ಬಾವಿ ನೀರಿಗಾಗಿ ಅಂಬೆಜೂಗ್ ಹಳ್ಳ ದಾಟಬೇಕು
Team Udayavani, May 15, 2019, 2:09 PM IST
ಕಾರವಾರ: ಹಳ್ಳದಾಟಿ ಕೊಡ ಹೊತ್ತು ನೀರು ತರುತ್ತಿರುವುದು.
ಕಾರವಾರ: ಅಂಬೆಜೂಗ್ ಮಜಿರೆಯ 200 ಕುಟುಂಬಗಳ ಮಹಿಳೆಯರು ಕುಡಿಯುವ ನೀರಿಗಾಗಿ ನಿತ್ಯ ಹಳ್ಳ ದಾಟಿ ನೀರು ಹೊತ್ತು ತರುವ ಸಂಕಷ್ಟ ದಶಕಗಳಿಂದ ಮುಂದುವರಿದಿದೆ. ಬೇಸಿಗೆಯಲ್ಲಿ ಟ್ಯಾಂಕರ್ ನೀರು ಕಿನ್ನರ ತಲುಪಿದರೂ, ಈ ಭಾಗದ ಮಹಿಳೆಯರು ಹಳ್ಳ ದಾಟುವುದ ಬಿಟ್ಟಿಲ್ಲ.
ತಾಲೂಕಿನ ಕಿನ್ನರ ಗ್ರಾಪಂ ವ್ಯಾಪ್ತಿಯ ಅಂಬೆಜೂಗ್, ಭಾಗವಾಡ, ಚಾಮಕುಳಿವಾಡ, ಝಾಡಕಿ ಮಜಿರೆಗಳ ನಿವಾಸಿಗಳು ಕುಡಿಯುವ ನೀರಿಗಾಗಿ ಬವಣೆ ಪಡುತ್ತಿದ್ದಾರೆ. ಅಂಬೆಜೂಗ ಮತ್ತು ದಿಗಾಳಿ ಮಜಿರೆ ಮಧ್ಯೆ ದೊಡ್ಡ ಹಳ್ಳವೊಂದು ಹರಿಯುತ್ತಿದ್ದು, ಹಳ್ಳ ದಾಟಿಯೇ ದಿಗಾಳಿ ಮಜಿರೆ ತಲುಪಬೇಕಿದೆ. ಕಾರಣ ದಿಗಾಳಿಯಲ್ಲಿ ಹನಮಬಾವಿ ಎಂಬ ಸಿಹಿ ನೀರಿನ ಬಾವಿ ಇದೆ. ಅಂಬೆಜೂಗ ಮಜಿರೆಯಲ್ಲಿ ಸುಮಾರು 200 ಮನೆಗಳಿವೆ. ಅಂಬೆಜೂಗ ಮಜಿರೆಯ ಭಾಗವಾಡ, ಚಾಮಕುಳಿವಾಡ, ಝಾಡಕಿಯ 200 ಕುಟುಂಬಗಳ ಜನರು ಬಾವಿ ನೀರಿಗಾಗಿ ದಿನನಿತ್ಯ ಹೊಳೆ ದಾಟುತ್ತಾರೆ. ಇದು ದಶಕಗಳಿಂದ ನಡೆದು ಬಂದಿದೆ. ಈ ಕಷ್ಟ ತಪ್ಪಿಸಲು ಅಂಬೆಜೂಗ್ ಮತ್ತು ದಿಗಾಳಿ ಮಧ್ಯೆ ಒಂದು ತೂಗು ಸೇತುವೆ ಅಥವಾ ಕಿರು ಸೇತುವೆ ನಿರ್ಮಿಸಿಕೊಡಬೇಕು ಎಂಬುದು ಅವರ ಬೇಡಿಕೆ. ಆದರೆ ಇದು 40 ರಿಂದ 50 ಲಕ್ಷ ವೆಚ್ಚದ ಯೋಜನೆ ಆದ ಕಾರಣ ತಾಪಂ ಮತ್ತು ಜಿಪಂ ಎದುರು ಬೇಡಿಕೆ ಇಟ್ಟಿದೆ. ಬೇಡಿಕೆ ಸರ್ಕಾರವನ್ನು ತಲುಪಿಲ್ಲ.
ಈಗ ಟ್ಯಾಂಕರ್ ನೀರು ಬರುತ್ತಿದೆ: ಕಿನ್ನರ ಗ್ರಾಮಕ್ಕೆ ಟ್ಯಾಂಕರ್ ಮೂಲಕ ಬೇಸಿಗೆಯಲ್ಲಿ ನೀರು ಪೂರೈಸಲಾಗುತ್ತಿದೆ. ಆದರೆ ಉಳಿದ ದಿನಗಳಲ್ಲಿ ಜನರು ಬಾವಿ ನೀರನ್ನು ಅವಲಂಬಿಸಿದ್ದಾರೆ. ಅಂಬೆಜೂಗ ಹಳ್ಳವನ್ನು ಮಹಿಳೆಯರು ಮತ್ತು ಪುರುಷರು ಸಹ ದಾಟಿ ಹನಮಬಾವಿಯಿಂದ ಸಿಹಿ ನೀರು ತರುವ ಕಷ್ಟ ಮುಂದುವರಿದಿದೆ. ಜನರು ಕುಡಿಯುವ ನೀರಿಗಾಗಿ ಹಳ್ಳ ದಾಟುವುದು ರೂಢಿಯಾಗಿದೆ. ದಿಗಾಳಿ ಮಜಿರೆಗೆ ರಸ್ತೆ ಮಾರ್ಗವೂ ಇದೆ. ಅದು 2 ಕಿ.ಮೀ. ದೂರ ಸಾಗಬೇಕಾದ ಕಾರಣ ಜನರು 300 ಮೀಟರ್ ದೂರವನ್ನು ಹಳ್ಳ ದಾಟಿ ದಿಗಾಳಿ ಮಜಿರೆ ತಲುಪಿ ನೀರು ತರುವುದು ರೂಢಿ ಮಾಡಿಕೊಂಡಿದ್ದಾರೆ.
ಜಿಲ್ಲಾ ಕೇಂದ್ರದ ಸಮೀಪವೇ ಇರುವ ಕಿನ್ನರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರು ಬವಣೆ ಪಡುವುದು ಮುಂದುವರಿದಿದೆ. ಕೆರವಡಿ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಹಂತದಲ್ಲಿದ್ದರೂ, ಸಣ್ಣ ಸಣ್ಣ ಮಜಿರೆಗಳಿಗೆ, ನದಿ ದಂಡೆಯ ಹಿನ್ನೀರಿನ ಗ್ರಾಮ ಮಜಿರೆಗಳಿಗೆ ಬಾವಿ ನೀರು ಕುಡಿಯುವ ಮೂಲಜಲವಾಗಿದೆ. ರಾಜ್ಯ ಸರ್ಕಾರ ಮತ್ತು ಜಿಪಂ ಅಂಬೆಜೂಗ ಗ್ರಾಮಕ್ಕೆ ಕಿರು ಸೇತುವೆ ಮಾಡಿಕೊಟ್ಟರೆ ಸಾಕು. ನಾವು ಹಳ್ಳ ದಾಟುವ ಕಷ್ಟ ತಪ್ಪುತ್ತದೆ ಎಂದು ಭಾಗವಾಡ ನಿವಾಸಿ ಶೈಲಜಾ ತಳೇಕರ್ ಅಭಿಪ್ರಾಯಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.