ಜಲಾಶಯಗಳ ಮುಚ್ಚುಗಡೆ: ಜಿಲ್ಲೆಯಲ್ಲಿ ಗಣತಿ ಜಾರಿ?
Team Udayavani, May 14, 2019, 6:00 AM IST
ಕಾಸರಗೋಡು: ಜಿಲ್ಲೆಯ ಜಲಾಶಯಗಳನ್ನು ಮತ್ತು ಕಿರು ಜಲಾಶಯಗಳನ್ನು ಮಣ್ಣು ಹಾಕಿ ಮುಚ್ಚಲಾಗುತ್ತಿರುವುದನ್ನು ಪತ್ತೆಮಾಡುವ ನಿಟ್ಟಿನಲ್ಲಿ ಆರನೇ ಕಿರು ನೀರಾವರಿ ಗಣತಿ ಮತ್ತು ವಾಟರ್ ಬೋಡಿ ಸೆನ್ಸಸ್ ಜಾರಿಗೊಳ್ಳಲಿದೆ.
ಕೇಂದ್ರ ನೀರಾವರಿ ಸಚಿವಾಲಯದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಡೆಸುವ ಗಣತಿಯನ್ನು ರಾಜ್ಯದಲ್ಲಿ ಕಿರು ನೀರಾವರಿ ಇಲಾಖೆ ನಡೆಸುತ್ತಿದೆ. 5 ವರ್ಷಗಳಿಗೊಮ್ಮೆ ನಡೆಸಲಾಗುವ ಈ ಗಣತಿ ಮೂಲಕ ಬಾವಿ, ಕೆರೆ, ಕಿರು ಜಲಾಶಯಗಳು ಇತ್ಯಾದಿಗಳನ್ನು ಪತ್ತೆಮಾಡಿ ಗಣನೆ ಮಾಡಲಾಗುವುದು. ಜಿಲ್ಲೆಯಲ್ಲಿ ಸುಮಾರು 75 ಮಂದಿಯನ್ನು ಗಣತಿ ಕಾಯಕಕ್ಕಾಗಿ ನೇಮಿಸಲಾಗಿದೆ.
ಜಿ.ಪಿ.ಎಸ್. ತಾಂತ್ರಿಕತೆಯ ಮೊಬೈಲ್ ಆ್ಯಪ್ ಬಳಸಿ ಜಲಾಶಯಗಳ ಚಿತ್ರಪಡೆದು, ಜಾಗವನ್ನೂ ದಾಖಲಿಸಲಾಗುವುದು.
ಎಪ್ರಿಲ್ ತಿಂಗಳಲ್ಲಿ ಆರಂಭಗೊಳ್ಳಬೇಕಿದ್ದ ಈ ಗಣತಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗ ಆರಂಭಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಗ್ರಾಮ ಪಂಚಾಯತ್‌ಗಳ ಮತ್ತು ನಗರಸಭೆಗಳ ಸೂಪರ್‌ವೈಸರ್‌ಗಳಿಗೆ, ಎನ್ಯುಮರೇಟರ್‌ಗಳಿಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮ ಸಿವಿಲ್ ಸ್ಟೇಷನ್‌ನ ಡಿ.ಪಿ.ಸಿ. ಸಭಾಂಗಣದಲ್ಲಿ ನಡೆಯಿತು. ಕಿರು ನೀರಾವರಿ ವಿಭಾಗ ಕಾರ್ಯಕಾರಿ ಎಂಜಿನಿಯರ್ ವರ್ಗೀಸ್ ಕೆ.ವರ್ಗೀಸ್ ಅಧ್ಯಕ್ಷತೆ ವಹಿಸಿದ್ದರು.
ಸ್ಟಾಟಿಸ್ಟಿಕಲ್ ಅಧಿಕಾರಿ ಎಂ. ನಿಝಾಮುದ್ದೀನ್, ಸ್ಟಾಟಿಸ್ಟಿಕಲ್ ಸಹಾಯಕಿ ಅಂಜನಾ ಕೃಷ್ಣನ್ ತರಗತಿ ನಡೆಸಿದರು. ಮೇ 14 ರಂದು ಆಯ್ದ ಪ್ರದೇಶಗಳಿಗೆ ತೆರಳಿ ಪ್ರಾಯೋಗಿಕ ತರಬೇತಿನೀಡಲಾಗುವುದು ಎಂದು ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.