ಕುಡಿಯುವ ನೀರು ಒದಗಿಸಲು ಶತಾಯಗತಾಯ ಪ್ರಯತ್ನ
Team Udayavani, May 16, 2019, 6:10 AM IST
ಉಡುಪಿ: ನಗರದಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಶತಾಯಗತಾಯ ಪ್ರಯತ್ನ ನಡೆಯುತ್ತಿವೆ. ಒಂದೆಡೆ ಶಾಸಕರು ಖುದ್ದು ಬಜೆ ಡ್ಯಾಂನಲ್ಲಿ ಹಾಜರಾಗಿ ಶ್ರಮದಾನ ಮಾಡಿದ್ದರೆ ಮತ್ತೂಂದೆಡೆ ಸಂಘ-ಸಂಸ್ಥೆಗಳೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿವೆ. ನಗರ ಸಭೆಯ ಸದಸ್ಯರು ಕೂಡ ಸ್ವತಃ ವೆಚ್ಚ ಭರಿಸಿ ನೀರು ಪೂರೈಕೆ ಮಾಡುತ್ತಿದ್ದಾರೆ.
ದಿನಕ್ಕೆ 30 ಸಾವಿರ ಲೀ. ನೀರು ಪೂರೈಕೆ ಗುಂಡಿಬೈಲು ವಾರ್ಡ್‌ನಲ್ಲಿ ಕಳೆದ
10 ದಿನಗಳಿಂದಲೂ ವಾರ್ಡ್ ಸದಸ್ಯರು ದಿನವೊಂದಕ್ಕೆ 30 ಸಾವಿರ
ಲೀಟರ್ ನೀರು ಪೂರೈಕೆ ಮಾಡುತ್ತಿ ದ್ದಾರೆ. ಸುಮಾರು 700ರಷ್ಟು ಮನೆ
ಗಳಿದ್ದು, 600 ಮನೆಗಳಿಗೆ ನೀರು ಪೂರೈಕೆಯಾಗಿದೆ. ಬೆಳಗ್ಗೆ 11 ಗಂಟೆ ಯಿಂದ ರಾತ್ರಿ 11 ಗಂಟೆಯವರೆಗೂ ನೀರು ಸರಬರಾಜು ಮಾಡಲಾಗುತ್ತಿದೆ. ನಳ್ಳಿ ನೀರು ಮಂಗಳವಾರ ರಾತ್ರಿ ಬರಲು ಆರಂಭವಾಗಿದೆ. ಉಳಿದಂತೆ ನಗರಸಭೆಯಿಂದ 1 ಬಾರಿ ಟ್ಯಾಂಕರ್ ನೀರು ಪೂರೈಕೆಯಾಗಿದೆ.
ರಾತ್ರಿ 2ಗಂಟೆಯವರೆಗೂ ನೀರು ಪೂರೈಕೆ
ಸುಮಾರು 400ರಿಂದ 500ರಷ್ಟು ಮನೆಗಳಿರುವ ಕುಂಜಿಬೆಟ್ಟು ವಾರ್ಡ್‌ನಲ್ಲೂ ವಾರ್ಡ್ ಸದಸ್ಯರು ನೀರು ಪೂರೈಸುತ್ತಿದ್ದಾರೆ. ದಿನಕ್ಕೆ 4 ಟ್ಯಾಂಕರ್‌ನಲ್ಲಿ 24 ಸಾವಿರ ಲೀ. ನೀರು ಪೂರೈಕೆ ಯಾಗುತ್ತಿದೆ. ಇಲ್ಲಿ ಬೆಳಗ್ಗೆ 9 ಗಂಟೆಗೆ ಆರಂಭವಾದರೆ ರಾತ್ರಿ 12ರಿಂದ 2 ಗಂಟೆವರೆಗೆ ನೀರು ಒದಗಿಸಲಾಗುತ್ತಿದೆ. ನಗರಸಭೆಯ ನಳ್ಳಿ ನೀರು ಶನಿವಾರ ಹಾಗೂ ರವಿವಾರ ಬಂದಿದೆ.
ನಾಗರಿಕ ಸಮಿತಿಯಿಂದ ಪೂರೈಕೆ
ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಮತ್ತು ಪಂಚರತ್ನ ಸೇವಾ ಟ್ರಸ್ಟ್ ಮುಖಾಂತರ ಸಾರ್ವಜನಿಕರಿಗೆ ಕುಡಿಯುವ ನೀರು ವಿತರಿಸುವ ಕಾರ್ಯಕ್ರಮ ಮಂಗಳವಾರ ಆರಂಭಗೊಂಡಿದ್ದು, ಬುಧವಾರವೂ ಮುಂದುವರಿಯಿತು. ಅಜ್ಜರಕಾಡು, ಕೊಡಂಕೂರು, ಮಂಚಿಕೋಡಿ ಭಾಗಗಳಿಗೆ ಬುಧವಾರ ನೀರು ಸರಬರಾಜು ಮಾಡಲಾಯಿತು. 5 ಸಾವಿರ ಲೀಟರ್‌ನ 1 ಟ್ಯಾಂಕ್‌ನಲ್ಲಿ 300ರಿಂದ 500ರಷ್ಟು ಮನೆಗಳಿಗೆ ನೀರು ವಿತರಿಸಲಾಯಿತು. ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡು ರಾತ್ರಿ 7 ಗಂಟೆಯವರೆಗೂ ನೀರು ಸರಬರಾಜು ಮಾಡಲಾಯಿತು.
ಪ್ರಥಮ ಕರೆ ಬಂದವರಿಗೆ ಆದ್ಯತೆ
ದಿನನಿತ್ಯ ಹಲವು ಕರೆಗಳು ನಮಗೆ ಬರುತ್ತಿವೆ. ಸಮಸ್ಯೆ ಇರುವ ಎಲ್ಲ ವಾರ್ಡ್
ಗಳಿಗೂ ನೀರು ಪೂರೈಸುವ ಇಚ್ಛೆ ಇದೆ. ಮೊದಲು ಕರೆ ಮಾಡಿದ ವಾರ್ಡ್ ಗಳಿಗೆ ತೆರಳಿ ನೀರು ವಿತರಿಸುವ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು.
ಸಮಸ್ಯೆಗೆ ಸ್ಪಂದಿಸಲು ಸದಸ್ಯರ ವಿಸಿಟಿಂಗ್ ಕಾರ್ಡ್
ಸಗ್ರಿ ವಾರ್ಡ್‌ನಲ್ಲಿ ಫ್ಲ್ಯಾಟ್‌ಗಳನ್ನು ಹೊರತುಪಡಿಸಿ ಸುಮಾರು 1,500 ಮನೆಗಳಿವೆ. ದಿನಕ್ಕೆ 20 ಸಾವಿರ ಲೀ.ನಷ್ಟು ನೀರು ಇಲ್ಲಿನ ವಾರ್ಡ್ ಸದಸ್ಯರು ಪೂರೈಸುತ್ತಾರೆ. ನೀರಿನ ಅಭಾವ ಇದ್ದ ಸಂದರ್ಭದಲ್ಲಿ ದಿನವೊಂದಕ್ಕೆ 30ರಿಂದ 35 ಸಾವಿರ ಲೀ.ನಷ್ಟು ನೀರು ಪೂರೈಸಲಾಗಿದೆ. ಚುನಾವಾಣೆ ಆರಂಭವಾಗುವ 10 ದಿನ ಮೊದಲೇ ಇಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿತ್ತು. ದಿನವೊಂದಕ್ಕೆ 10 ಟ್ರಿಪ್ ಮಾಡಲಾಗುತ್ತದೆ. ಒಂದು ಮನೆಗೆ ಸುಮಾರು 300ರಿಂದ 700 ಲೀ.ನಷ್ಟು ನೀರು ವಿತರಿಸಲಾಗುತ್ತಿದೆ.
ನೀರಿನ ಸಮಸ್ಯೆ ಇದ್ದವರಿಗೆ ಕರೆ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ವಾರ್ಡ್ ಸದಸ್ಯರ ಮಾಹಿತಿಯುಳ್ಳ ವಿಸಿಟಿಂಗ್ ಕಾರ್ಡ್ ಮಾಡಿ ಇಲ್ಲಿನ ನಿವಾಸಿಗಳಿಗೆ ನೀಡಲಾಗಿದೆ. ಕರೆಮಾಡಿ ತಿಳಿಸಿದ ತತ್‌ಕ್ಷಣ ವಾರ್ಡ್‌ಸದಸ್ಯರು ಸ್ಪಂದಿಸುತ್ತಾರೆ. ವಾರ್ಡ್‌ಗೆ ನೀರು ಪೂರೈಸಲು ಮಂಜುನಾಥ ಕಲ್ಕೂರ ಅವರು ತಮ್ಮ ಮನೆಯ ಬಾವಿಯಿಂದ ಉಚಿತವಾಗಿ ನೀರು ನೀಡುತ್ತಿದ್ದಾರೆ. ಇದರಿಂದ ದಿನವೊಂದಕ್ಕೆ 40 ಸಾವಿರ ಲೀ.ನಷ್ಟು ನೀರು ಕೃಷ್ಣಮಠ ಸಹಿತ ವಿವಿಧ ವಾರ್ಡ್‌ಗಳಿಗೆ ಪೂರೈಕೆಯಾಗುತ್ತಿದೆ.
ಮುಖ್ಯಾಂಶಗಳು
– ನೀರಿನ ಸಮಸ್ಯೆಯಿದ್ದಲ್ಲಿ ವಾರ್ಡ್ ಸದಸ್ಯರನ್ನು ಸಂಪರ್ಕಿಸಿ
– ವಾರ್ಡ್ ಸದಸ್ಯರಿಂದ ನೀರಿನ ವ್ಯವಸ್ಥೆ
– ಸದಸ್ಯರ ನಿರ್ಣಯದಿಂದ ನಗರಸಭೆಗೂ ಅನುಕೂಲ
– ನಗರಸಭೆಯಿಂದಲೂ ಕೆಲ ಪ್ರದೇಶಗಳಿಗೆ ನೀರು ಪೂರೈಕೆ
ಸಾಮೂಹಿಕ ವರುಣ ಮಂತ್ರ ಜಪ
ಉಡುಪಿಯೂ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ನೀರಿನ ತೀವ್ರ ಕೊರತೆಯುಂಟಾಗಿದ್ದು ಅತಿ ಶೀಘ್ರ ಮಳೆಯ ಆಗಮನವಾಗಿ ಎÇÉೆಲ್ಲೂ ಸುಭಿಕ್ಷೆ ನೆಲೆಸುವಂತಾಗಲಿ ಎಂಬ ಆಶಯದೊಂದಿಗೆ ‘ವರುಣ ದೀಪ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಸಾಲಿಗ್ರಾಮದ ಡಿವೈನ್ ಪಾರ್ಕ್ ನ ಉಡುಪಿ ಶಾಖೆ ಉಡುಪಿಯ ಅಜ್ಜರಕಾಡಿನಲ್ಲಿ ಹಮ್ಮಿಕೊಂಡಿದೆ.
ಬುಧವಾರ ಈ ಕಾರ್ಯಕ್ರಮ ಆರಂಭಗೊಂಡಿದ್ದು, ಮೇ 25ರ ವರೆಗೆ 11 ದಿನಗಳ ಕಾಲ ಮುಂಜಾನೆ 6 ರಿಂದ 6.15 ಹಾಗೂ ಸಂಜೆ 6ರಿಂದ 6.15ರ ವರೆಗೆ ಅಜ್ಜರಕಾಡಿನ ಹುತಾತ್ಮ ಸೈನಿಕರ ಯುದ್ಧ ಸ್ಮಾರಕದ ಎದುರು ಸಾಮೂಹಿಕ ವರುಣ ಮಂತ್ರ ಜಪ ನಡೆಯಲಿದೆ.
– ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.