ಕ್ರೋಢ ಬೈಲೂರು – ಮರತ್ತೂರು: ಈಡೇರದ ಸೇತುವೆ ಬೇಡಿಕೆ
Team Udayavani, May 15, 2019, 6:10 AM IST
ಅಂಪಾರು: ಮರತ್ತೂರುನಿಂದ ಕ್ರೋಢ ಬೈಲೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಬೇಡಿಕೆ 4 ದಶಕಗಳಿಂದ ಈಡೇರಿಲ್ಲ. ಮೊಳಹಳ್ಳಿ ಗ್ರಾ.ಪಂ. ವ್ಯಾಪ್ತಿಯ ವಾರಾಹಿ ನದಿಗೆ ಸೇತುವೆ ನಿರ್ಮಿಸಿದರೆ ಮರತ್ತೂರು ಹಾಗೂ ಕ್ರೋಢಬೈಲೂರು ನಡುವೆ ಸಂಪರ್ಕ ಸಾಧ್ಯವಾಗಲಿದೆ. ಇದರಿಂದ ಎರಡೂ ಭಾಗಗಳಲ್ಲಿ ನೆಲೆಸಿರುವ ನೂರಾರು ಕುಟುಂಬಗಳಿಗೆ ಅನುಕೂಲವಾಗಲಿದೆ.
ಈಗ ಬಿದ್ಕಲ್ಕಟ್ಟೆ, ಮೊಳಹಳ್ಳಿ, ಗಾವಳಿ ಭಾಗದಿಂದ ಶಂಕರನಾರಾಯಣಕ್ಕೆ ಹೋಗುವ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಸುತ್ತು ಬಳಸಿ ಹೋಗುತ್ತಿದ್ದಾರೆ. ಸೇತುವೆ ಬೇಡಿಕೆ ಈಡೇರಿದಲ್ಲಿ, ಬಿದ್ಕಲ್ಕಟ್ಟೆ-ಅಂಪಾರು ಮಧ್ಯೆ ಹತ್ತಿರದ ಮಾರ್ಗ ಇದಾಗಲಿದೆ.
ಸೇತುವೆಯಾದರೆ ಉಡುಪಿ, ಬಾರಕೂರು ಕಡೆಯಿಂದ ಕೊಲ್ಲೂರು ದೇವಸ್ಥಾನಕ್ಕೆ ಬರುವ ಯಾತ್ರಾರ್ಥಿಗಳಿಗೂ ಪ್ರಯೋಜನವಾಗಲಿದೆ. ಬಾರಕೂರು, ಬಿದ್ಕಲ್ಕಟ್ಟೆ ಮಾರ್ಗವಾಗಿ ಅಂಪಾರು, ನೇರಳಕಟ್ಟೆಯಾಗಿ ಕೊಲ್ಲೂರಿಗೆ ಸಂಚರಿಸಬಹುದು.
ಊರ ಅಭಿವೃದ್ಧಿಗೂ ಸಹಕಾರಿ
ತೀರಾ ಗ್ರಾಮೀಣ ಪ್ರದೇಶವಾಗಿರುವ ಮರತ್ತೂರು ಭಾಗ ಕೂಡ ಅಭಿವೃದ್ಧಿಯಾಗಲಿದೆ. ಬಿದ್ಕಲ್ಕಟ್ಟೆ – ಅಂಪಾರು ಈ ಎರಡು ಊರುಗಳಿಗೆ ಮರತ್ತೂರು ಕೊಂಡಿಯಾಗಲಿದ್ದು, ಸಂಚಾರ, ಸಾಗಾಟಕ್ಕೆಲ್ಲ ಅನುಕೂಲವಾಗಲಿದೆ.
9 ಕಿ.ಮೀ. ಹತ್ತಿರ
ಬಿದ್ಕಲ್ಕಟ್ಟೆಯಿಂದ ಈಗ ಅಂಪಾರಿಗೆ ಸುತ್ತು ಬಳಸಿ ತೆರಳುವುದರಿಂದ 19 ಕಿ.ಮೀ. ದೂರವಿದ್ದು, ಮರತ್ತೂರು- ಕ್ರೋಢಬೈಲೂರು ಸೇತುವೆ ಯಾದರೆ 9 ಕಿ.ಮೀ. ಹತ್ತಿರವಾಗಲಿದೆ. ಬಸ್ ಸಂಚಾರ ಆರಂಭಿ ಸಿದರೆ ಎಲ್ಲರಿಗೂ ಬಹಳಷ್ಟು ಪ್ರಯೋಜನವಾಗಲಿದೆ ಎನ್ನುವುದು ಇಲ್ಲಿನವರ ಅಭಿಪ್ರಾಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.