ಇರಾಕ್‌ನಿಂದ ಅಮೆರಿಕ ರಾಯಭಾರಿಗಳು ವಾಪಸ್
Team Udayavani, May 16, 2019, 6:00 AM IST
ವಾಷಿಂಗ್ಟನ್: ಇರಾನ್ ಜತೆಗೆ ಅಮೆರಿಕದ ಘರ್ಷಣೆ ದಿನದಿಂದ ದಿನಕ್ಕೆ ತೀವ್ರ ಗೊಳ್ಳು ತ್ತಿದ್ದು, ಇರಾನ್ ಪ್ರಚೋದಿತ ಉಗ್ರರು ಇರಾಕ್‌ನಲ್ಲಿ ಅಮೆರಿಕದ ರಾಯಭಾರ ಕಚೇರಿ ಉದ್ಯೋಗಿಗಳು ಹಾಗೂ ಅಮೆರಿಕ ಯೋಧರ ಮೇಲೆ ದಾಳಿ ನಡೆಸುತ್ತಿರುವುದರಿಂದ ತುರ್ತು ಸೇವೆಯಲ್ಲಿರುವವರನ್ನು ಹೊರತುಪಡಿಸಿ ಉಳಿದೆಲ್ಲ ಅಮೆರಿಕದ ಅಧಿಕಾರಿಗಳೂ ಇರಾಕ್ ನಿಂದ ವಾಪಸಾಗುವಂತೆ ಆದೇಶಿಸಲಾಗಿದೆ. ಬಗ್ಧಾದ್‌ನಲ್ಲಿರುವ ಮತ್ತು ಕುರ್ದಿಶ್ ಪ್ರಾಂತ್ಯದ ರಾಜಧಾನಿ ಎರ್ಬಿಲ್‌ನಲ್ಲಿರುವ ಸಿಬಂದಿಗೆ ಈ ಆದೇಶ ಅನ್ವಯಿ ಸುತ್ತದೆ. ಇರಾನ್ ಬೆಂಬಲಿತ ಉಗ್ರರು ಭಾರಿ ದೊಡ್ಡ ಮಟ್ಟದ ದಾಳಿಗೆ ಸಜ್ಜಾಗುತ್ತಿದ್ದಾರೆ ಎಂದು ಅಮೆ ರಿಕ ಹೇಳಿದೆ. ಅಮೆರಿಕಕ್ಕೆ ಜರ್ಮನಿ ಕೂಡ ಬೆಂಬಲ ನೀಡಿದ್ದು, ಇರಾಕ್‌ನಲ್ಲಿ ಸೇನೆಗೆ ನೀಡುತ್ತಿದ್ದ ತರಬೇತಿ ಕಾರ್ಯಕ್ರಮ ಸ್ಥಗಿತಗೊಳಿಸಿದೆ.
ಮೂಲಗಳ ಪ್ರಕಾರ ಯುನೈಟೆಡ್ ಅರಬ್ ಎಮಿರೇಟ್ಸ್ ಕರಾವಳಿಯಲ್ಲಿ ರವಿವಾರ ಇರಾನ್ ಬೆಂಬಲಿತ ಉಗ್ರರು ಭಾರಿ ಸ್ಫೋಟಕ ಬಳಸಿ ತೈಲ ಟ್ಯಾಂಕರ್‌ಗಳನ್ನು ಧ್ವಂಸಗೊಳಿಸಿ ದ್ದಾರೆ. ಇದರಿಂದಾಗಿ ತೈಲ ಪೂರೈಕೆಗೆ ಭಾರಿ ಅಡ ಚಣೆ ಉಂಟಾಗಿದೆ ಎನ್ನಲಾಗಿದೆ. ಇನ್ನು ಈ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಕಳೆದ ತಿಂಗಳು ಗಲ್ಫ್ ಕರಾವಳಿಗೆ ಬಿ-52 ಬಾಂಬರ್‌ಗಳು ಮತ್ತು ಯುದ್ಧ ವಿಮಾನ ವಾಹಕಗಳನ್ನು ಅಮೆರಿಕ ಕಳುಹಿಸಿದೆ.
ತೈಲ ಪೂರೈಕೆ ಇಳಿಕೆ: ಇರಾನ್ ಮೇಲೆ ಅಮೆರಿಕ ಹೇರಿದ ನಿಷೇಧ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದ ಹಿನ್ನೆಲೆಯಲ್ಲಿ ಜಾಗತಿಕ ತೈಲ ಪೂರೈಕೆ ಪ್ರಮಾಣ ಭಾರೀ ಇಳಿಕೆ ಕಂಡಿದೆ ಎಂದು ಇಂಟರ್‌ನ್ಯಾಷನಲ್ ಎನರ್ಜಿ ಏಜೆನ್ಸಿ ವರದಿ ಮಾಡಿದೆ. ತೈಲ ಮಾರುಕಟ್ಟೆಯಲ್ಲಿ ಹೆಚ್ಚು ವರಿ ತೈಲವಿತ್ತಾದರೂ, ಈ ಪರಿಸ್ಥಿತಿ ಮುಂದು ವರಿದರೆ ತೈಲ ಕೊರತೆ ಕಾಣಿಸಿಕೊಳ್ಳ ಬಹುದು ಎಂದು ಏಜೆನ್ಸಿ ಎಚ್ಚರಿಸಿದೆ. ಇದೇ ವೇಳೆ, ಪ್ರಮುಖ ತೈಲ ಪೈಪ್‌ಲೈನ್ ಮೇಲೆ ಬಂಡುಕೋರರು ನಡೆಸಿದ ದಾಳಿ ಯಿಂದಾಗಿ ಜಾಗತಿಕ ತೈಲ ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಸೌದಿ ಅರೇಬಿಯಾ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Hard Disk: ಬಿಟ್ಕಾಯಿನ್ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.