ನೊಂದಿದ್ದೇನೆ: ಆರ್ಸಿಬಿ ಅಭಿಮಾನಿ
Team Udayavani, May 14, 2019, 6:00 AM IST
ಬೆಂಗಳೂರು: ಮೇ4ರಂದು ಬೆಂಗಳೂರಿನಲ್ಲಿ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ವೇಳೆ ಆರ್ಸಿಬಿ ಅಭಿಮಾನಿ ಹುಡುಗಿಯೊಬ್ಬಳು ಟೀವಿ ನೇರ ಪ್ರಸಾರದ ವೇಳೆ ಸುಮಾರು 5 ಸೆಕೆಂಡ್ಸ್ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದರು. ಟೀವಿಯಲ್ಲಿ ಕಾಣಿಸಿಕೊಂಡ ಆ ಸುಂದರ ಹುಡುಗಿ ಯಾರು ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಹುಡುಕಾಟ ನಡೆದಿತ್ತು.
ಒಂದೇ ದಿನದಲ್ಲಿ ಆ ಹುಡುಗಿಗೆ ಸಾಮಾಜಿಕ ಜಾಲತಾಣದಲ್ಲಿ ಕಣ್ಸನ್ನೆ ಹುಡುಗಿ ಪ್ರಿಯ ವಾರಿಯರ್ ಮಾದರಿಯಲ್ಲಿ ಸುಮಾರು 1.50 ಲಕ್ಷ ಜನರಿಂದ ಹುಡುಕಾಟ ನಡೆದಿತ್ತು. ಇದೀಗ ಆ ಹುಡುಗಿ ಮೌನ ಮುರಿದು ಮಾತನಾಡಿದ್ದಾರೆ. ‘ನಾನು ಸೆಲೆಬ್ರಿಟಿ ಅಲ್ಲ. ನಾನೊಬ್ಬಳು ಸಾಮಾನ್ಯ ಹುಡುಗಿ, ಹೇಳಿಕೊಳ್ಳುವ ಏನೂ ಸಾಧನೆ ಮಾಡಿಲ್ಲ. ಕೇವಲ ಪಂದ್ಯ ನೋಡಲು ಅಷ್ಟೇ ಬಂದಿದ್ದೆ. ಆದರೆ ಟೀವಿಯಲ್ಲಿ ಪ್ರಸಾರವಾದ ಬಳಿಕ ನನಗೆ ವ್ಯಾಪಕ ಪ್ರಚಾರ ಸಿಕ್ಕಿತು. ಇದೀಗ ಫೇಸ್ಬುಕ್, ಟ್ವೀಟರ್ ಖಾತೆಗೆ ಕೆಲವು ಅಶ್ಲೀಲ ಕಾಮೆಂಟ್ಗಳು ಕೂಡ ಬರಲಾರಂಭಿಸಿವೆ. ಜತೆಗೆ ನನ್ನ ಖಾಸಗಿ ತನಕ್ಕೂ ಧಕ್ಕೆ ಯಾಗುತ್ತಿದೆ. ಇದರಿಂದ ನಾನು ಮಾನಸಿಕವಾಗಿ ತೀವ್ರವಾಗಿ ನೊಂದಿದ್ದೇನೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.