ಬಿಂಕದ ಸಿಂಗಾರಿ ಈ ಕೆಂಪು ಸುಂದರಿ


Team Udayavani, May 14, 2019, 6:00 AM IST

MAY-FLOWEr

ಮರದ ತುಂಬ ಅರಳಿ ನಿಂತ ಮೇ ಪ್ಲವರ್‌.

ಬದಿಯಡ್ಕ: ಎಪ್ರಿಲ್‌ ಮೇ ತಿಂಗಳು ಬಂತೆಂದರೆ ಎಲ್ಲೆಲ್ಲೂ ಜನರ ಹಾಹಾಕಾರ. ಒಂದೆಡೆ ನೀರಿನ ಸಮಸ್ಯೆಯಾದರೆ ಇನ್ನೊಂದೆಡೆ ಸುಡುಬಿಸಿಲಿನ ಸಮಸ್ಯೆ. ಮನೆಯಿಂದ ಹೊರಗಿಳಿಯಲೂ ಹಿಂದೇಟು ಹಾಕುವ ಸಾಮಾನ್ಯ ಜನರ ಮನದ ಬೇಗುದಿಯನ್ನು ಕ್ಷಣಕಾಲ ತಣಿಸುವ ಶಕ್ತಿ ಇರುವುದು ಎಪ್ರಿಲ್‌ ಮೇ ತಿಂಗಳಲ್ಲಿ ಅರಳುವ ಸುಂದರವಾದ ಹೂಗಳಿಗೆ ಮಾತ್ರ. ಅದರಲ್ಲೂ ಮೇ ಮಾಸದಲ್ಲಿ ಪ್ರಕೃತಿ ಬಣ್ಣ ಬಣ್ಣದ ಹೂಗಳಿಂದ ಕಂಗೊಳಿಸುತ್ತಾಳೆ. ಸೂರ್ಯನ ಬಿಸಿಲಿಗೆ ಮೈಯೊಡ್ಡಿ ಬೀಸುವ ಗಾಳಿಗೆ ತಲೆದೂಗುವ ಈ ಚೆಲುವೆಯರು ಬಿಸಿಲಿನ ಬೇಗೆಯನ್ನೇ ಆಶ್ರಯಿಸಿ ನಗು ಚೆಲ್ಲುತ್ತಾರೆ. ಈ ಹೂಗಳ ಮಧ್ಯೆ ತನ್ನ ಬಣ್ಣ ಹಾಗೂ ಆಕೃತಿಯಿಂದ ಸೆಳೆಯುವ ಹೂಗಳಲ್ಲಿ ಮೇ ಫÉವರ್‌ ಕೂಡ ಒಂದು.

ಉರಿಬಿಸಿಲಿಗೆ ಮರಗಳೆಲ್ಲ ಎಲೆಉದುರಿಸಿ ಬೋಳಾಗಿ ನಿಂತಾಗ ಭಾರತದಲ್ಲಿ ಮೇ ಪ್ಲವರ್‌ ಎಂದೇ ಕರೆಯಲ್ಪಡುವ ಗುಲ್‌ ಮೊಹರ್‌ ಮರವು ಮಾತ್ರ ತಣ್ಣಗೆ ಹೂಬಿಟ್ಟು ಕಣ್ಮನ ತಣಿಸುತ್ತದೆ. ಹಾಗೆಯೇ ಎಲ್ಲ ಮನಸ್ಥಿತಿಯ ಜನರೂ ಒಮ್ಮೆ ಕತ್ತೆತ್ತಿ ನೋಡುವಂತೆ ಮಾಡುವ ಏಕೈಕ ಹೂ ಮೇ ಪ್ಲವರ್‌. ಇದೀಗ ಎಲ್ಲೆಲ್ಲೂ ಕೆಂಪು, ಕಡುಕೇಸರಿ ಬಣ್ಣದ ಹೂಗಳಿಂದ ಕಂಗೊಳಿಸುವ ಮರಗಳನ್ನು ಕಾಣಬಹುದು.

ರಸ್ತೆಯ ಇಕ್ಕೆಲಗಳಲ್ಲಿ, ಶಾಲೆ ಕಾಲೇಜುಗಳ ಆವರಣದಲ್ಲಿ, ಅರಣ್ಯ ಪ್ರದೇಶಗಳಲ್ಲಿ ಬೀಸುವ ಗಾಳಿಗೆ ಬೆಡಗುಬಿನ್ನಾಣದಿಂದ ನಲಿದಾಡುವ ಮೇ ಪ್ಲವರ್‌ ಸೌಂದರ್ಯ ಹಾಗೂ ತನ್ನ ಆಕರ್ಷಣೀಯ ಚೆಲುವಿನಿಂದ ಇಡೀ ಪ್ರದೇಶಕ್ಕೆ ಹೊಸರಂಗು ತುಂಬುತ್ತದೆ. ಅಂತೆಯೇ ಬಿಸಿಲಿನ ಬೇಗೆಯಲಿ ಬೇಯುವ ಮನಸಿಗೆ ಸ್ವಲ್ಪ ತಂಪಿನ ಅನುಭವವನ್ನು ನೀಡುತ್ತದೆ.

ಎಲ್ಲರನ್ನು ಸೆಳೆಯುವ ಹೂ
ಕೆಂಬಣ್ಣದ ಹೂವನ್ನು ಮುಡಿದು ಕಂಗೊಳಿಸುವ ಮೇ ಪ್ಲವರ್‌ ಮರದ ಚೆಲುವನ್ನು ಸೆರೆಹಿಡಿಯದ ಛಾಯಾಚಿತ್ರಗ್ರಾಹಕರಿಲ್ಲ, ವರ್ಣಿಸದ ಕವಿಹೃದ ಯಗಳಿಲ್ಲ. ಕಣ್ಣಲ್ಲಿ ತುಂಬಿಕೊಳ್ಳದ ನೋಡುಗನಿಲ್ಲ. ಸುಡು ಬಿಸಿಲ ನಡುವೆ ಆಗೊಮ್ಮೆ ಈಗೊಮ್ಮೆ ಇಣುಕಿ ನೋಡುವ ಕಪ್ಪು ಮೋಡಗಳು, ಉದುರಿ ಹೋಗುವ ನಾಲ್ಕು ಹನಿಗಳಂತೆ ಪ್ರಕೃತಿಯ ವಿಸ್ಮಯಗಳಲ್ಲಿ ಇದೂ ಒಂದು. ಬಾನಲ್ಲಿ ರಂಗಿನೋಕುಳಿ ಚೆಲ್ಲಿ ನೆಲದ ಮೇಲೆಲ್ಲ ಉದುರಿದ ಹೂ ದಳಗಳು ಬಿಡಿಸುವ ರಂಗವಲ್ಲಿ. ಹೂ ಹಾಸಿಗೆಯ ಅಂದ ಮಾತಿಗೆ ನಿಲುಕದು. ಚಿತ್ತಾಕರ್ಷಕ ಹೂಗೊಂಚಲುಗಳ ರಾಶಿ ಕಣ್ಣಿಗೆ ಹಬ್ಬ.

ಗ್ರಾಮೀಣ ಪ್ರದೇಶದಲ್ಲಿ ಕೆಲವು ಕಡೆ ಈ ಹೂಗಳನ್ನು ಬಳಸಿ ಚಪ್ಪರವನ್ನು ಅಲಂಕರಿಸುವುದೂ ಇದೆ. ಇಲ್ಲಿನ ಮಕ್ಕಳಿಗಂತೂ ಈ ಹೂವಿನ ಮೊಗ್ಗು ಹೂಗಳನ್ನು ಆಟದಲ್ಲಿ ಬಳಸುವುದೇ ಒಂದು ಗಮ್ಮತ್ತು. ಮುಂಜಾನೆ ಹಾಗೂ ಮುಸ್ಸಂಜೆಯ ರವಿಕಿರಣ ಈ ಹೂವಿನಂದವನ್ನು ಇಮ್ಮಡಿಗೊಳಿಸುತ್ತದೆ. ಅಂತೆಯೇ ನಿಸರ್ಗಪ್ರಿಯರಿಗೆ ಕವಿಹƒದಯರಿಗೆ ಸದಾ ಪ್ರೇರಣಾಶಕ್ತಿಯೂ ಹೌದು.ಹೊಳೆಯುವ ಕೆಂಪನೆ ಹೂಗಳ ಆಹ್ಲಾದಮಯ ಆಸರೆ ನೀಡುವ ತಂಪಾದ ಅನುಭವ ಹಾಗೂ ಮೈದುಂಬಿ ನರ್ತಿಸುವ ಈ ವೃಕ್ಷಗಳು ಜಗತ್ತಿನೆಲ್ಲ ಸೌಂದರ್ಯವನ್ನು ಹೀರಿಕೊಂಡು ಬಿಂಕದಿಂದ ಬೀಗುವಂತೆ ಭಾಸವಾಗುತ್ತದೆ.

ಗುಲ್‌ ಮೊಹರ್‌
ಮಡಗಾಸ್ಕರ್‌ ಮೂಲದ ಈ ಮರ ಕಡಿಮೆ ಎತ್ತರದಲ್ಲಿ ಅಗಲವಾಗಿ ಹರಡಿ ನಿಲ್ಲುತ್ತದೆ. ಗ್ರಾಮೀಣ ಭಾಷೆಯಲ್ಲಿ ಕತ್ತಿಕಾಯಿ ಎಂದು ಕರೆಯುವ ಈ ಮರದ ವೈಜ್ಞಾನಿಕ ಹೆಸರು ಡಿಲೊನಿಕ್ಸ್‌ ರೆಜಿಯ. ಗುಲ್‌ ಮೊಹರ್‌ ಎನ್ನುವುದು ಉರ್ದು ಭಾಷೆಯ ಪದ. ಎಪ್ರಿಲ್‌ ಮೇ ತಿಂಗಳಲ್ಲಿ ಮೊಗ್ಗು ಬಿಡಲು ಪ್ರಾರಂಭವಾಗುತ್ತದೆ. ಕತ್ತಿಯಂತಿರುವ ಕೋಡಿನ ತುಂಬೆಲ್ಲಾ ಬೀಜಗಳನ್ನು ಕಾಣಬಹುದು.

-ಅಖೀಲೇಶ್‌ ನಗುಮುಗಂ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.