ಬಳಸುವವರಿಲ್ಲದೆ ಮೂಲೆಗುಂಪಾದ ಶುದ್ಧ ನೀರಿನ ಘಟಕ
ಕುಂಭಾಸಿ ವಿನಾಯಕ ನಗರ
Team Udayavani, May 14, 2019, 6:00 AM IST
ತೆಕ್ಕಟ್ಟೆ: ಕುಂಭಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿನಾಯಕ ನಗರದಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆಯಾಗಿ ವರ್ಷ ಕಳೆಯಿತು. ಆದರೆ ಅದರ ಬಳಕೆ ನಿರೀಕ್ಷಿತ ಪ್ರಮಾಣದಲ್ಲಿರದೆ ಯೋಜನೆ ವ್ಯರ್ಥವಾಗಿದೆ.
ಶುದ್ಧ ಕುಡಿಯುವ ನೀರಿನ ಯೋಜನೆ
ಎಸ್ಸಿಪಿ/ಟಿಎಸ್ಪಿ ಯೋಜನೆಯಡಿ 2 ಸಾವಿರ ಲೀ. ಸಾಮರ್ಥ್ಯ ಹೊಂದಿದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಇಲ್ಲಿ 600 ಮಂದಿ ನಿವಾಸಿ ಗಳಿದ್ದು ಪ್ರಯೋಜನವಾಗಬಹುದು ಎನ್ನಲಾಗಿತ್ತು. ಇದಕ್ಕಾಗಿ ಲಕ್ಷಾಂತರ ರೂ. ವಿನಿಯೋಗಿಸಲಾಗಿತ್ತು. ಆದರೆ ಇದನ್ನು ಈಗ ಬಳಸುವವರಿಲ್ಲ.
ನಾಣ್ಯ ಹಾಕಿದರೆ ನೀರು ಬರುತ್ತಿಲ್ಲ!
ಘಟಕದಲ್ಲಿ 1 ರೂ. ನಾಣ್ಯ ಹಾಕಿದರೆ 10 ಲೀ. ಶುದ್ಧ ನೀರು ಲಭ್ಯವಾಗುತ್ತದೆ. ಈ ಬಗ್ಗೆ ಬೋರ್ಡ್ ಕೂಡ ಇಲ್ಲಿದೆ. ಆದರೆ ನಾಣ್ಯ ಹಾಕಿದರೆ ಪ್ರಯೋಜನವಿಲ್ಲವಾಗಿದೆ. ನಾಣ್ಯವನ್ನು ಮೆಶೀನ್ ಸ್ವೀಕರಿಸದೇ ಇರುವುದರಿಂದ ನೀರು ಬರದೇ ಇರುವುದು ಕಂಡುಬಂದಿದೆ.
ನಿತ್ಯ 75 ಸಾವಿರ ಲೀ.ನೀರು ಪೂರೈಕೆ
ಕುಂಭಾಸಿ ಗ್ರಾ.ಪಂ.ವ್ಯಾಪ್ತಿಯ ವಿನಾಯಕ ನಗರದಲ್ಲಿ ಸುಮಾರು 40 ಬಾವಿಗಳು , 3 ಹ್ಯಾಂಡ್ ಪಂಪ್ ಹಾಗೂ ನಿತ್ಯ ಬಳಕೆಗಾಗಿ ಪ್ರತಿ ಮನೆಗಳಿಗೂ ಕೂಡಾ ಪೈಪ್ ಲೈನ್ ವ್ಯವಸ್ಥೆ ಕಲ್ಪಿಸಲಾಗಿದ್ದು ಹಳೆ ಗ್ರಾ.ಪಂ.ಕಟ್ಟಡದ ಸಮೀಪದ ತೆರೆದ ಬಾವಿಯಿಂದ ನಿತ್ಯ 75 ಸಾವಿರ ಲೀ.ನೀರು ಪೂರೈಕೆ ಮಾಡಲಾಗುತ್ತಿದೆ.
ಬಳಸಲು ಹಿಂದೇಟು
ಈ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕದಿಂದ ಸಂಗ್ರಹಿಸಿದ ನೀರು ಕಂದು ಬಣ್ಣ ಬಂದಿದೆ ಎನ್ನುವ ಕಾರಣಕ್ಕೆ ಕೆಲವರು ಈ ನೀರನ್ನು ಉಪಯೋಗಿಸಲು ಸಾರ್ವಜನಿಕರು ಹಿಂದೇಟು ಹಾಕು ತ್ತಿದ್ದಾರೆ. ಈಗಾಗಲೇ ಘಟಕದ ಸಮೀಪದ ಬಾವಿಯಿಂದ ನೀರು ಸರಬರಾಜಾಗುತ್ತಿದ್ದು ಮೋಟರ್ ಸುಟ್ಟು ಹೋಗಿರುವುದರಿಂದ ದುರಸ್ತಿಗೆ ಕಳುಹಿಸಲಾಗಿದೆ.
– ಲಕ್ಷ್ಮಣ ಕಾಂಚನ್, ಸದಸ್ಯರು, ಗ್ರಾ.ಪಂ. ಕುಂಭಾಸಿ
ಅಗತ್ಯ ಇರುವಲ್ಲಿ ನಿರ್ಮಿಸಿ
ಸರಕಾರ ಲಕ್ಷಾಂತರ ರೂ. ವ್ಯಯಿಸಿ ಇಂತಹ ಶುದ್ಧ ನೀರಿನ ಘಟಕ ನಿರ್ಮಿಸಿದೆ. ಅನಗತ್ಯ ಪ್ರದೇಶಗಳಲ್ಲಿ ಇಂತಹ ಘಟಕ ನಿರ್ಮಿಸುವ ಬದಲು ಕುಡಿಯುವ ನೀರಿಗೆ ಸಮಸ್ಯೆಗಳಿರುವ ಸ್ಥಳದಲ್ಲಿ ನಿರ್ಮಿಸಿದ್ದರೆ ಸಾರ್ವಜನಿಕರು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದರು.
– ವಿಶ್ವನಾಥ ಹಂದೆ,
ಮಾಜಿ ಸೈನಿಕರು
ಬಳಕೆಯಾಗದಿರುವುದು ಬೇಸರದ ಸಂಗತಿ
ಕುಂಭಾಸಿ ಮೂಡುಗೋಪಾಡಿಯ ಸುಮಾರು 40 ಮನೆಗಳಿಗೆ ಈಗಾಗಲೇ ಕುಡಿಯುವ ನೀರಿನ ಸಮಸ್ಯೆಗಳಿದ್ದು ಟ್ಯಾಂಕರ್ ಮೂಲಕ ಎರಡು ದಿನಗಳಿಗೊಮ್ಮೆ ಸುಮಾರು 18 ಸಾವಿರ ಲೀಟರ್ ನೀರು ಟ್ಯಾಂಕರ್ ಮೂಲಕ ಪೂರೈಕೆ ಮಾಡುತ್ತಿದ್ದೇವೆ. ಶುದ್ಧ ಕುಡಿಯುವ ನೀರಿನ ಘಟಕ ಸಮರ್ಪಕವಾಗಿ ಬಳಸಿಕೊಳ್ಳುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದೇವೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಬಳಕೆಯಾಗದಿರುವುದು ಬೇಸರದ ಸಂಗತಿ.
– ಜಯರಾಮ ಶೆಟ್ಟಿ , ಪಿಡಿಒ ಕುಂಭಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ
Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ
Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್ಗೆ ಶ್ರೇಷ್ಠತೆಯ ಮಾನ್ಯತೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.