ನೀರು ಸಂಗ್ರಹಕ್ಕಾಗಿ ಕೆಲಸಕ್ಕೆ ರಜೆ ಹಾಕುವ ಪರಿಸ್ಥಿತಿ…!


Team Udayavani, May 18, 2019, 6:00 AM IST

21

ಮಹಾನಗರ: ನಗರದಲ್ಲಿ ಕುಡಿಯುವ ನೀರು ಪೂರೈಕೆ ಸಮಸ್ಯೆಯಾದರೆ ಸಾರ್ವಜನಿಕರಿಗೆ ಮುಖ್ಯವಾಗಿ ಉದ್ಯೋಗಸ್ಥ ಕುಟುಂಬಗಳಿಗೆ ವಿತರಣೆಯಾಗುವ ನೀರನ್ನು ಸಂಗ್ರಹಿಸುವ ಚಿಂತೆ. ಇದರಿಂದಾಗಿ ಬಹಳಷ್ಟು ಕುಟುಂಬಗಳಿಗೆ ಕೆಲಸಕ್ಕೆ ರಜೆ ಮಾಡಿ ನೀರು ಸಂಗ್ರಹಿಸುವ ಪರಿಸ್ಥಿತಿ ಎದುರಾಗಿದೆ.

ನಗರದಲ್ಲಿ ಸದ್ಯ ನೀರು ರೇಷನಿಂಗ್‌ ಜಾರಿಯಲ್ಲಿದೆ. ಇದರಂತೆ ಮೂರು ದಿನ ನೀರು ಸ್ಥಗಿತ ಮಾಡಿ ನಾಲ್ಕು ದಿನ ನೀರು ಪೂರೈಕೆ ಮಾಡಲಾಗುತ್ತದೆ. ನೀರು ಪೂರೈಸುವ ನಾಲ್ಕು ದಿನಗಳ ಅವಧಿಯಲ್ಲಿ ದಿನವಿಡೀ ನೀರು ಬರುವುದಿಲ್ಲ. ಪ್ರತಿಯೊಂದು ಪ್ರದೇಶಕ್ಕೂ ಗಂಟೆಯ ಆಧಾರದಲ್ಲಿ ನೀರು ನೀಡಲಾಗುತ್ತದೆ. ಆಯಾಯ ಪ್ರದೇಶಗಳ ಜನರು ಈ ಅವಧಿಯಲ್ಲಿ ನೀರು ಸಂಗ್ರಹಿಸಿಡಬೇಕು.

ತುಂಬೆಯಿಂದ ನಗರದ ನೀರು ಸಂಗ್ರಹ ಸ್ಥಾವರಗಳಿಗೆ ಸರಬರಾಜು ಆರಂಭಗೊಂಡಾಗ ವಾಲ್ವ್ಮೆನ್‌ಗಳು ತಮ್ಮ ಪಂಪ್‌ಹೌಸ್‌ ವ್ಯಾಪ್ತಿಯ ನೀರು ವಿತರಣೆ ಮಾರ್ಗದ ಪ್ರದೇಶಗಳಿಗೆ ವಿತರಣೆ ಆರಂಭಿಸುತ್ತಾರೆ. ಒಂದು ಪ್ರದೇಶದ ವಾಲ್ವ್ಗಳನ್ನು ಒಪನ್‌ ಮಾಡಿ ಒಂದು ಅಥವಾ ಎರಡು ತಾಸು ನೀರು ನೀಡಿ ಬಂದ್‌ ಮಾಡುತ್ತಾರೆ. ಇನ್ನೊಂದು ಪ್ರದೇಶದ ವಾಲ್ವ್ ಒಪನ್‌ ಮಾಡಿ ಅಲ್ಲಿಗೆ ಅದೇ ರೀತಿ ನೀರು ನೀಡುತ್ತಾರೆ. ಎರಡು ದಿನಗಳಿಗೊಮ್ಮೆ ನೀರು ಪೂರೈಕೆಯಾಗುವ ಪ್ರದೇಶಗಳಿಗೆ ಇದೇ ವ್ಯವಸ್ಥೆ ಮುಂದುವರಿಯುತ್ತದೆ. ಮೂರು ದಿನ ಸ್ಥಗಿತದ ಬಳಿಕ ಬೆಳಗ್ಗೆ 6 ಗಂಟೆಗೆ ನೀರು ವಿತರಣೆ ಆರಂಭವಾಗುತ್ತದೆ ಎಂದು ಪ್ರಕಟನೆ ಹೇಳುತ್ತದೆಯಾದರೂ ಹೆಚ್ಚಿನ ಪ್ರದೇಶಗಳಿಗೆ ನೀರು ಬರುವಾಗ ರಾತ್ರಿಯಾಗುತ್ತದೆ.

ಪ್ರಸ್ತುತ ಉದ್ಯೋಗಸ್ಥ ಕುಟುಂಬಗಳಿಗೆ ಎದುರಾಗಿರುವ ಸಮಸ್ಯೆ ಎಂದರೆ ತಮ್ಮ ಪ್ರದೇಶಕ್ಕೆ ಯಾವಾಗ ನೀರು ಬರುತ್ತದೆ ಎಂಬುದನ್ನು ಕಾಯುವುದು. ದಿನದ ಯಾವುದೇ ಹೊತ್ತಿನಲ್ಲೂ ನೀರು ಬರಬಹುದು.

ಕೆಲಸಕ್ಕೆ ರಜೆ
ನೀರಿನ ಪ್ರಶರ್‌ ಇಲ್ಲದಿರುವುದರಿಂದ ಒವರ್‌ ಹೆಡ್‌ ಟ್ಯಾಂಕಿಗಳಿಗೆ ನೀರು ಹೋಗುವುದಿಲ್ಲ. ಅದುದರಿಂದ ಡ್ರಮ್‌ಗಳಲ್ಲಿ, ಬಕೇಟು ಇತ್ಯಾದಿಗಳಲ್ಲಿ ಸಂಗ್ರಹಿಸಿಡಬೇಕಾಗುತ್ತದೆ. ಗಂಡ ಹೆಂಡತಿ ಇಬ್ಬರೇ ಇರುವ ಮತ್ತು ಇಬ್ಬರೂ ಉದ್ಯೋಗದಲ್ಲಿರುವ ಮನೆಗಳಲ್ಲಿ ಹಗಲು ಹೊತ್ತು ಅಂದರೆ ಸಾಮಾನ್ಯವಾಗಿ ಬೆಳಗ್ಗೆ 8.30ರಿಂದ ಸಂಜೆ 6 ಗಂಟೆಯ ಅವಧಿಯಲ್ಲಿ ನೀರು ಬಂದರೆ ಆ ವೇಳೆ ಅವರು ಕಚೇರಿಗಳಲ್ಲಿ ಅಥವಾ ಕೆಲಸದ ತಾಣಗಳಲ್ಲಿರುವುದರಿಂದ ಅದನ್ನು ಸಂಗ್ರಹಿಸಿಡಲು ಸಾಧ್ಯವಾಗುವುದಿಲ್ಲ. ಸಂಗ್ರಹಿಸಿಡದಿದ್ದರೆ ಮತ್ತೆ ಮೂರು ದಿನ ನೀರು ಇರುವುದಿಲ್ಲ. ಆದುದರಿಂದ ಗಂಡ ಅಥವಾ ಹೆಂಡತಿಯ ಪೈಕಿ ಯಾರಾದರೊಬ್ಬರು ನೀರು ಹಿಡಿದಿಡಲು ಕೆಲಸಕ್ಕೆ ರಜೆ ಮಾಡಲೇ ಬೇಕು.

ಟ್ಯಾಂಕರ್‌ ನೀರಿನಲ್ಲೂ ಇದೇ ಸಮಸ್ಯೆ
ನೀರು ಪೂರೈಕೆ ಅವಧಿಯಲ್ಲೂ ನೀರು ಹೋಗದ ಎತ್ತರದ ಪ್ರದೇಶಗಳು ಸಹಿತ ಕೆಲವು ಪ್ರದೇಶಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ಇಲ್ಲೂ ಟ್ಯಾಂಕರ್‌ಗಳು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯೊಳಗೆ ನೀರು ಸರಬರಾಜು ಮಾಡುತ್ತವೆ. ಈ ಅವಧಿಯಲ್ಲಿ ಉದ್ಯೋಗಸ್ಥ ಕುಟುಂಬಗಳ ಸದಸ್ಯರು ಕಚೇರಿಯಲ್ಲಿರುತ್ತಾರೆ. ಅದುದರಿಂದ ಈ ನೀರು ಅವರಿಗೆ ಪ್ರಯೋಜನಕ್ಕೆ ಬರುವುದಿಲ್ಲ.

ಸಮಸ್ಯೆಗೆ ಪರಿಹಾರ ಎಂದರೆ ಬೆಳಗಿನ ಜಾವದಿಂದ ಆರಂಭಿಸಿ 8 ಗಂಟೆಯವರೆಗೆ ಹಾಗೂ ಸಂಜೆ 6 ಗಂಟೆಯಿಂದ ರಾತ್ರಿವರೆಗೆ ನೀರು ಪೂರೈಕೆಯಾದರೆ ಉದ್ಯೋಗಸ್ಥ ಕುಟುಂಬಗಳಿಗೂ ನೀರು ಲಭ್ಯವಾಗುತ್ತದೆ. ಒಟ್ಟಾರೆಯಾಗಿ ನೀರಿನ ಸರಬರಾಜು ವೇಳಾಪಟ್ಟಿಯಲ್ಲಿ ಸಣ್ಣ ಬದಲಾವಣೆ ಮಾಡಿದರೆ ಸಮಸ್ಯೆ ಪರಿಹರಿಸಲು ಸಾಧ್ಯ

ಟಾಪ್ ನ್ಯೂಸ್

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

POLICE-5

Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

10-thirthahalli

Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?

3

Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.