ಇಂದು ಪಾರ್ವತಮ್ಮ ಟ್ರೇಲರ್ ಬಿಡುಗಡೆ
ಮೇ.24 ರಿಂದ ಹರಿಪ್ರಿಯಾ ತನಿಖೆ ಶುರು
Team Udayavani, May 14, 2019, 3:00 AM IST
ಇತ್ತೀಚೆಗಷ್ಟೇ ನಟ ಶ್ರೀಮುರಳಿ ಅವರು ಬಿಡುಗಡೆ ಮಾಡಿದ್ದ ಹರಿಪ್ರಿಯಾ ಅಭಿನಯದ “ಡಾಟರ್ ಅಫ್ ಪಾರ್ವತಮ್ಮ’ ಚಿತ್ರದ ಲಿರಿಕಲ್ ವಿಡಿಯೋಗೆ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗಿದೆ. ಅದರ ಬೆನ್ನಲ್ಲೇ ಚಿತ್ರತಂಡ ಮೇ.14 (ಇಂದು) ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತಿದೆ. ಈ ಚಿತ್ರಕ್ಕೆ ಗೀತೆಯೊಂದನ್ನು ರಚಿಸಿದ್ದ ನಟ ಧನಂಜಯ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತಿದ್ದಾರೆ.
ಪಿಆರ್‌ಕೆ ಯುಟ್ಯೂಬ್ ಚಾನೆಲ್‌ನಲ್ಲಿ ಮಧ್ಯಾಹ್ನ ಟ್ರೇಲರ್ ಅಪ್‌ಲೋಡ್ ಆಗಲಿದೆ. ಎನರ್ಜಿಟಿಕ್ ಟೈಟಲ್‌ನ ಚಿತ್ರ ಇದಾಗಿರುವುದರಿಂದ ಪಾರ್ವತಮ್ಮ ಪಾತ್ರದಲ್ಲಿ ಸುಮಲತಾ ಅಂಬರೀಶ್ ಕಾಣಿಸಿಕೊಂಡಿರುವುದು ಚಿತ್ರಕ್ಕೆ ಇನ್ನಷ್ಟು ತೂಕ ಹೆಚ್ಚಿದೆ ಎಂಬುದು ಚಿತ್ರತಂಡದ ಹೇಳಿಕೆ.
“ಚಿತ್ರದಲ್ಲಿ ಪಾರ್ವತಮ್ಮನ ಮಗಳಾಗಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಅವರ 25 ನೇ ಚಿತ್ರ ಎಂಬುದು ವಿಶೇಷ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಹರಿಪ್ರಿಯಾ ಅವರು ಇದೇ ಮೊದಲ ಬಾರಿಗೆ ತನಿಖಾಧಿಕಾರಿಯಾಗಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಅವರಿಲ್ಲಿ ಭರ್ಜರಿ ಸ್ಟಂಟ್ಸ್ ಕೂಡ ಮಾಡಿದ್ದಾರೆ.
ಆರ್‌ಎಕ್ಸ್ 100 ಬೈಕ್ ಓಡಿಸುವುದರ ಜೊತೆಗೆ ರೌಡಿಗಳನ್ನು ಕ್ರಿಕೆಟ್ ಮೈದಾನದಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು ಹಿಗ್ಗಾಮುಗ್ಗಾ ಚಚ್ಚಿರುವುದು ಸಿನಿಮಾದ ಹೈಲಟ್’ ಎನ್ನುವ ನಿರ್ದೇಶ ಶಂಕರ್, ಈಗಾಗಲೇ ಚಿತ್ರದ ಲಿರಿಕಲ್ ವಿಡಿಯೋ ನೋಡಿ ಶ್ರೀಮುರಳಿ, ಪ್ರೇಮ್, ಅಭಿಷೇಕ್ ಅಂಬರೀಶ್, ಪವನ್ ಒಡೆಯರ್, ಗುರುನಂದನ್ ಹಾಗೂ ತೆಲುಗು ನಟ ಸುಮನ್ ಸೇರಿದಂತೆ ಹಲವರು ನಟ,ನಿರ್ದೇಶಕರು ಮೆಚ್ಚಿಕೊಂಡಿದ್ದಾರೆ ಎನ್ನುತ್ತಾರೆ.
ಇದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರ. ಸೆಂಟಿಮೆಂಟ್, ಎಮೋಷನ್ಸ್, ಲವ್, ಆ್ಯಕ್ಷನ್ಸ್, ಕಾಮಿಡಿ, ಥ್ರಿಲ್ಲರ್ ಎಲ್ಲವೂ ಇಲ್ಲಿದೆ. ಎರಡು ಫೈಟ್ಸ್, ಭರ್ಜರಿ ಚೇಸ್ ದೃಶ್ಯಗಳಿವೆ. ಅಮ್ಮ-ಮಗಳು ಕಾಂಬಿನೇಷನ್ ಚಿತ್ರದ ಹೈಲೈಟ್. ಇಲ್ಲಿ ಭಾವನೆಗಳ ಜೊತೆಗೆ ಭಾವುಕ ಅಂಶಗಳೂ ತುಂಬಿಕೊಂಡಿವೆ. ಇದು ಒಂದು ವರ್ಗಕ್ಕೆ ಸೀಮಿತವಾದ ಸಿನಿಮಾವಲ್ಲ, ಕುಟುಂಬ ಸಮೇತ ಬಂದು ನೋಡಬಹುದು.
ಚಿತ್ರ ನೋಡಿದವರಿಗೆ ಒಬ್ಬ ಅಮ್ಮನಿಗೆ ಇಂತಹ ಮಗಳಿರಬೇಕು. ಒಬ್ಬ ಮಗಳಿಗೆ ಇಂತಹ ಅಮ್ಮ ಇರಬೇಕು ಅಂತೆನಿಸದೇ ಇರದು. ಅಷ್ಟೊಂದು ಮೌಲ್ಯಗಳು ತುಂಬಿರುವ ಚಿತ್ರ ಎಂಬುದು ಚಿತ್ರತಂಡದ ಮಾತು. ಮಿಥುನ್ ಮುಕುಂದನ್ ಸಂಗೀತದಲ್ಲಿ ಎರಡು ಹಾಡುಗಳು ಚಿತ್ರದಲ್ಲಿವೆ. ಅರುಳ್ ಕೆ. ಸೋಮುಸುಂದರಂ ಅವರ ಛಾಯಾಗ್ರಹಣವಿದೆ.
ವಿನೋದ್ ಸಾಹಸವಿದೆ. ಚಿತ್ರದಲಿ ಸೂರಜ್ ಗೌಡ, ಪ್ರಭು, ತರಂಗ ವಿಶ್ವ, ರಾಘವೇಂದ್ರ, ಶ್ರೀಧರ್, ಸುಧಿ ಇತರರು ನಟಿಸಿದ್ದಾರೆ. ಚಿತ್ರವನ್ನು ಶಶಿಧರ್ ಕೆ.ಎಂ ನಿರ್ಮಿಸಿದ್ದಾರೆ. ಇವರೊಂದಿಗೆ ನಿರ್ಮಾಣದಲ್ಲಿ ಕೃಷ್ಣ, ಮಧು, ಸಂದೀಪ್ ಸಾಥ್ ನೀಡಿದ್ದಾರೆ. ಮೇ. 24 ರಂದು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪಾರ್ವತಮ್ಮನ ದರ್ಶನವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.