ಪಯಸ್ವಿನಿ ಹೊಳೆಯ ಸೇತುವೆ ಶಿಥಿಲ


Team Udayavani, May 16, 2019, 5:50 AM IST

14

ಅರಂತೋಡು: ಅರಂತೋಡು-ತೊಡಿಕಾನ ಸಂಪರ್ಕದ ಪಯಸ್ವಿನಿ ಹೊಳೆಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆಯ ಪಿಲ್ಲರ್‌ಗಳು ಶಿಥಿಲಗೊಂಡಿದ್ದು, ಅಪಾಯದ ಮುನ್ಸೂಚನೆ ಇದೆ.

ಸೇತುವೆ ಒಟ್ಟು ಆರು ಪಿಲ್ಲರ್‌ಗಳನ್ನು ಹೊಂದಿದೆ. ಇದರಲ್ಲಿ ಮಧ್ಯದ ಮೂರು ಪಿಲ್ಲರ್‌ಗಳು ಶಿಥಿಲಗೊಂಡಿದೆ. ಕಳೆದ ಆಗಸ್ಟ್‌ ತಿಂಗಳಿನಲ್ಲಿ ಕೊಡಗಿನಲ್ಲಿ ಸಂಭವಿಸಿದ ಜಲಪ್ರಳಯದಿಂದ ದೊಡ್ಡ ದೊಡ್ಡ ಮರಗಳು ಹಾಗೂ ಕಲ್ಲುಗಳು ಬಂದು ಗುದ್ದಿದ ಪರಿಣಾಮ ಪಿಲ್ಲರ್‌ಗಳು ಶಿಥಿಲಗೊಂಡಿವೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಶಬ್ದ ಕೇಳಿಸುತ್ತದೆ
ಸೇತುವೆ ಸ್ಲಾಬ್‌ ಕೆಲವೆಡೆ ಒಡೆದು ಹೋಗಿದೆ. ಮೇಲಿನಿಂದ ವಾಹನಗಳು ಸಂಚರಿಸುವಾಗ ಸೇತುವೆಯ ಕೆಳಗಡೆ ನಿಂತರೆ ಗಡ ಗಡ ಎನ್ನುವ ಶಬ್ದ ಕೇಳುತ್ತದೆ. ಈ ಸೇತುವೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲದ ಸಂಪರ್ಕ ಕಲ್ಪಿಸುತ್ತಿದೆ. ದಿನನಿತ್ಯ ಈ ಸೇತುವೆ ಮೂಲಕ ನೂರಾರು ಭಕ್ತರು, ಉತ್ಸವಾದಿ ಸಮಯದಲ್ಲಿ ಸಾವಿರಾರು ಭಕ್ತರು, ಗ್ರಾಮಸ್ಥರು ತೆರಳುತ್ತಾರೆ.

ಸುಮಾರು 25 ವರ್ಷಗಳ ಹಿಂದೆ ತೊಡಿಕಾನ ಗ್ರಾಮದವರ ಬಹುಕಾಲದ ಬೇಡಿಕೆಯಂತೆ ಪಯಸ್ವಿನಿ ಹೊಳೆಗೆ ಅರಂತೋಡು ಸಮೀಪ ಸೇತುವೆ ನಿರ್ಮಾಣ ಮಾಡಲಾಯಿತು. ಇದು ತೊಡಿಕಾನ – ಅರಂತೋಡು ಗ್ರಾಮ ಸಂಪರ್ಕಕ್ಕೆ ವರದಾನವಾಗಿ ಪರಿಣಮಿಸಿತು.

ದೋಣಿ ಮೂಲಕ ಸಂಚಾರ
ಅರಂತೋಡಿನಲ್ಲಿ ಪಯಸ್ವಿನಿ ಹೊಳೆಗೆ ಸೇತುವೆ ನಿರ್ಮಾಣವಾಗುವುದಕ್ಕೆ ಮೊದಲು ತೊಡಿಕಾನ ಗ್ರಾಮದವರು ಹಾಗೂ ಅರಂತೋಡು ಭಾಗದ ಜನರು ಈ ಹೊಳೆಯನ್ನು ಮಳೆಗಾಲದಲ್ಲಿ ದೋಣಿ ಮೂಲಕ ದಾಟಿಕೊಂಡು ಬರುತ್ತಿದ್ದರು.

ತೊಡಿಕಾನ ಗ್ರಾಮದವರು ಆ ಸಮಯದಲ್ಲಿ ಅರಂತೋಡು ಸಹಕಾರಿ ಬ್ಯಾಂಕ್‌ನಿಂದ ರೇಷನ್‌ ಅನ್ನು ಹೊಳೆಯ ಮೂಲಕ ತಲೆ ಹೊರೆಯಲ್ಲಿ ಹೊತ್ತುಕೊಂಡು ದೋಣಿ ಮೂಲಕ ಸಾಗುತ್ತಿದ್ದರು.

ಈ ಸೇತುವೆ ಅರಂತೋಡು- ತೊಡಿಕಾನ ಸಂಪರ್ಕದ ಅತ್ಯಗತ್ಯ ಸೇತುವೆಯಾಗಿದ್ದು, ಸೇತುವೆ ಕುಸಿದರೆ ಎರಡು ಗ್ರಾಮಗಳ ಸಂಪರ್ಕಕ್ಕೆ ಸಮಸ್ಯೆಯಾಗಲಿದ್ದು, ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತತ್‌ಕ್ಷಣ ಗಮನಹರಿಸಿ ಅರಂತೋಡು-ತೊಡಿಕಾನ ಸಂಪರ್ಕದ ಪಯಸ್ವಿನಿ ಹೊಳೆಗೆ ನಿರ್ಮಿಸಲಾದ ಸೇತುವೆ ಶಿಥಿಲಗೊಂಡಿದೆ. ಸಂಬಂಧಪಟ್ಟ ಇಲಾಖೆ ತತ್‌ಕ್ಷಣ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಅಪಾಯ ಎದುರಾಗುವ ಸಾಧ್ಯತೆ ಇದೆ.
– ತಾಜುದ್ದೀನ್‌ಅರಂತೋಡು, ಸ್ಥಳಿಯರು

ಪತ್ರ ಬರೆಯುತ್ತೇವೆ
ಸೇತುವೆಯ ಪಿಲ್ಲರ್‌ಗಳಿಗೆ ಹಾನಿಯಾಗಿರುವ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯುತ್ತೇವೆ. ಈ ಸೇತುವೆ ಅರಂತೋಡು ಮತ್ತು ತೊಡಿಕಾನ ಗ್ರಾಮಗಳ ಸಂಪರ್ಕದ ಕೊಂಡಿಯಾಗಿದೆ.
– ಶಿವಾನಂದ ಕುಕ್ಕುಂಬಳ, ಉಪಾಧ್ಯಕ್ಷರು, ಅರಂತೋಡು
ಗ್ರಾಮ ಪಂಚಾಯತ್‌

ತೇಜೇಶ್ವರ್‌ ಕುಂದಲ್ಪಾಡಿ

ಟಾಪ್ ನ್ಯೂಸ್

kambala2

Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ

Naxal-Rehablitation

Vikram Gowda Encounter: ನಕ್ಸಲ್‌ ಪುನರ್ವಸತಿ, ಶರಣಾಗತಿ ಸಮಿತಿ ಭೇಟಿ, ಪರಿಶೀಲನೆ

barkuru-Kamabala

Kambala: ಆರು ಶತಮಾನಗಳ ಇತಿಹಾಸ ಹೊಂದಿರುವ ಬಾರ್ಕೂರು ಕಂಬಳ

Yatindra

Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ

IMD

Temperature; ಮುಂದಿನ 20 ವರ್ಷ ಮಳೆ ಜಾಸ್ತಿ, ಉಷ್ಣಾಂಶ ಏರಿಕೆ!

1-pb

Communalization ಜತೆ ಆರೆಸ್ಸೆಸ್‌ ಆರಂಭ: ಬಿಳಿಮಲೆ ಹೇಳಿದ್ದು ವಿವಾದ

Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!

Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Power-Cable

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

Stock-liqer

Sulya: ಆರಂತೋಡು: ಚಿಕನ್‌ ಸೆಂಟರ್‌ಗೆ ದಾಳಿ; ಮದ್ಯ ಅಕ್ರಮ ದಾಸ್ತಾನು ಪತ್ತೆ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

kambala2

Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ

Naxal-Rehablitation

Vikram Gowda Encounter: ನಕ್ಸಲ್‌ ಪುನರ್ವಸತಿ, ಶರಣಾಗತಿ ಸಮಿತಿ ಭೇಟಿ, ಪರಿಶೀಲನೆ

barkuru-Kamabala

Kambala: ಆರು ಶತಮಾನಗಳ ಇತಿಹಾಸ ಹೊಂದಿರುವ ಬಾರ್ಕೂರು ಕಂಬಳ

Yatindra

Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ

IMD

Temperature; ಮುಂದಿನ 20 ವರ್ಷ ಮಳೆ ಜಾಸ್ತಿ, ಉಷ್ಣಾಂಶ ಏರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.