ಕೃತಕವಾಗಿ ರಕ್ತ ಉತ್ಪಾದನೆ ಮಾಡಲು ಅಸಾಧ್ಯ
Team Udayavani, May 15, 2019, 5:12 PM IST
ರಾಮನಗರ ತಾಲೂಕು ಬಿಡದಿ ಜ್ಞಾನವಿಕಾಸ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ತಾಪಂ ಅಧ್ಯಕ್ಷ ಗಾಣಕಲ್ ನಟರಾಜ್ 51ನೇ ಬಾರಿಗೆ ರಕ್ತದಾನ ಮಾಡಿದರು.
ರಾಮನಗರ: ಜಗತ್ತಿನಲ್ಲಿ ಅನೇಕ ವಸ್ತುಗಳು ಕೃತಕವಾಗಿ ಉತ್ಪಾದನೆಯಾಗುತ್ತಿವೆ. ಆದರೆ ಕೃತಕವಾಗಿ ರಕ್ತವನ್ನು ಉತ್ಪಾದನೆ ಅಸಾಧ್ಯ. ಹೀಗಾಗಿ ಅಗತ್ಯ ಸಂದರ್ಭದಲ್ಲಿ ರಕ್ತದಾನ ಮಾಡಿ ಜೀವ ಉಳಿಸುವ ಪರೋಪಕಾರ ಮನೋಭಾವ ಬೆಳೆಸಿ ಕೊಳ್ಳಬೇಕು ಎಂದು ಜ್ಞಾನವಿಕಾಸ ವಿದ್ಯಾ ಸಂಘದ ನಿರ್ದೇಶಕ ಎಲ್.ಸತಿಶ್ ಚಂದ್ರ ಹೇಳಿದರು.
ತಾಲೂಕಿನ ಬಿಡದಿಯ ತಮ್ಮ ಸಂಸ್ಥೆಯಲ್ಲಿ ರೋಟರಿ ಬಿಡದಿ ಸೆಂಟ್ರಲ್ ಮತ್ತು ನಾರಾಯಣ ಹೃದಯಾಲಯ ಆಯೋಜಿಸಿದ್ದ ಉಚಿತ ರಕ್ತದಾನ ಶಿಬಿರ, ನೇತ್ರ ತಪಾಸಣೆ ಶಿಬಿರಗಳನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ: ಆರೋಗ್ಯ ವಂತ ಯುವಸಮುದಾಯ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು. ರಕ್ತಕ್ಕೆ ಯಾವುದೇ ಬಣ್ಣ, ಜಾತಿ, ಧರ್ಮ ಇಲ್ಲ. ರಕ್ತದಾನ ಪುಣ್ಯದ ಕೆಲಸ. ಅಪಘಾತ ಮುಂತಾದ ಸಂದರ್ಭಗಳಲ್ಲಿ ರಕ್ತದ ಕೊರತೆಯನ್ನು ನೀಗಿಸಲು ಇಂತಹ ಶಿಬಿರಗಳು ಸಹಕಾರಿ ಎಂದರು.
ತಾಪಂ ಅಧ್ಯಕ್ಷ ಗಾಣಕಲ್ ನಟರಾಜ್ 51ನೇ ಬಾರಿಗೆ ರಕ್ತದಾನ: ತಾಪಂ ಅಧ್ಯಕ್ಷ ಗಾಣಕಲ್ ನಟರಾಜು ಅವರು 51ನೇ ಬಾರಿಗೆ ರಕ್ತದಾನ ಮಾಡಿ, ಯುವ ಸಮುದಾಯಕ್ಕೆ ಮಾದರಿ ಯಾದರು. ಈ ವೇಳೆ ಮಾತನಾಡಿ, ತಾವು 19ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ರಕ್ತದಾನ ಮಾಡಿದ್ದೆ. ಇಲ್ಲಿಯವರೆಗೆ 51 ಬಾರಿ ರಕ್ತದಾನ ಮಾಡಿರುವು ದಾಗಿ, ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ವರಿಗೆ ರಕ್ತ ಕೊಟ್ಟು ಬಂದಿರುವುದಾಗಿ ತಿಳಿಸಿದರು. ರಕ್ತದಾನದಿಂದ ದೇಹದ ಸ್ಥಿತಿಯ ಮೇಲೆ ಯಾವ ಅಡ್ಡ ಪರಿಣಾಮವು ಬೀರುವುದಿಲ್ಲ. ಜೀವವನ್ನು ಉಳಿಸಲು ಇದು ಸತ್ಕಾರ್ಯದ ಮಾರ್ಗ ಎಂದರು.
ರೋಟರಿ ಬಿಡದಿ ಸೆಂಟ್ರಲ್ ಅಧ್ಯಕ್ಷ ಬಿ.ಆರ್.ಆನಂದ್ ಮಾತನಾಡಿ, ರಕ್ತದಾನದ ಬಗ್ಗೆ ಸರ್ಕಾರ ಮತ್ತು ಸಂಘ-ಸಂಸ್ಥೆಗಳು ಸಾಕಷ್ಟು ಜಾಗೃತಿ ಮೂಡಿಸುತ್ತಿವೆ.ಜನರಲ್ಲಿ ಇನ್ನು ಅರಿವು ಮೂಡಿಸುವ ಅವಶ್ಯಕವಿದೆ ಎಂದು ಅಭಿಪ್ರಾಯಪಟ್ಟರು.
115ಕ್ಕೂ ಹೆಚ್ಚು ಮಂದಿ ರಕ್ತದಾನ: ಶಿಬಿರದಲ್ಲಿ ಸುಮಾರು 115ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. 97 ಮಂದಿ ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು. ಬೆಂಗಳೂರಿನ ಸಿಡಿ ಐ ಕೇರ್ ಸೆಂಟರ್ ಹಾಗೂ ನಾರಾಯಣ ಹೃದಯಾಲಯದ ವೈದ್ಯರು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸಿದರು.
ಜ್ಞಾನವಿಕಾಸ ವಿದ್ಯಾಸಂಘದ ಖಜಾಂಚಿ ಹೊನ್ನಶೆಟ್ಟಿ(ರಾಜಣ್ಣ), ರೋಟರಿ ಬಿಡದಿ ಸೆಂಟ್ರಲ್ ಸಂಸ್ಥೆಯ ಕಾರ್ಯದರ್ಶಿ ಶಿವರಾಜು, ಸಮುದಾ ಯ ಸೇವೆ ನಿರ್ದೇಶಕ ಬಿ.ಎಂ.ವಸಂತ ಕುಮಾರ್, ರಘು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
MUST WATCH
ಹೊಸ ಸೇರ್ಪಡೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.