ಥಾಡ್ ರಕ್ಷಣಾ ವ್ಯವಸ್ಥೆ ಭಾರತಕ್ಕೆ?
Team Udayavani, May 13, 2019, 6:00 AM IST
ಹೊಸದಿಲ್ಲಿ: ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಗೆ ನಿಷೇಧ ಹೇರಿರುವ ಅಮೆರಿಕ, ಭಾರತವು ರಷ್ಯಾದಿಂದ ಖರೀದಿಸಲು ಉದ್ದೇಶಿಸಿರುವ ಎಸ್ 400 ಕ್ಷಿಪಣಿ ಬದಲಿಗೆ ಥಾಡ್, ಪಿಎಸಿ 3 ಕ್ಷಿಪಣಿ ಗಳನ್ನು ಒದಗಿಸುವ ಪ್ರಸ್ತಾವನೆ ಸಲ್ಲಿಸಿದೆ. ಕೆಲವೇ ವಾರಗಳ ಹಿಂದೆ ಈ ಪ್ರಸ್ತಾವನೆಯನ್ನು ಭಾರತಕ್ಕೆ ಅಮೆರಿಕ ಮಾಡಿದೆ ಎಂದು ಹೇಳಲಾಗಿದೆ.
ಕಳೆದ ವರ್ಷ ಅಮೆರಿಕ, ಭಾರತದ ಮಧ್ಯೆ ನಡೆದ ರಕ್ಷಣಾ ಸಚಿವರ ಮಾತುಕತೆಯ ವೇಳೆ, ರಷ್ಯಾದಿಂದ ಕ್ಷಿಪಣಿ ಖರೀದಿಗೆ ಆಕ್ಷೇಪ ವ್ಯಕ್ತಪಡಿ ಸದೇ ಇರಲು ಅಮೆರಿಕ ಒಪ್ಪಿಕೊಂಡಿತ್ತು. ಆದರೆ ಇತ್ತೀಚೆಗೆ ಟರ್ಕಿ ಹಾಗೂ ಸೌದಿ ಅರೇಬಿಯಾ ಕೂಡ ರಷ್ಯಾದಿಂದ ಕ್ಷಿಪಣಿ ಖರೀದಿಸಲು ಬಯಸಿದಾಗ, ಅದನ್ನು ತಡೆಯಲು ಥಾಡ್(ಟರ್ಮಿನಲ್ ಹೈ ಆಲ್ಟಿಟ್ಯೂಟ್ ಏರಿಯಾ ಡಿಫೆನ್ಸ್) ಕ್ಷಿಪಣಿ ನೀಡುವ ಅಮೆರಿಕದ ಪ್ರಸ್ತಾವವನ್ನು ಒಪ್ಪಿಕೊಂಡಿವೆ. ಇದರಿಂದಾಗಿ ಭಾರತದ ಬಗ್ಗೆಯೂ ತನ್ನ ನಿಲುವನ್ನು ಅಮೆರಿಕ ಬದಲಿಸಲಿದೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಒಂದು ಥಾಡ್ ಯೂನಿಟ್ಗೆ 300 ಕೋಟಿ ಡಾಲರ್ (20 ಸಾ. ಕೋ. ರೂ.) ವೆಚ್ಚವಾಗುತ್ತದೆ. ಸೌದಿ ಅರೇಬಿಯಾ ಇಂಥ 44 ಯೂನಿಟ್ ಖರೀದಿಗೆ ಒಪ್ಪಂದ ಮಾಡಿ ಕೊಂಡಿದೆ. ಇನ್ನೊಂದೆಡೆ ಎಸ್ 400 ಕ್ಷಿಪಣಿಯ ಐದು ಯೂನಿಟ್ಗೆ ಭಾರತ 37 ಸಾವಿರ ಕೋಟಿ ರೂ. ನೀಡುತ್ತಿದೆ. ಆದರೆ ಭಾರತಕ್ಕೆ ಥಾಡ್ ಮತ್ತು ಪಿಎಸಿ 3 ಕ್ಷಿಪಣಿಗಳ ಮೊತ್ತ ಎಷ್ಟಾಗಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.