ಚರಿತ್ರೆಯನ್ನು ತಿಳಿಯೋಣ; ಮಾಹಿತಿ ಜತನವಾಗಿರಿಸೋಣ

ಇಂದು ವಿಶ್ವ ವಸ್ತು ಸಂಗ್ರಹಾಲಯ ದಿನ

Team Udayavani, May 18, 2019, 5:50 AM IST

25

ಐತಿಹಾಸಿಕ ಪರಂಪರೆ, ಸಂಸ್ಕೃತಿ, ಆರ್ಥಿಕ, ಸಾಮಾಜಿಕ, ರಾಜಕೀಯ ಬದುಕಿಗೆ ಕನ್ನಡಿ ಹಿಡಿಯುವಂಥದ್ದು ವಸ್ತು ಸಂಗ್ರಹಾಲಯಗಳು. ಪ್ರೇರಣಾದಾಯಿಯಾಗಿರುವ ಪುರಾತನ ವಸ್ತುಗಳು ಹಿಂದಿನ ತಲೆ ಮಾರುಗಳ ಸ್ಪಷ್ಟ ಚಿತ್ರಣ ನೀಡುತ್ತವೆ. ಇವುಗಳಿಗೆ ಭದ್ರತೆ ಸಿಗಬೇಕೆಂದೇ ವಸ್ತು ಸಂಗ್ರಹಾಲಯವನ್ನು ಕಟ್ಟಲಾಗಿದೆ. ಇಂಥ ವಸ್ತು ಸಂಗ್ರಹಾಲಯಗಳಿಗೆ ಜನರನ್ನು ಕರೆತರುವ, ಇಲ್ಲಿರುವ ವಸ್ತುಗಳನ್ನು ಪರಿಚಯಿಸುವ ಸಲುವಾಗಿ ಪ್ರತಿ ವರ್ಷ ಮೇ 18ರಂದು ವಿಶ್ವ ವಸ್ತು ಸಂಗ್ರಹಾಲಯ ದಿನವನ್ನು ಆಚರಿಸಲಾಗುತ್ತಿದೆ.

ಪ್ರತಿಯೊಂದು ದೇಶಕ್ಕೂ ಅದರದ್ದೇ ಆದ ರಾಜಕೀಯ, ಸಾಂಸ್ಕೃತಿಕ ಇತಿಹಾಸಗಳಿರುತ್ತವೆ. ಕಾಲಾನಂತರದಲ್ಲಿ ಈ ಅವುಗಳು ಚರಿತೆಯಲ್ಲಿ ಹುದುಗಿ ಹೋಗಿಬಿಡುತ್ತವೆ. ಅಲ್ಲಿನ ಜನರಲ್ಲಿ ಕೇವಲ ಅದೊಂದು ಕಟ್ಟು ಕಥೆಯಾಗಿ ಚಾಲ್ತಿಯಲ್ಲಿರುತ್ತವೆ. ಆದರೆ ಈ ಇತಿಹಾಸಗಳು ನಾಶವಾಗಿ ಹೋಗದಂತೆ ತಡೆಯುವ ಕೆಲಸ ವಸ್ತು ಸಂಗ್ರಹಾಲಯಗಳು ಮಾಡುತ್ತವೆ. ಯಾವುದೋ ಐತಿಹಾಸಿಕ ಘಟನೆಗೆ ಸಂಬಂಧಿಸಿದ ವಿಚಾರಗಳು ಉತ್ಕನದ ವೇಳೆ ಲಭಿಸಿದರೆ ಅವುಗಳನ್ನು ಸುರಕ್ಷಿತವಾಗಿ ಕಾಪಾಡಲು ವಸ್ತು ಸಂಗ್ರಹಾಲಯವೊಂದೇ ಮಾರ್ಗ.

ಸಂಸ್ಕೃತಿಯ ಕೆಲವು ಅದ್ಭುತಗಳನ್ನು ಮತ್ತು ಇತಿಹಾಸ ವಿಶೇಷ ವಸ್ತಗಳನ್ನು ಮುಂದಿನ ಜನಾಂಗಕ್ಕೆ ಕಾಯ್ದಿರಿಸಿಕೊಳ್ಳುವ ಕೆಲಸವನ್ನು ವಸ್ತು ಸಂಗ್ರಹಾಲಯಗಳು ಮಾಡುತ್ತವೆ. ಇದೊಂದು ಪರಂಪರೆಯನ್ನು ಕಾಯ್ದಿರಿಸಿಕೊಳ್ಳುವ ಸ್ಥಳವೆಂದರೂ ತಪ್ಪಾಗಲಾರದು. ಪುರಾತನ ವಸ್ತುಗಳು, ಚರಿತ್ರೆಯ ದೃಷ್ಟಿಯಿಂದ ಮಹತ್ವವುಳ್ಳದ್ದೆಂದೆನಿಸುವ ಎಲ್ಲ ವಸ್ತುಗಳನ್ನು ಸಂಗ್ರಹಾಲಯಗಳಲ್ಲಿ ಜೋಡಿಸಲಾಗುತ್ತದೆ.

ಇತಿಹಾಸ
ಮೇ 18ರಂದು ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ. ಚರಿತ್ರೆಯನ್ನು ಜತನವಾಗಿ ಕಾಪಾಡುವ ಸಂಗ್ರಹಾಲಯಗಳ ಮಹತ್ವವನ್ನು ತಿಳಿಸುವುದಕ್ಕೆ ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ವಸ್ತು ಸಂಗ್ರಹಾಲಯ ಕೌನ್ಸಿಲ್ 1977ರಲ್ಲಿ ಮೊದಲ ಬಾರಿಗೆ ಮ್ಯೂಸಿಯಂ ಡೇ ಅಥವಾ ವಸ್ತು ಸಂಗ್ರಹಾಲಯವನ್ನು ಆಚರಿಸಲು ನಿರ್ಧರಿಸುತ್ತದೆ. ಅದರ ಪ್ರಕಾರ ಪ್ರತಿ ವರ್ಷ ಮೇ 18ರಂದು ವಿಶ್ವಾದ್ಯಂತ ವಸ್ತು ಸಂಗ್ರಹಾಲಯ ದಿನವನ್ನು ಆಚರಿಸಲಾಗುತ್ತದೆ.

ಈ ದಿನದ ವಿಶೇಷವಾಗಿ ವರ್ಷಕ್ಕೆ ಒಂದು ಹೊಸ ಯೋಜನೆಗಳನ್ನು ರೂಪಿಸಲಾಗುತ್ತದೆ. ಇದರ ಮುಖ್ಯ ಉದ್ದೇಶವೇ ವಸ್ತು ಸಂಗ್ರಹಾಲಯಗಳ ಸಂರಕ್ಷಣೆ. ಮೊದಲ ಬಾರಿಗೆ ಆಚರಿಸಿದಾಗ ಬೃಹತ್‌ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅನಂತರ ಪ್ರತಿ ವರ್ಷ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಉಚಿತ ಪ್ರವಾಸ
ಕೆಲವು ಸಂಸ್ಥೆಗಳು ಈ ದಿನದಂದು ವಸ್ತು ಸಂಗ್ರಹಾಲಯಗಳಿಗೆ ಉಚಿತ ಪ್ರವಾಸವನ್ನು ಆಯೋಜಿಸುವುದರ ಮೂಲಕ ದಿನದ ಮಹತ್ವವನ್ನು ಜನರಿಗೆ ತಿಳಿಸುವ ಪ್ರಯತ್ನವನ್ನು ಮಾಡಲಾಗುತ್ತದೆ. ಐತಿಹಾಸಿಕ ಪರಂಪರೆ, ಸಂಸ್ಕೃತಿ, ಆರ್ಥಿಕ, ಸಾಮಾಜಿಕ, ರಾಜಕೀಯ ಬದುಕಿಗೆ ಕನ್ನಡಿ ಹಿಡಿಯುವಂಥದ್ದು ವಸ್ತು ಸಂಗ್ರಹಾಲಯಗಳು. ಪ್ರೇರಣಾದಾಯಿಯಾಗಿರುವ ಪುರಾತನ ವಸ್ತುಗಳು ಹಿಂದಿನ ತಲೆಮಾರುಗಳ ಸ್ಪಷ್ಟ ಚಿತ್ರಣ ನೀಡುತ್ತವೆ. ಇವುಗಳಿಗೆ ಭದ್ರತೆ ಸಿಗಬೇಕೆಂದೇ ವಸ್ತು ಸಂಗ್ರಹಾಲಯವನ್ನು ಕಟ್ಟಲಾಗಿದೆ. ಇಂಥ ವಸ್ತು ಸಂಗ್ರಹಾಲಯಗಳಿಗೆ ಜನರನ್ನು ಕರೆತರುವ, ಇಲ್ಲಿರುವ ವಸ್ತುಗಳನ್ನು ಪರಿಚಯಿಸುವ ಸಲುವಾಗಿ ಪ್ರತಿ ವರ್ಷ ಮೇ 18ರಂದು ವಿಶ್ವ ವಸ್ತು ಸಂಗ್ರಹಾಲಯ ದಿನವನ್ನು ಆಚರಿಸಲಾಗುತ್ತಿದೆ.

ಈ ಬಾರಿಯ ಥೀಮ್‌
ವಸ್ತು ಸಂಗ್ರಹಾಲಯಗಳನ್ನು ಸಾಂಸ್ಕೃತಿಕ ಕೇಂದ್ರಗಳನ್ನಾಗಿ ಮಾಡುವುದು ಮತ್ತು ಪರಂಪರೆಯನ್ನು ಭವಿಷ್ಯಕ್ಕೆ ಉಳಿಸುವ ಯೋಜನೆಯೊಂದಿಗೆ ಈ ಬಾರಿಯ ವಸ್ತು ಸಂಗ್ರಹಾಲಯ ದಿನವನ್ನು ಆಚರಿಸಲಾಗುತ್ತಿದೆ. ಇಂದು ಜಗತ್ತಿನಲ್ಲಿ ಬೇರೆ ಬೇರೆ ರೀತಿಯ ವಸ್ತು ಸಂಗ್ರಹಾಲಯಗಳಿವೆ. ಕೆಲವು ಖಾಸಗಿ ಒಡೆತನದಲ್ಲಿದ್ದರೆ ಇನ್ನು ಕೆಲವು ಸರಕಾರಿ ವಸ್ತು ಸಂಗ್ರಹಾಲಯಗಳಿವೆ. ಯಾಂತ್ರೀಕೃತ ಬದುಕಿನಲ್ಲಿ ಇಂದಿನ ದಿನಗಳೇ ಮರೆತು ಹೋಗುವಾಗ ಇತಿಹಾಸವನ್ನು ಭದ್ರವಾಗಿಡುವುದು ಒಂದು ಜವಾಬ್ದಾರಿಯೇ ಸರಿ. ಕೆಲವೊಂದು ಹುದುಗಿಹೋದ ಚರಿತ್ರೆಗಳೂ ವಸ್ತಗಳನ್ನು ನೋಡುವಾಗ ನೆನಪಿಗೆ ಬರುತ್ತವಾದರೆ ಅದಕ್ಕೆ ವಸ್ತು ಸಂಗ್ರಹಾಲಯಗಳೇ ಮುಖ್ಯ ಕಾರಣ.

•ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

ಟಾಪ್ ನ್ಯೂಸ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POLICE-5

Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

15

Mangaluru: ಚಿನ್ನದ ಬಿಸ್ಕೆಟ್‌ ಇದೆ ಎಂದು ನಂಬಿಸಿ 4 ಲಕ್ಷ ರೂ. ವಂಚನೆ

ssa

Mangaluru: ಮಾದಕ ವಸ್ತು ಸೇವನೆ; ಯುವಕ ವಶಕ್ಕೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.