ಚರಿತ್ರೆಯನ್ನು ತಿಳಿಯೋಣ; ಮಾಹಿತಿ ಜತನವಾಗಿರಿಸೋಣ
ಇಂದು ವಿಶ್ವ ವಸ್ತು ಸಂಗ್ರಹಾಲಯ ದಿನ
Team Udayavani, May 18, 2019, 11:07 AM IST
ಐತಿಹಾಸಿಕ ಪರಂಪರೆ, ಸಂಸ್ಕೃತಿ, ಆರ್ಥಿಕ, ಸಾಮಾಜಿಕ, ರಾಜಕೀಯ ಬದುಕಿಗೆ ಕನ್ನಡಿ ಹಿಡಿಯುವಂಥದ್ದು ವಸ್ತು ಸಂಗ್ರಹಾಲಯಗಳು. ಪ್ರೇರಣಾದಾಯಿಯಾಗಿರುವ ಪುರಾತನ ವಸ್ತುಗಳು ಹಿಂದಿನ ತಲೆಮಾರುಗಳ ಸ್ಪಷ್ಟ ಚಿತ್ರಣ ನೀಡುತ್ತವೆ. ಇವುಗಳಿಗೆ ಭದ್ರತೆ ಸಿಗಬೇಕೆಂದೇ ವಸ್ತು ಸಂಗ್ರಹಾಲಯವನ್ನು ಕಟ್ಟಲಾಗಿದೆ. ಇಂಥ ವಸ್ತು ಸಂಗ್ರಹಾಲಯಗಳಿಗೆ ಜನರನ್ನು ಕರೆತರುವ, ಇಲ್ಲಿರುವ ವಸ್ತುಗಳನ್ನು ಪರಿಚಯಿಸುವ ಸಲುವಾಗಿ ಪ್ರತಿ ವರ್ಷ ಮೇ 18ರಂದು ವಿಶ್ವ ವಸ್ತು ಸಂಗ್ರಹಾಲಯ ದಿನವನ್ನು ಆಚರಿಸಲಾಗುತ್ತಿದೆ.
ಪ್ರತಿಯೊಂದು ದೇಶಕ್ಕೂ ಅದರದ್ದೇ ಆದ ರಾಜಕೀಯ, ಸಾಂಸ್ಕೃತಿಕ ಇತಿಹಾಸಗಳಿರುತ್ತವೆ. ಕಾಲಾನಂತರದಲ್ಲಿ ಈ ಅವುಗಳು ಚರಿತೆಯಲ್ಲಿ ಹುದುಗಿ ಹೋಗಿಬಿಡುತ್ತವೆ. ಅಲ್ಲಿನ ಜನರಲ್ಲಿ ಕೇವಲ ಅದೊಂದು ಕಟ್ಟು ಕಥೆಯಾಗಿ ಚಾಲ್ತಿಯಲ್ಲಿರುತ್ತವೆ. ಆದರೆ ಈ ಇತಿಹಾಸಗಳು ನಾಶವಾಗಿ ಹೋಗದಂತೆ ತಡೆಯುವ ಕೆಲಸ ವಸ್ತು ಸಂಗ್ರಹಾಲಯಗಳು ಮಾಡುತ್ತವೆ. ಯಾವುದೋ ಐತಿಹಾಸಿಕ ಘಟನೆಗೆ ಸಂಬಂಧಿಸಿದ ವಿಚಾರಗಳು ಉತVನದ ವೇಳೆ ಲಭಿಸಿದರೆ ಅವುಗಳನ್ನು ಸುರಕ್ಷಿತವಾಗಿ ಕಾಪಾಡಲು ವಸ್ತು ಸಂಗ್ರಹಾಲಯವೊಂದೇ ಮಾರ್ಗ.
ಸಂಸ್ಕೃತಿಯ ಕೆಲವು ಅದ್ಭುತಗಳನ್ನು ಮತ್ತು ಇತಿಹಾಸ ವಿಶೇಷ ವಸ್ತಗಳನ್ನು ಮುಂದಿನ ಜನಾಂಗಕ್ಕೆ ಕಾಯ್ದಿರಿಸಿಕೊಳ್ಳುವ ಕೆಲಸವನ್ನು ವಸ್ತು ಸಂಗ್ರಹಾಲಯಗಳು ಮಾಡುತ್ತವೆ.
ಇದೊಂದು ಪರಂಪರೆಯನ್ನು ಕಾಯ್ದಿರಿಸಿಕೊಳ್ಳುವ ಸ್ಥಳವೆಂದರೂ ತಪ್ಪಾಗಲಾರದು. ಪುರಾತನ ವಸ್ತುಗಳು, ಚರಿತ್ರೆಯ ದೃಷ್ಟಿಯಿಂದ ಮಹತ್ವವುಳ್ಳದ್ದೆಂದೆನಿಸುವ ಎಲ್ಲ ವಸ್ತುಗಳನ್ನು ಸಂಗ್ರಹಾಲಯಗಳಲ್ಲಿ ಜೋಡಿಸಲಾಗುತ್ತದೆ.
ಇತಿಹಾಸ
ಮೇ 18ರಂದು ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ. ಚರಿತ್ರೆಯನ್ನು ಜತನವಾಗಿ ಕಾಪಾಡುವ ಸಂಗ್ರಹಾಲಯಗಳ ಮಹತ್ವವನ್ನು ತಿಳಿಸುವುದಕ್ಕೆ ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ವಸ್ತು ಸಂಗ್ರಹಾಲಯ ಕೌನ್ಸಿಲ್ 1977ರಲ್ಲಿ ಮೊದಲ ಬಾರಿಗೆ ಮ್ಯೂಸಿಯಂ ಡೇ ಅಥವಾ ವಸ್ತು ಸಂಗ್ರಹಾಲಯವನ್ನು ಆಚರಿಸಲು ನಿರ್ಧರಿಸುತ್ತದೆ. ಅದರ ಪ್ರಕಾರ ಪ್ರತಿ ವರ್ಷ ಮೇ 18ರಂದು ವಿಶ್ವಾದ್ಯಂತ ವಸ್ತು ಸಂಗ್ರಹಾಲಯ ದಿನವನ್ನು ಆಚರಿಸಲಾಗುತ್ತದೆ.
ಈ ದಿನದ ವಿಶೇಷವಾಗಿ ವರ್ಷಕ್ಕೆ ಒಂದು ಹೊಸ ಯೋಜನೆಗಳನ್ನು ರೂಪಿಸಲಾಗುತ್ತದೆ. ಇದರ ಮುಖ್ಯ ಉದ್ದೇಶವೇ ವಸ್ತು ಸಂಗ್ರಹಾಲಯಗಳ ಸಂರಕ್ಷಣೆ. ಮೊದಲ ಬಾರಿಗೆ ಆಚರಿಸಿದಾಗ ಬೃಹತ್ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅನಂತರ ಪ್ರತಿ ವರ್ಷ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಉಚಿತ ಪ್ರವಾಸ
ಕೆಲವು ಸಂಸ್ಥೆಗಳು ಈ ದಿನದಂದು ವಸ್ತು ಸಂಗ್ರಹಾಲಯಗಳಿಗೆ ಉಚಿತ ಪ್ರವಾಸವನ್ನು ಆಯೋಜಿಸುವುದರ ಮೂಲಕ ದಿನದ ಮಹತ್ವವನ್ನು ಜನರಿಗೆ ತಿಳಿಸುವ ಪ್ರಯತ್ನವನ್ನು ಮಾಡಲಾಗುತ್ತದೆ.
ಈ ಬಾರಿಯ ಥೀಮ್
ವಸ್ತು ಸಂಗ್ರಹಾಲಯಗಳನ್ನು ಸಾಂಸ್ಕೃತಿಕ ಕೇಂದ್ರಗಳನ್ನಾಗಿ ಮಾಡುವುದು ಮತ್ತು ಪರಂಪರೆಯನ್ನು ಭವಿಷ್ಯಕ್ಕೆ ಉಳಿಸುವ ಯೋಜನೆಯೊಂದಿಗೆ ಈ ಬಾರಿಯ ವಸ್ತು ಸಂಗ್ರಹಾಲಯ ದಿನವನ್ನು ಆಚರಿಸಲಾಗುತ್ತಿದೆ.
ಇಂದು ಜಗತ್ತಿನಲ್ಲಿ ಬೇರೆ ಬೇರೆ ರೀತಿಯ ವಸ್ತು ಸಂಗ್ರಹಾಲಯಗಳಿವೆ. ಕೆಲವು ಖಾಸಗಿ ಒಡೆತನದಲ್ಲಿದ್ದರೆ ಇನ್ನು ಕೆಲವು ಸರಕಾರಿ ವಸ್ತು ಸಂಗ್ರಹಾಲಯಗಳಿವೆ. ಯಾಂತ್ರೀಕೃತ ಬದುಕಿನಲ್ಲಿ ಇಂದಿನ ದಿನಗಳೇ ಮರೆತು ಹೋಗುವಾಗ ಇತಿಹಾಸವನ್ನು ಭದ್ರವಾಗಿಡುವುದು ಒಂದು ಜವಾಬ್ದಾರಿಯೇ ಸರಿ. ಕೆಲವೊಂದು ಹುದುಗಿಹೋದ ಚರಿತ್ರೆಗಳೂ ವಸ್ತಗಳನ್ನು ನೋಡುವಾಗ ನೆನಪಿಗೆ ಬರುತ್ತವಾದರೆ ಅದಕ್ಕೆ ವಸ್ತು ಸಂಗ್ರಹಾಲಯಗಳೇ ಮುಖ್ಯ ಕಾರಣ.
ಸುಶ್ಮಿತಾ ಶೆಟ್ಟಿ ಸಿರಿಬಾಗಿಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Rey Mysterio Sr: ಖ್ಯಾತ ರೆಸ್ಲರ್ ರೇ ಮಿಸ್ಟೀರಿಯೊ ಸೀನಿಯರ್ ಇನ್ನಿಲ್ಲ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.