ಕಾಡಿನ ಮಧ್ಯೆ ದೈವಾರಾಧನೆ ಕೇಂದ್ರ ಬೆಳಕಿಗೆ

ಕಡಿರುದ್ಯಾವರ-ಚಾರ್ಮಾಡಿ ಗಡಿಯಂಚು

Team Udayavani, May 15, 2019, 4:28 PM IST

15-May-26

ದೈವಗಳ ಆರಾಧನೆಯ ಸ್ಥಳ ಕಂಡುಬಂದ ಸ್ಥಳದಲ್ಲಿ ಸ್ಥಳೀಯರು.

ಬೆಳ್ತಂಗಡಿ: ತಾಲೂಕಿನ ಕಡಿರುದ್ಯಾವರ ಮತ್ತು ಚಾರ್ಮಾಡಿ ಗ್ರಾಮಗಳ ಗಡಿಯಂಚಿನಲ್ಲಿ ಅರಣ್ಯದ ಮಧ್ಯಭಾಗದಲ್ಲಿ ದೈವಗಳ ಆರಾಧನೆಯ ಸ್ಥಳ ಬೆಳಕಿಗೆ ಬಂದಿದೆ.

ಜನ ನಿವಾಸದಿಂದ ಒಂದೂವರೆ ಕಿಲೋ ಮೀಟರ್‌ ದೂರದ ಪ್ರದೇಶ ದಲ್ಲಿ ಚಕ್ರಾಕಾರದ ಸುಮಾರು ಆರು ಅಡಿ ವಾಸದ ಕಾಡುಕಲ್ಲುಗಳಿಂದ ನಿರ್ಮಿಸಿದ ಕೋಣೆಯಂತಹ ರಚನೆ ಪತ್ತೆಯಾಗಿದೆ. ಮಣ್ಣಿನಿಂದ ನಿರ್ಮಿಸಿದ್ದ ಪೀಠದ ಮೇಲೆ ಸುಮಾರು ಆರು ಅಡಿ ಉದ್ದದ, ನಾಲ್ಕು ಅಡಿ ಅಗಲದ ಕಲ್ಲು ಚಪ್ಪಡಿ ಇರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಧೂಪ ಹಾಕುವ ಮಣ್ಣಿನ ಪಾತ್ರೆಯಾಕಾರದ ಸುಮಾರು 6 ಇಂಚು ಎತ್ತರದ ಒಡೆದ ಭಾಗ ಸಿಕ್ಕಿದೆ. ಆಲಂಕಾರಿಕ ರಚನೆಯಿಂದ ಕೂಡಿರುವ ಪಾತ್ರೆ ಯಾವುದೋ ಆರಾಧನೆಯಲ್ಲಿ ಬಳಸಲ್ಪಡುವ ಪಾತ್ರೆಯ ಭಾಗವಾಗಿರಬೇಕು ಎಂದು ತಿಳಿದುಬಂದಿದೆ.

ಕೆಲವು ತಿಂಗಳಿಗಳ ಹಿಂದೆ ಬುದ್ಧಿ ಭ್ರಮಣೆ ಹೊಂದಿದ್ದ ಮಹಿಳೆ ಯೊಬ್ಬಳು ಅಲ್ಲಿದ್ದ ಹಿತ್ತಾಳೆಯ ಎರಡು ಪಾಪೆಗಳನ್ನು ತಂದು ಊರಲ್ಲೆಲ್ಲ ತೋರಿಸುತ್ತಿದ್ದಳಂತೆ. ಆ ಮನೆಯವರೂ ಇದೇ ರೀತಿ ಅನೇಕ ಸದಸ್ಯರನ್ನು ಕಳೆದುಕೊಂಡು ಮನೆಯು ಬರಿದಾಯಿತು. ಹತ್ತಿರದ ಊರಿನ ಅನೇಕ ಮನೆಗಳಲ್ಲಿ ನಾನಾ ರೋಗಗಳು, ಅಪಸ್ಮಾರ, ಜಗಳ, ರೋಷಾವೇಶಗಳಿಂದಾಗಿ ಪರಸ್ಪರ ಕೊಲೆಗಳು ನಡೆದು ಹೋದವು ಎಂದು ಸ್ಥಳೀಯರು ಹೇಳುತ್ತಾರೆ.

ಕುರುಹು ಪತ್ತೆ
ಈ ಕುರಿತಾಗಿ ಸಂಶೋಧನೆ ಮಾಡಲು ಹೊರಟಾಗ ಕಾಡಿನಲ್ಲಿ ಕುರುಹು ಪತ್ತೆಯಾಗಿದೆ. ಈ ಕುರಿತು ಜೋತಿಷಿಗಳ ಮೊರೆ ಹೋದಾಗ ಇಲ್ಲಿ ಘಟ್ಟದ ಚಾಮುಂಡಿ, ಗುಳಿಗ ಕಲ್ಕುಡ, ಭೈರವ ಇತ್ಯಾದಿ ಏಳು ದೈವಗಳು ಆವಾಸವಾಗಿವೆಯೆಂದು ಹೇಳಿದ್ದಾರೆ. ಆದರೆ ಇಲ್ಲಿ ಸುಮಾರು ಎರಡು ಶತಮಾನಗಳ ಹಿಂದೆ ಮಲೆಕುಡಿಯರಂತಹ ಮೂಲ ನಿವಾಸಿಗಳು ಜಾನಪದೀಯ ರೀತಿ ಯಲ್ಲಿ ದೈವಾರಾಧನೆ ನಡೆಸುತ್ತಿದ್ದರು. ಬಲಿ, ರಕ್ತದಾಹುತಿಯನ್ನು ಕೊಡ ಲಾಗುತ್ತಿತ್ತು ಎನ್ನಲಾಗಿದೆ.

ಕಷ್ಟಗಳ ಪರಿಹಾರಕ್ಕಾಗಿ ಹಾಗೂ ಊರಿನಲ್ಲಿ ಸುಖಶಾಂತಿಗಳು ನೆಲೆಸಲಿಕ್ಕಾಗಿ ಹಿರಿಯರ ಮಾರ್ಗ ದರ್ಶನದಲ್ಲಿ ಊರಿನವರೆಲ್ಲ ಈಗ ಒಟ್ಟಾಗಿದ್ದಾರೆ. ಸ್ಥಳೀಯ ಸಮಾಜ ಸೇವಕಿ ಲೋಕೇಶ್ವರಿ ವಿನಯಚಂದ್ರ ಅವರ ಮುಂದಾಳತ್ವದಲ್ಲಿ ಗ್ರಾಮಸ್ಥರು ಒಟ್ಟು ಸೇರಿ ಮಲ್ಲ ಕುಕ್ಕುದ ಕಾಡ್‌ ಅಥವಾ ಉಪ್ಪೊಳಿಗೆ ಗುರಿಯೆಂದು ಕರೆಯಲ್ಪಡುತ್ತಿದ್ದ ಕಾಡುಬೆಟ್ಟದ ಮೇಲಿನ ಈ ದೈವಾರಾಧನ ಕೇಂದ್ರವನ್ನು ಮತ್ತೆ ಪುನರ್‌ ನಿರ್ಮಿಸಲು ಮುಂದಡಿ ಇಟ್ಟಿದ್ದಾರೆ.

ಡಾ| ವೈ. ಉಮಾನಾಥ ಶೆಣೈ

ಟಾಪ್ ನ್ಯೂಸ್

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ

Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

1-swami-sm-bg

Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.