ಪ.ಬಂ. ಸಿಎಂ ಫೋಟೋ ತಿರುಚಿದ ಪ್ರಕರಣ: ಕಾರ್ಯಕರ್ತೆ ಸೆರೆ ಸ್ವೇಚ್ಛಾಚಾರದ್ದು: SC
Team Udayavani, May 15, 2019, 11:52 AM IST
ಹೊಸದಿಲ್ಲಿ : ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತಿರುಚಲಾದ ಚಿತ್ರವನ್ನು ಸಾಮಾಜಿಕ ಮಾಧ್ಯಮಕ್ಕೆ ಪೋಸ್ಟ್ ಮಾಡಿದ್ದ ಆರೋಪದ ಮೇಲೆ ಬಿಜೆಪಿ ಯೂತ್ ವಿಂಗ್ ನಾಯಕಿ ಪ್ರಿಯಾಂಕಾ ಶರ್ಮಾ ಅವರನ್ನು ಪಶ್ಚಿಮ ಬಂಗಾಲ ಪೊಲೀಸರು ಬಂಧಿಸಿರುವುದು ಮೇಲ್ನೋಟಕ್ಕೇ ಕಂಡು ಬರುವಂತೆ ಸ್ವೇಚ್ಚಾಚಾರದ ಕ್ರಮವಾಗಿದೆ ಎಂದು ಸುಪ್ರೀಂ ಕೋರ್ಟ್ ಕಟುವಾಗಿ ಹೇಳಿದೆ.
ಬೇಷರತ್ ಲಿಖೀತ ಕ್ಷಮೆಯಾಚನೆ ಸಲ್ಲಿಸಿದುದನ್ನು ಅನುಸರಿಸಿ ಪ್ರಿಯಾಂಕಾ ಶರ್ಮಾ ಜಾಮೀನು ಬಿಡುಗಡೆಗೆ ಸುಪ್ರೀಂ ಕೋರ್ಟ್ ನಿನ್ನೆ ಮಂಗಳವಾರ ಆದೇಶಿಸಿತ್ತು. ಆದರೂ ಆಕೆಯನ್ನು ಪ.ಬಂಗಾಲ ಪೊಲೀಸರು ಜೈಲಿನಿಂದ ಬಿಡುಗಡೆ ಮಾಡಿಲ್ಲ ಎಂದು ಪ್ರಿಯಾಂಕಾ ಅವರ ಸಹೋದರ ರಾಜೀವ್ ಶರ್ಮಾ ಅವರ ವಕೀಲರು ಕೋರ್ಟಿಗೆ ತಿಳಿಸಿದರು.
ಇದರಿಂದ ಜಸ್ಟಿಸ್ ಇಂದಿರಾ ಬ್ಯಾನರ್ಜಿ ಮತ್ತು ಜಸ್ಟಿಸ್ ಸಂಜೀವ್ ಖನ್ನಾ ಅವರನ್ನು ಒಳಗೊಂಡ ಪೀಠವು ಪ.ಬಂಗಾಲ ಸರಕಾರದ ವಿರುದ್ಧ ಗರಂ ಆಯಿತು.
ಸರಕಾರಕ್ಕೆ ಕೋರ್ಟ್ ನಿಂದನೆ ಕ್ರಮದ ಎಚ್ಚರಿಕೆಯನ್ನು ಪೀಠ ನೀಡಿದಾಗ, ಸ್ವಲ್ಪ ಹೊತ್ತಿನ ಬಳಿಕ ಸರಕಾರಿ ವಕೀಲರು ಪ್ರಿಯಾಂಕಾ ರನ್ನು ಇಂದು ಬುಧವಾರ ಬೆಳಿಗ್ಗೆ 9.40ಕ್ಕೆ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಕೋರ್ಟಿಗೆ ದೃಢೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Editorial: ಗಿಫ್ಟ್ ಡೀಡ್: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
ಪಟ್ನಾದಲ್ಲಿ ಸುಮಾರು 500 ವರ್ಷಗಳ ಹಿಂದಿನ ದೇಗುಲ ಪತ್ತೆ
ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗಳ ದರವೂ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.