ಕೋಡಿ ಸೀವಾಕ್‌ಗೆ ಬೇಕಿದೆ ಮೂಲ ಸೌಕರ್ಯ
ಸಂಪರ್ಕ ರಸ್ತೆ ದುರಸ್ತಿಗೂ ಆಗ್ರಹ
Team Udayavani, May 14, 2019, 6:00 AM IST
ಕೋಡಿ ಸೀವಾಕ್‌ನಲ್ಲಿ ಕಂಡು ಬಂದ ಪ್ರವಾಸಿಗರ ದಂಡು.
ಕುಂದಾಪುರ: ಕೋಡಿಯ ಕಡಲ ಕಿನಾರೆಯಲ್ಲಿ ವಾಯು ವಿಹಾರಕ್ಕೆ ನಿರ್ಮಿಸಿರುವ ಸೀವಾಕ್ ಈಗ ಆಕರ್ಷಣೆಯ ಕೇಂದ್ರವಾಗಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ನಿತ್ಯ ಸಂಜೆ ಇಲ್ಲಿನ ಸೌಂದರ್ಯ ಆಸ್ವಾದಿಸಲು ಜನ ಬರುತ್ತಿದ್ದಾರೆ.
ಇದು ಮಕ್ಕಳಿಗೆ ಬೇಸಗೆ ರಜಾ ಸಮಯವಾಗಿದ್ದು, ಕೋಡಿಯ ಸೀವಾಕ್‌ನಲ್ಲಿ ದಟ್ಟನೆ ಹೆಚ್ಚಿದೆ.
ಕಡಲ್ಕೊರೆತ ಶಾಶ್ವತ ಪರಿಹಾರಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ 102 ಕೋ.ರೂ. ವೆಚ್ಚದಲ್ಲಿ ಕೋಡಿಯಲ್ಲಿ ಬ್ರೇಕ್ ವಾಟರ್ ಯೋಜನೆ 2015ರಲ್ಲಿ ಮಂಜೂರಾಗಿತ್ತು. ಟ್ರೆಟ್ರಾಫೈಡ್ ಮೂಲಕ ತಡೆಗೋಡೆ ನಿರ್ಮಾಣ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಪ್ರವಾಸೋದ್ಯಮದ ಉದ್ದೇಶಕ್ಕಾಗಿ ಇಲ್ಲಿ ಮಲ್ಪೆಯ ಮಾದರಿಯಲ್ಲಿಯೇ ಸೀವಾಕ್ ನಿರ್ಮಿಸಲಾಗಿದೆ.
ಮೂಲ ಸೌಕರ್ಯಕ್ಕೆ ಬೇಡಿಕೆ
ಇಲ್ಲಿಗೆ ದೂರ- ದೂರದ ಊರುಗಳಿಂದ ಆಗಮಿಸುವ ಪ್ರವಾಸಿಗರ ವಾಹನ ನಿಲುಗಡೆಗೆ ಸೂಕ್ತವಾದ ವ್ಯವಸ್ಥೆ ಆಗಬೇಕಾಗಿದೆ. ಅದಲ್ಲದೆ ಕುಂದಾಪುರದಿಂದ ಇಲ್ಲಿಗೆ ಸಂಪರ್ಕಿಸುವ ಸಂಪರ್ಕ ರಸ್ತೆಯೂ ಕಿರಿದಾಗಿರುವುದರ ಜತೆಗೆ, ಹದಗೆಟ್ಟಿದ್ದು, ಅದರ ದುರಸ್ತಿ ಮಾಡಲಿ. ಹೈ ಮಾಸ್ಟ್ ದೀಪ ಅಳವಡಿಕೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸಹಿತ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಬೇಕಾಗಿದೆ. ಇದಲ್ಲದೆ ಸಣ್ಣ ಪ್ರಮಾಣದ ಇನ್ನಷ್ಟು ಹೋಟೆಲ್‌ಗಳು, ಫಾಸ್ಟ್‌ಫುಡ್ ಮಳಿಗೆಗಳನ್ನು ತೆರೆದರೆ ಮತ್ತಷ್ಟು ಆಕರ್ಷಣೀಯವಾಗಬಹುದು ಎನ್ನುವುದು ಇಲ್ಲಿಗೆ ಬಂದಿದ್ದ ಪ್ರವಾಸಿಗರ ಬೇಡಿಕೆಯಾಗಿದೆ.
1.5 ಕೋ.ರೂ. ವೆಚ್ಚದ ಯೋಜನೆ
ಈಗಾಗಲೇ ಕೋಡಿ ಬೀಚ್‌ನ್ನು ಆಕರ್ಷಣೀಯವಾಗಿದಲು 1.5 ಕೋ.ರೂ. ವೆಚ್ಚದ ಯೋಜನೆ ಸಿದ್ಧಪಡಿಸಿ, ಪ್ರವಾಸೋದ್ಯಮ ಇಲಾಖೆಗೆ ಕಳುಹಿಸಿದ್ದೇವೆ. ಈ ವರ್ಷದಲ್ಲೇ ಇದನ್ನು ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕೂಡ ಪ್ರಯತ್ನಿಸಲಾಗುವುದು.
– ಅನಿತಾ ಭಾಸ್ಕರ್, ಸಹಾಯಕ ನಿರ್ದೇಶಕಿ,
ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟವರ್ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್ ದಾವೆ: ಸಂಸದ ಕೋಟ
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
MUST WATCH
ಹೊಸ ಸೇರ್ಪಡೆ
Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Udupi: ಟವರ್ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್ ದಾವೆ: ಸಂಸದ ಕೋಟ
Mangaluru: ಅಡಿಕೆ ಕ್ಯಾನ್ಸರ್ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.