ಕಠಿಣ ಅಭ್ಯಾಸದಿಂದ ಯಶಸ್ಸು ಸಾಧ್ಯ
Team Udayavani, May 13, 2019, 3:00 PM IST
ಲಕ್ಷ್ಮೇಶ್ವರ: ವಿದ್ಯಾರ್ಥಿ ದೆಸೆಯಿಂದಲೇ ನಿಶ್ಚಿತ ಗುರಿ ಹೊಂದಿ ಕಠಿಣ ಪರಿಶ್ರಮ, ಶ್ರದ್ಧೆಯಿಂದ ಅಭ್ಯಾಸ ಮಾಡಿದಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಗಳಿಸಿದ ರಾಹುಲ್ ಸಂಕನೂರ ಹೇಳಿದರು.
ರವಿವಾರ ಪಟ್ಟಣದ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಗೆಳೆಯರ ಬಳಗ-1977 ಸಂಘದವರು ದಿ. ಮೈಲಾರಪ್ಪ ಅಗಡಿ, ದಿ. ಈರಯ್ಯ ಹೊಸಮಠ, ದಿ. ಮಲ್ಲಣ್ಣನವರು ಮಹಾಂತಶೆಟ್ಟರ, ದಿ.ಶಂಕರಪ್ಪ ಪಿಳ್ಳಿ, ದಿ.ಬಸಪ್ಪ ಕೆಂಬಾವಿ ಹಾಗೂ ದಿ.ಚನ್ನಬಸಪ್ಪ ಬಳ್ಳೊಳ್ಳಿ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಉನ್ನತ ಸಾಧನೆಗೆ ಪ್ರಾಮಾಣಿಕ ಪ್ರಯತ್ನವಿರಬೇಕು. ಸಾಧನೆ ಯಾರೊಬ್ಬರ ಸ್ವತ್ತಲ್ಲ. ಸಾಧನೆಗೆ ಛಲ, ಶ್ರದ್ಧೆ ಅವಶ್ಯ. ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯ ಹಂತಗಳು, ವಿಷಯ ಆಯ್ಕೆ, ಅಭ್ಯಸಿಸುವ ವಿಧಾನಗಳನ್ನು ವಿವರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ತಾಲೂಕಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ, ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ಗದಗ ಜಿಲ್ಲೆಯ 10 ಸ್ಥಾನಗಳಲ್ಲಿ 5 ಸ್ಥಾನ ಶಿರಹಟ್ಟಿ ತಾಲೂಕಿನವರೇ ಗಳಿಸಿರುವುದು ವಿಶೇಷ. ಇತ್ತೀಚಿನ ದಿನಗಳಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಇಂಜಿನಿಯರಿಂಗ್ ಪದವೀಧರರು ತೇರ್ಗಡೆಯಾಗುತ್ತಿದ್ದು ನಮ್ಮ ಭಾಗದವರೇ ರಾಹುಲ್ ಸಂಕನೂರ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಗಳಿಸಿರುವುದು ವಿದ್ಯಾರ್ಥಿಗಳಿಗೆ ಪ್ರೇರಣೆ ಎಂದರು.
ಇದೇ ವೇಳೆ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಮಟ್ಟದಲ್ಲಿ ಸ್ಥಾನ ಗಳಿಸಿದ ಪ್ರಜ್ವಲ್ ಸಾತಣ್ಣವರ, ಕೃಷ್ಣಗೌಡ ಪಾಟೀಲ, ಶ್ವೇತಾ ಗೋಣೆಪ್ಪನವರ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಕಲಾ ವಿಭಾಗದ ಸುಮಾ ಎಕ್ಕಿಕೊಪ್ಪ, ಕವಿತಾ ಕೊಪ್ಪದ, ನಿಂಗಪ್ಪ ಇಚ್ಚಂಗಿ, ವಾಣಿಜ್ಯ ವಿಭಾಗದಲ್ಲಿ ಅಕ್ಕಮ್ಮ ಭಜಂತ್ರಿ, ಪೂಜಾ ಮುಳಗುಂದ, ಅಕ್ಷತಾ ಕರ್ಜೆಕಣ್ಣವರ, ವಿಜ್ಞಾನ ವಿಭಾಗದಲ್ಲಿ ಸೌಮ್ಯಾ ಬನ್ನಿಕೊಪ್ಪ, ಕಾವ್ಯಾ ಶೇs್, ಮಧು ಹಾದಿಮನಿ ಅವರನ್ನು ಸನ್ಮಾನಿಸಲಾಯಿತು.
ಸಂಘಟನೆ ಅಧ್ಯಕ್ಷ ಶಿವಪ್ರಕಾಶ ಮಹಾಂತಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಎಸ್.ಬಿ. ಯಲವಿಗಿ, ಡಿ.ಪಿ. ಹೇಮಾದ್ರಿ, ಎ.ಬಸವರಾಜಪ್ಪ, ಸಂಜೀವರಡ್ಡಿ ಎಚ್., ಬಿ.ಕೆ. ಕಾಳಪ್ಪನವರ, ಜಿ.ಎಸ್. ಸಂಕನೂರ, ವೆಂಕಟೇಶ ಮಾತಾಡೆ, ಮಾಲತೇಶ ಅಗಡಿ ಇತರರಿದ್ದರು.
ಬಸವರಾಜ ಬಳ್ಳೊಳ್ಳಿ ಸ್ವಾಗತಿಸಿದರು, ಎಂ.ಕೆ. ಕಳ್ಳಿಮಠ ಪ್ರಾಸ್ತಾವಿಕ ಮಾತನಾಡಿದರು. ಮಹಾದೇವ ಕೆಂಬಾವಿ ವಂದಿಸಿದರು. ಎ.ಎಂ. ಮಠದ ನಿರೂಪಿಸಿದರು.
ನಿರಂತರ ಅಭ್ಯಾಸ, ಶ್ರದ್ಧೆ, ಪ್ರಯತ್ನದಿಂದ ಅಂದುಕೊಂಡ ಗುರಿ ಮುಟ್ಟಲು ಸಾಧ್ಯ. ಸಾಧನೆ ಎನ್ನುವುದು ಯಾರೊಬ್ಬರ ಸ್ವತ್ತಲ್ಲ. ಅದು ಪರಶ್ರಮಿಗಳ ಸ್ವತ್ತು. ಗುರಿ ಸಾಧನೆಗೆ ಹಲವು ಅಡ್ಡಿ-ಆತಂಕ, ಸಮಸ್ಯೆಗಳು ಬರುವುದು ಸಹಜ. ಅವಗಳನ್ನೆಲ್ಲ ಎದುರಿಸಿ ಮುನ್ನುಗ್ಗಬೇಕು.
• ರಾಹುಲ್ ಸಂಕನೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.