ಹೃದಯಘಾತದ ಅರಿವಿರಲಿ
Team Udayavani, Nov 21, 2020, 11:23 AM IST
ಬದಲಾದ ಜೀವನ ಶೈಲಿ, ಕೆಲಸದ ಒತ್ತಡ, ವ್ಯಾಯಮದ ಕೊರತೆಯಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಸಣ್ಣ ವಯಸ್ಸಿನಲ್ಲೇ ಬಹುತೇಕ ಮಂದಿಯನ್ನು ಕಾಡುತ್ತಿರುತ್ತದೆ. ಪ್ರಸ್ತುತ ಆರೋಗ್ಯ ಸಮಸ್ಯೆಗೆ ಕೆಟ್ಟ ಹವ್ಯಾಸಗಳನ್ನು ಮೈಗೂಡಿಸಿಕೊಂಡಿರಬೇಕು ಎಂದೆನಿಲ್ಲ. ಸರಿಯಾದ ಸಮಯಕ್ಕೆ ಊಟ, ತಿಂಡಿ ಮಾಡದೆ ಒತ್ತಡಯುತ ಜೀವನವಿದ್ದರೆ ಸಾಕು. ಇಲ್ಲದ ರೋಗಗಳು ಮನೆ ಸೇರುತ್ತದೆ. ಹೃದಯ ಕಾಯಿಲೆ ಎಂಬುದು 50ರ ಅನಂತರ ಎಂಬ ಕಾಲವೊಂದಿತ್ತು. ಆದರೆ ಈಗ ಸಣ್ಣ ವಯಸ್ಸಿನಲ್ಲೇ ಕಾಣಿಸಿಕೊಳ್ಳಲಾರಂಭಿಸಿದೆ. ಹೀಗಾಗಿ ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.
ಯುವ ಜನತೆಯಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ, ಕೆಟ್ಟ ಜೀವನಶೈಲಿ ನೇರವಾಗಿ ಹೃದಯಕ್ಕೆ ಘಾಸಿ ಮಾಡುತ್ತಿದೆ ಎಂದರೆ ತಪ್ಪಾಗಲಾರದು. ಹೃದಯಾಘಾತಕ್ಕೆ ವಯಸ್ಸು, ಲಿಂಗ ಯಾವುದರ ಗಡಿ ಇಲ್ಲ. ಹೃದಯ ಖಾಯಿಲೆ 50ರ ಅನಂತರ ಎಂದು ನಿರ್ಲಕ್ಷಿಸುವ ಕಾಲವೂ ಇದಲ್ಲ. ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತ ಸಂಭವಿಸಲು ಬದಲಾದ ಜೀವನಶೈಲಿಯೇ ಪ್ರಮುಖ ಕಾರಣ.
ವ್ಯಾಯಾಮ ಇಲ್ಲದಿರುವುದು, ಜಂಕ್ ಫುಡ್ ಸೇವನೆ, ತಂಬಾಕು, ಕೌಟುಂಬಿಕ ಹಿನ್ನೆಲೆ, ಮಧುಮೇಹ, ಏರಿದ ಹೃದಯಬಡಿತ, ಹೈ ಕ್ಯಾಲೋರಿ ಡಯಟ್, ಮಧುಮೇಹ, ಬೊಜ್ಜು ಮತ್ತು ಖನ್ನತೆ, ಅತಿಯಾದ ರಕ್ತದೊತ್ತಡ, ಹೆಚ್ಚು ಕೊಲೆಸ್ಟ್ರಾಲ್, ಗರ್ಭ ನಿರೋಧಕ ಗುಳಿಗೆ ಸೇವನೆ, ಮೆನೋಪಾಸ್ ಅನಂತರ ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ ಮತ್ತು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಕಾರಣವಾಗಿರಬಹುದು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಆರೋಗ್ಯ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಹೊಣೆ.
ಪ್ರಾಥಮಿಕ ಚಿಕಿತ್ಸೆ
ಹಾರ್ಟ್ ಅಟ್ಯಾಕ್ ಆದಾಗ ಪದೇಪದೇ ಜೋರಾಗಿ ಕೆಮ್ಮಬೇಕು. ಅನಂತರ ತತ್‌ಕ್ಷಣವೇ ಕೆಳಗೆ ಕುಳಿತುಕೊಳ್ಳಬೇಕು ಅಥವಾ ಅಂಗಾತ ಮಲಗಬೇಕು. ಹಾಗೆ ದೀರ್ಘವಾಗಿ ಉಸಿರನ್ನು ಎಳೆದುಕೊಳ್ಳಬೇಕು. ಕೆಮ್ಮುವುದನ್ನು ನಿಲ್ಲಿಸದೇ ಪ್ರತಿ ಎರಡು ಸೆಕೆಂಡುಗಳಿಗೊಮ್ಮೆ ಸತತವಾಗಿ ಕೆಮ್ಮತ್ತಿರಬೇಕು. ಸಹಾಯಕ್ಕಾಗಿ ಯಾರಾದರೂ ಬರುವ ತನಕ, ಸಾಮಾನ್ಯ ಸ್ಥಿತಿಗೆ ಬರುವ ತನಕ ಇದನ್ನು ಮುಂದುವರಿಸುತ್ತಿರಬೇಕು. ಇದರಿಂದ ನಾವು ಹೃದಯಾಘಾತದಿಂದ ಸಾಯದೆ ಬದುಕುಳಿಯುವ ಸಂಭವ ಹೆಚ್ಚಿರುತ್ತದೆ. ದೀರ್ಘವಾಗಿ ಉಸಿರು ಎಳೆದುಕೊಳ್ಳುವುದರಿಂದ ಆಕ್ಸಿಜನ್ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಇದನ್ನೇ ಆಸ್ಪತ್ರೆಯ ಐಸಿಯುನಲ್ಲಿ ಮಾಡುವುದು. ಬಳಿಕ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Snuff: ನಶ್ಯ ತಂದಿಟ್ಟ ಸಮಸ್ಯೆ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI: ಶ್ರೀಲಂಕಾ ಬ್ಯಾಟಿಂಗ್ ಕುಸಿತ ನ್ಯೂಜಿಲ್ಯಾಂಡ್‌ಗೆ ಸುಲಭ ಜಯ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Kundapura: ಗುಲ್ವಾಡಿ; ಗಾಯಾಳು ಸಾವು
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.