ವಿಜ್ಞಾನ, ಸಂಸ್ಕೃತಿ, ಕಲೆ, ಶಿಕ್ಷಣದಲ್ಲಿ ಸುಸ್ಥಿರ ಅಭಿವೃದ್ಧಿ
ಇಂದು ಅಂತಾರಾಷ್ಟ್ರೀಯ ಬೆಳಕಿನ ದಿನ
Team Udayavani, May 16, 2019, 6:00 AM IST
ನಮ್ಮ ದೈನಂದಿನ ಜೀವನದಲ್ಲಿ ಬೆಳಕು ಮುಖ್ಯ ಪಾತ್ರ ವಹಿಸುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲೂ ಇದರ ಮಹತ್ವವನ್ನು ಎಲ್ಲರೂ ಅರಿಯಬೇಕಾಗಿದೆ. ಅದಕ್ಕಾಗಿಯೇ ಅಂತಾರಾಷ್ಟ್ರೀಯ ಬೆಳಕಿನ ದಿನವನ್ನು ಮೇ 16ರಂದು ವಿಶ್ವಾದ್ಯಂತ ಆಚರಿಸುತ್ತಿದ್ದು ವಿಜ್ಞಾನ, ಸಂಸ್ಕೃತಿ, ಕಲೆ ಮತ್ತು ಶಿಕ್ಷಣದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಈ ದಿನ ಮಹತ್ವಪೂರ್ಣವಾಗಿದೆ.
ಇತಿಹಾಸ
ಯುನೆಸ್ಕೋ ತನ್ನ 200ನೇ ಅಧಿವೇಶನದಲ್ಲಿ ಈ ಅಂತಾರಾಷ್ಟ್ರೀಯ ದಿನವನ್ನು ಆಚರಿಸಲು ನಿರ್ಧಾರ ಮಾಡಿದ್ದು ಭೌತ ಶಾಸ್ತ್ರಜ್ಞ ಮತ್ತು ಎಂಜಿನಿಯರ್ ಮೈಮನ್ 1960ರಲ್ಲಿ ಲೇಸರ್‌ನ ಮೊದಲ ಯಶಸ್ವಿ ಕಾರ್ಯಾಚರಣೆಯ ಅಂಗವಾಗಿ, 147 ದೇಶಗಳಲ್ಲಿ 13,168ಕ್ಕೂ ಹೆಚ್ಚು ಚಟುವಟಿಕೆಗಳ ಮೂಲಕ ಆಚರಿಸಲಾಗುತ್ತಿದೆ. ಈ ದಿನ ವೈವಿಧ್ಯ ಕ್ಷೇತ್ರದಲ್ಲಿ ನಿರ್ದಿಷ್ಟ ಗುರಿ ಸಾಧಿಸಲು ಮತ್ತು ಶಾಂತಿಯುತ ನಡೆಯನ್ನು ಮುಂದುವರಿಸಲು ಪ್ರಯತ್ನಿಸಲಾಗುತ್ತದೆ.
ಉದ್ದೇಶ
ಶಿಕ್ಷಣ, ಕೃಷಿ, ಆರೋಗ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಯಾವ ರೀತಿಯಲ್ಲಿ ಪ್ರಾಯೋಗಿಕ ಪರಿಹಾರವನ್ನು ಒದಗಿಸಬಲ್ಲದು ಎಂಬುದು ಈ ದಿನದ ಉದ್ದೇಶವಾಗಿದೆ. ಇದಲ್ಲದೆ ಯುನೆಸ್ಕೋದ ಪ್ರಕಾರ ಪ್ರತಿಯೊಬ್ಬರೂ ಕೂಡ ಈ ದಿನದ ಉದ್ದೇಶವನ್ನು ಅರಿತು ಅದರ ಜತೆಗೆ ಪ್ರಪಂಚದ ಬೆಳವಣಿಗೆಗೆ ಎಲ್ಲರೂ ಕೈ ಜೋಡಿಸಬೇಕು. ಮಾನವನ ಪ್ರತಿಯೊಂದು ಚಟುವಟಿಕೆಗಳಲ್ಲಿ ಬೆಳಕು ಪ್ರಮುಖ ಪಾತ್ರ ವಹಿಸುತ್ತಿದ್ದು ಇತಿಹಾಸದುದ್ದಕ್ಕೂ ಜನರು ಬೆಳಕಿಗೆ ಮಹತ್ವ ನೀಡುತ್ತಲೇ ಬಂದಿದ್ದಾರೆ.
ಮುಂದಿನ ಪೀಳಿಗೆಗೆ ಅರಿವು
ಅದಲ್ಲದೆ ಇಂದೊಂದು ಸಾಂಸ್ಕೃತಿಕ ಸಂಕೇತವಾಗಿದ್ದು, ಸಾರ್ವತ್ರಿಕ ಪುರಾಣ ಮತ್ತು ದಂತ ಕಥೆಗಳ ಮೂಲಕ ಬೆಳಕಿನ ಬಗ್ಗೆ ತಿಳಿದುಕೊಂಡಿದ್ದೇವೆ. ಅದಕ್ಕಾಗಿಯೇ ಈ ದಿನದ ಮಹತ್ವ ಪ್ರತಿಯೊಬ್ಬರಿಗೂ ತಿಳಿಯುವುದಕ್ಕಾಗಿ ಅಲ್ಲದೆ ಮುಂದಿನ ಪೀಳಿಗೆಗೆ ಇವುಗಳ ಬಗ್ಗೆ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಬೆಳಕಿನ ವರ್ಷ
2015ನ್ನು ಅಂತಾರಾಷ್ಟ್ರೀಯ ಬೆಳಕಿನ ವರ್ಷ ಎಂದು ಘೋಷಿಸಲಾಗಿತ್ತು. ಪ್ರಚಂಚದ ಪ್ರಜೆಗಳಿಗೆ ತಂತ್ರಜ್ಞಾನದ ಪ್ರಾಮುಖ್ಯ ಮತ್ತು ಉತ್ತಮ ಗುಣಮಟ್ಟದ ಜೀವನವನ್ನು ಹಾಗೂ ಸಮಾಜದ ಬೆಳವಣಿಗೆಗಾಗಿ ವರ್ಷ ಪೂರ್ತಿ ಹಲವಾರು ರೀತಿಯ ಚಟುವಟಿಕೆಗಳನ್ನು ನಡೆಸಿದ್ದು, ಈ ಸರಣಿ ಕಾರ್ಯಕ್ರಮ ಯಶಸ್ವಿಯಾಗಿದೆ.
ವಿವಿಧೆಡೆ ಆಚರಣೆ
ಚೀನಾ, ಗ್ರೀಸ್, ಭಾರತ, ಲಾಟ್ವಿಯಾ, ಐರ್ಲ್ಯಾಂಡ್ ಮತ್ತು ಪೋಲೆಂಡ್‌ಗಳಲ್ಲಿ ವಿವಿಧ ರೀತಿಯ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ.
ಈ ಕಾರ್ಯಾಗಾರದಲ್ಲಿ ಯುವಕರನ್ನು ಈ ದಿನದ ಮಹತ್ವವನ್ನು ಅರಿಯಲು ಸಹಾಯವಾಗುವಂತಹ ಉಪನ್ಯಾಸಗಳನ್ನು ಆಯೋಜಿಸಲಾಗುತ್ತದೆ. ಅದಲ್ಲದೆ ಅಗತ್ಯವಿರುವ ಮಾಹಿತಿಗಳನ್ನು ನೀಡಲಾಗುತ್ತದೆ.
ಪ್ರಮುಖ ಗುರಿಗಳು
– ದಿನದ ಮಹತ್ವವನ್ನು ಪ್ರತಿಯೊಬ್ಬರೂ ಅರಿಯುವಂತೆ ಮಾಡುವುದು.
– ಜಾಗತಿಕವಾಗಿ ಅಭಿವೃದ್ಧಿ ಸಾಧಿಸುವುದು ಹೇಗೆ ಎಂಬುದರ ಬಗ್ಗೆ ಸಾರ್ವನಜಿಕರಿಗೆ ಮನವರಿಕೆ ಮಾಡಿಸುವುದು.
– ಯುವ ಜನತೆಗೆ ವಿಜ್ಞಾನದ ಬಗ್ಗೆ ಆಸಕ್ತಿ ತೋರುವಂತೆ ಮಾಡುವುದು.
– ಎಜೆನ್ಸಿ , ಶೈಕ್ಷ ಣಿಕ ಸಂಸ್ಥೆ ಮತ್ತು ಪಾಲುದಾರರಿಂದ ಸಂಘಟಿತವಾಗಿರುವ ಕೇಂದ್ರಗಳಲ್ಲಿ ಅಂತಾರಾಷ್ಟ್ರೀಯ ಸಹಕಾರವನ್ನು ಹೆಚ್ಚಿಸುವುದು.
– ವಿಜ್ಞಾನ, ಐತಿಹಾಸಿಕ, ಸಾಂಸ್ಕೃತಿಕ ಸಂಶೋಧನೆಗಳಲ್ಲಿ ಆದ ಘಟನೆಗಳನ್ನು ಮರುಕಳಿಸಿ ಜನರಿಗೆ ಅದರ ಬಗ್ಗೆ ಮಾಹಿತಿ ನೀಡುವುದು.
- ಪ್ರೀತಿ ಭಟ್ ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.