ವಿಶ್ವಸಂಸ್ಥೆಯಲ್ಲಿ ದಿಯಾ ಝಲಕ್‌!


Team Udayavani, May 17, 2019, 6:02 AM IST

Bollywood-actress-Dia-Mirza

ಬಾಲಿವುಡ್‌ ನಾಯಕ ನಟರು, ನಾಯಕಿಯರು ಬೇರೆ ಬೇರೆ ಖಾಸಗಿ ಕಂಪೆನಿಗಳಿಗೆ, ಸಂಘ ಸಂಸ್ಥೆಗಳಿಗೆ, ವಾಣಿಜ್ಯ ಉದ್ದೇಶದ ಚಟುವಟಿಕೆಗಳಿಗೆ ಪ್ರಚಾರ ರಾಯಭಾರಿಗಳಾಗುವುದು ಹೊಸದೇನಲ್ಲ. ಆದರೆ, ಸದುದ್ದೇಶದ ಕಾರ್ಯಗಳಿಗೆ ತಮ್ಮ ಸಮಯ ನೀಡುವುದು, ಅದರಿಂದ ಯಾವುದೇ ಫ‌ಲಾಪೇಕ್ಷೆ ಇಲ್ಲದೆ ಪ್ರಚಾರ ರಾಯಭಾರಿ ಆಗುವುದು, ಆ ಕಾರ್ಯಗಳನ್ನು ಪ್ರಚಾರಪಡಿಸುವುದಕ್ಕೆ ಅನೇಕ ಸ್ಟಾರ್ ಹಿಂದೇಟು ಹಾಕುತ್ತಾರೆ.

ಈಗ ಯಾಕೆ ಸ್ಟಾರ್‌ಗಳ ರಾಯಭಾರದ ಬಗ್ಗೆ ಮಾತು ಅಂತೀರಾ? ಅದಕ್ಕೂ ಒಂದು ಕಾರಣವಿದೆ. ಅಂದ ಹಾಗೆ, ಆ ಕಾರಣ ಬಾಲಿವುಡ್‌ ನಟಿ ದಿಯಾ ಮಿರ್ಜಾ. ವಿಷಯ ಏನಪ್ಪ ಅಂದ್ರೆ, ವಿಶ್ವಸಂಸ್ಥೆಯ ಬಹು ಮಹತ್ವಾಕಾಂಕ್ಷೆಯ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ ಅಭಿಯಾನಕ್ಕೆ ಬಾಲಿವುಡ್‌ ನಟಿ ದಿಯಾ ಮಿರ್ಜಾ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

ಜಾಗತಿಕ ಹವಾಮಾನ ಬದಲಾವಣೆ ನಿಯಂತ್ರಣ ಕುರಿತು ಪ್ಯಾರಿಸ್‌ ಒಪ್ಪಂದದಲ್ಲಿ ಉಲ್ಲೇಖವಾಗಿರುವ ಸುಸ್ಥಿರ ಅಭಿವೃದ್ಧಿಗೆ (ಎಸ್‌ಡಿಜಿ) ನಿಗದಿಪಡಿಸಿರುವ ಗುರಿಗಳ ಸಾಧನೆಗೆ ರಾಷ್ಟ್ರಗಳನ್ನು ಪ್ರೇರೇಪಿಸುವುದು ಅಭಿಯಾನದ ಉದ್ದೇಶವಾಗಿದೆ. ಯುರೋಪಿಯನ್‌, ಏಷ್ಯಾನ್‌ ಖಂಡಗಳ ಪ್ರಮುಖ ಜನಪ್ರಿಯ ತಾರೆಯರನ್ನು ಈ ಅಭಿಯಾನದಲ್ಲಿ ರಾಯಭಾರಿಯನ್ನಾಗಿ ನೇಮಿಸಲಾಗುತ್ತಿದ್ದು, ಇನ್ನುಳಿದಂತೆ ಇ ಕಾಮರ್ಸ್‌ ಕ್ಷೇತ್ರದ ಅಲಿಬಾಬಾ ಸಂಸ್ಥೆಯ ಮುಖ್ಯಸ್ಥ ಜಾಕ್‌ ಮಾ ಪೆಂಗ್‌ ಲೀ, ಬ್ರಿಟಿಷ್‌ ನಟ ರಿಚರ್ಡ್‌ ಕರ್ಟಿಸ್‌ ಸೇರಿದಂತೆ 17 ಖ್ಯಾತನಾಮರನ್ನು ವಿಶ್ವಸಂಸ್ಥೆಯ ಈ ಅಭಿಯಾನಕ್ಕೆ ರಾಯಭಾರಿಗಳನ್ನಾಗಿ ನೇಮಿಸಲಾಗಿದೆ. ಇಂಥಾದ್ದೊಂದು ಅಪರೂಪದ ಅವಕಾಶ ಈ ಬಾರಿ ದಿಯಾ ಮಿರ್ಜಾ ಅವರನ್ನು ಹುಡುಕಿಕೊಂಡು ಬಂದಿದೆ.

ಇನ್ನು ಈ ಬಗ್ಗೆ ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಆಂಟೋನಿಯೋ ಗುಟರೆಸ್‌ ದಿಯಾ ಮಿರ್ಜಾ ಅವರ ಅಧಿಕೃತ ರಾಯಭಾರಿ ನೇಮಕ ಆದೇಶಕ್ಕೆ ಸಹಿ ಹಾಕಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರ ಕಚೇರಿ ಪ್ರಕಟಣೆ ಹೊರಡಿಸಿದೆ.

ಈ ಬಗ್ಗೆ ಮಾತನಾಡಿರುವ ನಟಿ ದಿಯಾ ಮಿರ್ಜಾ ವಿಶ್ವಸಂಸ್ಥೆಯು ನನಗೆ ನೀಡಿರುವ ಅಭೂತಪೂರ್ವ ಗೌರವಕ್ಕೆ ನಾನು ಆಭಾರಿಯಾಗಿದ್ದೇನೆ. ವಿಶ್ವಸಂಸ್ಥೆಯ ಬಹು ಮಹತ್ವಾಕಾಂಕ್ಷೆಯ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯ ಈ ಅಭಿಯಾನಕ್ಕೆ (ಎಸ್‌ಡಿಜಿ) ನಾನು ಸೂಕ್ತ ನ್ಯಾಯ ಒದಗಿಸಲಿದ್ದೇನೆ ಎಂದು ಟ್ವೀಟ್‌ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಟಾಪ್ ನ್ಯೂಸ್

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

7(1

Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

6

Gangolli-ಕುಂದಾಪುರ ಬಾರ್ಜ್‌ ಕನಸಿಗೆ ತಣ್ಣೀರು

5

Mangaluru: ಮಳೆ ನೀರು ಹರಿಯುವ ಕಾಲುವೆಗೆ ಪೈಪ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.