ವಿದ್ಯುತ್‌ಗಾಗಿ ಗುಡ್ಡ ಸುತ್ತಿದ ಬಿಟಿಡಿಎ!

ಸುತ್ತಿದ ಬಿಟಿಡಿಎ! •ಜಾಕ್‌ವೆಲ್ಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ವಿಷಯದಲ್ಲಿ ತೀವ್ರ ಗೊಂದಲ•ಕೊನೆಗೆ ಕಾಮಗಾರಿ ಆರಂಭ

Team Udayavani, May 15, 2019, 11:07 AM IST

bagalkote-tdy-1..

ಬಾಗಲಕೋಟೆ: ಹೆರಕಲ್ ಬಳಿ ಇರುವ ಶಾಶ್ವತ ಕುಡಿವ ನೀರು ಪೂರೈಕೆ ಯೋಜನೆಯ ಜಾಕವೆಲ್.

ಬಾಗಲಕೋಟೆ: ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯೊಂದಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ವಿಷಯದಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಗುಡ್ಡ ಸುತ್ತಿ, ಕೊನೆಗೂ ಒಂದು ಅಂತಿಮ ನಿರ್ಧಾರಕ್ಕೆ ಬಂದಿದೆ.

ಹೌದು, ಹೆರಕಲ್ದಿಂದ ಬಾಗಲಕೋಟೆಗೆ ಕುಡಿಯುವ ನೀರು ಪೂರೈಕೆ ಯೋಜನೆಯ ಜಾಕವೆಲ್ಗೆ ನಿತ್ಯ 7550 ಕೆ.ವಿ ವಿದ್ಯುತ್‌ ಅಗತ್ಯವಿದೆ. ಈ ವಿದ್ಯುತ್‌ ಪಡೆಯಲು, ಕಳೆದ ಆರು ವರ್ಷಗಳಿಂದ ಬಿಟಿಡಿಎ, ಮೂರು ಕಡೆ ಗುಡ್ಡ ಅಲೆದಾಟ ನಡೆಸಿರುವುದು ಬಹಿರಂಗ ಸತ್ಯ.

ಏನದು ಗುಡ್ಡ ಸುತ್ತುವುದು: ಬೀಳಗಿ ತಾಲೂಕು ಹೆರಕಲ್ ಬಳಿ ಬಿಟಿಡಿಎದಿಂದ ಜಾಕವೆಲ್ ನಿರ್ಮಿಸಲಾಗಿದೆ. ಈ ಜಾಕವೆಲ್ ನಿರ್ಮಾಣ ಮಾಡುವ ಕಾಮಗಾರಿ 2013ರಲ್ಲೇ ಆರಂಭಗೊಂಡಿತ್ತು. ಅದೇ ವೇಳೆಗೆ ಯೋಜನೆಗೆ ಬೇಕಾದ ವಿದ್ಯುತ್‌ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ತಯಾರಿ ಮಾಡಿಕೊಂಡು, ಕಾಮಗಾರಿ ಅನುಷ್ಠಾನಗೊಳಿಸಿದ್ದರೆ, ಇಷ್ಟೊತ್ತಿಗೆ ಬಾಗಲಕೋಟೆಯ ಜನತೆಗೆ ಕೃಷ್ಣೆಯ ಹಿನ್ನೀರು ದೊರೆಯುತ್ತಿತ್ತು. ಆದರೆ, ಬಿಟಿಡಿಎ ಅಧಿಕಾರಿಗಳ ವಿಳಂಬ ಧೋರಣೆ, ನಿರ್ಲಕ್ಷ್ಯದಿಂದ ಆರು ವರ್ಷದಿಂದ ವಿದ್ಯುತ್‌ ಸಂಪರ್ಕವನ್ನೇ ಕಲ್ಪಿಸಿಲ್ಲ.

2013ರಲ್ಲಿ ಯೋಜನೆಯ ನೀಲನಕ್ಷೆ ತಯಾರಿಸುವ ವೇಳೆ, ಕುಂದರಗಿ ವಿದ್ಯುತ್‌ ಉಪ ಕೇಂದ್ರದಿಂದ ಹೆರಕಲ್ ಜಾಕವೆಲ್ಗೆ ವಿದ್ಯುತ್‌ ಕಲ್ಪಿಸುವುದನ್ನು ನೀಲನಕ್ಷೆಯಲ್ಲಿ ಅಳವಡಿಸಲಾಗಿತ್ತು. ಆದರೆ, ಕುಂದರಗಿ ಉಪ ವಿದ್ಯುತ್‌ ಕೇಂದ್ರದಿಂದ ದಿನದ 24 ಗಂಟೆ ವಿದ್ಯುತ್‌ ಕೊಡಲು ಸಾಧ್ಯವಿಲ್ಲ ಎಂಬುದು ಅರಿವಿಗೆ ಬಂದ ಬಳಿಕ, ಬಾಗಲಕೋಟೆ ತಾಲೂಕಿನ ಸೀಮಿಕೇರಿ ಪುನರ್‌ವಸತಿ ಕೇಂದ್ರ (ಹೂಲಗೇರಿ-ಹೆದ್ದಾರಿ ಬಳಿ)ದ ಮುಂದೆ ಇರುವ 220 ವಿದ್ಯುತ್‌ ವಿತರಣೆ ಕೇಂದ್ರದಿಂದ ವಿದ್ಯುತ್‌ ಕಲ್ಪಿಸಲು ಚಿಂತನೆ ಮಾಡಿ, ಸರ್ವೇ ಕೂಡ ಮಾಡಲಾಯಿತು. ಇದು ಅತ್ಯಂತ ದೂರ ಹಾಗೂ ದುಬಾರಿಯಾಗುತ್ತದೆ ಎಂದು ತಿಳಿದ ಬಳಿಕ, ಮಧ್ಯೆ ಎರಡು ವರ್ಷ, ವಿದ್ಯುತ್‌ ಸಂಪರ್ಕ ಕಲ್ಪಿಸುವ ಯೋಜನೆಯನ್ನೇ ನೆನಗುದಿಗೆ ತಳ್ಳಲಾಯಿತು.

ತೋಳಮಟ್ಟಿಯಿಂದ ವಿದ್ಯುತ್‌: ಕುಂದರಗಿ, ಸೀಮಿಕೇರಿ ಬಳಿಕ, ಇದೀಗ ಬೀಳಗಿ ತಾಲೂಕು ತೋಳಮಟ್ಟಿ 220 ಕೆವಿ ವಿದ್ಯುತ್‌ ವಿತರಣೆ ಕೇಂದ್ರದಿಂದ ಜಾಕವೆಲ್ಗೆ ವಿದ್ಯುತ್‌ ಕೊಡಲಾಗುತ್ತಿದೆ. ಎರಡು ವರ್ಷಗಳ ಬಳಿಕ, ತೋಳಮಟ್ಟಿಯಲ್ಲಿ ಹೊಸದಾಗಿ ನಿರ್ಮಾಣಗೊಂಡ ವಿದ್ಯುತ್‌ ಕೇಂದ್ರದಿಂದ ಹೆರಕಲ್ ಬಳಿ ಇರುವ ಜಾಕವೆಲ್ ವರೆಗೆ ಕಂಬ ಅಳವಡಿಸಿ, ಅಲ್ಲಿಂದ ಜಾಕವೆಲ್ ಬಳಿ ನಿರ್ಮಿಸಿರುವ 33/66 ಕೆ.ವಿ ವಿದ್ಯುತ್‌ ವಿತರಣೆ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಿಕೊಂಡು, ಆ ಬಳಿಕ ಜಾಕವೆಲ್ಗೆ ವಿದ್ಯುತ್‌ ಕಲ್ಪಿಸುವ ಯೋಜನೆ, ಕಳೆದ ಒಂದು ವಾರದ ಹಿಂದೆ ಅನುಷ್ಠಾನಗೊಳಿಸಿದೆ.

ಈ ಕಾಮಗಾರಿಗೆ 5.50 ಕೋಟಿ ವೆಚ್ಚದ ಯೋಜನೆಗೆ ಟೆಂಡರ್‌ ಕರೆದಿದ್ದು, ವಿಜಯಪುರದ ಬಸವೇಶ್ವರ ಇಲೆಕ್ಟ್ರಿಕಲ್ಸ್ ಏಜನ್ಸಿ ಗುತ್ತಿಗೆ ಪಡೆದಿದೆ. ತೋಳಮಟ್ಟಿಯಿಂದ ಹೆರಕಲ್ ಜಾಕವೆಲ್ ವರೆಗೆ ಒಟ್ಟು 11 ಕಿ.ಮೀ ವಿದ್ಯುತ್‌ ಕಂಬ ಅಳವಡಿಸಿ, ಜಾಕವೆಲ್ ಬಳಿ ಇರುವ 33 ಕೆ.ವಿ ವಿದ್ಯುತ್‌ ವಿತರಣೆ ಕೇಂದ್ರಕ್ಕೆ ಕನೆಕ್ಟ್ ಮಾಡುವ ಕಾಮಗಾರಿಯ ಆದೇಶ ಪತ್ರ ನೀಡಲಾಗಿದೆ.

ಗೊಂದಲ ನಿವಾರಣೆಗೆ ಆರು ವರ್ಷ: ಹೆರಕಲ್ ಜಾಕವೆಲ್ಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಬಿಟಿಡಿಎ ಅಧಿಕಾರಿಗಳು ಬರೋಬ್ಬರಿ ಆರು ವರ್ಷ ಸಮಯ ಪಡೆದಿರುವುದು ಅವರ ಕಾರ್ಯ ವೈಖರಿಗೆ ಹಿಡಿದ ಕನ್ನಡಿ ಎಂಬ ಜನಾಕ್ರೋಶ ಕೇಳಿ ಬರುತ್ತಿದೆ.

72 ಕೋಟಿ ವೆಚ್ಚದ ಯೋಜನೆ ಆರಂಭಿಸಿ, ಆರು ವರ್ಷ ಕಳೆದಿವೆ. ಜಾಕವೆಲ್ ಮತ್ತು ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಮಾಡುವ ವೇಳೆಯೇ, ವಿದ್ಯುತ್‌ ಕಾಮಗಾರಿಯೂ ಜೊತೆ ಜೊತೆಗೆ ಮಾಡಿದ್ದರೆ, ಯೋಜನೆಯಡಿ ನೀರು ಪಡೆಯಲು ಸಾಧ್ಯವಿತ್ತು. ಪೈಪ್‌ಲೈನ್‌ ಅಳವಡಿಸಿ, ಜಾಕ್‌ವೆಲ್ ನಿರ್ಮಿಸಲು ಆರು ವರ್ಷ, ವಿದ್ಯುತ್‌ ಸಂಪರ್ಕ ಕೊಡಲು ಆರು ವರ್ಷ ಹೀಗೆ ಸಮಯ ಪಡೆದರೆ, ಯೋಜನೆಯ ಮೂಲ ಉದ್ದೇಶ, ಜನರಿಗೆ ಕಲ್ಪಿಸುವುದು ಯಾವಾಗ ಎಂಬುದು ಜನರ ಪ್ರಶ್ನೆ.

•ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mudhol: ಆರ್‌ಎಸ್‌ಎಸ್‌ನಿಂದ ದೇಶಕ್ಕೆ ಕಂಟಕ: ಆರ್‌.ಬಿ.ತಿಮ್ಮಾಪುರ

Mudhol: ಆರ್‌ಎಸ್‌ಎಸ್‌ನಿಂದ ದೇಶಕ್ಕೆ ಕಂಟಕ: ಆರ್‌.ಬಿ.ತಿಮ್ಮಾಪುರ

Farmers

Farmers; ರೈತನ ಬೆಳೆ ಕಾಯುಲು ಸಿನಿ ತಾರೆಯರು; ಉತ್ತಮ ಬೆಳೆಗೆ ರೈತನ ಹೊಸ ಪ್ರಯೋಗ

Bagalkote: ಆನ್‌ಲೈನ್‌ ಮಾಯಾಜಾಲ; ಹಣ ಮಂಗಮಾಯ; ವಾರದಲ್ಲಿ ಮೂವರಿಗೆ 93 ಲಕ್ಷ ರೂ.ವಂಚನೆ

Bagalkote: ಆನ್‌ಲೈನ್‌ ಮಾಯಾಜಾಲ; ಹಣ ಮಂಗಮಾಯ; ವಾರದಲ್ಲಿ ಮೂವರಿಗೆ 93 ಲಕ್ಷ ರೂ.ವಂಚನೆ

ರಾಜ್ಯದಲ್ಲಿ ತಾಲಿಬಾನ್ ಆಡಳಿತ: ಹಿಂದೂ ವಿರೋಧಿ ಸರ್ಕಾರಕ್ಕೆ ಹಿಂದೂ ಮುಖಂಡನಿಂದ ಧಿಕ್ಕಾರ

ರಾಜ್ಯದಲ್ಲಿ ತಾಲಿಬಾನ್ ಆಡಳಿತ: ಹಿಂದೂ ವಿರೋಧಿ ಸರ್ಕಾರಕ್ಕೆ ಹಿಂದೂ ಮುಖಂಡನಿಂದ ಧಿಕ್ಕಾರ

ಬಾಗಲಕೋಟೆ: ಇಂದಿರಾಗಾಂಧಿ ವಸತಿ ಶಾಲೆಗಿಲ್ಲ ಉದ್ಘಾಟನೆ ಭಾಗ್ಯ!

ಬಾಗಲಕೋಟೆ: ಇಂದಿರಾಗಾಂಧಿ ವಸತಿ ಶಾಲೆಗಿಲ್ಲ ಉದ್ಘಾಟನೆ ಭಾಗ್ಯ!

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.