ಮೊದಲ ಪಂದ್ಯಕ್ಕೆ ರಬಾಡ ಫಿಟ್?
Team Udayavani, May 13, 2019, 6:00 AM IST
ಜೊಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದ ವೇಗಿ ಕಾಗಿಸೊ ರಬಾಡ ಪ್ರಸಕ್ತ ಐಪಿಎಲ್ನಲ್ಲಿ ಡೆಲ್ಲಿಯ ಸ್ಟಾರ್ ಬೌಲರ್ ಆಗಿ ಮೆರೆದಿದ್ದರು. ಆದರೆ ಕೂಟದ ನಡುವೆಯೇ ಗಾಯಾಳಾಗಿ ತವರಿಗೆ ವಾಪಸಾದರು. ವಿಶ್ವಕಪ್ ಆರಂಭದ ಹಿನ್ನೆಲೆಯಲ್ಲಿ ರಬಾಡ್ ಫಿಟ್ನೆಸ್ ದಕ್ಷಿಣ ಆಫ್ರಿಕಾ ಪಾಲಿಗೆ ಮಹತ್ವದ್ದಾಗಿದೆ.
ಈ ಕುರಿತು ತಂಡದ ವೈದ್ಯ ಮೊಹಮ್ಮದ್ ಮೂಸಾಜಿ ಪ್ರತಿಕ್ರಿಯಿಸಿದ್ದು, “ರಬಾಡ ವಿಶ್ವಕಪ್ ವೇಳೆ ಪೂರ್ತಿ ಫಿಟ್ ಆಗುವ ನಿರೀಕ್ಷೆ ಇದ್ದು, ಮೊದಲ ಪಂದ್ಯದ ವೇಳೆ ಲಭ್ಯರಿರುವ ಸಾಧ್ಯತೆ ಹೆಚ್ಚಿದೆ’ ಎಂದಿದ್ದಾರೆ. ದಕ್ಷಿಣ ಆಫ್ರಿಕಾ ತನ್ನ ಮೊದಲ ಪಂದ್ಯವನ್ನು ಜೂ. 5ರಂದು ಭಾರತದ ವಿರುದ್ಧ ಆಡಲಿದೆ.
“ರಬಾಡ ಚೇತರಿಕೆ 2ರಿಂದ 3 ವಾರ ಸೂಚಿಸಲಾಗಿದೆ. ಹೀಗಾಗಿ ಅವರು ವಿಶ್ವಕಪ್ ಆರಂಭದಲ್ಲೇ ತಂಡಕ್ಕೆ ಲಭ್ಯವಾಗುವ ಸಾಧ್ಯತೆ ಹೆಚ್ಚು’ ಎಂದು ಮೂಸಾಜಿ ಹೇಳಿದರು. ರಬಾಡ ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ದಕ್ಷಿಣ ಆಫ್ರಿಕಾದ ಮತ್ತಿಬ್ಬರು ವೇಗಿಗಳಾದ ಡೇಲ್ ಸ್ಟೇನ್, ಲುಂಗಿ ಎನ್ಗಿಡಿ ಕೂಡ ಗಾಯಾಳಾಗಿದ್ದಾರೆ. ಸ್ಟೇನ್ ಭುಜದ ನೋವಿಗೆ ಸಿಲುಕಿದರೆ, ಎನ್ಗಿಡಿ ಪಾರ್ಶ್ವ ಸ್ನಾಯು ಸೆಳೆತಕ್ಕೆ ಸಿಲುಕಿದ್ದಾರೆ. ಆದರೆ ಇವರಿಬ್ಬರು ಯಾವಾಗ ಚೇತರಿಸಿಯಾರು ಎಂಬ ಬಗ್ಗೆ ಮೂಸಾಜಿ ಯಾವುದೇ ಹೇಳಿಕೆ ನೀಡಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.