ಬದುಕು ಬದಲಿಸುವ ಸೂತ್ರದ ಬೊಂಬೆ
Team Udayavani, May 15, 2019, 5:50 AM IST
ಬೊಂಬೆಯಾಟವೆಂದರೆ ಒಂದು ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿತ್ತು. ಸಂತೆ, ಜಾತ್ರೆಗಳಲ್ಲಿ ಇದನ್ನು ಆಡಿಸುವ ಒಂದು ತಂಡವೇ ಇದ್ದಿತ್ತು. ಆದರೆ ಕಾಲ ಸರಿದಂತೆ ಮರೆಯಾದ ಈ ಆಟ ಮತ್ತೆ ಪ್ರಚಲಿತದಲ್ಲಿದೆ. ಕಾರಣ ಇದನ್ನು ಕಲಿಯಲು ಆಸಕ್ತಿ ಇರುವವರಿಗಾಗಿ ಕೋರ್ಸ್‌ಗಳು ಆರಂಭವಾಗಿವೆ.
ಸೂತ್ರ ಬೊಂಬೆ ಕುಣಿತ ಅಥವಾ ಬೊಂಬೆಯಾಟ ಎಂಬುದು ಪ್ರಾಚೀನ ಕಾಲದಿಂದಲೇ ಬಳಕೆಯಲ್ಲಿರುವ ಒಂದು ಕಲಾಪ್ರಕಾರ. ಬೊಂಬೆಗಳನ್ನು ತೆಳುವಾದ ಸೂತ್ರ ಅಥವಾ ದಾರದ ಸಹಾಯದಿಂದ ಯಾವುದಾದರೂ ಕಥಾ ಹಂದರಕ್ಕೆ ತಕ್ಕಂತೆ ಕುಣಿಸುವುದು ಈ ಕಲೆಯ ವಿಶೇಷತೆ. ಧ್ವನಿಯನ್ನು ಸೂತ್ರದಾರನೇ ನೀಡಬೇಕಾಗುತ್ತದೆ. ಕೇವಲ ಹಳ್ಳಿಗಳಲ್ಲಿ ಮಾತ್ರ ಪ್ರಚಲಿತದಲ್ಲಿದ್ದ ಈ ಕಲೆ ಅನಂತರದಲ್ಲಿ ವಿದೇಶೀಯರಿಂದ ಪ್ರಮುಖ ಆಕರ್ಷಣೆಯನ್ನು ಪಡೆದು ಎಲ್ಲ ಕಡೆ ಪ್ರಸಿದ್ಧಿಯನ್ನು ಪಡೆಯಿತು. ಇತ್ತೀಚೆಗೆ ಸೂತ್ರದ ಗೊಂಬೆಯಾಟ ಒಂದು ಕೋರ್ಸ್ ಆಗಿ ಗುರುತಿಸಲ್ಪಡುತ್ತಿದೆ.
ಸೂತ್ರದಾರನಾಗುವುದು ಹೇಗೆ?
ಮೊದಲೇ ಹೇಳಿದಂತೆ ಗೊಂಬೆಯಾಟ ಒಂದು ಕಲೆಯಾದ್ದರಿಂದ ಇದರ ತರಬೇತಿ ಕೂಡ ರಂಗಭೂಮಿಗೆ ಹೆಚ್ಚು ಹತ್ತಿರವಾಗಿರುತ್ತದೆ. ಮಿಮಿಕ್ರಿ, ನೃತ್ಯ ಸಂಗೀತ ಕ್ಷೇತ್ರಗಳಲ್ಲಿ ಆಸಕ್ತಿ ಇರುವವರು ಈ ತರಬೇತಿಯನ್ನು ಆಯ್ದುಕೊಳ್ಳಬಹುದು. ಮಾತು ಹಾಗೂ ಕೈಚಳಕ ಎರಡೂ ಚುರುಕಾಗಿ ನಡೆಯಬೇಕಾದ ಈ ಕಲೆಯಲ್ಲಿ ಬೊಂಬೆಗಳ ಅಭಿನಯಕ್ಕೆ ಧ್ವನಿಯಾಗಬೇಕಾದ ಜವಾಬ್ದಾರಿ ಕೂಡ ಸೂತ್ರದಾರನದ್ದಾಗಿರುತ್ತದೆ. ಕಲೆ ಅಥವಾ ಇನ್ನಾವುದಾದರೂ ವಿಷಯದಲ್ಲಿ ಪದವಿ ಮುಗಿಸಿದ ಬಳಿಕ ಈ ಕೋರ್ಸ್‌ನ್ನು ಆಯ್ದುಕೊಳ್ಳಬಹುದು.
ಅರೆಕಾಲಿಕ ಅಥವಾ ಪೂರ್ಣಕಾಲಿಕ
ಸೂತ್ರದ ಗೊಂಬೆ ಕುಣಿತದಲ್ಲಿ ಅರೆಕಾಲಿಕ ಹಾಗೂ ಪೂರ್ಣಕಾಲಿಕ ಕೆಲಸ ಮಾಡುವ ಅವಕಾಶವಿರುತ್ತದೆ. ಕೆಲಸ ಅಥವಾ ಕ್ಷೇತ್ರ ಬೇರೆಯದ್ದಾಗಿದ್ದು ಈ ಕಲೆಯಲ್ಲಿ ಆಸಕ್ತಿ ಇದ್ದವರಿಗೆ ಇದನ್ನು ಅರೆಕಾಲಿಕ ವೃತ್ತಿಯಾಗಿ ಆಯ್ದುಕೊಳ್ಳಬಹುದು. ಕೇವಲ ಮನೋರಂಜನೆಗಾಗಿ ಮಾತ್ರ. ಕೆಲವು ಇಂತಹ ಗೊಂಬೆಯಾಟ ಮಾಡುವ ತಂಡದೊಂದಿಗೆ ಸೇರಿಕೊಂಡು ಬಿಡುವಿನ ಸಮಯದಲ್ಲಿ ಇದನ್ನು ಮಾಡಬಹುದು.
ಪೂರ್ಣಕಾಲಿಕವಾಗಿ ಇದನ್ನೇ ಉದ್ಯೋಗವಾಗಿ ಆಯ್ಕೆ ಮಾಡುವವರಿಗೂ ಉತ್ತಮ ಅವಕಾಶಗಳಿವೆ. ಕೋರ್ಸ್ ಮುಗಿದ ಮೇಲೆ ಆಸಕ್ತರನ್ನಿಟ್ಟುಕೊಂಡು ಒಂದು ತಂಡವನ್ನು ಮುನ್ನಡೆಸಬಹುದು ಅಥವಾ ಕೆಲವು ಕಂಪೆನಿಗಳು ಇಂತಹ ಕಲಾವಿದರನ್ನು ತಮ್ಮ ಕಂಪೆನಿಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ಅದಕ್ಕೂ ಅವಕಾಶವಿದೆ. ರೇಡಿಯೋ, ಟಿವಿ ಯುಟ್ಯೂಬ್ ಎಲ್ಲ ಕಡೆ ಇದರ ಪ್ರಚಾರಕ್ಕೆ ಅವಕಾಶವಿರುವುದರಿಂದ ಯಾವುದೇ ಭಯವಿರಬಾರದು ಮಾತು ಹಾಗೂ ಬೊಂಬೆಗಳನ್ನು ಕುಣಿಸುವುದಲ್ಲಿ ಪಳಗಿರಬೇಕು.
ಕೋರ್ಸ್ ಕಾಲಾವಧಿ
4 ತಿಂಗಳ ಕಾಲಾವಧಿಯ ಈ ಕೋರ್ಸ್‌ನಲ್ಲಿ ಮುಂದೆ ಹೆಚ್ಚು ಕಲಿಕೆಗೆ ಅವಕಾಶಗಳಿವೆ. ಮುಂಬಯಿ ವಿಶ್ವವಿದ್ಯಾಲಯವು ಮೊದಲ ಬಾರಿಗೆ ಪುಪ್ಪೆಟ್ರಿ ಕೋರ್ಸ್ ಅಥವಾ ಸೂತ್ರದ ಗೊಂಬೆ ಕಲಿಕೆಯನ್ನು ಆರಂಭಿಸಿತು. ಕೋಲ್ಕತಾದಲ್ಲಿ ಕೂಡ ಇದರ ಕಲಿಕೆಗೆ ಅವಕಾಶವಿದೆ.
•ಸುಶ್ಮಿತಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Narendra Modi: ನಾನು ಯಾರದ್ದೇ ಅಧಿಕಾರ ವ್ಯಾಪ್ತಿ ಅತಿಕ್ರಮಿಸಿಕೊಂಡಿಲ್ಲ: ಮೋದಿ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.