ದುಡ್ಡು ಕೊಟ್ಟರೂ ಸಿಗುತ್ತಿಲ್ಲ ಜೀವಜಲ
36 ಹಳ್ಳಿಗಳಲ್ಲಿ ನೀರಿಗೆ ತೀವ್ರ ಬರ •ಬತ್ತಿದ ತುಂಗಭದ್ರಾ-ಕೃಷ್ಣಾ ನದಿಗಳು •ಬತ್ತಿದ 120 ಕೊಳವೆ ಬಾವಿಗಳು •ನೀರಿಗಾಗಿ ಅಲೆದಾಟ
Team Udayavani, May 17, 2019, 3:20 PM IST
ರಾಯಚೂರು: ತುಂಗಭದ್ರಾ ನದಿ ಸಂಪೂರ್ಣ ಬರಿದಾಗಿರುವುದು.
ರಾಯಚೂರು: ಮುಂಗಾರು-ಹಿಂಗಾರು ಸಂಪೂರ್ಣ ಕೈ ಕೊಟ್ಟು ಜಲಮೂಲಗಳೆಲ್ಲ ಬತ್ತಿ ಹೋಗಿದ್ದು, ಸಾಂಪ್ರದಾಯಿಕ ನೀರಿನ ಮೂಲಗಳಾಗಿದ್ದ ಕೊಳವೆ ಬಾವಿಗಳು ಕೂಡ ಈ ವರ್ಷ ಕೈ ಕೊಟ್ಟಿವೆ. ಇದರಿಂದ ದಿನೇ ದಿನೇ ಜಲ ಸಂಕಟ ಮಿತಿ ಮೀರುತ್ತಿದ್ದು, ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ 36 ಹಳ್ಳಿಗಳಲ್ಲಿ ತೀವ್ರ ನೀರಿನ ಸಮಸ್ಯೆ ಎದುರಾಗಿದೆ.
ಎರಡು ಜೀವನದಿಗಳಾದ ತುಂಗಭದ್ರಾ, ಕೃಷ್ಣೆ ಹರಿಯುವ ರಾಯಚೂರು ತಾಲೂಕಿ ನಲ್ಲಿಯೇ 21 ಹಳ್ಳಿಗಳಲ್ಲಿ ತೀವ್ರ ನೀರಿನ ಸಮಸ್ಯೆ ಇದೆ. ಎರಡೂ ನದಿಗಳು ಸಂಪೂರ್ಣ ಬತ್ತಿ ಹೋಗಿವೆ. ಜಿಲ್ಲೆಯಲ್ಲಿ 344 ಹಳ್ಳಿಗಳಲ್ಲಿ 398 ಹೊಸ ಬೋರ್‌ವೆಲ್ ಕೊರೆಸಿದ್ದು, ಅದರಲ್ಲಿ 268ರಲ್ಲಿ ಮಾತ್ರ ನೀರಿನ ಲಭ್ಯತೆಯಾಗಿದೆ. 120 ಕೊಳವೆ ಬಾವಿಗಳು ವಿಫಲಗೊಂಡಿವೆ. ಅದರಲ್ಲಿ ಇನ್ನೂ 25 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕವೇ ಕಲ್ಪಿಸಿಲ್ಲ. ಇಷ್ಟಾದರೂ ಬೇಸಿಗೆ ಮುಗಿಯುವುದರೊಳಗೆ ಇನ್ನೂ 176 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಲ್ಭಣಿಸುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತವೇ ತಿಳಿಸಿದೆ. ಮುಂಜಾಗ್ರತಾ ಕ್ರಮವಾಗಿ ಕೆರೆ ತುಂಬಿಸಿದರೂ ಈ ಬಾರಿ ಮೇನಲ್ಲಿ ನೀರಿನ ಅಭಾವ ಕಾಡತೊಡಗಿದೆ. ಮಳೆಗಾಲ ಕೈ ಕೊಟ್ಟ ಕಾರಣ ಈ ವರ್ಷ ಫೆಬ್ರವರಿಯಲ್ಲಿಯೇ ಬಿರು ಬೇಸಿಗೆ ಶುರುವಾಗಿದ್ದು, ಏಪ್ರಿಲ್-ಮೇ ತಿಂಗಳಲ್ಲಿ ನೆಲ ಕಾದ ಕೆಂಡದಂತಾಗಿದೆ. ಇಂಥ ತಾಪಮಾನಕ್ಕೆ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದು ಹಳೇ ಬೋರ್‌ವೆಲ್ಗಳು ಕೂಡ ನೀರಿಲ್ಲದೇ ಕೆಟ್ಟು ನಿಂತಿವೆ.
ನೀರಿಗಾಗಿ ಅಲೆದಾಟ: ಕೆಲವೆಡೆ ಬಳಕೆಗೆ ನೀರಿನ ಸಮಸ್ಯೆ ಇಲ್ಲದಿದ್ದರೂ ಕುಡಿಯಲೂ ಮಾತ್ರ ಕಿಮೀಗಟ್ಟಲೇ ಹೋಗಬೇಕಿದೆ. ಐದಾರು ಕಿಮೀ ದೂರದ ಗ್ರಾಮಗಳಿಗೆ ತೆರಳಿ ಶುದ್ಧೀಕರಣ ಘಟಕದಿಂದಲೋ ಇಲ್ಲ ಖಾಸಗಿ ಬೋರ್‌ಗಳಿಂದಲೋ ಸೈಕಲ್, ಬೈಕ್‌ಗಳ ಮೇಲೆ ನೀರು ತಂದುಕೊಳ್ಳುತ್ತಿದ್ದಾರೆ. ಇನ್ನು ನಗರಗಳಲ್ಲಿ 30 ರೂ. ಕೊಟ್ಟರೂ ಕುಡಿಯುವ ನೀರು ಸಕಾಲಕ್ಕೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಲಿಂಗಸುಗೂರು ಪಟ್ಟಣಕ್ಕೆ ನೀರು ಪೂರೈಸುವ ಕೆರೆ ತುಂಬಿದ್ದು, ಸದ್ಯಕ್ಕೆ ಅಲ್ಲಿಗೆ ನೀರಿನ ಸಮಸ್ಯೆ ತಲೆದೋರಿಲ್ಲ. ಆದರೆ, ಆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಮಾತ್ರ ಜನ ನಾನಾ ಪಡಿಪಾಟಲು ಪಡಬೇಕಿದೆ.
ಇನ್ನುಳಿದಂತೆ ರಾಯಚೂರು, ದೇವದುರ್ಗ, ಸಿಂಧನೂರು ಮತ್ತು ಮಾನ್ವಿ ತಾಲೂಕು ಕೇಂದ್ರಗಳಲ್ಲಿ ನೀರಿಗಾಗಿ ಹಾಹಾಕಾರ ಇದೆ. ಕೆರೆಗಳು, ತೆರೆದಬಾವಿಗಳು ಹಾಗೂ ಕೊಳವೆಬಾವಿಗಳು ಸಂಪೂರ್ಣ ಬತ್ತಿ ಹೋಗಿವೆ. ಆರ್‌ಟಿಪಿಎಸ್‌ಗಾಗಿ ಒಂದು ಟಿಎಂಸಿ ನೀರು ಹರಿಸುವ ಉದ್ದೇಶವಿದ್ದು, ಆ ನೀರು ಬಂದರೆ ಮಾತ್ರ ನದಿ ಪಾತ್ರ ಊರುಗಳ ಸಮಸ್ಯೆ ತಾತ್ಕಾಲಿಕವಾಗಿ ಶಮನಗೊಳ್ಳಲಿದೆ. ನಗರಕ್ಕೆ ಅತ್ತ ತುಂಗಭದ್ರಾ ಇತ್ತ ಕೃಷ್ಣ ನದಿಯಿಂದ ನೀರು ಹರಿಸುತ್ತಿದ್ದು, ಟಿಎಲ್ಬಿಸಿಯಿಂದ ರಾಂಪುರ ಕೆರೆ ತುಂಬಿಸಲಾಗಿದೆ. ಈಗ ಅದೂ ತಳ ಕಾಣುತ್ತಿದೆ. ಕೃಷ್ಣಾ ನದಿ ಬರಿದಾಗಿದ್ದು, ಜಾಕ್‌ವೆಲ್ನಲ್ಲಿ ನೀರಿಲ್ಲದಾಗಿದೆ.
ಜಿಲ್ಲೆಯಲ್ಲಿ 77 ಹಳ್ಳಿಗಳಲ್ಲಿ 86 ಖಾಸಗಿ ಬೋರ್‌ವೆಲ್ಗಳನ್ನು ಬಾಡಿಗೆ ಪಡೆದು ನೀರು ನೀಡಲಾಗುತ್ತಿದೆ. ನಾಲ್ಕು ಹಳ್ಳಿಗಳಿಗೆ ಎಂಟು ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ರಾಯಚೂರು ನಗರದ ಕೆಲ ವಾರ್ಡ್‌ಗಳಿಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ರಾಯಚೂರು ತಾಲೂಕು ಒಂದರಲ್ಲೇ 162 ಗ್ರಾಮಗಳ ಪೈಕಿ 34 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, 239 ಕೊಳವೆಬಾವಿಗಳು ಸ್ಥಗಿತಗೊಂಡಿವೆ. ಯರಗೇರಾ, ಯದ್ಲಾಪುರ ಗ್ರಾಪಂ ವ್ಯಾಪ್ತಿಯಲ್ಲಿ 28 ಕೊಳವೆ ಬಾವಿಗಳು ಕೆಟ್ಟು ನಿಂತಿವೆ. ತಾಲೂಕಿನಲ್ಲೇ 36 ಖಾಸಗಿ ಕೊಳವೆ ಬಾವಿ ಗುರುತಿಸಿ ಬಾಡಿಗೆ ಪಡೆಯಲಾಗಿದೆ.
•ಶರತ್ ಬಿ., ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.