ಮುಳುಗುವ ಬೋಟ್ನಿಂದ ಮೀನುಗಾರರ ರಕ್ಷಣೆ
Team Udayavani, May 14, 2019, 3:46 PM IST
ಪಣಜಿ(ಮಡಗಾಂವ): ಮಡಗಾಂವನಿಂದ 17 ಕಿ.ಮೀ ದೂರದ ಮೋಬರ್‌ನಲ್ಲಿ ಕೇವಲ 10 ಗಂಟೆಗಳ ಅವಧಿಯಲ್ಲಿ ಎರಡು ಮೀನುಗಾರಿಕಾ ಬೋಟ್ ಮುಳುಗಿದ ಘಟನೆ ನಡೆದಿದೆ. ಈ ಪೈಕಿ ಒಂದು ಬೋಟ್ನ್ನು ದೃಷ್ಟಿ ಜೀವರಕ್ಷಕ ದಳದ ಸಿಬ್ಬಂದಿ ದಡಕ್ಕೆ ತಂದಿದ್ದು ಎಲ್ಲ ಮೀನುಗಾರರನ್ನೂ ರಕ್ಷಿಸಿದ್ದಾರೆ.ಈ ಘಟನೆಗೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಾಹಿತಿ ಅನುಸಾರ- ಮೋಬರ್ ಸಮುದ್ರದಿಂದ ಸಾಳ ನದಿಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಎಂಜಿನ್ ಬಂದ್ ಆಗಿದ್ದರಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಈ ಮೀನುಗಾರಿಕಾ ಬೋಟನ್ನು ಹೊರತೆಗೆಯಲು ಭೂಸೇನೆಯ ಸಹಾಯ ಪಡೆದುಕೊಳ್ಳಬೇಕಾಯಿತು. ಈ ದುರ್ಘಟನೆಯಲ್ಲಿ ವಿನೋದ ಉರಂಗ್, ಅಶೋಕ್ ಬಾರಿಕ್, ಪಂಕಜ್ ಬಾರಿಕ್ ಸೇರಿದಂತೆ ಇನ್ನು ಇಬ್ಬರು ಮೀನುಗಾರರು ಸಮುದ್ರದಲ್ಲಿ ಮುಳುಗುತ್ತಿದ್ದರು. ದೂರದಲ್ಲಿ ಬೋಟ್ ಮುಳುಗುತ್ತಿರುವುದನ್ನು ಕಂಡ ಜೀವರಕ್ಷಕ ದಳದ ಸಿಬ್ಬಂದಿ ರಕ್ಷಣೆಗೆ ಧಾವಿಸಿ ಮುಳುಗುತ್ತಿದ್ದ ಮೀನುಗಾರರನ್ನು ರಕ್ಷಿಸಿದರು. ಈ ಎರಡೂ ದುರ್ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಮೀನುಗಾರರ ಪ್ರಾಣ ಹಾನಿ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.