ಕ್ರೀಡಾಂಗಣ ಪುನಶ್ಚೇತನಕ್ಕೆ ಪ್ರಸ್ತಾವನೆ ಸಲ್ಲಿಸಿ
Team Udayavani, May 14, 2019, 2:24 PM IST
ಹಾವೇರಿ: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ ನೇತೃತ್ವದ ಅಧಿಕಾರಿಗಳ ತಂಡ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಒಳಾಂಗಣ ಕ್ರೀಡಾಂಗಣದಲ್ಲಿ ಕೈಗೊಂಡಿರುವ ಕಾಮಗಾರಿ, ಈಜುಕೊಳ ಹಾಗೂ ವಿವಿಧ ಕ್ರೀಡಾ ಅಂಕಣಗಳನ್ನು ಪರಿಶೀಲಿಸಿ ಪುನಶ್ಚೇತನಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
2010ನೇ ಸಾಲಿನಲ್ಲಿ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ನಿರ್ಮಿಸಲಾದ ಒಳಾಂಗಣ ಕ್ರೀಡಾಂಗಣ ಕಟ್ಟಡದ ದಕ್ಷಿಣ ಭಾಗದ ಗೋಡೆ ಮತ್ತು ಮೇಲ್ಛಾವಣಿ ಕುಸಿದುಬಿದ್ದಿದು,್ದ ಈ ಗೋಡೆಯ ಪುನರ್ ನಿರ್ಮಾಣ ಹಾಗೂ ಒಳಾಂಗಣ ಕ್ರೀಡಾಂಗಣದ ಶೆಟಲ್ ಬ್ಯಾಡ್ಮಿಂಟ್ ಕೋರ್ಟ್‌ಗಳ ಮರದ ನೆಲಹಾಸು ಹಾಗೂ ಟೈಲ್ಸ್, ಕುಳಿತುಕೊಳ್ಳಲು ಆಸನ ವ್ಯವಸ್ಥೆ ಹಾಗೂ ಈಜುಕೋಳದ ನವೀಕರಣ ಕಾಮಗಾರಿಯನ್ನು 71.62 ಲಕ್ಷ ರೂ.ಗಳಲ್ಲಿ ಕೈಗೊಂಡಿದ್ದು, ಈ ಕಾಮಗಾರಿಯ ಪರಿಶೀಲನೆ ನಡೆಸಿ ಅವರು ಅಗತ್ಯ ಸಲಹೆ ನೀಡಿದರು.
ಪುನರ್ ನಿರ್ಮಾಣಗೊಂಡಿರುವ ದಕ್ಷಿಣ ಭಾಗದ ಗೋಡೆಯ ತಾಂತ್ರಿಕ ಗುಣಮಟ್ಟದಿಂದ ನಿರ್ಮಾಣವಾಗಿರುವ ಕುರಿತಂತೆ ಮೂರನೇ ಸಂಸ್ಥೆಯಿಂದ ತಾಂತ್ರಿಕ ಪರೀಕ್ಷೆ ನಡೆಸಿ ವರದಿ ಸಲ್ಲಿಸಬೇಕು. ಪುನರ್ ನಿರ್ಮಾಣವಾಗಿರುವ ದಕ್ಷಿಣ ಗೋಡೆ ಹೊರತುಪಡಿಸಿ ಉಳಿದ ಮೂರು ಬದಿಯ ಗೋಡೆಗಳ ಗುಣಮಟ್ಟವನ್ನು ಸಹ ತಾಂತ್ರಿಕ ಸಮಿತಿಯಿಂದ ಪರಿಶೀಲಿಸಿ ವಿಸ್ತೃತ ಕ್ರಿಯಾಯೋಜನೆ ಅನುಸಾರ ತಾಂತ್ರಿಕ ಗುಣಮಟ್ಟದಿಂದ ಕಾಮಗಾರಿ ನಡೆದಿರುವ ಬಗ್ಗೆ ವರದಿ ಸಲ್ಲಿಸಲು ಸೂಚಿಸಿದರು.
ಗಾಳಿಯ ಒತ್ತಡದಿಂದ ಗೋಡೆ ಹಾಗೂ ಛಾವಣಿಗೆ ಯಾವುದೇ ಹಾನಿಯಾಗದಂತೆ ಕೈಗಾರಿಕಾ ಶೆಡ್‌ಗಳಿಗೆ ಫ್ಯಾನ್‌ಗಳನ್ನು ಅಳವಡಿಸುವ ರೀತಿಯಲ್ಲಿ ಇಲ್ಲಿಯೂ ಫ್ಯಾನ್ ಅಳವಡಿಸಲಾಗಿದೆ. ಸಾಗವಾನಿ ಮರದ ಕಟ್ಟಿಗೆಯಿಂದ ನೆಲಹಾಸು ಸಿದ್ಧಪಡಿಸಲು ಕ್ರಮವಹಿಸಲಾಗಿದೆ. ಈಗಾಗಲೇ ಪುನರ್ ನಿರ್ಮಾಣ ಮಾಡಿರುವ ಕಾಮಗಾರಿಯ ಗುಣಮಟ್ಟವನ್ನು ತಟಸ್ಥ ಮೂರನೇ ತಾಂತ್ರಿಕ ಸಂಸ್ಥೆಯಿಂದ ಪರಿಶೀಲನೆ ನಡೆಸಿ ಪ್ರಮಾಣಪತ್ರ ಪಡೆಯಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು. ಕ್ರೀಡಾಂಗಣದ ಹೊರವಲಯದ ಟೆನ್ನಿಸ್ ಕೋರ್ಟ್ ಹಾಗೂ ಸ್ಕೇಟಿಂಗ್ ಕೋರ್ಟ್‌ಗಳ ನವೀಕರಣ ಹಾಗೂ ಬಣ್ಣ ಬಳಿಸಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಸ್ನೂೕಕರ್ ಹಾಗೂ ಜಿಮ್ ವಿಭಾಗವನ್ನು ಆಧುನಿಕರಣಗೊಳಿಸಲು ಹಾಗೂ ವಿಸ್ತರಿಸಲು ಆಯುಕ್ತರು ಸಲಹೆ ನೀಡಿದರು.
ಕ್ರೀಡಾಂಗಣದ ಟ್ರ್ಯಾಕ್‌ನ್ನು ಪುನರ್ ನವೀಕರಿಸಬೇಕು. ಮುಖ್ಯ ದ್ವಾರದ ಒಳಬದಿಯಲ್ಲಿರುವ ಪ್ರೇಕ್ಷಕರ ಗ್ಯಾಲರಿಯ ಮೇಲ್ಛಾವಣಿ ಬದಲಾವಣೆ, ಧ್ವಜಾರೋಹಣ ಕಟ್ಟಡದ ಮರು ವಿನ್ಯಾಸ ಹಾಗೂ ನವೀಕರಣ, ಮುಖ್ಯ ಕಟ್ಟಡದ ಮೀಟಿಂಗ್ ಹಾಲ್ ನವೀಕರಣ, ಆಸನ ವ್ಯವಸ್ಥೆ, ಸುಣ್ಣ-ಬಣ್ಣಗೊಳಿಸಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಇದೇ ಸಂದರ್ಭದಲ್ಲಿ ಕ್ರೀಡಾಂಗಣಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವ ಕುರಿತಂತೆ ಹಾಗೂ ಹಾವೇರಿಯಲ್ಲಿ ಹಾಕಿ ಕ್ರೀಡಾಂಗಣಕ್ಕೆ ನಾಲ್ಕು ಎಕರೆ ಜಾಗೆಯನ್ನು ಕಾಯ್ದಿರಿಸಲಾಗಿದೆ. ನಿರ್ಮಾಣಕ್ಕೆ ಅಗತ್ಯ ಅನುದಾನ ಒದಗಿಸುವಂತೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಕ್ರೀಡಾ ಆಯುಕ್ತರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ಕ್ರೀಡಾ ಸಂಘಟನೆಗಳ ಪ್ರತಿನಿಧಿಗಳು, ಕ್ರೀಡಾಂಗಣಕ್ಕೆ ವಿವಿಧ ಸೌಲಭ್ಯಗಳ ಒದಗಿಸುವ ಕುರಿತಂತೆ ಆಯುಕ್ತರಿಗೆ ಮೌಖೀಕವಾಗಿ ಮನವಿ ಮಾಡಿಕೊಂಡರು.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ರಮೇಶ್, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಭಾವನಮೂರ್ತಿ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಶಾಕೀರ್ ಅಹ್ಮದ್, ಕೆ.ಸಿ. ಕಾಂತರಾಜು ಇತರರು ಈ ಸಂದರ್ಭದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.