ಮಹಿಳೆಯ ಪೈಶಾಚಿಕ ಕೊಲೆ: ಮುಂದುವರಿದ ತನಿಖೆ
ನಾಲ್ವರ ವಶ; ಕಾಲಿನ ಭಾಗಗಳಿಗೆ ಶೋಧ
Team Udayavani, May 15, 2019, 6:10 AM IST
ಮಂಗಳೂರು: ನಗರದಲ್ಲಿ 35 ವರ್ಷದ ಮಹಿಳೆಯನ್ನು ಬರ್ಬರ ವಾಗಿ ಕೊಲೆಗೈದು ತಲೆ ಹಾಗೂ ದೇಹದ ಭಾಗಗಳನ್ನು ಕತ್ತರಿಸಿ ವಿವಿಧೆಡೆ ಎಸೆದು ಪರಾರಿಯಾಗಿರುವ ಪೈಶಾಚಿಕವಾದ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಮುಂದು ವರಿದಿದ್ದು, ತನಿಖಾ ತಂಡಗಳು ಮಂಗಳವಾರವೂ ಸಾಕಷ್ಟು ಮಾಹಿತಿ ಕಲೆಹಾಕುವಲ್ಲಿ ಯಶಸ್ವಿಯಾಗಿವೆ.
ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಈ ಕೊಲೆಗೆ ಸಂಬಂಧಿಸಿ ಪೊಲೀಸರು, ನಾಲ್ವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಜತೆಗೆ ಈ ಕೊಲೆಯನ್ನು ಪೊಲೀಸರು ಕೂಡ ಅತ್ಯಂತ ಗಂಭೀರ ಹಾಗೂ ಮಹತ್ವದ ಪ್ರಕರಣವಾಗಿ ಪರಿಗಣಿಸಿದ್ದು, ಕೊಲೆ ಯನ್ನು ಭೇದಿಸುವಲ್ಲಿ ಸಾಕಷ್ಟು ತಾಂತ್ರಿಕ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಆ ಮೂಲಕ ಕೊಲೆ ರಹಸ್ಯ ಪತ್ತೆಗೆ ಬಹಳ ಆಳವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಹೀಗಾಗಿ ಈ ಕೊಲೆ ಪ್ರಕರಣದ ಹಿಂದಿರುವ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಸುಮಾರು 30 ಪೊಲೀಸ್ ಅಧಿಕಾರಿಗಳು-ಸಿಬಂದಿ ಕಾರ್ಯೋನ್ಮುಖರಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ ಕೊಲೆಯಾದ ಶ್ರೀಮತಿ ಶೆಟ್ಟಿ ಅವರ ದ್ವಿಚಕ್ರ ವಾಹನ ಅನಾಥವಾಗಿ ಪತ್ತೆಯಾಗಿದ್ದ ನಾಗುರಿಯ ಸುತ್ತ-ಮುತ್ತ ಮಂಗಳವಾರ ಕೂಡ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದರು. ಆ ಪ್ರಕಾರ, ಇಲ್ಲಿನ ಬಾವಿಯೊಂದರಲ್ಲಿ ಕೊಲೆಗೆ ಸಂಬಂಧಿಸಿದಂತೆ ಅವಶೇಷ ಅಥವಾ ಪುರಾವೆಗಳೇನಾದರೂ ಇರಬಹುದೇ ಎಂಬ ಬಗ್ಗೆ ತಪಾಸಣೆ ಕೂಡ ನಡೆಸಿದ್ದಾರೆ.
ಈ ನಡುವೆ ಕೊಲೆಗೆ ಸಂಬಂಧಿ ಸಿದಂತೆ ತನಿಖಾ ತಂಡಗಳು, ಶ್ರೀಮತಿ ಅವರ ಮೊಬೈಲ್ ಸಂಖ್ಯೆ ಆಧರಿಸಿ ಅದರ ಕರೆ ವಿವರಗಳನ್ನು ಕೂಡ ಸಂಗ್ರಹಿಸುವ ಕೆಲಸ ಮಾಡುತ್ತಿವೆ. ಮೂಲಗಳ ಪ್ರಕಾರ, ಆಕೆ ಬಳಸುತ್ತಿದ್ದ ಮೊಬೈಲ್ ಇನ್ನು ಕೂಡ ಎಲ್ಲಿದೆ ಎನ್ನುವುದು ಗೊತ್ತಾಗಿಲ್ಲ. ಒಂದುವೇಳೆ ಆಕೆಯ ಮೊಬೈಲ್ ಪತ್ತೆಯಾದರೆ ಪ್ರಕರಣವನ್ನು ಭೇದಿಸುವುದು ಪೊಲೀಸರಿಗೂ ಇನ್ನಷ್ಟು ಸುಲಭವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಶ್ರೀಮತಿ ಶೆಟ್ಟಿ ಅವರ ಮೊಬೈಲ್‌ಗೆ ಬಂದಿರುವ ಕರೆಗಳ ವಿವರಗಳನ್ನು ಪಡೆಯುವ ದಿಕ್ಕಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಾಮಾನ್ಯವಾಗಿ ಯಾವುದೇ ಒಂದು ಕೊಲೆ ಪ್ರಕರಣ ನಡೆದರೆ ಆ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ. ಆದರೆ ಶ್ರೀಮತಿ ಶೆಟ್ಟಿ ಕೊಲೆಯು ವಿಚಿತ್ರ ಸ್ವರೂಪದ ಕೊಲೆಯಾಗಿದ್ದು, ತಲೆಯ ಭಾಗ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದರೆ, ದೇಹದ ಒಂದು ಭಾಗವು ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ಆದರೆ ಒಂದೇ ಠಾಣೆಯ ವ್ಯಾಪ್ತಿಯಲ್ಲಿ ತನಿಖೆ ನಡೆಸುವ ಉದ್ದೇಶದಿಂದ ಈ ಪ್ರಕರಣವನ್ನು ಕದ್ರಿಯಿಂದ ಪಾಂಡೇಶ್ವರ ಠಾಣೆಗೆ ಹಸ್ತಾಂತರಿಸುವುದು ಉತ್ತಮ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಇನ್ನು ಕೂಡ ಈ ಬಗ್ಗೆ ಅಂತಿಮ ತೀರ್ಮಾನವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರಿಗೇ ದಿಗ್ಭ್ರಮೆ
ಶ್ರೀಮತಿ ಶೆಟ್ಟಿ ಕೊಲೆಯು ಕೇವಲ ಜಿಲ್ಲೆಯ ಜನರನ್ನಷ್ಟೇ ಅಲ್ಲ ಇಡೀ ಪೊಲೀಸ್ ಇಲಾಖೆಯನ್ನೇ ದಿಗ್ಭ್ರಮೆಗೀಡು ಮಾಡಿದೆ. ಏಕೆಂದರೆ, ಹಲವು ಹಿರಿಯ-ಕಿರಿಯ ಪೊಲೀಸ್ ಅಧಿಕಾರಿಗಳು ಹೇಳುವ ಪ್ರಕಾರ, ತಮ್ಮ ಸೇವಾವಧಿಯಲ್ಲೇ ಈ ರೀತಿಯ ಪೈಶಾಚಿಕವಾದ ಕ್ರೂರತೆಯ ಕೊಲೆಯಾಗಿರುವುದನ್ನು ನೋಡಿಯೇ ಇಲ್ಲ ಎನ್ನುವ ಅಭಿಪ್ರಾಯ ಹಾಗೂ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಷ್ಟೊಂದು ಕ್ರೂರ ರೀತಿಯಲ್ಲಿ ಮಹಿಳೆಯೊಬ್ಬರನ್ನು ರುಂಡ-ಮುಂಡ ಪ್ರತ್ಯೇಕಿಸಿ, ಆ ದೇಹವನ್ನು ನಗರದೆಲ್ಲೆಡೆ ಸ್ಕೂಟರ್‌ನಲ್ಲಿ ಇಟ್ಟುಕೊಂಡು ಸುತ್ತಾಡಿ ವಿಕೃತಿ ಮೆರೆದಿರುವ ಈ ಕೊಲೆ ಪಾತಕಿಗಳನ್ನು ಆದಷ್ಟು ಬೇಗ ಬಂಧಿಸಿ ಹೆಡೆಮುರಿ ಕಟ್ಟಬೇಕೆಂಬ ಹಠದಲ್ಲಿ ಪೊಲೀಸರು ಇದ್ದಾರೆ ಎನ್ನಲಾಗಿದೆ.
ಸಾರ್ವಜನಿಕವಾಗಿಯೂ ಚರ್ಚೆ
ಈ ನಡುವೆ ಏನೇ ಕಾರಣಗಳಿದ್ದರು ಕೂಡ ಮಹಿಳೆಯನ್ನು ಈ ರೀತಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿ ಅನಂತರ ಅದನ್ನು ಪ್ರತೀಕಾರ ತೀರಿಸುವ ರೀತಿಯಲ್ಲಿ ಅಟ್ಟಹಾಸ ತೋರಿಸಿರುವ ಆ ಕೊಲೆಗಡುಕರ ಮನಃಸ್ಥಿತಿಗೆ ಸಾರ್ವಜನಿಕ ವಲಯದಲ್ಲಿಯೂ ಸಾಕಷ್ಟು ಆಕ್ರೋಶ-ದಿಗ½Åಮೆ ವ್ಯಕ್ತವಾಗುತ್ತಿದೆ.
ಅದರಲ್ಲಿಯೂ ಇಷ್ಟೊಂದು ಹೇಯ ರೀತಿಯಲ್ಲಿ ಕೊಲೆ ಮಾಡಿರುವ ಆ ವ್ಯಕ್ತಿಗಳು ಯಾರು ಎಂಬ ಬಗ್ಗೆ ತಿಳಿಯಲು ಜನರು ಕೂಡ ಅಷ್ಟೇ ಕುತೂಹಲದಲ್ಲಿ ಇದ್ದಾರೆ. ಆದರೆ, ಕೊಲೆ ನಡೆದು ನಾಲ್ಕು ದಿನ ಆಗಿದ್ದು, ಪೊಲೀಸರು ಈಗಾಗಲೇ ಸಾಕಷ್ಟು ಆಯಾಮಗಳಲ್ಲಿ ತನಿಖೆ ನಡೆಸಿ ಒಂದಷ್ಟು ಸಾಕ್ಷಾ éಧಾರಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಿರುವಾಗ ಶೀಘ್ರದಲ್ಲೇ ಕೊಲೆ ಪ್ರಕರಣವನ್ನು ಭೇದಿಸಬಹುದು ಎನ್ನುವ ವಿಶ್ವಾಸದಲ್ಲಿ ಪೊಲೀಸರು ಕೂಡ ಇದ್ದಾರೆ.
ಮಂಗಳಾದೇವಿ ಸಮೀಪದ ಅಮರ್ ಆಳ್ವ ರಸ್ತೆ ನಿವಾಸಿ ಶ್ರೀಮತಿ ಶೆಟ್ಟಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿ ದೇಹವನ್ನು ತುಂಡರಿಸಿ ನಗರ ದಲ್ಲಿ ಎಸೆದಿದ್ದರು. ತಲೆಯ ಭಾಗ ಕದ್ರಿ ಪಾರ್ಕ್‌ನ ಅಂಗಡಿ ಬಳಿಯಲ್ಲಿ ಹಾಗೂ ದೇಹದ ಅರ್ಧ ಭಾಗ ನಂದಿಗುಡ್ಡೆ ಬಳಿ ಪತ್ತೆಯಾಗಿತ್ತು. ಪಾದದ ಭಾಗಗಳನ್ನು ಇನ್ನೆಲ್ಲೂ ಎಸೆಯಲಾಗಿದ್ದು ಇದೀಗ ಅವುಗಳನ್ನು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿದೆ.
ಯಂತ್ರ ಬಳಸಿ ದೇಹ ಕತ್ತರಿಸಲಾಗಿತ್ತೇ?
ಶ್ರೀಮತಿ ಶೆಟ್ಟಿ ಅವರ ದೇಹದ ಅಂಗಾಂಗಳನ್ನು ಕೊಲೆಗಡುಕರು ಕತ್ತರಿಸಿರುವುದು ನೋಡಿದರೆ, ಕತ್ತರಿಸುವ ಯಂತ್ರವೊಂದನ್ನು ಬಳಸಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಮಹಿಳೆಯ ತಲೆ, ದೇಹದ ಭಾಗ ಹಾಗೂ ಕೈಕಾಲುಗಳನ್ನು ಕತ್ತರಿಸಿರುವ ರೀತಿ ನೋಡಿದರೆ, ಮಾರಕಾಸ್ತ್ರದ ಬದಲು ಮರವನ್ನು ಕತ್ತರಿಸುವ ಮಾದರಿಯ ಅತ್ಯಂತ ಹರಿತವಾದ ಯಂತ್ರವನ್ನು ಬಳಸಿರಬಹುದು ಎನ್ನುವ ಸಂಶಯ ಮೂಡಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಶ್ರೀಮತಿಯ ಕೊಲೆ ಹೇಗೆ ಮಾಡಿರಬಹುದು ಹಾಗೂ ಆ ನಂತರ ದೇಹವನ್ನು ಹೇಗೆ ಕತ್ತರಿಸಿರಬಹುದು ಎಂಬಿತ್ಯಾದಿ ಆಯಾಮಗಳ ಬಗ್ಗೆಯೂ ಅತ್ಯಂತ ಆಳವಾದ ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.