ಪೂರ್ವ ಮುಂಗಾರು ವಿಫ‌ಲ: ತಾಲೂಕಿಗೆ ಬರದ ಭೀತಿ

ಈ ವರ್ಷ ಶೇ.23ರಷ್ಟು ಮಳೆ ಕೊರತೆ, ಬಿತ್ತನೆ ಕಾರ್ಯದಲ್ಲಿ ತೀವ್ರ ಹಿನ್ನಡೆ

Team Udayavani, May 16, 2019, 10:42 AM IST

has-2

ಚನ್ನರಾಯಪಟ್ಟಣ: ಸತತ ಆರು ವರ್ಷದ ಬರಗಾಲದಿಂದ ತತ್ತರಿಸಿರುವ ತಾಲೂಕಿನಗೆ ಪ್ರಸಕ್ತ 2019ನೇ ಸಾಲಿನಲ್ಲಿಯೂ ಪೂರ್ವ ಮುಂಗಾರು ಕೈಕೊಟ್ಟ ಪರಿಣಾಮ ಮತ್ತೂಮ್ಮೆ ಬರದ ಭೀತಿ ಎದುರಾಗುವ ಲಕ್ಷಣಗಳು ಗೋಚರವಾಗುತ್ತಿದೆ.

ಮಳೆ ಕೊರತೆ: ತಾಲೂಕಿನಲ್ಲಿ ಪೂರ್ವ ಮುಂಗಾರು ವಾಡಿಕೆಯಂತೆ 86 ಮಿ.ಮೀ. ಮಳೆಯಾಗಬೇಕಿತ್ತು ಆದರೆ 66 ಮಿ.ಮೀ. ಮಾತ್ರ ಮಳೆಯಾಗಿದ್ದು ಶೇ.23 ರಷ್ಟು ಮಳೆ ಕೊರತೆ ಉಂಟಾಗಿದ್ದು ಪೂರ್ವ ಮುಂಗಾರು ಕೂಡಾ ವೈಫ‌ಲ್ಯ ಹೊಂದಿದೆ, ತಾಲೂಕಿನ 6 ಹೋಬಳಿಯಲ್ಲಿ ಶೇಕಡಾವಾರು ಮಳೆ ಕೊರತೆ ಅಂಕಿ ಅಂಶ ಈ ರೀತಿ ಇದೆ. ಕಸಬಾ ಹೋಬಳಿಯಲ್ಲಿ ಶೇ.10ರಷ್ಟು, ಬಾಗೂರು ಶೇ.30ರಷ್ಟು, ದಂಡಿಗನಹಳ್ಳಿ ಶೇ.34, ಹಿರೀಸಾವೆ ಶೇ.32, ನುಗ್ಗೇಹಳ್ಳಿ ಶೇ.21 ಹಾಗೂ ಶ್ರವಣಬೆಳಗೊಳ ಹೋಬಳಿ ಶೇ.10 ರಷ್ಟು ಮೈನಸ್‌ ಮಳೆಯಾಗಿದೆ.

ಬಿತ್ತನೆಯಲ್ಲಿ ಹಿನ್ನೆಡೆ: ಮಳೆ ಕೊರತೆಯಿಂದಾಗಿ ಪೂರ್ವ ಮುಂಗಾರು ಬೆಳೆಗಳ ಬಿತ್ತನೆಗೆ ಹಿನ್ನಡೆಯಾಗಿದೆ, ಈಗಾಗಲೇ ತಾಲೂಕಿ ನಲ್ಲಿ ಎರಡು ಬಾರಿ ವರಣನ ಆಗಮನದಿಂದ ರೈತರು ಸಂತಸ ಪಟ್ಟು ತಮ್ಮ ಕೃಷಿ ಭೂಮಿ ಅಣಿಮಾಡಿ ಬಿತ್ತನೆಗೆ ಸಕಲ ರೀತಿಯಲ್ಲಿ ಸಿದ್ಧರಾಗಿ ಮಳೆಯನ್ನು ಎದುರು ನೋಡುತ್ತಿದ್ದಾರೆ. ಒಂದು ವಾರದಲ್ಲಿ ಮಳೆ ಬಾರದಿದ್ದರೆ ತಾಲೂಕಿನಲ್ಲಿ ಧಾನ್ಯ ಬೆಳೆ ಮಾಡುವುದನ್ನು ರೈತ ಕೈ ಬಿಟ್ಟು ಬರದ ಭೀತಿಗೆ ಸಿಲುಕಲಿದ್ದಾನೆ.

ಈ ಬಾರಿ ಧಾನ್ಯ ಬಿತ್ತನೆಯಾಗಿಲ್ಲ್ಲ: ತಾಲೂಕಿ ನಲ್ಲಿ 2,700 ಹೆಕ್ಟೇರ್‌ ಪ್ರದೇಶದಲ್ಲಿ 185 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದ್ದು ಶೇ.4.3 ರಷ್ಟು ಮಾತ್ರ ಧಾನ್ಯಗಳ ಬಿತ್ತನೆ ಯಾಗಿದೆ, ತಾಲೂಕಿನಲ್ಲಿ 1,100 ಹೆಕ್ಟೇರ್‌ ಪ್ರದೇಶದಲ್ಲಿ ಅಲಸಂದೆ ಕೃಷಿ ಮಾಡಬೇಕಿದ್ದ ರೈತ ಕೇವಲ 120 ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮಾಡಿದ್ದಾನೆ.

ತೊಗರಿ 400 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಬೇಕಿದ್ದು ಇದುವರೆಗೆ ಬಿತ್ತನೆಯಾಗಿಲ್ಲ. ಉದ್ದು 600 ಕ್ಕೆ 15 ಹೆಕ್ಟೇರ್‌ ಮಾತ್ರ, ಹೆಸರು 600ಕ್ಕೆ 50 ಮಾತ್ರ, ಎಳ್ಳು 900 ಹೆಕ್ಟೇರ್‌ನಲ್ಲಿ ಬೆಳೆಯಬೇಕಿದ್ದು ಈವರೆಗೆ ಬಿತ್ತನೆಯಾಗಿಲ್ಲ.

ಬಿತ್ತನೆ ಬೀಜದ ದಾಸ್ತಾನು: ಈಗಾಗಲೆ ಸರ್ಕಾರ ಬಿತ್ತನೆ ಬೀಜವನ್ನು ತಾಲೂಕು ಕೃಷಿ ಇಲಾಖೆಗೆ ಸರಬರಾಜು ಮಾಡಿದ್ದು, ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಿಗೆ ಬಿತ್ತನೆ ಬೀಜವನ್ನು ರವಾನೆ ಮಾಡಲಾಗಿದೆ. ಕೊಳವೆ ಬಾವಿ ಹೊಂದಿರುವವರನ್ನು ಹೊರತುಪಡಿಸಿದರೆ ಮಳೆ ಕೈಕೊಟ್ಟಿರುವುದ ರಿಂದ ಬಿತ್ತನೆ ಬೀಜ ಪಡೆಯಲು ರೈತರು ಕೃಷಿ ಇಲಾಖೆಗೆ ಆಗಮಿಸದೆ ಇರುವುದಿಂದ ದಾಸ್ತಾನು ಇಲಾಖೆಯಲ್ಲಿ ಉಳಿದಿದೆ.

ಮುಂಗಾರು ಎದುರು ನೋಡುತ್ತಿದ್ದಾನೆ ರೈತ: ಪೂರ್ವ ಮುಂಗಾರು ಉತ್ತಮವಾಗಿ ಆಗಿದ್ದರೆ ತಾಲೂಕಿನ ರೈತರು ಧಾನ್ಯ ಬೆಳೆ ಗಳನ್ನು ಮಾಡಿ ಮನೆ ವೆಚ್ಚಕ್ಕೆ ಹಣ ನೋಡು ತ್ತಿದ್ದ ಹಾಗೂ ರಾಸುಗಳ ಮೇವಿಗಾಗಿ ಜೋಳ ಬೆಳೆಯಲು ಮುಂದಾಗುತ್ತಿದ್ದರು.

ಆದರೆ ಪೂರ್ವ ಮುಂಗಾರು ಸಂಪೂರ್ಣ ಕೈಕೊಟ್ಟಿದೆ ಹಾಗಾಗಿ ವಿಧಿ ಇಲ್ಲದೆ ಜೂನ್‌ ಮೊದಲ ವಾರ ಮುಂಗಾರನ್ನು ಎದುರು ನೋಡುವಂತಾಗಿದೆ. ಮುಂಗಾರು ಸಕಾಲಕ್ಕೆ ಆಗದೆ ವೈಫ‌ಲ್ಯವಾದರೆ ಮತ್ತೂಂದು ಬರವನ್ನು ಎದುರಿಸಲು ತಾಲೂಕು ಆಡಳಿತ ಸಕಲ ಸಿದ್ಧತೆ ನಡೆಸಬೇಕಿದೆ.

ತೋಟಗಾರಿಗೆ ಬಿತ್ತನೆ ಪ್ರಮಾಣ ಕುಂಠಿತ

ಪೂರ್ವ ಮುಗಾರು ಕೈ ಕೊಟ್ಟಿರುವು ದರಿಂದ ಬಿತ್ತನೆ ಕಾರ್ಯ ಕುಂಠಿತ ವಾಗಿದೆ. ತೋಟಗಾರಿಕೆ ಬೆಳೆಯಾದ ಆಲೂಗಡ್ಡೆ ಯನ್ನು ದಂಡಿಗನಹಳ್ಳಿ, ಬಾಗೂರು ಹೋಬಳಿಯಲ್ಲಿ ಹೆಚ್ಚು ಬೆಳೆಯುತ್ತಿದ್ದು ಕಸಬಾ-ನುಗ್ಗೇಹಳ್ಳಿ ಹೋಬಳಿಯ ಕೆಲ ಗ್ರಾಮ ಸೇರಿದಂತೆ 900 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಬಿತ್ತನೆ ಆಗಬೇಕಿತ್ತು. ಇದುವರೆಗೆ ಯಾವುದೇ ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ. ಟೊಮೆಟೋ 220 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗ ಬೇಕಿದ್ದು, ಕೊಳವೆ ಬಾವಿ ಹೊಂದಿರುವ 125 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಮೆಣಸಿನಕಾಯಿ 200 ಹೆಕ್ಟೇರ್‌ಗೆ ಕೇವಲ 60 ಹೆಕ್ಟೇರ್‌ನಲ್ಲಿ ಮಾತ್ರ ರೈತ ಬೆಳೆದಿದ್ದಾನೆ.
ಮೇ 15ರ ಒಳಗೆ ತಾಲೂಕಿನಲ್ಲಿ ಎರಡೂಮೂರು ಹದ ಮಳೆಯಾಗ ಬೇಕಿತ್ತು. ಆದರೆ ಕೇವಲ ಒಂದು ಹದ ಮಳೆಯಾಗಿರುವುದರಿಂದ ಬಿತ್ತನೆಯಲ್ಲಿ ಕುಂಠಿತವಾಗಿದೆ. ಮುಂದಿನ 15 ದಿವಸ ದಲ್ಲಿ ಮಳೆಯಾಗದೆ ಹೋದರೆ ತೆಂಗಿನ
ಮರಗಳಿಗೆ ನೀರಿನ ಕೊರತೆ ಉಂಟಾಗು ವುದಲ್ಲದೆ ಇತರ ತೋಟಗಾರಿಕೆ ಬೆಳೆ ಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
● ಕೆ.ಬಿ.ಸತೀಶ್‌, ಹಿರಿಯ, ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ
ಈಗಾಗಲೆ ಜಿಲ್ಲಾಡಳಿತ ಪೂರ್ವ ಮುಂಗಾರು ಬಳೆಯ ಬಿತ್ತನೆ ಬೀಜ, ಕೃಷಿಗೆ ಅಗತ್ಯ ಔಷಧಿ, ಗೊಬ್ಬರ ವನ್ನು ಸರಬರಾಜು ಮಾಡಿದೆ. ಆದರೆ ಮಳೆ ಕೊರತೆಯಿಂದ ರೈತರು ಪಡೆ ಯಲು ಮುಂದೆ ಬಂದಿಲ್ಲ. ಈ ವಾರದಲ್ಲಿ ಮಳೆಯಾಗದಿದ್ದರೆ ಅಲಸಂದೆ ಮೊದಲಾದ ಬೆಳೆ ಕೃಷಿ ಮಾಡುವುದನ್ನು ಮರೆಯಬೇಕಾಗುತ್ತದೆ.
● ಎಫ್.ಕೆ.ಗುರುಸಿದ್ದಪ್ಪ, ಸಹಾಯಕ ನಿರ್ದೇಶಕರು ಕೃಷಿ ಇಲಾಖೆ
ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

1-hale-beed

Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Hasana-College

Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್‌ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.