್ಷಗಳ ಹಿಂದೆ ಇದರ ಹೂಳು ತೆಗೆಯಲಾಗಿತ್ತು. ಆಗ 2 ಪಂಪ್‌ಗ್ಳನ್ನಿಟ್ಟು ನೀರು ತೆಗೆದರೂ ಅದು ಬತ್ತಿರಲಿಲ್ಲ. ಈಗ ಮತ್ತೆ ಇದರಲ್ಲಿ ಕಳೆಗಿಡ ಬೆಳೆದಿದೆ. ಹೂಳು ಕೂಡ ಇರಬಹುದು. ಸ್ವತ್ಛಗೊಳಿಸಿದರೆ ಇದರ ನೀರನ್ನು ಇಡೀ ವಾರ್ಡ್‌ಗೆ ಬಳಸಬಹುದು. ಪರಿಸರದ ಬಾವಿಗಳ ಅಂತರ್ಜಲ ಮಟ್ಟ ಕೂಡ ಹೆಚ್ಚಾಗಬಹುದು.
-ಅಶೋಕ್, ಸ್ಥಳೀಯ ನಿವಾಸಿ
ವಾರ್ಡ್ ಜನರ ಬೇಡಿಕೆ
– ಶಾಶ್ವತ ಪರಿಹಾರ ಕಲ್ಪಿಸಬೇಕು.
– ಟ್ಯಾಂಕರ್ ನೀರಿಗೆ ವ್ಯವಸ್ಥೆ ಮಾಡಬೇಕು.
– ಬಾವಿಗಳನ್ನು ದುರಸ್ತಿ ಮಾಡಬೇಕು.
– ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.