ಬಸವಳಿದವರ ದಾಹ ತಣಿಸುವ ಅರವಟ್ಟಿಗೆ
ಮಿನರಲ್ ವಾಟರ್‌ಗೆ ಹೆಚ್ಚಿದ ಬೆಲೆ
Team Udayavani, May 13, 2019, 9:47 AM IST
ಚಿತ್ತಾಪುರ: ಬಸ್ ನಿಲ್ದಾಣ ಎದುರುಗಡೆ ಸಭಾ ಬೈತುಲ್ ಮಾಲ್ ವತಿಯಿಂದ ಸ್ಥಾಪಿಸಿದ ಅರವಟ್ಟಿಗೆಯಲ್ಲಿ ದಾಹ ತಣಿಸುತ್ತಿರುವ ಜನತೆ.
ಚಿತ್ತಾಪುರ: ಬಿಸಿಲ ನಾಡು ಎಂದೇ ಖ್ಯಾತಿ ಪಡೆದ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚುತ್ತಿದೆ. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಿಂದ ಆಗಮಿಸುವ ಜನರಿಗೆ ಅಲ್ಲಲ್ಲಿ ಸ್ಥಾಪಿಸಿದ ಕುಡಿಯುವ ನೀರಿನ ಅರವಟ್ಟಿಗೆ ದಾಹ ತಣಿಸುತ್ತಿದೆ.
ಪಟ್ಟಣದ ಪ್ರಮುಖ ರಸ್ತೆ, ವೃತ್ತ ಸೇರಿದಂತೆ ಇತರೆ ಕಾಲೋನಿಗಳಲ್ಲಿ ಕೆಲ ಸಂಘಟನೆಗಳು, ಉದ್ಯಮಿಗಾರರು, ಇನ್ನು ಕೆಲವರು ವೈಯಕ್ತಿಕವಾಗಿ ಸ್ಥಾಪಿಸಿರುವ ಅರವಟ್ಟಿಗೆಗಳು ಬಿಸಿಲಿಗೆ ಬಸವಳಿದು ಬಂದ ಜನರ ದಾಹ ತಣಿಸುವಲ್ಲಿ ನಿರತವಾಗಿವೆ. ತಂಪಾದ ನೀರು ಕುಡಿದ ಜನ ಅರವಟ್ಟಿಗೆ ಸ್ಥಾಪಿಸಿದವರಿಗೆ ಪುಣ್ಯ ಬರಲಿ ಎಂದು ಹಾರೈಸಿ ಮುಂದೆ ಸಾಗುತ್ತಿದ್ದಾರೆ.
ಬಿಸಿಲಿಗೆ ನೀರು ಕಾಯದಿರಲೆಂದು ಬಹುತೇಕ ಅರವಟ್ಟಿಗೆಗಳ ಮೇಲೆ ಟೆಂಟ್ ಹಾಕಲಾಗಿದೆ. ಗಿಡದ ಕೆಳಗೆ ಮಡಿಕೆಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಬಟ್ಟೆ ಸುತ್ತಿದ ಮಣ್ಣಿನ ಮಡಿಕೆಗಳಲ್ಲಿ ನೀರು ತುಂಬಿಡಲಾಗುತ್ತಿದೆ. ಇನ್ನು ಕೆಲವಡೆ ಪ್ಲಾಸ್ಟಿಕ್ ಕ್ಯಾನ್, ಬ್ಯಾರೆಲ್ಗಳಲ್ಲಿ ನೀರು ತುಂಬಿಟ್ಟು ಪಕ್ಕದಲ್ಲಿ ಲೋಟಾಗಳನ್ನು ಇಡುತ್ತಿದ್ದಾರೆ.
ಪಟ್ಟಣದ ಲಾಡ್ಜಿಂಗ್ ಕ್ರಾಸ್, ಬಸ್ ನಿಲ್ದಾಣದ ಎದರುಗಡೆ, ನಾಗಾವಿ ವೃತ್ತ, ಚಿತ್ತಾವಲಿ ಚೌಕ್, ತಹಶೀಲ್ ಕಚೇರಿ, ರೈಲ್ವೆ ನಿಲ್ದಾಣ, ಭುವನೇಶ್ವರಿ ಚೌಕ್, ಜನತಾ ಚೌಕ್, ಮಾರ್ಕೆಟ್ ಸೇರಿದಂತೆ ಪಟ್ಟಣದ ಜನಸಂದಣಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಅವರವಟ್ಟಿಗೆಗಳು ತಲೆ ಎತ್ತಿವೆ. ಇದರಿಂದ ವಿವಿಧ ಕಚೇರಿಗಳಿಗೆ ಕಾರ್ಯ ನಿಮಿತ್ತ ಪಟ್ಟಣಕ್ಕೆ ಬರುವ ಸಾರ್ವಜನಿಕರು, ಕೂಲಿಕಾರರು, ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ದಾಹ ತೀರಿಸಿಕೊಳ್ಳುತ್ತಿದ್ದಾರೆ.
ಮಿನರಲ್ ವಾಟರ್ ದುಬಾರಿ: ಪಟ್ಟಣ ಹಾಗೂ ಗ್ರಾಮಗಳಲ್ಲಿ ಮಿನಿರಲ್ ವಾಟರ್ ದಂಧೆ ಜೋರಾಗಿ ನಡೆದಿದೆ. ಸಿಕ್ಕಿದ್ದೇ ಸಿರುಂಡೆ ಎಂದು ಅಂಗಡಿಕಾರರು ಮನಬಂದಂತೆ ಗ್ರಾಹಕರ ಜೇಬಿಗೆ ಕೈ ಹಾಕಿದ್ದಾರೆ. ಒಂದು ಲೀಟರ್ ಮಿನಿರಲ್ ವಾಟರ್‌ಗೆ 20ರೂ. ಇದ್ದಿದ್ದನ್ನು 25 ಅಥವಾ 30 ರೂ. ವರೆಗೆ ಮತ್ತು 2 ಲೀಟರ್ ಬಾಟಲಿಗೆ 30 ಇದ್ದಿದ್ದನ್ನು 35ರಿಂದ 40 ರೂ. ವರೆಗೆ ಪಡೆಯುತ್ತಿದ್ದಾರೆ. ಗ್ರಾಹಕರು ಈ ಕುರಿತು ಪ್ರಶ್ನಿಸಿದರೆ ನೀರು ತಂಪಾಗಲು ಫ್ರಿಡ್ಜ್ಗೆ ಹೆಚ್ಚಿನ ಕರೆಂಟ್ ಬೇಕಾಗುತ್ತದೆ. ಹೀಗಾಗಿ ದರ ಹೆಚ್ಚಾಗಿದೆ. ಇದರಿಂದಾಗಿ ಗ್ರಾಹಕರು, ಬೈಕ್ ಸವಾರರು ಬಿಸಿಲಿಗೆ ಬಳಲಿ ದುಪ್ಪಟ್ಟು ಬೆಲೆ ನೀಡಿ ಖರೀದಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಕೆಲ ಹೋಟೆಲ್ಗಳಲ್ಲಿ ಬರೀ ನೀರು ಕೇಳಿದರೆ ಕೊಡುವ ಮನಸ್ಥಿತಿಯಲ್ಲಿ ಇಲ್ಲ. ಊಟ, ತಿಂಡಿ, ಕಾಫಿಗೆ ಬರುವವರಿಗೆ ಮಾತ್ರ ನೀರು ಕೊಡುತ್ತಾರೆ. ಹೋಟೆಲ್ನವರು ನೀರು ತರಲು ಹರಸಾಹಸ ಪಡುತ್ತಿದ್ದರಿಂದ ಉಚಿತವಾಗಿ ನೀರು ಕೊಡಲು ಹಿಂದೇಟು ಹಾಕುತ್ತಿದ್ದಾರೆ.
ಎಂ.ಡಿ. ಮಶಾಖ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.