ನಿರೀಕ್ಷೆ ಮೂಡಿಸದ ಪೂರ್ವ ಮುಂಗಾರು


Team Udayavani, May 16, 2019, 12:07 PM IST

ram-4

ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವ ದಿನಗಳು ಹತ್ತಿರ ಬರುತ್ತಿವೆ. ಪೂರ್ವ ಮುಂಗಾರು ಮಳೆಯಂತೂ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟಕ್ಕೆ ಬಂದಿಲ್ಲ. ಈ ಹಿಂದೆ ಬಿದ್ದಿರುವ ವಾಡಿಕೆ ಮಳೆಗಿಂತ ಕಡಿಮೆ ಮಳೆ ಜಿಲ್ಲೆಯಲ್ಲಾಗಿದೆ. ಮುಂದೆ ಜೂನ್‌ನಿಂದ ಮುಂಗಾರು ಮಳೆ ಆರಂಭವಾಗಲಿದೆ. ಗಾಳಿ, ಮಳೆಗೆ ಪ್ರತಿವರ್ಷ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತದೆ. ಕೆಲವು ಪ್ರದೇಶಗಳು ಜಲಾವೃತ್ತವಾಗುತ್ತವೆ. ಮಳೆ ಗಾಳಿಗೆ ಮರಗಳು ವಿದ್ಯುತ್‌ ಕಂಬಗಳು ಬಿದ್ದು ನಷ್ಟ ಉಂಟಾಗುತ್ತದೆ. ಜನಸಾಮಾನ್ಯರಿಗೆ ಈ ರೀತಿ ನಷ್ಟ ಉಂಟಾಗದಂತೆ ಅಧಿಕಾರಿಗಳು ಈ ಬಾರಿಯಾದರೂ ಕ್ರಮ ಕೈಗೊಳ್ಳುವವರೇ?

ತುಮಕೂರು: ಮಳೆಗಾಲ ಸನಿಹ ಬರುತ್ತಿದೆ. ವಾಡಿಕೆ ಯಂತೆ ಏಪ್ರಿಲ್, ಮೇ ತಿಂಗಳಲ್ಲಿ ಕಲ್ಪತರು ನಾಡಿನಲ್ಲಿ ಹೆಚ್ಚು ಮಳೆ ಬಂದು ಬೆಳೆಗೆ ಆಶ್ರ ಯವಾಗುತ್ತಿತ್ತು. ಆದರೆ, ಈ ಬಾರಿ ಪೂರ್ವ ಮುಂಗಾರು ಮಳೆ ಕೈಕೊಟ್ಟಿದೆ. ಮುಂದೆ ಮುಂಗಾರು ಮಳೆ ಜೂನ್‌ ತಿಂಗಳಲ್ಲಿ ಆರಂಭವಾಗ ಲ್ಲಿದೆ. ಬಿದ್ದ ಮಳೆ ಸರಿಯಾದ ರೀತಿಯಲ್ಲಿ ಶೇಖರಣೆ ಯಾಗದೇ ಕೆರೆ ಕಟ್ಟೆಗಳಿಗೆ ಮಳೆ ನೀರು ಹೋಗದೆ ಹೆಚ್ಚು ವ್ಯಯವಾಗು ತ್ತಿದ್ದು, ಗಾಳಿ, ಮಳೆಯಿಂದ ಪ್ರತಿವರ್ಷ ಲಕ್ಷಾಂತರ ರೂ.ನಷ್ಟ ಸಂಬಂವಿಸಿದೆ. ಈ ಬಾರಿಯ ಗಾಳಿ, ಮಳೆಯಿಂದ ಅನಾಹುತಾ ತಪ್ಪಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆಯೇ?

ಕಲ್ಪತರು ನಾಡಿನಲ್ಲಿ ಈ ಹಿಂದೆ ಎಂದೂ ಕಂಡಿರ ದಷ್ಟು ಸುಡುಬಿಸಿಲಿದೆ. ಮಳೆಗಾಗಿ ಮುಗಿಲು ನೋಡು ತ್ತಿರುವ ರೈತರಿಗೆ ದಿನೇ ದಿನೆ ನಿರಾಸೆಯಾಗುತ್ತಿದೆ. ಜಿಲ್ಲೆಯಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಬೀಳಬೇಕಾಗಿದ್ದ ವಾಡಿಕೆ ಮಳೆ ಬಿದ್ದಿಲ್ಲ. ಶೇ.3.9 ಮಿ.ಮೀ ಮಳೆ ಜಿಲ್ಲೆಯಲ್ಲಿ ಬಿದ್ದಿದೆ. ಮಂದೆ ಮುಂಗಾರು ಮಳೆ ಜಿಲ್ಲೆಯಲ್ಲಿ ರಭಸವಾಗಿ ಬಿದ್ದರೆ, ಬಹುತೇಕ ಪ್ರದೇಶ ಗಳು, ಜಲಾವೃತ್ತವಾಗಿ ಜನ ಸಂಕಷ್ಟ ಪಡುವ ವಾತಾ ವರಣ ನಗರವೂ ಸೇರಿದಂತೆ ಜಿಲ್ಲೆಯಲ್ಲಿದೆ.

ಒತ್ತುವರಿಯಾಗಿವೆ ರಾಜಕಾಲುವೆಗಳು: ಮಳೆ ಬಂದರೆ ಮಳೆಯ ನೀರು ಸರಾಗವಾಗಿ ಕೆರೆ, ಕಟ್ಟೆಗಳಿಗೆ ಹರಿದು ಹೋಗಲು ಈ ಹಿಂದೆ ರಾಜಕಾಲುವೆಗಳನ್ನು ನಿರ್ಮಾಣ ಮಾಡಲಾಗಿತ್ತು. ಮಳೆ ಎಲ್ಲಿಯೇ ಬಿದ್ದರೂ ಅ ರಾಜಗಾಲುವೆ ಮೂಲಕ ಸಂಬಂಧಿಸಿದ ಕೆರೆ, ಕಟ್ಟೆಗಳಿಗೆ ಎಲ್ಲಿಯೂ ನೀರು ವ್ಯ¿ ುವಾಗದಂತೆ ಹರಿದು ಹೋಗುತ್ತಿತ್ತು. ಆದರೆ, ಇತೀಚಿನ ದಿನಗಳಲ್ಲಿ ರಾಜಕಾಲುವೆಗಳು ಭೂಗಳ್ಳರ ಪಾಲಾಗಿದೆ. ಬಹುತೇಕ ಕಡೆಗಳಲ್ಲಿ ಈ ರಾಜಕಾಲುವೆಗಳನ್ನು ಒತ್ತುವರಿ ಮಾಡಿರುವುದರಿಂದ ಬಿದ್ದ ಮಳೆ ನೀರು ಸರಾಗವಾಗಿ ಹರಿದು ಹೋಗದೇ, ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನರಿಗೆ ತೊಂದರೆ ಉಂಟಾಗುತ್ತದೆ.

ಚರಂಡಿಗಳಲ್ಲಿ ತುಂಬಿದೆ ಕಸ ಕಡ್ಡಿ: ತುಮಕೂರು ಸೇರಿದಂತೆ ನಗರ ಪ್ರದೇಶದಲ್ಲಿ ರಸ್ತೆಯಲ್ಲಿ ಬಿದ್ದ ಮಳೆ ನೀರು ಚರಂಡಿಗಳ ಮೂಲಕ ಹೋಗಲು ಸ್ಥಳೀಯ ಸಂಸ್ಥೆಗಳಿಂದ ವ್ಯವಸ್ಥೆ ಮಾಡಲಾಗಿದೆ. ಆದರೆ, ಈ ಚರಂಡಿಗಳಲ್ಲಿ ಕಸ, ಕಡ್ಡಿ ತುಂಬಿ ನೀರು ಹರಿಯ ದಂತಾಗಿರುವುದರಿಂದ ಬಿದ್ದ ಮಳೆಯ ನೀರು ಚರಂಡಿ ಗಳಲ್ಲಿ ಸರಾಗವಾಗಿ ಹರಿದು ಹೋಗದೇ ರಸ್ತೆಗಳಲ್ಲಿ ಕೊಳಚೆ ನೀರು ಹರಿಯುತ್ತದೆ. ನಗರದ ಎಂ.ಜಿ.ರಸ್ತೆ, ಬಿ.ಎಚ್.ರಸ್ತೆ, ರಾಧಾಕೃಷ್ಣ ರಸ್ತೆ, ಎಸ್‌.ಎಸ್‌.ಪುರಂ, ಬನಶಂಕರಿ, ಶಿರಾ ಗೇಟ್ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ಚರಂಡಿ ನೀರು ರಸ್ತೆಯಲ್ಲಿ ಹರಿದು ಪಾದಚಾರಿಗಳಿಗೆ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ.

ಇದರ ಜೊತೆಗೆ ನಗರದಲ್ಲಿರುವ ಹಲವು ಪ್ರದೇಶ ಗಳು ಜಲಾವೃತವಾಗುತ್ತಿವೆ. 15ರಿಂದ 20 ಮಿ.ಮೀ ಮಳೆ ನಗರದಲ್ಲಿ ಬಿದ್ದರೆ ಸಾಕು ಎಸ್‌.ಎಸ್‌.ಪುರಂ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗುತ್ತದೆ. ಇದಕ್ಕೆ ಕಾರಣ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡದೇ ಇರುವುದು ಜೊತೆಗೆ ನೀರು ಹರಿಯಬೇಕಾಗಿರುವ ಜಾಗಗಳನ್ನು ಒತ್ತುವರಿ ಮಾಡಿಕೊಂಡು ನೀರು ಹರಿಯದಂತೆ ಮಾಡಿರುವುದು ಪ್ರಮುಖವಾಗಿದ್ದು, ಇದರಿಂದ ಮಳೆಗಾಲದಲ್ಲಿ ಜನ ತೊಂದರೆ ಪಡುವ ಸಾಧ್ಯತೆಗಳು ಹೆಚ್ಚು ಕಂಡುಬರುತ್ತಿದೆ.

ಬಿರುಗಾಳಿಗೆ ಮರ, ಕಂಬಗಳು ಧರೆಗೆ: ಮಳೆ ಬಂದ ರಂತೂ ಬಿರುಗಾಳಿ ರಭಸಕ್ಕೆ ರಸ್ತೆ ಬದಿಯ ಮರಗಳು, ವಿದ್ಯುತ್‌ ಕಂಬಗಳು, ಮನೆಯ ಶೀಟುಗಳು ಹಾರಿ ಹೋಗುವುದು ಸಹಜವಾಗಿದೆ. ಪ್ರತಿವರ್ಷ ಮಳೆ ಗಾಲದಲ್ಲಿ ಮರ ಗಿಡಗಳು ಬೇರು ಸಮೇತ ಗಾಳಿಯ ರಭಸಕ್ಕೆ ಬಿದ್ದು, ತೊಂದರೆ ಉಂಟಾಗಿದೆ. ಕೆಲವು ಕಡೆಗಳಲ್ಲಿ ಮರದ ಕೊಂಬೆಗಳು ಜನರ, ವಾಹನಗಳ ಮೇಲೆ ಬಿದ್ದು ತೊಂದರೆ ಉಂಟಾಗಿದೆ. ವಿದ್ಯುತ್‌ ಕಂಬಗಳು ಕೂಡ ಗಾಳಿಯ ರಭಸಕ್ಕೆ ಬಿದ್ದು ಜನರಿಗೆ ತೊಂದರೆ ಉಂಟಾಗಿರುವುದೇ ಹೆಚ್ಚು ಜಿಲ್ಲೆಯಲ್ಲಿ ಪ್ರತಿವರ್ಷ ಮಳೆಯಿಂದ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ. ಆದರೆ, ಈ ರೀತಿ ನಷ್ಟ ಆಗದಂತೆ ತಡೆಯಬೇಕಾಗಿರುವ ಅಧಿಕಾರಿಗಳು ಮೌನವಾಗಿದ್ದಾರೆ.

ಬಿದ್ದ ಮಳೆ ನೀರು ವ್ಯರ್ಥ: ಜಿಲ್ಲೆಯಲ್ಲಿ ಇರುವ ರಾಜಗಾಲುವೆಗಳನ್ನು ತೆರವು ಮಾಡಿ, ಮಳೆಯ ನೀರು ಸರಾಗವಾಗಿ ಹೋಗುವಂತೆ ಮಾಡಿದರೆ ಬೀಳುವ ಮಳೆಯಿಂದ ಕನಿಷ್ಠ ಕೆರೆ, ಕಟ್ಟೆಗಳಾದರೂ ತುಂಬುತ್ತವೆ. ಬಿದ್ದ ಮಳೆಯ ನೀರನ್ನು ಸಮರ್ಪಕವಾಗಿ ಉಪ ಯೋಗಿಸದೇ ನೀರು ವ್ಯಯವಾಗಲು ಬಿಡುವುದರಿಂದ ಕೆರೆ, ಕಟ್ಟೆಗಳು ತುಂಬದೇ ಮಳೆಯ ನೀರು ವ್ಯಯ ವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸ ಬೇಕಾಗಿದೆ. ಅದೇ ರೀತಿಯಲ್ಲಿ ಚರಂಡಿಗಳಲ್ಲಿ ಕಸಕಡ್ಡಿ ತುಂಬಿಕೊಂಡು ಮಳೆನೀರು ಹರಿಯಂದೆ ಇರುತ್ತದೆ. ಮಳೆ ಪ್ರಾರಂಭವಾಗುವ ಮುನ್ನ ಈ ಚರಂಡಿಗಳನ್ನು ಸ್ವಚ್ಛಗೊಳಿಸಿ, ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಯನ್ನು ಮಾಡಬೇಕಾಗಿದೆ. ನಗರದ ರಸ್ತೆಯ ಬದಿಗಳಲ್ಲಿ ಒಣಗಿರುವ ಮರಗಿಡಗಳನ್ನು ತೆರವು ಗೊಳಿಸಲು ಅರಣ್ಯ ಇಲಾಖೆ ಮುಂದಾಗಬೇಕು. ಜೊತೆಗೆ ಬೀಳುವ ರೀತಿಯಲ್ಲಿರುವ ಕೊಂಬೆಗಳನ್ನು ಕಡಿದು ಜನರ ಮೇಲೆ, ವಾಹನಗಳ ಮೇಲೆ ಬೀಳದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳು ಮಳೆಗಾಲದಲ್ಲಿ ಜನ ಸಾಮಾನ್ಯ ರಿಗೆ ತೊಂದರೆ ಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಹಿಂದೆ ಮಳೆಯಿಂದ ಆಗಿರುವ ತೊಂದರೆಗಳನ್ನು ತಪ್ಪಿಸಲು ಅಧಿಕಾರಿಗಳು ಹೆಚ್ಚು ಆಸಕ್ತಿ ವಹಿಸುವುದು ಅಗತ್ಯವಾಗಿದೆ.

ವಿದ್ಯುತ್‌ ಕೆಲಸವನ್ನು ಅನಧಿಕೃತ ವ್ಯಕ್ತಿಗಳಿಂದ ಮಾಡಿಸದಿರಿ
ಮಳೆಗಾಲ ಪ್ರಾರಂಭವಾಗಿರುವುದರಿಂದ ಗಾಳಿ ಮತ್ತು ಮಳೆಗೆ ಮರಗಿಡಗಳು ಬೆಸ್ಕಾಂ ಮಾರ್ಗಗಳ ಮೇಲೆ ಬಿದ್ದು, ತಂತಿಗಳು ತುಂಡಾಗಿ ಅಪಾಯ ವಾಗುವ ಸಂಭವ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಗ್ರಾಹಕರು ಸಂಬಂಧಪಟ್ಟ ಶಾಖಾಧಿ ಕಾರಿ ಅಥವಾ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಗ್ರಾಮೀಣ ಭಾಗದ ಸಾರ್ವ ಜನಿಕರು ವಿದ್ಯುತ್‌ ಮಾರ್ಗಗಳ ಕೆಳಗೆ ತೋಟಗಳನ್ನು ನಿರ್ಮಿಸುವುದು, ಕಟ್ಟಡ ನಿರ್ಮಾಣ, ವಿದ್ಯುತ್‌ ಕಂಬಗಳಿಗೆ ತಂತಿ, ಹಗ್ಗ ಕಟ್ಟಿ ಬಟ್ಟೆ ಒಣಗಿಸುವುದು, ಸಾಕು ಪ್ರಾಣಿಗಳನ್ನು ಕಂಬಕ್ಕೆ ಕಟ್ಟುವುದು. ಮನೆಗಳಿಗೆ ಅನಧಿಕೃತ ವಿದ್ಯುತ್‌ ಸಂಪರ್ಕ ಪಡೆಯಲು ಕೊಕ್ಕೆ ಹಾಕುವುದು, ಹುಲ್ಲಿನ ಬಣವೆ ಹಾಕುವುದು, ವಿದ್ಯುತ್‌ ಕಂಬಗಳಿಗೆ ಹಾಕಿರುವ ಆಧಾರ ತಂತಿ ಗಳನ್ನು ತೆಗೆಯುವುದರಿಂದ ಅಪಘಾತಗಳು ಸಂಭ ವಿಸುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ಸಾರ್ವ ಜನಿಕರು ವಿದ್ಯುತ್‌ ಅಪಘಾತಗಳು ಸಂಭವಿಸದಂತೆ ಯಾವುದೇ ರೀತಿಯ ವಿದ್ಯುತ್‌ ಕೆಲಸಗಳನ್ನು ಅನಧಿಕೃತ ವ್ಯಕ್ತಿಗಳಿಂದ ಮಾಡಿಸಬಾರದು ಎಂದು ತುಮಕೂರು ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಮೆಹಬೂಬ್‌ ಷರೀಪ್‌ ಹೇಳಿದ್ದಾರೆ.
ತೊಂದರೆಯಾಗದಂತೆ ಕ್ರಮಕ್ಕೆ ಸಿದ್ಧತೆ

ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಯಿಂದ ಮಳೆಗಾಲದ ಈ ದಿನಗಳಲ್ಲಿ ನಗರದ ನಾಗರಿಕರಿಗೆ ಯಾವುದೇ ರೀತಿಯ ತೊಂದರೆ ಯಾಗದಂತೆ ಕ್ರಮ ಕೈ ಗೊಳ್ಳಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿ ಕೊಳ್ಳಲಾಗಿದೆ. ಮಳೆ ನೀರು ಹರಿಯುವ ಪ್ರಮುಖ ರಸ್ತೆಗಳ ಚರಂಡಿ ಗಳನ್ನು ಸ್ವಚ್ಛಗೊಳಿಸಿ ನೀರು ಚರಂಡಿಯಲ್ಲಿ ಸರಾಗ ವಾಗಿ ಹರಿಯುವಂತೆ ವ್ಯವಸ್ಥೆ ಮಾಡ ಲಾಗುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ಹರಿದು ಜಲಾವೃತ ವಾಗದಂತೆ ಗಮನಹರಿಸಲಾಗುವುದು ಒತ್ತುವರಿ ಯಾಗಿರುವ ರಾಜಗಾಲುವೆಗಳನ್ನು ತೆರವುಗೊಳಿ ಸಲು ಅಗತ್ಯ ಕ್ರಮಕೈಗೊಳ್ಳಲಾಗು ವುದು ಎಂದು ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಪಾಲನ್‌ ತಿಳಿಸಿದ್ದಾರೆ.

ಜೂನ್‌ನಲ್ಲಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಮಳೆಗಾಲದಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗದಂತೆ
ಜಿಲ್ಲಾಡಳಿತದಿಂದ ಕ್ರಮ ಗಳನ್ನು ಕೈಗೊಳ್ಳಲಾಗಿದೆ. ಮಳೆಯಿಂದ ಹಾನಿಯಾಗುವ ಬಗ್ಗೆ ಸ್ಥಳೀಯ ಅಧಿಕಾರಿ
ಗಳಿಂದ ಮಾಹಿತಿ ತರಿಸಲಾಗುವುದು, ಮಳೆಯ ನೀರು ವ್ಯರ್ಥವಾಗಿ ಹರಿದು ಹೋಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆರೆಕಟ್ಟೆಗಳಿಗೆ ನೀರು ಹರಿಯುವ ರಾಜಗಾಲುವೆಗಳ ತೆರವು ಕಾರ್ಯಾಚರಣೆ, ಮಳೆಗಾಲದಲ್ಲಿ ಜನಗರಿಗೆ ತೊಂದರೆಯಾಗ ದಂತೆ ಕ್ರಮಗಳನ್ನು ಕೈಗೊಳ್ಳತ್ತೇವೆ.
● ಡಾ.ಕೆ.ರಾಕೇಶ್‌ ಕುಮಾರ್‌, ಜಿಲ್ಲಾಧಿಕಾರಿ

ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ

‌Viral Video: ಟಿಕ್‌ಟಾಕ್‌ ಸ್ಟಾರ್‌ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್

‌Viral Video: ಟಿಕ್‌ಟಾಕ್‌ ಸ್ಟಾರ್‌ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್

Kharge’s RSS statement for Muslim appeasement: KS Eshwarappa criticizes

Shimoga: ಮುಸ್ಲಿಂ ಸಂತೃಪ್ತಿಗೆ ಖರ್ಗೆ ಆರ್‌ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ

16-roopa

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್‌ ಎನ್‌ಕೌಂಟರ್‌ ಬಗ್ಗೆ ಡಿಐಜಿ ಹೇಳಿದ್ದೇನು ?

14-sky

Subramanya: ಕುಕ್ಕೆಗೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ದಂಪತಿ ಭೇಟಿ

Hospital: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ

Surat: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

4-kunigal

Kunigal: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ

14-kunigal

Kunigal: ಟೈರ್ ಸ್ಪೋಟಗೊಂಡು ಕಾರು ಪಲ್ಟಿ: ಐಟಿ ಉದ್ಯೋಗಿ ದುರ್ಮರಣ

K. N. Rajanna: “ಸರ್ಕಾರ ತೆಗಿತೀನಿ ಅನ್ನೋದು ಪ್ರಜಾಪ್ರಭುತ್ವಕ್ಕೆ ಅವಮಾನ’

K. N. Rajanna: “ಸರ್ಕಾರ ತೆಗಿತೀನಿ ಅನ್ನೋದು ಪ್ರಜಾಪ್ರಭುತ್ವಕ್ಕೆ ಅವಮಾನ’

koratagere

Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!

MUST WATCH

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

ಹೊಸ ಸೇರ್ಪಡೆ

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ

‌Viral Video: ಟಿಕ್‌ಟಾಕ್‌ ಸ್ಟಾರ್‌ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್

‌Viral Video: ಟಿಕ್‌ಟಾಕ್‌ ಸ್ಟಾರ್‌ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್

Kharge’s RSS statement for Muslim appeasement: KS Eshwarappa criticizes

Shimoga: ಮುಸ್ಲಿಂ ಸಂತೃಪ್ತಿಗೆ ಖರ್ಗೆ ಆರ್‌ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ

16-roopa

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್‌ ಎನ್‌ಕೌಂಟರ್‌ ಬಗ್ಗೆ ಡಿಐಜಿ ಹೇಳಿದ್ದೇನು ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.