ಬಸ್ ಸಂಚಾರ ಕಾಣದ ಆನಗಳ್ಳಿ ಗ್ರಾಮ!
Team Udayavani, May 18, 2019, 6:00 AM IST
ಇತ್ತೀಚೆಗೆ ನಿರ್ಮಾಣವಾದ ಸೇತುವೆ.
ಬಸ್ರೂರು: ಕುಂದಾಪುರದಿಂದ ಪೂರ್ವಕ್ಕೆ ಕೇವಲ ನಾಲ್ಕು ಕಿ.ಮೀ.ದೂರದಲ್ಲಿರುವ ಆನಗಳ್ಳಿ ಗ್ರಾಮ ಇದುವರೆಗೂ ಬಸ್ ಸಂಚಾರವನ್ನೇ ಕಾಣದ ಊರು!
ಬಸ್ರೂರಿನಿಂದ ಕೋಣಿ ಮಾರ್ಗವಾಗಿ ಕುಂದಾಪುರಕ್ಕೆ ಹೋದರೆ 7 ಕೀ.ಮೀ. ಅದೇ ಆನಗಳ್ಳಿಯ ಮೂಲಕ ಸಂಚರಿಸಿದರೆ ಕುಂದಾಪುರಕ್ಕೆ ಕೇವಲ 4 ಕಿ.ಮೀ. ದೂರ.
ಕಳಂಜಿ, ಆನಗಳ್ಳಿ ಮತ್ತು ಮಾರ್ಗೋಳಿಯ ಕೆಲವು ಪ್ರದೇಶವೂ ಈ ಸಂಚಾರದ ದೌರ್ಭಾಗ್ಯಕ್ಕೆ ಒಳಪಡುತ್ತದೆ.ಆನಗಳ್ಳಿಯ ಜನಸಂಖ್ಯೆ 3060.ಇಲ್ಲಿನ ಕುಟುಂಬಗಳ ಸಂಖ್ಯೆ 915 . ಆನಗಳ್ಳಿಯ ಜನರು ಅತೀ ಸಣ್ಣ ಕೆಲಸಕ್ಕಾದರೂ ಕುಂದಾಪುರಕ್ಕೆ ಹೋಗಲೇಬೇಕಾದ ಅನಿವಾರ್ಯವಿದೆ.
ಸ್ವಂತ ದ್ವಿಚಕ್ರ ವಾಹನ ಉಳ್ಳವರು ಮಾತ್ರ ಸಂಚಾರದ ಅಡಚಣೆಯನ್ನು ಅನುಭವಿಸುತ್ತಿಲ್ಲ ಬಿಟ್ಟರೆ ಉಳಿದಂತೇ ಊರಿನ ಜನರೆಲ್ಲಾ ಸಂಚಾರ ಭಾಗ್ಯದಿಂದ ವಂಚಿತರಾಗಿದ್ದಾರೆ. ಬಾಡಿಗೆ ರಿಕ್ಷಾ ಮಾಡಿದರೆ ಕೇಳಿದಷ್ಟು ಹಣ ಕೊಡಬೇಕಾಗಿದೆ.
ಬಸ್ರೂರಿನಿಂದ ಸುಮಾರು ಅರ್ಧ ಕಿ.ಮೀ.ರಸ್ತೆಗೆ ಈಗಾಗಲೇ ಕಾಂಕ್ರೀಟ್ ಹಾಕಲಾಗಿದೆ. ಮುಂದಿನ ರಸ್ತೆಗೆ ಡಾಮರು ಹಾಕಲಾಗಿದ್ದು ಎಲ್ಲಿಯೂ ಹೊಂಡ ಬಿದ್ದಿಲ್ಲ. ಆದರೆ ಕೆಲವೆಡೆ ರಸ್ತೆಯ ಅಗಲ ಸ್ವಲ್ಪ ಕಿರಿದಾಗಿದ್ದರೂ ಸಂಚಾರಕ್ಕೆ ಸಮಸ್ಯೆಯಿಲ್ಲ.
ಆನಗಳ್ಳಿ ಸೇತುವೆ ಈಗಾಗಲೇ ಹೊಸತಾಗಿ ನಿರ್ಮಾಣವಾಗಿದೆ. ಇಲ್ಲಿನ ಜನರು ಪೇಟೆಗೆ ಬರಬೇಕಾದರೆ ಅತ್ತ ಕುಂದಾಪುರಕ್ಕಾದರೂ 4 ಕಿ.ಮೀ. ನಡೆಯಲೇ ಬೇಕು.ಇತ್ತ ಬಸೂÅರಿಗಾದರೂ 4 ಕಿ.ಮೀ. ನಡೆಯಲೇ ಬೇಕಾಗಿದೆ. ಈ ಮಾರ್ಗದಲ್ಲಿ ಒಂದು ಟ್ರಿಪ್ ಆದರೂ ಬಸ್ ಸಂಚರಿಸಿದರೆ ವಿದ್ಯಾರ್ಥಿಗಳಿಗೆ, ನಿತ್ಯ ಸಂಚಾರಿಗಳಿಗೆ ಅನುಕೂಲವಾಗುತ್ತದೆ ಎನ್ನುವುದು ಜನರ ಅಭಿಪ್ರಾಯ.
ನಡೆದೇ ಹೋಗಬೇಕು
ನಾವು ಆನಗಳ್ಳಿ ಶಾಲೆ ಹತ್ತಿರದ ನಿವಾಸಿಗಳು. ಏನು ಬೇಕಾದರೂ ಕುಂದಾಪುರಕ್ಕೆ ಇಲ್ಲಾ ಬಸೂÅರಿಗೆ ನಡೆದೇ ಸಂಚರಿಸಬೇಕಾಗಿದೆ. ಸ್ವಂತ ವಾಹನವನ್ನು ಹೊಂದಿಲ್ಲ. ಬಸ್ ಸಂಚಾರ ಆರಂಭವಾದರೆ ಅನುಕೂಲವಾಗುತ್ತದೆ.
-ನಾಗರಾಜ ,ಸ್ಥಳೀಯ ನಿವಾಸಿ
ಪ್ರಸ್ತಾವನೆ ಸಲ್ಲಿಸಲಾಗಿದೆ
ಆನಗಳ್ಳಿಯ ರಸ್ತೆಯ ಅಗಲೀಕರಣಕ್ಕಾಗಿ ವಿಶೇಷ ಗ್ರಾಮ ಸಭೆ ಕರೆದು ಲೋಕೋಪಯೋಗಿ ಇಲಾಖೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಲಾಖೆ ಮಂದಿಯೂ ಬಂದು ರಸ್ತೆಯನ್ನು ಪರಿಶೀಲಿಸಿ ಹೋಗಿದ್ದಾರೆ. ಜನರಿಗೆ ಬಸ್ ಸೌಕರ್ಯ ಒದಗಿಸಬೇಕೆಂಬುದು ನಮ್ಮ ಆಶಯ
-ಅನಿಲ್,
ಪಿಡಿಒ,ಆನಗಳ್ಳಿ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.