ಕೊಳವೆಬಾವಿ ಜಲಮರುಪೂರಣ ವ್ಯವಸ್ಥೆಗೆ ನಗರಸಭೆಯಲ್ಲಿ ಅನುದಾನವಿಲ್ಲ!
Team Udayavani, May 13, 2019, 6:00 AM IST
ನಗರ : ಅರುವತ್ತು ಸಾವಿರಕ್ಕೂ ಮಿಕ್ಕಿ ಜನಸಂಖ್ಯೆ ಇರುವ ನಗರಸಭಾ ವ್ಯಾಪ್ತಿಯ 155 ಕೊಳವೆಬಾವಿಗಳಿಗೆ ಜಲಮರುಪೂರಣಕ್ಕೆ ಪುತ್ತೂರು ನಗರಸಭೆ ಯಾವುದೇ ಘಟಕ ನಿರ್ಮಿಸಿಲ್ಲ!
2017ರಲ್ಲಿ ಅಂತರ್ಜಲ ಕುಸಿತ ಹಾಗೂ ಅಂತರ್ಜಲಕ್ಕೆ ನೀರಿಂಗುವ ಪ್ರಮಾಣ ಕಡಿಮೆಯಾದ ಪರಿಣಾಮ ಪುತ್ತೂರು ತಾಲೂಕಿನಾದ್ಯಂತ ಖಾಸಗಿ ಹೊಸ ಬೋರ್‌ವೆಲ್ ಕೊರೆಯುವುದು ನಿಷೇಧಿಸುವಂತೆ ಸರಕಾರ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಜಿ.ಪಂ. ಸಹಯೋಗದಲ್ಲಿ ಖಾಸಗಿ ಕೊಳವೆಬಾವಿಗಳಿಗೆ ಜಲಮರುಪೂರಣ ಘಟಕ ನಿರ್ಮಾಣ ಮಾಡುವ ಕುರಿತು ಅನೇಕ ಜಾಗೃತಿ, ಮಾಹಿತಿ ಕಾರ್ಯಾಗಾರ ಕೈಗೊಂಡಿದೆ.
ಇದರ ಜತೆಗೆ ಗ್ರಾ.ಪಂಗಳ ನೀರು ಸರಬರಾಜು ಕೊಳವೆಬಾವಿಗಳಿಗೂ ಜಲಮರುಪೂರಣ ಘಟಕ ನಿರ್ಮಾಣಕ್ಕೆ ಅನುದಾನವನ್ನೂ ನೀಡಿತ್ತು. ಆದರೆ ಪುತ್ತೂರು ನಗರಸಭೆ ತನ್ನ ಅಧೀನದ 155 ಕೊಳವೆಬಾವಿಗಳಿಗೆ ಜಲಮರುಪೂರಣಕ್ಕೆ ಅನುದಾನ ಕೊರತೆಯ ನೆಪವೊಡ್ಡಿ ಈ ಕಾರ್ಯದಿಂದ ಹಿಂದೆ ಸರಿದಿದೆ.
ನೀರಿನ ಮೂಲ
ನಗರಕ್ಕೆ ಪ್ರತಿದಿನ ಬೇಕಾದ ನೀರಿನ ಪ್ರಮಾಣ 7.5 ಎಂಎಲ್ಡಿ. ಅದರಲ್ಲಿ 6.5 ಎಂಎಲ್ಡಿ ನೀರು ನೆಕ್ಕಿಲಾಡಿಯಿಂದ, 1 ಎಂಎಲ್ಡಿ ಕೊಳವೆ ಬಾವಿಗಳಿಂದ ಸಿಗುತ್ತಿದೆ. ನೆಕ್ಕಿಲಾಡಿ ಬಳಿ ಕುಮಾರಾಧಾರಾ ನದಿಗೆ ಅಳವಡಿಸಿದ ಡ್ಯಾಂನಿಂದ ಕುಡ್ಸೆಂಪ್ ಯೋಜನೆ ಮೂಲಕ ಸೀಟಿಗುಡ್ಡೆ ಮತ್ತು ಚಿಕ್ಕಮುಟ್ನೂರು ಗ್ರಾಮದಲ್ಲಿ ನಿರ್ಮಿಸಿದ ಟ್ಯಾಂಕಿಗೆ ನೀರು ಹಾಯಿಸಿ ನಗರಕ್ಕೆ ಪೂರೈಸಲಾಗುತ್ತದೆ. ಇದನ್ನು ಹೊರತು ಪಡಿಸಿ ಕೊಳವೆ ಬಾವಿಗಳೇ ಜಲಮೂಲ.
ಎಂಟು ವಲಯಗಳು
ನಗರದಲ್ಲಿ 9265 ಮನೆ, 820 ಗೃಹೇತರ 193 ವಾಣಿಜ್ಯ ಆಧಾರಿತ ನಳ್ಳಿ ಸಂಪರ್ಕಗಳು ಇವೆ. ಈ 3 ವಿಭಾಗಕ್ಕೂ ಲೀಟರ್ ನೀರಿಗೆ ಬೇರೆ ಬೇರೆ ದರ ಇದೆ. ಇದಕ್ಕೆ ನೀರು ಪೂರೈಕೆಗೆ 8 ವಲಯಗಳಿವೆ.
ಚಿಕ್ಕಮುಟ್ನೂರು (15 ಲಕ್ಷ ಲೀ.), ಪಟ್ನೂರು (25 ಸಾವಿರ ಲೀ), ಕರ್ಮಲ (25 ಸಾವಿರ ಲೀ), ಸೀಟಿಗುಡ್ಡೆ (9 ಲಕ್ಷ ಲೀ.), ಕಬಕ ಲಿಂಗದಗುಡ್ಡೆ (25 ಸಾ.ಲೀ), ಬಲ್ನಾಡು (1 ಲಕ್ಷ ಲೀ.), ಬೀರಮಲೆ (5 ಲಕ್ಷ ಲೀ.) ಬಲ್ನಾಡು (10 ಸಾವಿರ ಲೀ) ನೀರು ಪೂರೈಕೆ ಆಗುತ್ತದೆ. ಜಲಮೂಲಗಳ ಪೈಕಿ ನಗರಕ್ಕೆ ಬಹು ಪಾಲು ನೀರೊದಗಿಸುವುದು ನೆಕ್ಕಿಲಾಡಿ ಡ್ಯಾಂ.
2017ರಲ್ಲಿ ಮಂಗಳೂರಿಗೆ ನೀರು ಸರಬರಾಜು ಜವಾಬ್ದಾರಿ ಇದ್ದ ಹಾಗೂ ನೆಕ್ಕಿಲಾಡಿಯಲ್ಲಿ ನೀರಿನ ಮಟ್ಟ ಕುಸಿದ ಪರಿಣಾಮ ನಗರದಲ್ಲಿ ಜಲಕ್ಷಾಮದ ಆತಂಕ ಸೃಷ್ಟಿಯಾಗಿತ್ತು. ಕೊನೆಯ ಕ್ಷಣದಲ್ಲಿ ಪುತ್ತೂರು ನಗರಕ್ಕೆ ಕುಡಿಯುವ ನೀರೊದಗಿಸಿದ್ದೇ ನಗರಸಭಾ ವ್ಯಾಪ್ತಿಯ ಬೋರ್‌ವೆಲ್ಗಳು. ಆದರೆ ಈ ಬೋರ್‌ವೆಲ್ಗಳಲ್ಲಿ ಪ್ರಸ್ತುತ ನೀರು ಕಡಿಮೆ ಯಾಗುತ್ತಿದ್ದು, ಕೊಳವೆಬಾವಿಗಳಿಗೆ ಜಲ ಮರುಪೂರಣ ಘಟಕ ನಿರ್ಮಿಸದೇ ಇದ್ದಲ್ಲಿ ಬಹುತೇಕ ಕೊಳವೆಬಾವಿಗಳಲ್ಲಿ ನೀರು ಖಾಲಿಯಾಗುವ ಆತಂಕ ಎದುರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Aranthodu ಕಲ್ಲುಗುಂಡಿ: ಕಾರು ಪಲ್ಟಿ, ನಾಲ್ವರಿಗೆ ಗಾಯ
Vitla: ಉದ್ಘಾಟನೆಯಾದ ನಾಡಕಚೇರಿ ತೆರೆದಿಲ್ಲ !
Vitla: ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಕಾರಿನ ಬ್ರೇಕ್ ಫೇಲ್ ಆಗಿ ಪಲ್ಟಿ
Dharmasthala: ಸರಕಾರಿ ಶಾಲೆಗಳ ಶಿಕ್ಷಕರ ಹುದ್ದೆ ಭರ್ತಿ ಮಾಡಿ: ಡಾ.ವೀರೇಂದ್ರ ಹೆಗ್ಗಡೆ
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.