ಕರ್ನಾಟಕ ರಾಜ್ಯ ಮುಕ್ತ ವಿ.ವಿ.: ಪ್ರವೇಶ ಆರಂಭ
Team Udayavani, May 14, 2019, 6:04 AM IST
ಮಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಜುಲೈ ತಿಂಗಳ ಅವಧಿಯ ಪ್ರವೇಶಾತಿ ಆರಂಭಗೊಂಡಿದೆ ಎಂದು ಕುಲಪತಿ ಪ್ರೊ| ಶಿವಲಿಂಗಯ್ಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಹಾಗೂ ಪಿಜಿ ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭಗೊಂಡಿದೆ. ಪದವಿ ಕೋರ್ಸ್‌ಗಳಲ್ಲಿ ಬಿ.ಎ., ಬಿ.ಕಾಂ ಮತ್ತು ಬಿ.ಲಿಬ್.ಐ.ಎಸ್ಸಿ. ಸ್ನಾತಕೋತ್ತರ ಪದವಿ ಕೋರ್ಸ್‌ಗಳಲ್ಲಿ ಎಂ.ಎ. ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಸಂಸ್ಕೃತ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಕೋರ್ಸ್‌ಗಳನ್ನು ಆಯ್ಕೆ ಮಾಡ ಬಹುದಾಗಿದೆ ಎಂದರು.
ಎಂ.ಕಾಂ, ಎಂ.ಬಿ.ಎ., ಎಂ.ಎಸ್ಸಿ. ವಿಭಾಗದಲ್ಲಿ ಜೀವ ರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ, ರಸಾಯನಶಾಸ್ತ್ರ, ಕ್ಲಿನಿಕಲ್ ನ್ಯೂಟ್ರಿಷಿಯನ್ ಆ್ಯಂಡ್ ಡಯಟಿಟಿಕ್ಸ್, ಪರಿಸರ ವಿಜ್ಞಾನ, ಕಂಪ್ಯೂಟರ್ ವಿಜ್ಞಾನ, ಭೂಗೋಳಶಾಸ್ತ್ರ, ಮಾಹಿತಿ ವಿಜ್ಞಾನ, ಗಣಿತಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ, ಭೌತಶಾಸ್ತ್ರ, ಮನೋವಿಜ್ಞಾನ ವಿಷಯದಲ್ಲಿ ಕಲಿಯಬಹುದಾಗಿದೆ ಎಂದರು.
ಎಂ.ಲಿಬ್.ಐ.ಎಸ್ಸಿ. ವಿಷಯಕ್ಕೆ ಅವಕಾಶವಿದ್ದು, ಪಿಜಿ ಡಿಪ್ಲೊಮಾ ಕೋರ್ಸ್‌ಗಳಾದ ಇಂಗ್ಲಿಷ್, ಕಮ್ಯುನಿಕೇಟಿವ್ ಇಂಗ್ಲಿಷ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಮತ್ತಿತರ ಕೋರ್ಸ್ ಗಳಿವೆ ಎಂದು ವಿವರಿಸಿದರು.
ಡಿಪ್ಲೊಮಾ ಕೋರ್ಸ್‌ಗಳಲ್ಲಿ ಕನ್ನಡ, ಪತ್ರಿಕೋದ್ಯಮ, ನ್ಯೂಟ್ರಿಷನ್ ಆ್ಯಂಡ್ ಹೆಲ್ತ್ ಎಜುಕೇಶನ್, ಇನ್‌ಫಾರ್‌ವೆುàಷನ್ ಸೈನ್ಸ್, ಕಂಪ್ಯೂಟರ್ ಅಪ್ಲಿಕೇಷನ್, ಸರ್ಟಿಫಿಕೇಟ್ ಕೋರ್ಸ್ ಗಳಾದ ಕನ್ನಡ, ಪಂಚಾಯತ್ ರಾಜ್ಯ ವ್ಯವಸ್ಥೆ, ಆಹಾರ ಮತ್ತು ಪೌಷ್ಟಿಕತೆ ವಿಷಯಗಳಿವೆ ಎಂದರು.
ಶುಲ್ಕ ವಿನಾಯಿತಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತ್ತು ಬಡತನ ರೇಖೆಗಿಂತ ಕೆಳಗಡೆ ಇರುವ ಮಹಿಳಾ ವಿದ್ಯಾರ್ಥಿಗಳಿಗೆ ಸರಕಾರದ/ಕರಾಮುವಿವಿ ನಿಯಮಗಳನ್ವಯ ಶುಲ್ಕ ವಿನಾಯಿತಿ ನೀಡಲಾಗುವುದು.
ಕರಾಮುವಿಯಲ್ಲಿ 2013-14 ಮತ್ತು 2014-15ರಲ್ಲಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಈವರೆಗೆ ಅಂಕಪಟ್ಟಿ ದೊರಕಿರುವುದಿಲ್ಲ. ಈ ಬಗ್ಗೆ ಪ್ರಕರಣ ನ್ಯಾಯಾಲಯದಲ್ಲಿದ್ದು, ಮುಂದಿನ ಕೆಲ ತಿಂಗಳಿನಲ್ಲಿಯೇ ಸಮಸ್ಯೆ ಬಗೆಹರಿಯಲಿದೆ. ವಿದ್ಯಾರ್ಥಿಗಳ ಪರವಾಗಿ ವಿ.ವಿ. ಇದೆ ಎಂದು ಭರವಸೆ ನೀಡಿದರು.
ಕುಂದು-ಕೊರತೆಗೆ ಸಂಪರ್ಕಿಸಿ
ವಿ.ವಿ.ಯ ಪ್ರಾದೇಶಿಕ ಕೇಂದ್ರ ಕಚೇರಿಯು ಮಂಗಳೂರಿನ ಅಶೋಕನಗರ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಮೂರನೇ ಮಹಡಿಯಲ್ಲಿದೆ. ಕಲಿಕಾ ಸಹಾಯ ಕೇಂದ್ರಗಳಾಗಿ ಮಂಗಳೂರಿನ ರಥಬೀದಿಯಲ್ಲಿರುವ ಡಾ| ದಯಾನಂದ ಪಿ. ಪೈ-ಸತೀಶ್ ಪಿ.ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು, ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಮತ್ತು ಉಜಿರೆಯ ಎಸ್‌ಡಿಎಂ ಕಾಲೇಜು ಆಯ್ಕೆ ಮಾಡಲಾಗಿದೆ. ಮಂಗಳೂರು ಸುತ್ತ-ಮುತ್ತ ಇರುವ ವಿದ್ಯಾರ್ಥಿಗಳು ಪ್ರಾದೇಶಿಕ ಕೇಂದ್ರ ಕಚೇರಿ ಮತ್ತು ಅದರ ಕಲಿಕಾ ಸಹಾಯ ಕೇಂದ್ರಗಳನ್ನು ಕುಂದು-ಕೊರತೆ ಬಗ್ಗೆ ಸಂಪರ್ಕಿಸಬಹುದು ಎಂದರು.
ಡಾ| ದಯಾನಂದ ಪಿ. ಪೈ-ಸತೀಶ್ ಪಿ. ಪೈ ಸರಕಾರಿ ಕಾಲೇಜು ಪ್ರಾಂಶುಪಾಲ ರಾಜಶೇಖರ ಹೆಬ್ಟಾರ್, ಸಂತ ಫಿಲೋಮಿನ ಕಾಲೇಜಿನ ರಾಧಾಕೃಷ್ಣ, ವಿವಿ ಪ್ರಾದೇಶಿಕ ಕೇಂದ್ರದ ಬಸವರಾಜು ಇದ್ದರು.
ಅರ್ಜಿ ಸಲ್ಲಿಕೆ ಕೊನೆಯ ದಿನ
ದಂಡ ಶುಲ್ಕವಿಲ್ಲದೆ ಪ್ರವೇಶ ಪಡೆಯಲು ಜುಲೈ 25 ಕೊನೆಯ ದಿನವಾಗಿದ್ದು, 200 ರೂ. ದಂಡ ಶುಲ್ಕದೊಂದಿಗೆ ಆಗಸ್ಟ್ 21,400 ರೂ. ದಂಡದೊಂದಿಗೆ ಆಗಸ್ಟ್ 31ರ ವರೆಗೆ ಅವಕಾಶವಿದೆ. ಎಂ.ಬಿ.ಎ. ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಜುಲೈ 20ರಂದು ಕೊನೆಯ ದಿನ. ಸಾಮಾನ್ಯ ಪ್ರವೇಶ ಪರೀಕ್ಷೆಯು ಜುಲೈ 28ರಂದು ನಡೆಯಲಿದ್ದು, ಫಲಿತಾಂಶ ಅಗಸ್ಟ್ 3ರಂದು ಪ್ರಕಟಗೊಳ್ಳಲಿದೆ. ಪ್ರವೇಶಾತಿಗೆ ಅಗಸ್ಟ್ 31ರಂದು ಕೊನೆಯ ದಿನ.ಎಲ್ಲ ವಿವರ ವಿಶ್ವವಿದ್ಯಾನಿಲಯದ ವೆಬ್‌ಸೈಟ್ www.ksoumysore.karnataka.gov.in ನಲ್ಲಿ ಲಭ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.