ಬಿಜೆಪಿ ಬೆಂಬಲಿಗರಿಗೆ ಪ್ರಿಯಾಂಕಾ ಅಚ್ಚರಿಯ ಶಾಕ್!
Team Udayavani, May 15, 2019, 6:00 AM IST
ತಾವು ಸಾಗುತ್ತಿದ್ದ ಮಾರ್ಗದ ಬದಿ ನಿಂತು ಪ್ರಧಾನಿ ಮೋದಿ ಪರ ಜಯಕಾರ ಹಾಕುತ್ತಿದ್ದರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ಅಚ್ಚರಿಯ ಶಾಕ್ ಕೊಟ್ಟಿರುವ ಅಪರೂಪದ ವಿದ್ಯಮಾನ ಇಂದೋರ್‌ನಲ್ಲಿ ನಡೆದಿದೆ. ಇಂದೋರ್‌ನಲ್ಲಿ ಆಯೋಜಿಸಲಾಗಿದ್ದ ರೋಡ್ ಶೋನಲ್ಲಿ ಪಾಲ್ಗೊಳ್ಳಲು ಪ್ರಿಯಾಂಕಾ ಸಾಗುತ್ತಿ ರುವಾಗ, ರಸ್ತೆ ಬದಿಯಲ್ಲಿದ್ದ ಯುವಜನರ ಗುಂಪೊಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಜಯಕಾರ ಹಾಕಿತು. ಇದನ್ನು ಆಲಿಸಿದ ಪ್ರಿಯಾಂಕಾ, ತತ್‌ಕ್ಷಣವೇ ತಮ್ಮ ಕಾರು ನಿಲ್ಲಿಸುವಂತೆ ಸೂಚಿಸಿದರಲ್ಲದೆ, ಕಾರಿನಿಂದ ಕೆಳಗಿಳಿದು ಸೀದಾ ಯುವಕರ ಬಳಿ ಹೋಗಿ ಅವರ ಕೈ ಕುಲುಕಿ, ”ನಿಮ್ಮ ಸ್ಥಾನದಲ್ಲಿ ನೀವು ಸರಿಯಾಗಿದ್ದೀರಿ. ನನ್ನ ಸ್ಥಾನದಲ್ಲಿ ನಾನು ಸರಿಯಾಗಿದ್ದೇನೆ. ನಿಮಗೆ ಶುಭವಾಗಲಿ” ಎಂದರು. ಈ ಅನಿರೀಕ್ಷಿತ ಭೇಟಿಯಿಂದ ಆ ಹುಡುಗರು ಕೊಂಚ ತಬ್ಬಿಬ್ಟಾದರೂ ಅನಂತರ ಮಂದಹಾಸದಿಂದ ಪ್ರಿಯಾಂಕಾ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು, ಆಲ್ ದಿ ಬೆಸ್ಟ್ ಹೇಳಿ ಖುಷಿಯಿಂದ ಬೀಳ್ಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.