ಭರದಿಂದ ನಡೆಯುತ್ತಿರುವ ಕೋಸ್ಟಲ್ ರೋಡ್ ನಿರ್ಮಾಣ ಕಾರ್ಯ
Team Udayavani, May 18, 2019, 12:53 PM IST
ಮುಂಬಯಿ: ಬಾಂಬೇ ಹೈಕೋರ್ಟ್‌ನ ಎಪ್ರಿಲ್ ತಿಂಗಳ ಆದೇಶವನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದ ಬಳಿಕ ಬೃಹನ್ಮುಂಬಯಿ ಮಹಾನಗರ ಪಾಲಿಕೆ ಯ(ಬಿಎಂಸಿ) ಮಹತ್ವಾಕಾಂಕ್ಷೆಯ ಕೋಸ್ಟಲ್ ರೋಡ್ ಯೋಜನೆಯ ನಿರ್ಮಾಣ ಕೆಲಸಗಳು ಪೂರ್ಣ ವೇಗದೊಂದಿಗೆ ನಡೆಯುತ್ತಿವೆ.
ಬಾಂಬೆ ಹೈಕೋರ್ಟ್ ತನ್ನ ಎ. 23ರ ಆದೇಶದಲ್ಲಿ ಕೋಸ್ಟರ್ ರೋಡ್ ಯೋಜನೆಯ ಕೆಲಸಗಳ ಮೇಲೆ ಸಂಪೂರ್ಣವಾಗಿ ತಡೆ ಹೇರಿತ್ತು. ಸುಪ್ರೀಂ ಕೋರ್ಟ್ ಬಾಂಬೇ ಹೈಕೋರ್ಟ್‌ನ ಎಪ್ರಿಲ್‌ನ ಆದೇಶವನ್ನು ಬದಲಾಯಿಸಿದ್ದು, ಯಾವುದೇ ಹೊಸ ಪ್ರದೇಶದಲ್ಲಿ ಹೊಸ ಕೆಲಸಗಳನ್ನು ಕೈಗೆತ್ತಿಕೊಳ್ಳಬಾರದೆಂಬ ಷರತ್ತಿನ ಮೇರೆಗೆ ಈಗಾಗಲೇ ಪ್ರಾರಂಭವಾಗಿರುವ ಕೆಲಸವನ್ನು ಮುಂದುವರಿಸಲು ಗುತ್ತಿಗೆದಾರರಿಗೆ ಅವಕಾಶವನ್ನು ನೀಡಿದೆ. ಅಂತೆಯೇ, ಬಿಎಂಸಿ ಇದೀಗ ಪ್ರಿಯಾದರ್ಶಿನಿ ಪಾರ್ಕ್, ಮರೀನ್ ಡ್ರೈವ್, ಅಮರ್ಸನ್ಸ್ ಗಾರ್ಡನ್, ಹಾಜಿ ಅಲಿ ಮತ್ತು ವರ್ಲಿ ಸೀ ಫೇಸ್‌ನಲ್ಲಿ ಕೆಲಸವನ್ನು ಪುನರಾರಂಭಿಸಿದೆ. ವಾರದ ಎÇÉಾ ದಿನಗಳಲ್ಲಿ ದಿನದ 24 ತಾಸು ಕೆಲಸಗಳ ಕಾಲ ಕೆಲಸ ನಡೆಯುತ್ತಿದೆ ಎಂದು ಬಿಎಂಸಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ನಿರ್ಮಾಣ ಕೆಲಸವು ಕಳೆದ ಡಿಸೆಂಬರ್‌ನಿಂದ ಪ್ರಾರಂಭವಾಗಿದ್ದು, ಇದು ಯೋಜನೆಯ ಮೊದಲ ಹಂತದ ಒಟ್ಟು ಕೆಲಸದ ಶೇ. 17ರಷ್ಟು ಭಾಗವನ್ನು ಹೊಂದಿದೆ ಎಂದವರು ತಿಳಿಸಿದ್ದಾರೆ. ಕೋಸ್ಟಲ್ ರೋಡ್ ಯೋಜನೆಯ ಮೊದಲ ಹಂತವು ದ್ವೀಪ ನಗರ ಮುಂಬಯಿಯನ್ನು ಅದರ ಉಪನಗರಗಳೊಂದಿಗೆ ಸಂಪರ್ಕ ಕಲ್ಪಿಸುವ ಗುರಿಯನ್ನು ಹೊಂದಿದೆ. ಇದರ ಅಂದಾಜು ವೆಚ್ಚ 12,721 ಕೋಟಿ ರೂ. ಆಗಿದೆ.
ಬಿಎಂಸಿಯು ಈ ಕೆಲಸಗಳನ್ನು ಮಳೆಗಾಲ ಪ್ರಾರಂಭವಾಗುವ ಮೊದಲೇ ಪೂರ್ಣಗೊಳಿಸುವ ಆಶಯವನ್ನು ಹೊಂದಿತ್ತು. ಆದರೆ, ಈ ಯೋಜನೆಯು ನಗರದ ಸಮುದ್ರ ಕರಾವಳಿಯ ಪರಿಸರ ವಿಜ್ಞಾನದ ಮೇಲೆ ಪ್ರತಿಕೂಲ ಪ್ರಭಾವ ಬೀರುತ್ತದೆ ಎಂದು ಆರೋಪಿಸಿ ಪರಿಸರವಾದಿಗಳು ಇದರ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಕಾರಣದಿಂದಾಗಿ ಯೋಜನೆಯ ನಿರ್ಮಾಣ ಕಾರ್ಯದಲ್ಲಿ ವಿಳಂಬವಾಗಿದೆ ಎಂದು ತಿಳಿಸಿದೆ.
ಇದು ಒಂದು ಮೆಗಾ ಯೋಜನೆ ಆಗಿದೆ. ಆದ್ದರಿಂದ, ದಿನದ 24 ತಾಸುಗಳ ಕಾಲ ಕೆಲಸ ನಡೆಯುತ್ತಿದೆ. ಇನ್ನು ಮಳೆಗಾಲದಲ್ಲೂ ಇದನ್ನು ನಿಲ್ಲಿಸಲಾಗುವುದಿಲ್ಲ. ಮಳೆಗಾಲದಲ್ಲಿ ಏನೆಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಿದೆಯೋ, ಅದನ್ನು ಸಮುದ್ರ ಜೀವನಕ್ಕೆ ಯಾವುದೇ ಧಕ್ಕೆಯಾಗದಂತೆ ಮಾಡಲಾಗುವುದು. ಮಳೆಗಾಲ ಆಗಿದ್ದರೂ ಕೈಯಲ್ಲಿರುವ ಕೆಲಸವನ್ನು ಪೂರ್ಣಗೊಳಿಸಬೇಕಾಗಿದೆ ಎಂದು ಅಧಿಕಾರಿ ನುಡಿದಿದ್ದಾರೆ. ಬಿಎಂಸಿ ಮತ್ತು ನಗರಕ್ಕೆ ಕೋಸ್ಟಲ್ ರೋಡ್ ಯೋಜನೆಯು ಮಹತ್ವ¨ªಾಗಿದೆ, 4 ವರ್ಷಗಳೊಳಗೆ ಇದರ ನಿರ್ಮಾಣವನ್ನು ಪೂರ್ಣಗೊಳಿಸಲು ಉದ್ದೇಶಿಸಿದೆ.
ಬಾಕಿ ಉಳಿದ ಕೆಲಸಗಳ ಪುನರಾರಂಭ
ಸದ್ಯದ ಮಟ್ಟಿಗೆ ಯಾವುದೇ ಹೊಸ ಕೆಲಸ ಪ್ರಾರಂಭಿಸುತ್ತಿಲ್ಲ. ಕೋರ್ಟ್ ಕೇಸ್‌ಗೆ ಮೊದಲು ನಡೆಯುತ್ತಿದ್ದ ಕೆಲಸಗಳನ್ನು ಈಗ ಪುನರಾರಂಭಿಸಲಾಗಿದೆ. ಇದು ಗಿರ್‌ಗಾಂವ್ ಚೌಪಾಟಿ ಮತ್ತು ಮಲಬಾರ್ ಹಿಲ್ ಅಡಿಯಲ್ಲಿ ಸುರಂಗಗಳ ನಿರ್ಮಾಣಕ್ಕೆ ಸಮುದ್ರ ಗೋಡೆಯ ನಿರ್ಮಾಣ, ಲಾಂಚಿಂಗ್ ಮತ್ತು ರಿಟ್ರೈವಲ್ ಶಾಫ್ಟ್‌ಗಳ ನಿರ್ಮಾಣ ಹಾಗೂ ಕೆಲಸದಲ್ಲಿ ನಿಯೋಜಿಸಲ್ಪಟ್ಟಿರುವ ಎಂಜಿನಿಯರ್‌ಗಳಿಗೆ ಸೈಟ್ ಕಚೇರಿಗಳ ನಿರ್ಮಾಣವನ್ನು ಒಳಗೊಂಡಿದೆ ಎಂದು ಬಿಎಂಸಿ ಅಧಿಕಾರಿ ತಿಳಿಸಿದ್ದಾರೆ.
ಮಹತ್ವಾಕಾಂಕ್ಷೆಯ 29.2 ಕಿ.ಮೀ. ಉದ್ದದ ಕೋಸ್ಟಲ್ ರೋಡ್ ಯೋಜನೆಯು ಸುರಂಗಗಳ ಸಂಯೋಜನೆ, ಸಮುದ್ರದಲ್ಲಿ ಭೂಮಿಯ ಪುನಃಸ್ಥಾಪನೆ ಮತ್ತು ಎಲೆವೇಟೆಡ್ ರಸ್ತೆಗಳ ಮೂಲಕ ದಕ್ಷಿಣ ಮುಂಬಯಿಯನ್ನು ಪಶ್ಚಿಮ ಕರಾವಳಿಯ ಉಪನಗರಗಳಿಗೆ ಸಂಪರ್ಕಿಸಲಿದೆ. ಬಿಎಂಸಿಯ ಯೋಜನೆಗಳ ಪ್ರಕಾರ, ಇದು ಪ್ರಿನ್ಸೆಸ್ ಸ್ಟ್ರೀಟ್, ಮರೀನ್ ಲೈನ್ಸ್‌ನಿಂದ
ಪ್ರಾರಂಭವಾಗಿ ಉಪನಗರ ಕಾಂದಿವಲಿಗೆ ಜೋಡಣೆಯಾಗಲಿದೆ. ಇದು 2 ಮೀಸಲಾದ ಬಸ್ ಲೇನ್‌ಗಳೊಂದಿಗೆ 8 ಲೇನ್‌ಗಳನ್ನು ಹೊಂದಿರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.