ನರಸಿಂಹನಾಗಿ ಬಂದನೋ ಭಗವಂತ…


Team Udayavani, May 18, 2019, 10:32 AM IST

31

ಕಂಬದಿಂದ ಹೊರಬಂದ ಶ್ರೀನರಸಿಂಹ ಸ್ವಾಮಿಯು ಅತಿ ಕೋಪದಿಂದ ಹಿರಣ್ಯಕಶಿಪುವನ್ನು ಕೊಂದಮೇಲೆ ಆ ಕೋಪವನ್ನು ಶಮನ ಮಾಡಲು ಅಲ್ಲಿ ನೆರೆದಿದ್ದ ಬ್ರಹ್ಮಾದಿ ದೇವತೆಗಳಲ್ಲಿ ಯಾರಿಗೂ, ಶ್ರೀ ಲಕ್ಷ್ಮೀಗೂ ಧೈರ್ಯವಾಗಲಿಲ್ಲ. ಆದರೆ ಪ್ರಹ್ಲಾದನು ಪರಮಾತ್ಮನ ಬೆಳಕನ್ನು ಎಲ್ಲೆಡೆ ನೋಡುತ್ತಾ ಭಯವೇ ಇಲ್ಲದೆ ಶ್ರೀ ನರಸಿಂಹ ಸ್ವಾಮಿಯ ಬಳಿಗೆ ಹೋಗಿ ಮುಗ್ಧತೆಯಿಂದ, ಭಕ್ತಿಯಿಂದ ಸ್ತುತಿಸಿದ.

ಭಗವಂತನು ಸರ್ವವ್ಯಾಪಿ, ಸರ್ವಶಕ್ತ ಹಾಗೂ ಸರ್ವಾಂತರ್ಯಾಮಿ. ಈ ತತ್ವದಲ್ಲಿ ನಂಬಿಕೆಯನ್ನಿಟ್ಟುಕೊಂಡು ಜೀವನದಲ್ಲಿ ಉದಾತ್ತಧ್ಯೇಯವನ್ನು ಹೊಂದಿ ಪರರಿಗೆ ಹಿಂಸೆಮಾಡದೆ ಜೀವನಮಾಡುವವರೇ ಶಿಷ್ಟರು. ಇದಕ್ಕೆ ವಿರುದ್ಧವಾಗಿ ಪರಮಾತ್ಮ ತತ್ವವನ್ನು ತಿರಸ್ಕರಿಸಿ ತನ್ನನ್ನೇ ಭಗವಂತನೆಂದುಕೊಂಡು ಪರರನ್ನು ಹಿಂಸಿಸುವರೇ ದುಷ್ಟರು. ಯಾವಾಗ ದುಷ್ಟರ ಹಾವಳಿಯು ಮಿತಿಮೀರುತ್ತದೆಯೋ ಆಗ ಶಿಷ್ಟರ ರಕ್ಷ$ಣೆಯನ್ನು ಮಾಡಿ ದುಷ್ಟರನ್ನು ಶಿಕ್ಷಿಸುವುದಕ್ಕಾಗಿ ಭಗವಂತನು ವ್ಯಕ್ತವಾಗುವುದೇ ಅವತಾರ. ಭಗವಂತನ ಎಲ್ಲ ಅವತಾರಗಳಲ್ಲಿ ಶ್ರೀನರಸಿಂಹಾವತಾರವು ಅತಿ ವೈಶಿಷ್ಟ್ಯತೆಯನ್ನು ಹೊಂದಿದೆ. ನರಸಿಂಹಸ್ವಾಮಿಯ ದೇವಾಲಯಗಳೂ ಬಹಳವಾಗಿವೆ.

ಭಗವಂತನ ಈ ಅವತಾರದ ವೈಭವವು ಅಥರ್ವವೇದ ಸಂಹಿತೆ, ನಾರಸಿಂಹ ತಾಪನೀಯ ಉಪನಿಷತ್ತು, ಮಹಾಭಾರತ, ಹರಿವಂಶ , ಶ್ರೀಮದ್ಭಾಗವತ ಮಹಾ ಪುರಾಣ ಮುಂತಾದ ಮಹಾಗ್ರಂಥಗಳಲ್ಲಿ ವಿಸ್ತಾರವಾಗಿ ವರ್ಣಿಸಲ್ಪಟ್ಟಿದೆ. ಈ ಅವತಾರದ ಕಥೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ. ಇದರ ಹಿಂದಿರುವ ತತ್ವ ಹಾಗು ವೈಶಿಷ್ಟ್ಯತೆಯು ರೋಚಕವಾಗಿದೆ ಹಾಗು ಸ್ಪೂರ್ತಿಯುತವಾಗಿದೆ.

ಶ್ರೀಮದ್ಭಾಗವತ ಮಹಾ ಪುರಾಣ ಮಾತು
ಸತ್ಯಂ ವಿಧಾತುಂ ನಿಜಭೃತ್ಯ ಭಾಷಿತಂ ವ್ಯಾಪ್ತಿಮ… ಚ ಭೂತೇಷÌಖೀಲೇಷುಚಾತ್ಮನಃ ಅದೃಶ್ಯತಾತ್ಯದ್ಭುತ ರೂಪಮುದ್ವಹನನ್‌ ಸ್ತಂಭೇ ಸಭಾಯಾಂ ನ ಮೃಗಂ ನ ಮಾನುಷಂ. ಈ ಶ್ಲೋಕದ ಅರ್ಥ (ಭಾರತ ದರ್ಶನ ಪ್ರಕಾಶನದ ಭಾಗವತದಂತೆ) ಹೀಗಿದೆ.

ಒಡನೆಯೇ ಅಲ್ಲಿ ಸಭೆಯ ಕಂಭದಲ್ಲಿ ಅತ್ಯದ್ಭುತವಾದ ರೂಪದಿಂದ ಪ್ರಕಟಗೊಂಡ ಪರಮಪುರುಷ, ಕೇವಲ ಮೃಗ ಎನ್ನುವಂತಿಲ್ಲ. ಕೇವಲ ಮನುಷ್ಯ ಎಂದೂ ಹೇಳುವಂತಿಲ್ಲ. ಇಂತಹ ಮೃಗ-ಮಾನುಷರೂಪಗಳೆರಡೂ ಕೂಡಿದ ರೂಪದಿಂದ ಕಾಣಿಸಿಕೊಂಡನು. ತನ್ನ ಭೃತ್ಯನಾದ ಪ್ರಹ್ಲಾದ ಕುಮಾರನ ಮತ್ತು ಬ್ರಹ್ಮದೇವರ ಮಾತುಗಳನ್ನು ಸತ್ಯಗೊಳಿಸುವುದಕ್ಕೋಸ್ಕರವೂ ಮತ್ತು ತಾನು ಸಮಸ್ತ ಭೂತಗಳಲ್ಲಿಯೂ ವ್ಯಾಪಿಸಿರುವೆನೆಂಬುದನ್ನು ಪ್ರಮಾಣಿಸುವುದಕ್ಕೋಸ್ಕರವೂ ಸ್ವಾಮಿಯು ಹಾಗೆ ಪ್ರಕಟವಾದನು.

ಅವತಾರಕ್ಕೆ ಮೂರು ಕಾರಣಗಳು
ಈ ವಿಶಿಷ್ಟವಾದ ಅವತಾರಕ್ಕೆ ಮೂರು ಕಾರಣಗಳನ್ನು ಕಾಣಬಹುದು. ಮೊದಲನೆಯದಾಗಿ, ಹುಟ್ಟಿನಿಂದಲೇ ಭಗವಂತನಲ್ಲಿ ಅನನ್ಯ ಹಾಗು ಸಂಶಯರಹಿತ ಪೂರ್ಣ ಭಕ್ತಿಯುಳ್ಳ ಪ್ರಹ್ಲಾದನ ಮಾತನ್ನು ಹಾಗು ದೈತ್ಯರಾಜನಾದ ಹಿರಣ್ಯಕಶಿಪುವು ಕೇಳಿದ ವಿಶೇಷವಾದ ವರವನ್ನು ನೀಡಿದ ಸೃಷ್ಟಿಕರ್ತ ಬ್ರಹ್ಮನ ಮಾತನ್ನು ನಿಜಗೊಳಿಸುವುದು. ಎರಡನೆಯದಾಗಿ ತೀವ್ರವಾದ ತಪಸ್ಸು ಹಾಗೂ ಸಾಧನೆ ಮಾಡಿ ಸೃಷ್ಟಿಕರ್ತ ಬ್ರಹ್ಮನನ್ನು ಒಲಿಸಿಕೊಂಡ ಹಿರಣ್ಯಕಶಿಪುವಿನಂತಹ ಯಾರೇ ಆಗಲಿ, ಎಲ್ಲೆಡೆಯೂ ಇರುವ ಹಾಗು ಎಲ್ಲಕ್ಕೂ ಮೂಲವಾಗಿರುವ ಪರಮಾತ್ಮನ ಶಕ್ತಿಯನ್ನು ಯಾರೂ ಮೀರಲು ಸಾಧ್ಯವಿಲ್ಲವೆಂದು ತೋರಿಸುವುದು. ಮೂರನೆಯದಾಗಿ, ಪರಮಾತ್ಮನು ಶಕ್ತಿಯ ರೂಪದಲ್ಲಿ ಪ್ರಪಂಚದ ಎಲ್ಲೆಡೆ ಅಂದರೆ ಎಲ್ಲ ಚೈತನ್ಯವಿರುವ ಜೀವಜಂತುಗಳಷ್ಟೇ ಅಲ್ಲದೆ ಎಲ್ಲೆಡೆಯಿರುವ ಜಡವಸ್ತುಗಳಲ್ಲಿಯೂ ಸಹ ತುಂಬಿಕೊಂಡಿ¨ªಾನೆ ಎಂದು ತೋರಿಸುವುದು.

ಭಯವನ್ನು ದಾಟಿದ್ದ ಭಕ್ತ ಪ್ರಹ್ಲಾದ
ಸರ್ವಶಕ್ತನಾದ ಪರಮಾತ್ಮನನ್ನು ತಿರಸ್ಕರಿಸಿ ತನನ್ನೇ ಸರ್ವಶಕ್ತನೆಂದು ತನ್ನನ್ನೇ ಎಲ್ಲರೂ ಪೂಜಿಸಬೇಕೆಂದು ತನ್ನ ರಾಜ್ಯದಲ್ಲಿ ನಿಯಮವನ್ನು ಜಾರಿಗೆ ತಂದಿದ್ದರೂ ರಾಕ್ಷ$ಸ ರಾಜ ಹಿರಣ್ಯಕಶಿಪುವಿಗೆ ತನ್ನ ಮಗನಾದ ಬಾಲಕ ಪ್ರಹ್ಲಾದನ ಮೇಲೆ ಅದನ್ನು ಜಾರಿಗೆ ತರಲಾಗಲಿಲ್ಲ. ಏಕೆಂದರೆ, ಪ್ರಹ್ಲಾದನ ಒಳಗಣ್ಣು ಅವನ ಹುಟ್ಟಿನಿಂದಲೇ ಬೆಳೆದಿದ್ದ ಪರಮಾತ್ಮನ ಅನನ್ಯ ಭಕ್ತಿಯಿಂದ ತೆರೆದಿತ್ತು. ಆ ತೆರೆದಿದ್ದ ಒಳಗಣ್ಣಿನಿಂದ ಹಾಗೂ ಹೊರಗಣ್ಣಿನಿಂದ ಪ್ರಹ್ಲಾದನು ಎಲ್ಲೆಡೆಯೂ ಮತ್ತು ತನ್ನ ತಂದೆಯಲ್ಲಿಯೂ ಆ ಪರಮಾತ್ಮನ ಶಕ್ತಿಯ ಬೆಳಕನ್ನು ನೋಡುತ್ತಿದ್ದನು. ಸದಾ ಕಾಲದಲ್ಲಿಯೂ ಎಲ್ಲೆಡೆಯೂ ಹರಡಿದ್ದ ಬೆಳಕನ್ನು ನೋಡುತ್ತಿದ್ದ ಪ್ರಹ್ಲಾದನಿಗೆ ಮರಣಭಯವೂ ಇರಲಿಲ್ಲ. ಆದ್ದರಿಂದಲೇ ತಂದೆ ವಿಧಿಸಿದ ಮರಣ ಶಿಕ್ಷೆಯನ್ನು ಸದಾ ಪರಮಾತ್ಮನ ಸ್ಮರಣೆಯಿಂದ ಬೆಳಕನ್ನು ನೋಡುತ್ತಾ ಯಾವ ಭಯವೂ ಇಲ್ಲದೆ ಪರಮಾತ್ಮನ ರಕ್ಷ$ಣೆಯಲ್ಲಿದ್ದನು.
ಕಂಬದಿಂದ ಹೊರಬಂದ ಶ್ರೀನರಸಿಂಹ ಸ್ವಾಮಿಯು ಅತಿ ಕೋಪದಿಂದ ಹಿರಣ್ಯಕಶಿಪುವನ್ನು ಕೊಂದಮೇಲೆ ಆ ಕೋಪವನ್ನು ಶಮನ ಮಾಡಲು ಅಲ್ಲಿ ನೆರೆದಿದ್ದ ಬ್ರಹ್ಮಾದಿ ದೇವತೆಗಳಲ್ಲಿ ಯಾರಿಗೂ, ಶ್ರೀ ಲಕ್ಷಿ$¾ಗೂ ಧೈರ್ಯವಾಗಲಿಲ್ಲ. ಆದರೆ ಪ್ರಹ್ಲಾದನು ಪರಮಾತ್ಮನ ಬೆಳಕನ್ನು ಎಲ್ಲೆಡೆ ನೋಡುತ್ತಾ ಭಯವೇ ಇಲ್ಲದೆ ಶ್ರೀ ನರಸಿಂಹ ಸ್ವಾಮಿಯ ಬಳಿಗೆ ಹೋಗಿ ಮುಗ್ಧತೆಯಿಂದ, ಭಕ್ತಿಯಿಂದ ಸ್ತುತಿಸಿದ. ಆ ಶುದ್ಧ ಮುಗ್ಧತೆಗೆ ಕರಗಿದ ಶ್ರೀ ನರಸಿಂಹ ಸ್ವಾಮಿಯು ಶಾಂತನಾಗಿ ಪ್ರಹ್ಲಾದನನ್ನು ಹರಸಿದನು. ಅಷ್ಟೇ ಅಲ್ಲದೇ, ಯಾರೇ ಆಗಲಿ; ಪ್ರಹ್ಲಾದನಂತೆ ಸದಾ ಶುದ್ಧ ಮುಗ್ಧ ಅನನ್ಯ ಭಕ್ತರಾಗುತ್ತಾರೆಯೋ ಅವರಿಗೂ ಶ್ರೀ ನರಸಿಂಹ ಸ್ವಾಮಿಯ ಕೃಪೆ ಹಾಗೂ ಅಂತದರ್ಶನವಾಗುತ್ತದೆ ಎಂದೂ ಹೇಳಿದ. ಕ್ರುದ್ದನಾಗಿದ್ದ ಭಗವಂತನೂ ಅತ್ಯಂತ ಸುಲಭವಾಗಿ ಒಲಿಸಿಕೊಂಡನಲ್ಲ; ಆತನ ಕೃಪೆಗೆ ಪಾತ್ರನಾದನಲ್ಲ? ಆ ಕಾರಣದಿಂದಲೇ ಪ್ರಹ್ಲಾದನು ಭಕ್ತರಲ್ಲಿ ಅಗ್ರಗಣ್ಯ.

ಡಾ.ಎಂ.ಜಿ.ಪ್ರಸಾದ್‌

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.