ಮತ್ತೆ ಸದ್ದು ಮಾಡುತ್ತಿದೆ ಬಾಲ್ ಟ್ಯಾಂಪರಿಂಗ್ ವಿವಾದ: ಇಂಗ್ಲೆಂಡ್ ಬೌಲರ್ ಮಾಡಿದ್ದೇನು ?
ಬಾಲ್ ಟ್ಯಾಂಪರಿಂಗ್ ವಿವಾದಕ್ಕೆ ಸ್ಪಷ್ಟನೆ ನೀಡಿದ ಐಸಿಸಿ
Team Udayavani, May 13, 2019, 3:43 PM IST
ಸೌತಂಪ್ಟನ್ ( ಲಂಡನ್): ಕಳೆದ ವರ್ಷ ಕ್ರಿಕೆಟ್ ಲೋಕವನ್ನು ತಲ್ಲಣಗೊಳಿಸಿದ್ದ ಬಾಲ್ ಟ್ಯಾಂಪರಿಂಗ್ ವಿವಾದ ಮತ್ತೆ ಕಾಣಿಸಿಕೊಂಡಿದೆ. ಈ ಬಾರಿ ಟ್ಯಾಂಪರಿಂಗ್ ಆರೋಪಕ್ಕೆ ಗುರಿಯಾಗಿದ್ದು ಇಂಗ್ಲೆಂಡ್ ಬೌಲರ್ ಲಿಯಾಮ್ ಪ್ಲಂಕೆಟ್.
ಪಾಕಿಸ್ಥಾನ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ ಲಿಯಾಮ್ ಪ್ಲಂಕೆಟ್ ಚೆಂಡನ್ನು ಬೆರಳಿನಿಂದ ತಿಕ್ಕಿ ಉಜ್ಜಿ ವಿರೂಪಗೊಳಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಚೆಂಡಿನ ಒಂದು ಬದಿಯ ಚರ್ಮ ಕಿತ್ತು ಹೋಗಿದ್ದು ಕೂಡಾ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯವನ್ನು ಕಂಡು ಅಭಿಮಾನಿಗಳು ಈ ಘಟನೆಯ ಕುರಿತು ತನಿಖೆ ನಡೆಸಬೇಕೆಂದು ಐಸಿಸಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದರು.
Errr….What’s going on here? Did Liam Plunkett just scratch the ball with his finger nails? Please investigate this @ICC @TheRealPCB @ECB_cricket #PAKvENG #ENGvPAK pic.twitter.com/2kDqhX5AsF
— Waqas Ahmed (@ahmedwaqas92) May 12, 2019
ಸ್ಪಷ್ಟನೆ ನೀಡಿದ ಐಸಿಸಿ: ಈ ವಿವಾದದ ಬಗ್ಗೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ ಐಸಿಸಿ, ಲಿಯಾಮ್ ಪ್ಲಂಕೆಟ್ ಬಾಲ್ ವಿರೂಪಗೊಳಿಸಿದ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗಿದೆ. ಆರೋಪವನ್ನು ಸಾಬೀತುಗೊಳಿಸುವ ಬಗ್ಗೆ ನಮಗೆ ಯಾವುದೇ ಅಗತ್ಯ ಸಾಕ್ಷಿ ಲಭ್ಯವಾಗಿಲ್ಲ ಎಂದಿದೆ.
JUST IN: The ICC has confirmed that the match officials are comfortable there was no attempt by Liam Plunkett to change the condition of the ball or any evidence of this on the over-by-over examinations of the ball throughout Saurday’s ODI clash in Southampton. pic.twitter.com/0gzwHq9s4h
— ICC (@ICC) May 12, 2019
ದ್ವಿತೀಯ ಏಕದಿನ ಪಂದ್ಯವನ್ನು ಆತಿಥೇಯ ಇಂಗ್ಲೆಂಡ್ 12 ರನ್ ಗಳಿಂದ ಗೆದ್ದಿತ್ತು. ಲಿಯಾಮ್ ಪ್ಲಂಕೆಟ್ ಒಂಬತ್ತು ಓವರ್ ಗಳಲ್ಲಿ 64 ರನ್ ನೀಡಿ ಎರಡು ವಿಕೆಟ್ ಪಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್ ಉತ್ತಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.