ಹೂಳು ತೆರವು ಕಾರ್ಯಾಚರಣೆ ಪ್ರಾರಂಭ

ಸಸಿಹಿತ್ಲು ಕದಿಕೆ ಸೇತುವೆ

Team Udayavani, May 17, 2019, 6:11 AM IST

1605HALE-1

ಸಸಿಹಿತ್ಲು: ಇಲ್ಲಿನ ಮುಂಡ ಬೀಚ್‌ನಲ್ಲಿ ತೀವ್ರವಾದ ನದಿ ಕೊರೆತಕ್ಕೆ ಪರೋಕ್ಷವಾಗಿ ಕಾರಣವಾಗಿರುವ ಸೇತುವೆಗಳ ಹೂಳು ತೆರವು ಕಾರ್ಯಾಚರಣೆ ಕಳೆದ ಹದಿನೈದು ದಿನಗಳಿಂದ ಪಾವಂಜೆ ಹೆದ್ದಾರಿಯ ಸೇತುವೆಯ ಕೆಳಗೆ ನಡೆಯುತ್ತಿದೆ. ಎರಡನೇ ಹಂತದಲ್ಲಿ ಸಸಿಹಿತ್ಲು ಕದಿಕೆ ಸೇತುವೆಯ ಕೆಳಗಿನ ಹೂಳು ತೆರವು ಕಾರ್ಯಾಚರಣೆ ಗುರುವಾರ ಅಧಿ ಕೃತವಾಗಿ ಪ್ರಾರಂಭವಾಗಿದೆ.

ಕದಿಕೆ ಸೇತುವೆಯಲ್ಲಿನ ನಾಲ್ಕು ಪಿಲ್ಲರ್‌ಗಳ ನಡುವೆ ಇರುವ ಹೂಳನ್ನು ತೆರವು ಮಾಡಲು ಕಾರ್ಮಿಕರು ಹಗ್ಗದ ಮೂಲಕ ಹಾಗೂ ನದಿಯಲ್ಲಿ ಈಜಿ ಕೊಂಡು ತೆರಳಿದ್ದು, ಅಲ್ಲಿನ ಗಟ್ಟಿಯಾದ ಮಣ್ಣನ್ನು ತೆರವು ಮಾಡಿ ದೋಣಿಯ ಮೂಲಕ ದಡಕ್ಕೆ ಸಾಗಿಸುತ್ತಿದ್ದಾರೆ.ಪಾವಂಜೆಯಲ್ಲಿ ಜೆಸಿಬಿ ಮೂಲಕ ತೆರವು ನಡೆಯುತ್ತಿದ್ದರೆ,ಕದಿಕೆಯಲ್ಲಿ ಸುಮಾರು 10 ಮಂದಿ ಕಾರ್ಮಿಕರು ತೆರವು ಕಾರ್ಯಾಚರಣೆಯಲ್ಲಿ ತೊಡಗಿ ಕೊಂಡಿದ್ದಾರೆ.

ಇತೀ¤ಚೆಗೆ ಶಾಸಕ ಉಮಾನಾಥ ಕೋಟ್ಯಾನ್‌ ಅವರು ಸ್ಥಳೀಯ ಜಿ.ಪಂ.ಸದಸ್ಯ ವಿನೋದ್‌ ಬೊಳ್ಳೂರು, ತಾ.ಪಂ.ಸದಸ್ಯ ಜೀವನ್‌ಪ್ರಕಾಶ್‌ ಕಾಮೆರೊಟ್ಟು ಹಾಗೂ ಸ್ಥಳೀಯ ಮೀನುಗಾರರ ಪ್ರಮು ಖರೊಂದಿಗೆ ನಿಯೋಗದ ಮೂಲಕ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರೊಂದಿಗೆ ಮಾತುಕತೆ ನಡೆಸಿದ್ದರ ಪರಿಣಾಮ ಚಾಲನೆ ಸಿಕ್ಕಿದೆ.

ಮುಂಡ ಬೀಚ್‌ನಲ್ಲಿ ಸಮುದ್ರ ಕೊರೆತದಿಂದ ಹಳೆಯಂಗಡಿ ಗ್ರಾ.ಪಂ. ನಿರ್ಮಿಸಿದ್ದ ಅಂಗಡಿ ಕೋಣೆ ಸಮುದ್ರ ಪಾಲಾಗಿ ಸುಮಾರು 100 ಮೀ. ಗಿಂತಲೂ ಹೆಚ್ಚು ಬೀಚ್‌ನ ಭಾಗ ಸಮುದ್ರ ಪಾಲಾಗಿದೆ. ಸೇತುವೆಗಳನ್ನು ನಿರ್ಮಿಸು ವಾಗ ಮಣ್ಣು ತುಂಬಿಸಿದ್ದನ್ನು ತೆರವು ಗೊಳಿಸದೇ ಇರುವುದರಿಂದ ಹೂಳು ತುಂಬಿ ಅದು ಗಟ್ಟಿಯಾಗಿ ನಂದಿನಿ ನದಿಯ ಒತ್ತಡವನ್ನು ಕಡಿಮೆ ಮಾಡಿ ದ್ದರಿಂದ ಅಳಿವೆಯಲ್ಲಿ ನದಿ ಕೊರೆತ ತೀವ್ರವಾಗಿತ್ತು.

ಮೀನುಗಾರರ ಮುಖಂಡ ಶೋಭೇಂದ್ರ ಸಸಿಹಿತ್ಲು ಮಾತನಾಡಿ, ಬಲೆ ಹಾಕಿ ಮೀನು ಹಿಡಿಯುವ ಮೀನುಗಾರರು ಸಹ ದೋಣಿಯ ಮೂಲಕ ಈ ಸೇತುವೆಯನ್ನು ದಾಟಿ ತೆರಳ ಬೇಕಾದರೆ ಒಂದೇ ಕಿಂಡಿಯಲ್ಲಿ ಸಾಗಬೇಕಾಗಿತ್ತು. ಉಳಿದೆಡೆ ಮಣ್ಣು ತುಂಬಿರುವುದರಿಂದ ದೋಣಿ ಸಾಗಲು ಕಷ್ಟವಾಗಿದೆ. ಸಂಪೂರ್ಣವಾಗಿ ತೆರವು ನಡೆಸಿದ ಅನಂತರ ಮೀನುಗಾರರ ವೃತ್ತಿಯವರಿಗೂ ಅನು ಕೂಲವಾಗುತ್ತದೆ. ಅಮಾವಾಸ್ಯೆಯ ದಿನದಂದು ಹೂಳೆತ್ತಲು ಬಹಳಷ್ಟು ಅನುಕೂಲವಾಗಿದೆ. ಮಳೆಗಾಲ ಆರಂಭವಾಗುವ ಮೊದಲೇ ಕಾಮಗಾರಿ ಮುಗಿದಲ್ಲಿ ಉತ್ತಮ ಎಂದರು.

ತಾ.ಪಂ.ಸದಸ್ಯ ಜೀವನ್‌ಪ್ರಕಾಶ್‌ ಕಾಮೆರೊಟ್ಟು, ಹಳೆ ಯಂಗಡಿ ಗ್ರಾ.ಪಂ.ನ ಸದಸ್ಯರಾದ ವಿನೋದ್‌ ಕುಮಾರ್‌ ಕೊಳುವೈಲು,ಸುಕೇಶ್‌ ಪಾವಂಜೆ,ಹಳೆಯಂಗಡಿಯ ಮನೋಜ್‌ ಕುಮಾರ್‌ ಉಪಸ್ಥಿತರಿದ್ದರು.

ಮುಂಡ ಬೀಚ್‌ ಉಳಿಸಲು ಪ್ರಯತ್ನ
ಕಾಮಗಾರಿ ಸಂದರ್ಭದಲ್ಲಿ ಸ್ಥಳಕ್ಕೆ ಸ್ಥಳೀಯ ನಿಯೋಗದೊಂದಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್‌ ಸದಸ್ಯ ವಿನೋದ್‌ ಬೊಳ್ಳೂರು ಉದಯವಾಣಿಯೊಂದಿಗೆ ಪ್ರತಿಕ್ರಿಯಿಸಿ,ಬೇಸಗೆ ಹಾಗೂ ನದಿ ನೀರಿನ ಒತ್ತಡ ಕಡಿಮೆ ಇರುವ ಕಾರಣ ಮಣ್ಣನ್ನು ತೆಗೆಯಲು ಶಾಸಕರ ಸೂಚನೆಯಂತೆ ಜಿಲ್ಲಾಧಿಕಾರಿಗಳ ಮೂಲಕ ಕಾರ್ಯ ಪ್ರವೃತ್ತರಾಗಿದ್ದಾರೆ.ಪ್ರವಾಸೋದ್ಯಮ ಕೇಂದ್ರವಾಗುತ್ತಿರುವ ಮುಂಡ ಬೀಚ್‌ ಅನ್ನು ಉಳಿಸಿಕೊಳ್ಳಲು ಈ ಪ್ರಯತ್ನ ನಡೆದಿದೆ ಎಂದರು.

ಟಾಪ್ ನ್ಯೂಸ್

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

Anwar-Manippady

Mangaluru: ವಕ್ಫ್‌ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ

Pocso

Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.