ಯುವಕರಿಗೆ ಅರ್ಥೈಸುವುದೇ ಸವಾಲು


Team Udayavani, May 17, 2019, 5:13 PM IST

ram-1
ರಾಮನಗರ: ಭೂಮಿ, ನೀರು, ಗಾಳಿ ಕಲುಷಿತ ಗೊಂಡರೆ ಯಾವುದೇ ಜೀವ ಸಂಕುಲ ಉಳಿಯಲು ಸಾಧ್ಯವಿಲ್ಲ ಎಂಬುದನ್ನು ಇಂದಿನ ಯುವ ಪೀಳಿಗೆಗೆ ಅರ್ಥ ಮಾಡಿಸಬೇಕಾಗಿರುವುದೇ ಪ್ರಮುಖ ಸವಾಲಾಗಿದೆ ಎಂದು ಪ್ರಗತಿ ಪರ ಯುವ ರೈತ ಸುರೇಂದ್ರ ಅಭಿಪ್ರಾಯಪಟ್ಟರು.
ತಾಲೂಕಿನ ನಿಜಿಯಪ್ಪನದೊಡ್ಡಿ ಗ್ರಾಮದಲ್ಲಿ ಅವರ ತೋಟದಲ್ಲಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆವತಿಯಿಂದ ಏರ್ಪಡಿಸಿದ್ದ ಜನಪರ ಮಾಹಿತಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಿಸರ ಮತ್ತು ಕೃಷಿ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಕೊಂಡೋಯ್ಯುವ ನೂತನ ಪ್ರಯತ್ನದಲ್ಲಿ ತಾವು ತೊಡಗಿಸಿಕೊಂಡಿದ್ದು, ತಮ್ಮ ಪ್ರಯತ್ನಕ್ಕೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸಹಕಾರ ನೀಡಿವೆ, ಹೀಗಾಗಿಯೇ ತಮ್ಮ ತೋಟದಲ್ಲಿ ರಾಸಾಯ ನಿಕಗಳನ್ನು ಬಳಸದೆ ನೈಸರ್ಗಿಕ ಕೃಷಿ ಪದ್ಧªತಿ ಯನ್ನು ಅನುಸರಿಸುತ್ತಿದ್ದು, ಯಶಸ್ವಿಯಾಗಿರುವುದಾಗಿ ತಿಳಿಸಿದರು.
ಕೃಷಿ ಜೀವನದ ಸಾರ್ಥಕತೆ: ಹಳ್ಳಿಯ ಬದುಕು ಸಾಕೆಂದು ನಗರ ಪ್ರದೇಶದ ಕಡೆಗೆ ವಲಸೆ ಹೋಗುತ್ತಿರುವ ಯುವ ಸಮುದಾಯವನ್ನು ನೋಡಿದ್ದ ತಾವು ಕಳೆದ ಹತ್ತು ವರ್ಷಗಳ ಹಿಂದೆ ತಾವು ಸಹ ನಗರಕ್ಕೆ ವಲಸೆ ಹೋಗಿ ಅಲ್ಲಿನ ಬದುಕಿನಿಂದ ಬೇಸೆತ್ತು ಅಪ್ಪ ಕೊಟ್ಟಿರುವ ಭೂಮಿಯ ಕಡೆಗೆ ಮುಖ ಮಾಡಿ ಇಂದು ನೆಮ್ಮದಿಯ ಬದುಕು ಕಟ್ಟಿಕೊಂಡಿರು ವುದಾಗಿ ತಮ್ಮ ಜೀವನದ ಸಾರ್ಥಕತೆಯ ಬಗ್ಗೆ ಹೇಳಿದರು.
ಬದುಕು ಬದಲಿಸಿದ ಎಂಡೋಸಲ್ಫಾನ್‌!: ಹತ್ತು ವರ್ಷಗಳ ಹಿಂದೆ ಕೇರಳದ ಕಾಸರಗೋಡಿನಲ್ಲಿ ಗೋಡಂಬಿ ಬೆಳೆಗೆ ಅಂಟಿದ್ದ ರೋಗವನ್ನು ನಾಶ ಪಡಿಸಲು ಸಿಂಪಡಿಸಿದ ‘ಎಂಡೋ ಸಲ್ಫಾನ್‌’ ಜನರ ಮೇಲೆ ಬೀರಿದ ಅಡ್ಡ ಪರಿಣಾಮ ತಮ್ಮ ಚಿಂತನೆಯನ್ನು ಓರೆಗೆ ಹಚ್ಚಿತ್ತು. ಇಂತಹ ಭಯಾನಕ ರಾಸಾಯನಿಕವನ್ನು ಬಳಸಬೇಕೆ ಎಂಬ ಪ್ರಶ್ನೆ ಕಾಡಿತ್ತು. ಇದಕ್ಕೆ ತಮಗೆ ಸಿಕ್ಕ ಉತ್ತರ ನೈಸರ್ಗಿಕ ಕೃಷಿ ಪದ್ದತಿ. ಇದೇ ತಮ್ಮ ಜೀವನದ ದಿಕ್ಕನ್ನೆ ಬದಲಾಯಿಸಿತು, ನೈಸರ್ಗಿಕ ಕೃಷಿಯಲ್ಲೇ ಸಾಧನೆ ಮಾಡಬೇಕು ಎಂದು ಮನಸ್ಸು ಮಾಡಿ ಅಪ್ಪನ ಜಮೀನಿನನ್ನ ಕೃಷಿ ಆರಂಭಿಸಿದ್ದಾಗಿ ತಿಳಿಸಿದರು.
10 ವರ್ಷಕ್ಕಾಗುವಷ್ಟು ಬೀಜ ಸಂಗ್ರಹವಿದೆ: ಬೀಜಗಳ ಮೇಲೆ ಹಲವು ದೇಶಗಳು ಈಗಾಗಲೆ ಪೇಟೆಂಟ್‌ ಪಡೆದುಕೊಂಡು ತಮ್ಮ ಹಕ್ಕು ಸಾಧಿಸಿವೆ. ಇದು ಹೀಗೆಯೆ ಮುಂದುವರೆದರೆ ಭೂಮಿ ಇದ್ದರೂ ಬೆಳೆ ತೆಗೆಯಲು ಅನ್ಯರನ್ನು ಅವಲಂಬಿಸಬೇಕಾಗುತ್ತದೆ ಎಂಬುದನ್ನು ಅರಿತ ತಾವು ದೇಶಿ ಬೀಜ ಸಂಕರಕ್ಷಣೆಯ ಬಗ್ಗೆ ಚಿಂತನೆ ನಡೆಸಿ ಯಶಸ್ಸು ಕಂಡಿರುವುದಾಗಿ ವಿವರಿಸಿದರು. ಮುಂದಿನ ಹತ್ತು ವರ್ಷಗಳಿಗಾಗು ವಷ್ಟು ಬೀಜ ಸಂಗ್ರಹ ತಮ್ಮಲ್ಲಿದೆ ಎಂದರು.
ತರಕಾರಿ ಖರೀದಿಸುವುದಿಲ್ಲ: ತಮ್ಮ ಮೂರು ಎಕರೆ ಜಾಗದಲ್ಲಿ ಶ್ರೀಗಂಧ, ತೇಗ, ಮಹಾಘನಿ ಸೇರಿದಂತೆ ಬೆಲೆ ಬಾಳುವ ಮರಗಳನ್ನು ನೆಟ್ಟಿರುವುದಾಗಿ, ನುಗ್ಗೆ, ಹೀರೆಕಾರಿ, ಬೆಂಡೆಕಾಯಿ, ಪಡುವಲಕಾಯಿ, ಸೋರೇಕಾಯಿ, ಬದನೆಕಾಯಿ, ಹಸಿರು ಸೊಪ್ಪುಗಳು ಸೇರಿದಂತೆ ಎಲ್ಲಾ ನಿತ್ಯ ಉಪಯೋಗಿ ತರಕಾರಿಗಳನ್ನು ಬೆಳೆಯುತ್ತಿರುವುದಾಗಿ. ಬೇಳೆಕಾಳುಗಳನ್ನು ಬಿಟ್ಟರೆ ಮತ್ತಾವ ಹಸಿರು ತರಕಾರಿಗಳನ್ನು ತಮ್ಮ ಮನೆಗೆ ಖರೀದಿ ಮಾಡುವುದಿಲ್ಲ ಎಂದು ತಿಳಿಸಿದರು.
ಸಂಘ, ಸಂಸ್ಥೆಗಳ ಸಹಕಾರ: ತಮ್ಮ ಪ್ರಯತ್ನವನ್ನು ಗುರತಿಸಿ ಹಲವು ಸಂಘ, ಸಂಸ್ಥೆಗಳು ಮತ್ತು ಸರ್ಕಾರ ಪೋ›ತ್ಸಾಹ ಮತ್ತು ಸಹಕಾರ ನೀಡಿವೆ. ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಉತ್ತಮ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳುತ್ತಿರುವುದಾಗಿ. ತಮ್ಮ ತೋಟವನ್ನು ನೋಡಲು ಬರುವವರಿಗೆ ರಾಸಾಯನಿಕಗಳ ದುಷ್ಟರಿಣಾಮದ ಬಗ್ಗೆ ತಿಳಿ ಹೇಳುತ್ತಿರುವುದಾಗಿ ತಿಳಿಸಿದರು.
ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಸ್‌.ಶಂಕರಪ್ಪ ಮಾತನಾಡಿ ಯುವ ರೈತ ಸುರೇಂದ್ರ ಅವರು, ತಮಗಿರುವ ಕಡಿಮೆ ಜಾಗದಲ್ಲಿ ನೈಸರ್ಗಿಕ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಇತರ ರೈತರಿಗೆ ಮಾದರಿಯಾಗಿದ್ದಾರೆ. ಎರೆಹುಳು ಗೊಬ್ಬರ ತಯಾರಿಕೆ, ಜೀವಾಂಮೃತ ತಯಾರಿಕೆ, ಪಂಚಗವ್ಯ ತಯಾರಿಕೆ, ಬೀಜಾಂಮೃತ ತಯಾರಿಕೆಯನ್ನು ಸ್ವತಃ ಮಾಡಿ ಕೊಂಡು ಕೃಯಲ್ಲಿ ಯಶಸ್ಸು ಸಾಧಿಸುವ ಮೂಲಕ ಹಳ್ಳಿ ಬಿಟ್ಟು ನಗರದ ಕಡೆಗೆ ವಲಸೆ ಹೋಗುತ್ತಿರುವ ಯುವ ಸಮುದಾಯಕ್ಕೆ ಮಾರ್ಗದರ್ಶಕರಾಗಿದ್ದಾರೆ ಎಂದು ಶ್ಲಾಘಿಸಿದರು.
ಮಂಡ್ಯದ ಅನನ್ಯ ಹಾರ್ಟ್‌ ಸಂಸ್ಥೆಯ ಅಧ್ಯಕ್ಷೆ ಅನುಪಮ ಮಾತನಾಡಿದರು. ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಡ್ಯದ ಅನನ್ಯ ಹಾರ್ಟ್‌ ಸಂಸ್ಥೆ ಮತ್ತು ಪ್ರಕೃತಿ ಟ್ರಸ್ಟ್‌ ಸುಂದರವನ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಈ ನೂತನ ಕಾರ್ಯಕ್ರಮದಲ್ಲಿ ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಂದ ಸುಮಾರು ಐವತ್ತಕ್ಕು ಹೆಚ್ಚು ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.  ಎಸ್‌.ಶಂಕರಪ್ಪ

ಟಾಪ್ ನ್ಯೂಸ್

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

women-suside

CID Investigate: ಬೋವಿ ಹಗರಣದ ಆರೋಪಿ ಮಹಿಳಾ ಉದ್ಯಮಿ ಆತ್ಮಹ*ತ್ಯೆ

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Kota-Shrinivas

Udupi: ಟವರ್‌ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್‌ ದಾವೆ: ಸಂಸದ ಕೋಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

CM-Ramanagara

By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

women-suside

CID Investigate: ಬೋವಿ ಹಗರಣದ ಆರೋಪಿ ಮಹಿಳಾ ಉದ್ಯಮಿ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.