‘ಬಸ್, ಬಹುತ್ ಹುವಾ’ ಎನ್ನುತ್ತಿದೆ ದೇಶ
Team Udayavani, May 15, 2019, 6:00 AM IST
ಲೋಕಸಭೆ ಚುನಾವಣೆಯ ಕೊನೆಯ ಹಂತಕ್ಕೆ 4 ದಿನವಷ್ಟೇ ಬಾಕಿಯಿದ್ದು, ಅಂತಿಮ ಹಂತದ ಮತದಾನ ನಡೆಯಲಿರುವ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಬಿರುಸಾಗಿದೆ. ಮಂಗಳವಾರ ಒಂದೇ ದಿನ ಅವರು ಉತ್ತರಪ್ರದೇಶದ ಎರಡು ಕಡೆ ಹಾಗೂ ಬಿಹಾರದ ಎರಡು ಕ್ಷೇತ್ರಗಳಲ್ಲಿ ಚುನಾವಣಾ ರ್ಯಾಲಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ 1984ರ ಸಿಕ್ಖ್ ವಿರೋಧಿ ದಂಗೆ ಕುರಿತು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ನೀಡಿರುವ ಹೇಳಿಕೆಯನ್ನು ಪ್ರಸ್ತಾಪಿಸಿದ ಮೋದಿ, ‘ಇಡೀ ದೇಶವೇ ಈಗ ಇವರಿಂದ ರೋಸಿ ಹೋಗಿದೆ. ಹೆಚ್ಚಾಯ್ತು, ಇನ್ನು ಸಾಕು ಮಾಡಿ(ಅಬ್ ಬಸ್, ಬಹುತ್ ಹುವಾ)’ ಎಂದು ಹೇಳುತ್ತಿದೆ’ ಎಂದಿದ್ದಾರೆ.
ಟಿವಿ ಕ್ಯಾಮೆರಾಗಳ ಮುಂದೆ ನಾಮ್‌ಧಾರ್(ರಾಹುಲ್)ನ ಗುರು(ಪಿತ್ರೋಡಾ) ನೀಡಿರುವ ಮೂರೇ ಮೂರು ಪದ(ಹುವಾ ತೋ ಹುವಾ)ವು ಆ ಇಡೀ ಪಕ್ಷದ ನಡವಳಿಕೆಯನ್ನು ದೇಶದ ಮುಂದಿಟ್ಟಿದೆ. ಕಾಂಗ್ರೆಸ್‌ನ ಭ್ರಷ್ಟಾಚಾರ, ವಂಶಾಡಳಿತದ ರಾಜಕೀಯ ಮತ್ತು ಅಹಂಕಾರದಿಂದ ದೇಶದ ಜನ ಬೇಸತ್ತಿದ್ದಾರೆ. ಮೇ 23ರ ಸಂದೇಶವು ಸ್ಪಷ್ಟವಾಗಿದೆ. ಇಡೀ ದೇಶವೇ ಮತ್ತೂಮ್ಮೆ ಮೋದಿ ಸರಕಾರ ಎಂದು ಹೇಳುತ್ತಿದೆ ಎಂದೂ ಮೋದಿ ನುಡಿದಿದ್ದಾರೆ.
ಸವಾಲು: ಉ.ಪ್ರದೇಶದ ಬಲ್ಲಿಯಾ ದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ನಾನು ಯಾವುದಾದರೂ ಬೇನಾಮಿ ಆಸ್ತಿಯನ್ನು ಹೊಂದಿರುವ, ಫಾರ್ಮ್ ಹೌಸ್ ನಿರ್ಮಿಸಿರುವ, ಬಂಗಲೆ ಅಥವಾ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸಿರುವ ಅಥವಾ ವಿದೇಶಿ ಬ್ಯಾಂಕ್‌ನಲ್ಲಿ ಹಣ ಠೇವಣಿಯಿಟ್ಟಿರುವ ಬಗ್ಗೆ, ತಾಕತ್ತಿದ್ದರೆ ಮಹಾಕಲಬೆರಕೆಯ ಪಕ್ಷಗಳು ಸಾಬೀತುಪಡಿಸಲಿ. ಇದು ನನ್ನ ಸವಾಲು’ ಎಂದು ಹೇಳಿದ್ದಾರೆ. ನಾನು ಶ್ರೀಮಂತನಾಗುವ ಕನಸನ್ನು ಎಂದಿಗೂ ಕಂಡಿಲ್ಲ. ಬಡವರ ಹಣವನ್ನು ಲೂಟಿ ಮಾಡುವ ಪಾಪದ ಕೆಲಸವನ್ನೂ ಮಾಡಿಲ್ಲ ಎಂದೂ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.