ದೇವನ್ ಭಾರ್ತಿ ಎಟಿಎಸ್ ನೂತನ ಮುಖ್ಯಸ್ಥ
Team Udayavani, May 17, 2019, 11:45 AM IST
ಮುಂಬಯಿ: ಮಹಾರಾಷ್ಟ್ರ ಸರಕಾರ ಹಿರಿಯ ಐಪಿಎಸ್ ಅಧಿಕಾರಿ ದೇವನ್ ಭಾರ್ತಿ ಅವರನ್ನು ರಾಜ್ಯ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮುಖ್ಯಸ್ಥರಾಗಿ ನೇಮಿಸಿದೆ.
ಭಾರ್ತಿ ಅವರು ಪ್ರಸ್ತುತ ಮುಂಬಯಿ ಪೊಲೀಸ್‌ನ ಆರ್ಥಿಕ ಅಪರಾಧಗಳ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿ (ಜೆಸಿಪಿ) ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜ್ಯ ಗೃಹ ಇಲಾಖೆಯು ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿ) ಶ್ರೇಣಿಯ 19 ಅಧಿಕಾರಿಗಳ ವರ್ಗಾ ವಣೆ ಮಾಡಿ ಆದೇಶ ಹೊರಡಿಸಿದೆ. ಪ್ರಸ್ತುತ ಎಟಿಎಸ್ ಮುಖ್ಯಸ್ಥ ಅತುಲ್‌ಚಂದ್ರ ಕುಲಕರ್ಣಿ ಅವರು ಪುಣೆಯ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಎಡಿಜಿ ಆಗಿ ವರ್ಗಾವಣೆಗೊಂಡಿ¨ªಾರೆ.
ದೇವನ್ ಭಾರ್ತಿ ಅವರು ಈ ಹಿಂದೆ ಸುಮಾರು ನಾಲ್ಕು ವರ್ಷಗಳ ಕಾಲ ಜೆಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಆಗಿದ್ದರು. 2015ರ ಎಪ್ರಿಲ್‌ನಲ್ಲಿ ನಗರದ ಜಂಟಿ ಪೊಲೀಸ್ ಆಯುಕ್ತರಾಗಿ (ಕಾನೂನು ಮತ್ತು ಸುವ್ಯವಸ್ಥೆ) ನೇಮಕ ಗೊಂಡಿದ್ದ ಭಾರ್ತಿ ಅವರು ಈ ಹು¨ªೆಯಲ್ಲಿ ದೀರ್ಘಕಾಲದ ಸೇವೆ ಸಲ್ಲಿಸಿದ ಅಧಿಕಾರಿಯಾಗಿದ್ದರು. ಚುನಾವಣಾ ಆಯೋಗದ (ಇಸಿ) ನಿರ್ದೇಶನದ ಮೇರೆಗೆ ಅವರನ್ನು ಆರ್ಥಿಕ ಅಪರಾಧಗಳ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು.
1994ರ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವಾ ಅಧಿಕಾರಿಯಾಗಿರುವ ಭಾರ್ತಿ ಅವರು 26/11 ಮುಂಬಯಿ ಭಯೋತ್ಪಾದಕ ದಾಳಿ ಮತ್ತು ಪತ್ರಕರ್ತ ಜೆ ಡೇ ಅವರ ಹತ್ಯೆ ಸೇರಿದಂತೆ ಹಲವಾರು ಉನ್ನತ- ಪ್ರಕರಣಗಳಲ್ಲಿ ತನಿಖೆ ನಡೆಸಿದ್ದಾರೆ. ರಾಜ್ಯದಲ್ಲಿ ಭಾರತೀಯ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಬೆನ್ನೆಲುಬನ್ನು ಮುರಿದು ಹಾಕುವಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು.
26/11 ಮುಂಬಯಿ ಭಯೋತ್ಪಾ ದನಾ ದಾಳಿಯ ಸಂಪೂರ್ಣ ತನಿಖೆಯ ಮೇಲ್ವಿಚಾರಣೆ ನಡೆಸಿದ ಅಧಿಕಾರಿಗಳಲ್ಲಿ ಭಾರ್ತಿ ಒಬ್ಬರಾಗಿದ್ದಾರೆ. ಅವರು ಪಾಕ್ ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್‌ನನ್ನು ನೇಣಿಗೆ ಹಾಕುವ ವರೆಗಿನ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿದ್ದರು.
ಇತರ ಅಧಿಕಾರಿಗಳ ಪೈಕಿ ಅಪರಾಧ ವಿಭಾಗದ ಜೆಸಿಪಿ ಅಶುತೋಷ್ ಡುಂಬ್ರೆ ಅವರನ್ನು ಭಯೋತ್ಪಾದನಾ ನಿಗ್ರಹದ ಎಡಿಜಿ ಆಗಿ ಪದೋನ್ನತಿ ನೀಡಲಾಗಿದೆ. ಫೋರ್ಸ್ ವನ್ ಪಡೆಯ ಐಜಿಪಿ ಆಗಿ ನಿಯೋಜಿಸಲ್ಪಟ್ಟಿದ್ದ ಸುಖೀÌಂದರ್ ಸಿಂಗ್ ಅವರಿಗೆ ಅದೇ ಹುದ್ದೆಗೆ ಬಡ್ತಿ ನೀಡಿಲಾಗಿದೆ. ಅನುಪ್ ಕುಮಾರ್ ಸಿಂಗ್, ವಿನಿತ್ ಅಗ್ರವಾಲ್, ಸುನೀಲ್ ರಾಮಾನಂದ್, ಪ್ರಜ್ಞಾ ಸರವಡೆ ಮತ್ತು ಸಂಜೀವ್ ಸಿಂಘಾಲ್ ಅವರನ್ನು ಎಡಿಜಿಯನ್ನಾಗಿ ಪದೋನ್ನತಿ ನೀಡಲಾಗಿದೆ.
ಐಪಿಎಸ್ ಅಧಿಕಾರಿ ಸಂತೋಷ್ ರಾಸ್ತೋಗಿ ಇನ್ನು ಮುಂಬಯಿ ಪೊಲೀಸ್ ಅಪರಾಧ ಶಾಖೆಯ ಮುಖ್ಯಸ್ಥರಾಗಿರುತ್ತಾರೆ. ರಾಜ್ಯ ಗುಪ್ತಚರ ಇಲಾಖೆಯ (ಎಸ್‌ಐಡಿ) ಐಜಿಪಿ ಆಗಿ ಸ್ಥಾನ ಪಡೆದ ಕೃಷ್ಣ ಪ್ರಕಾಶ್ ಅವರಿಗೆ ಜೆಸಿಪಿ ಸ್ಥಾನಕ್ಕೆ (ಆಡಳಿತ) ವರ್ಗಾವಣೆ ನೀಡಲಾಗಿದೆ.
ರಾಜವರ್ಧನ್ ಅವರನ್ನು ಆರ್ಥಿಕ ಅಪರಾಧಗಳ ವಿಭಾಗದ ಜೆಸಿಪಿ ಸ್ಥಾನಕ್ಕೆ ನಿಯೋಜಿಸಲಾಗಿದೆ. ಅದೇ, ಅಮಿತೇಶ್ ಕುಮಾರ್ ಅವರನ್ನು ಎಸ್‌ಐಡಿಯ ನೂತನ ಜೆಸಿಪಿ ಆಗಿ ನೇಮಿಸಲಾಗಿದೆ. ದೀಪಕ್ ಪಾಂಡೆ ಅವರನ್ನು ಕಾರಾಗೃಹಗಳ ಇಲಾಖೆಯ ಐಜಿಪಿ ಆಗಿ ನೇಮಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.