ಆಧುನಿಕ ಸಂಶೋಧನೆಗಳೊಂದಿಗೆ ಹೆಜ್ಜೆ ಅನಿವಾರ್ಯ

ಧಾರವಾಡ: ನಗರದಲ್ಲಿ ಆಸ್ತಾ ಮಹಿಳಾ ಕೇಂದ್ರ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಮಾಜಿ ಮೇಯರ್‌ ಪೂರ್ಣಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

Team Udayavani, May 17, 2019, 12:03 PM IST

hubali-tdy-10..

ಧಾರವಾಡ: ಆಧುನಿಕ ವೈಜ್ಞಾನಿಕ ಸಂಶೋಧನೆಗಳು ಮಕ್ಕಳಾಗದ ದಂಪತಿಗಳಿಗೆ ತಮ್ಮದೇ ಮಕ್ಕಳನ್ನು ಪಡೆಯುವಲ್ಲಿ ಹಲವು ಆಯ್ಕೆಗಳನ್ನು ಒದಗಿಸುವ ಮೂಲಕ ಹಲವು ಕುಟುಂಬಗಳ ನೆಮ್ಮದಿಗೆ ಕಾರಣವಾಗಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಅಧ್ಯಕ್ಷ ಎಸ್‌. ರವೀಂದ್ರನ್‌ ಹೇಳಿದರು. ನಗರದಲ್ಲಿ ಆಸ್ತಾ ಮಹಿಳಾ ಕೇಂದ್ರ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬಂಜೆತನ ನಿವಾರಣೆ ಮತ್ತು ಪ್ರನಾಳ ಶಿಶು ಕುರಿತ ಉಚಿತ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯರೂ ಕೂಡ ಆಧುನಿಕ ಸಂಶೋಧನೆಗಳೊಂದಿಗೆ ಹೆಜ್ಜೆ ಹಾಕುವುದು ಅನಿವಾರ್ಯ ಆಗಿರುವುದರಿಂದ ಬಂಡವಾಳದ ಅವಶ್ಯಕತೆ ಅವರಿಗೆ ಹಿಂದೆಂದಿಗಿಂತ ಹೆಚ್ಚಿದೆ. ಇದನ್ನು ಅನುಲಕ್ಷಿಸಿ ನಮ್ಮ ಬ್ಯಾಂಕ್‌ ವೈದ್ಯರ ತಕ್ಷಣದ ಅವಶ್ಯಕತೆ ಪೂರೈಸಲು ಗರಿಷ್ಠ 25 ಲಕ್ಷ ಸಾಲ ಒದಗಿಸುವ ಓಡಿ ಸೌಲಭ್ಯ ಜಾರಿಗೆ ತಂದಿದೆ. ಪ್ರನಾಳ ಶಿಶು ಮತ್ತು ಬಂಜೆತನ ನಿವಾರಣೆಗೆ ಧಾರವಾಡದಲ್ಲೇ ಅವಕಾಶ ದೊರೆತಿರುವುದಿಂದ ಜನಸಾಮಾನ್ಯರಿಗೂ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು. ಜ್ಯೋತಿ ಪ್ರಹ್ಲಾದ ಜೋಶಿ ಮಾತನಾಡಿ, ಮಕ್ಕಳಾಗದ ದಂಪತಿಗಳನ್ನು ಸಮಾಜ ನೋಡುವ ದೃಷ್ಟಿಕೋನವೇ ಭಿನ್ನವಾಗಿದೆ. ವಿಶೇಷವಾಗಿ ಮಹಿಳೆ ಮಾನಸಿಕವಾಗಿ ತುಂಬಾ ತೊಳಲಾಡುತ್ತಾಳೆ. ಬಂಜೆತನ ನಿವಾರಣೆಗೆ ಸಂಬಂಧಿಸಿ ಧಾರವಾಡದಲ್ಲಿ ಆಸ್ಪತ್ರೆ ತೆರೆದ ಡಾ| ಸೌಭಾಗ್ಯ ಕುಲಕರ್ಣಿ ಅವರ ಕಾರ್ಯ ಶ್ಲಾಘನೀಯ ಎಂದರು. ಖ್ಯಾತ ಸ್ತ್ರೀರೋಗ ತಜ್ಞೆ ಡಾ| ಸೌಭಾಗ್ಯ ಕುಲಕರ್ಣಿ ಮಾತನಾಡಿ, ಆಧುನಿಕ ಜೀವನ ಶೈಲಿ ಪುರುಷ ಮತ್ತು ಮಹಿಳೆಯರನ್ನು ಬಂಜೆತನಕ್ಕೆ ದೂಡುತ್ತಿದ್ದು, ಸೂಕ್ತ ಔಷಧೋಪಚಾರ ಮತ್ತು ಜೀವನ ಶೈಲಿ ಬದಲಾವಣೆಯೊಂದಿಗೆ ಮಕ್ಕಳನ್ನು ಫಲಿಸುವಂತೆ ಮಾಡಬಹುದು. ಅದೂ ಸಾಧ್ಯವಾಗದಿದ್ದರೆ ಪ್ರನಾಳ ಶಿಶು ಪ್ರಯೋಗದ ಮೂಲಕ ಮೂಲಕ ಸಾಫಲ್ಯ ಕಾಣಬಹುದು ಎಂದು ತಿಳಿಸಿದರು. ಆಸ್ಪತ್ರೆ ಮುಖ್ಯ ವೈದ್ಯೆ ಡಾ| ಕೋಮಲ ಕುಲಕರ್ಣಿ ಮಾತನಾಡಿ, ಪ್ರನಾಳ ಶಿಶು ವ್ಯವಸ್ಥೆ ಅತ್ಯಂತ ಸರಳಗೊಂಡಿದ್ದು ಜನಸಾಮಾನ್ಯರಿಗೂ ಲಭ್ಯವಾಗಬಲ್ಲ ತಂತ್ರಜ್ಞಾನವಾಗಿದೆ ಎಂದರು. ಮಾಜಿ ಮೇಯರ್‌ ಪೂರ್ಣಾ ಪಾಟೀಲ, ಅಕ್ಕನ ಬಳಗದ ಅಧ್ಯಕ್ಷೆ ಮೀನಾಕ್ಷಿ ಕೋಟೂರು, ಬರಹಗಾರ್ತಿ ಮಾಲತಿ ಮುದಕವಿ, ರೋಟರಿ ಕ್ಲಬ್‌ ಉಪ ಗವರ್ನರ್‌ ಗೌರಿ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. 150ಕ್ಕೂ ಅಧಿಕ ದಂಪತಿಗಳು ಉಚಿತ ಶಿಬಿರದ ಪ್ರಯೋಜನ ಪಡೆದರು.

ಧಾರವಾಡ: ಆಧುನಿಕ ವೈಜ್ಞಾನಿಕ ಸಂಶೋಧನೆಗಳು ಮಕ್ಕಳಾಗದ ದಂಪತಿಗಳಿಗೆ ತಮ್ಮದೇ ಮಕ್ಕಳನ್ನು ಪಡೆಯುವಲ್ಲಿ ಹಲವು ಆಯ್ಕೆಗಳನ್ನು ಒದಗಿಸುವ ಮೂಲಕ ಹಲವು ಕುಟುಂಬಗಳ ನೆಮ್ಮದಿಗೆ ಕಾರಣವಾಗಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಅಧ್ಯಕ್ಷ ಎಸ್‌. ರವೀಂದ್ರನ್‌ ಹೇಳಿದರು.

ನಗರದಲ್ಲಿ ಆಸ್ತಾ ಮಹಿಳಾ ಕೇಂದ್ರ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬಂಜೆತನ ನಿವಾರಣೆ ಮತ್ತು ಪ್ರನಾಳ ಶಿಶು ಕುರಿತ ಉಚಿತ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯರೂ ಕೂಡ ಆಧುನಿಕ ಸಂಶೋಧನೆಗಳೊಂದಿಗೆ ಹೆಜ್ಜೆ ಹಾಕುವುದು ಅನಿವಾರ್ಯ ಆಗಿರುವುದರಿಂದ ಬಂಡವಾಳದ ಅವಶ್ಯಕತೆ ಅವರಿಗೆ ಹಿಂದೆಂದಿಗಿಂತ ಹೆಚ್ಚಿದೆ. ಇದನ್ನು ಅನುಲಕ್ಷಿಸಿ ನಮ್ಮ ಬ್ಯಾಂಕ್‌ ವೈದ್ಯರ ತಕ್ಷಣದ ಅವಶ್ಯಕತೆ ಪೂರೈಸಲು ಗರಿಷ್ಠ 25 ಲಕ್ಷ ಸಾಲ ಒದಗಿಸುವ ಓಡಿ ಸೌಲಭ್ಯ ಜಾರಿಗೆ ತಂದಿದೆ. ಪ್ರನಾಳ ಶಿಶು ಮತ್ತು ಬಂಜೆತನ ನಿವಾರಣೆಗೆ ಧಾರವಾಡದಲ್ಲೇ ಅವಕಾಶ ದೊರೆತಿರುವುದಿಂದ ಜನಸಾಮಾನ್ಯರಿಗೂ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.

ಜ್ಯೋತಿ ಪ್ರಹ್ಲಾದ ಜೋಶಿ ಮಾತನಾಡಿ, ಮಕ್ಕಳಾಗದ ದಂಪತಿಗಳನ್ನು ಸಮಾಜ ನೋಡುವ ದೃಷ್ಟಿಕೋನವೇ ಭಿನ್ನವಾಗಿದೆ. ವಿಶೇಷವಾಗಿ ಮಹಿಳೆ ಮಾನಸಿಕವಾಗಿ ತುಂಬಾ ತೊಳಲಾಡುತ್ತಾಳೆ. ಬಂಜೆತನ ನಿವಾರಣೆಗೆ ಸಂಬಂಧಿಸಿ ಧಾರವಾಡದಲ್ಲಿ ಆಸ್ಪತ್ರೆ ತೆರೆದ ಡಾ| ಸೌಭಾಗ್ಯ ಕುಲಕರ್ಣಿ ಅವರ ಕಾರ್ಯ ಶ್ಲಾಘನೀಯ ಎಂದರು.

ಖ್ಯಾತ ಸ್ತ್ರೀರೋಗ ತಜ್ಞೆ ಡಾ| ಸೌಭಾಗ್ಯ ಕುಲಕರ್ಣಿ ಮಾತನಾಡಿ, ಆಧುನಿಕ ಜೀವನ ಶೈಲಿ ಪುರುಷ ಮತ್ತು ಮಹಿಳೆಯರನ್ನು ಬಂಜೆತನಕ್ಕೆ ದೂಡುತ್ತಿದ್ದು, ಸೂಕ್ತ ಔಷಧೋಪಚಾರ ಮತ್ತು ಜೀವನ ಶೈಲಿ ಬದಲಾವಣೆಯೊಂದಿಗೆ ಮಕ್ಕಳನ್ನು ಫಲಿಸುವಂತೆ ಮಾಡಬಹುದು. ಅದೂ ಸಾಧ್ಯವಾಗದಿದ್ದರೆ ಪ್ರನಾಳ ಶಿಶು ಪ್ರಯೋಗದ ಮೂಲಕ ಮೂಲಕ ಸಾಫಲ್ಯ ಕಾಣಬಹುದು ಎಂದು ತಿಳಿಸಿದರು.

ಆಸ್ಪತ್ರೆ ಮುಖ್ಯ ವೈದ್ಯೆ ಡಾ| ಕೋಮಲ ಕುಲಕರ್ಣಿ ಮಾತನಾಡಿ, ಪ್ರನಾಳ ಶಿಶು ವ್ಯವಸ್ಥೆ ಅತ್ಯಂತ ಸರಳಗೊಂಡಿದ್ದು ಜನಸಾಮಾನ್ಯರಿಗೂ ಲಭ್ಯವಾಗಬಲ್ಲ ತಂತ್ರಜ್ಞಾನವಾಗಿದೆ ಎಂದರು.

ಮಾಜಿ ಮೇಯರ್‌ ಪೂರ್ಣಾ ಪಾಟೀಲ, ಅಕ್ಕನ ಬಳಗದ ಅಧ್ಯಕ್ಷೆ ಮೀನಾಕ್ಷಿ ಕೋಟೂರು, ಬರಹಗಾರ್ತಿ ಮಾಲತಿ ಮುದಕವಿ, ರೋಟರಿ ಕ್ಲಬ್‌ ಉಪ ಗವರ್ನರ್‌ ಗೌರಿ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. 150ಕ್ಕೂ ಅಧಿಕ ದಂಪತಿಗಳು ಉಚಿತ ಶಿಬಿರದ ಪ್ರಯೋಜನ ಪಡೆದರು.

ಟಾಪ್ ನ್ಯೂಸ್

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

7-

Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

Jharkhand Polls: Coalition of INDIA to power in tribal state; A setback for BJP

Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

9-bng

Bengaluru: ಹನಿಟ್ರ್ಯಾಪ್‌: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

8-

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.